ಮತ ಪ್ರವರ್ತಕರು ಮತ್ತು ಸಮಾಜ ಸುದಾರಕರ ಬಗ್ಗೆ ಮಾಹಿತಿ | Information about suffragettes and social reformers in Kannada

Join Telegram Group Join Now
WhatsApp Group Join Now

ಮತ ಪ್ರವರ್ತಕರು ಮತ್ತು ಸಮಾಜ ಸುದಾರಕರ ಬಗ್ಗೆ ಮಾಹಿತಿ Information about suffragettes and social reformers Matha Pravarthakaru mattu Samaja Sudharakara bagge Mahithi in Kannada

ಮತ ಪ್ರವರ್ತಕರು ಮತ್ತು ಸಮಾಜ ಸುದಾರಕರ ಬಗ್ಗೆ ಮಾಹಿತಿ

ಮತ ಪ್ರವರ್ತಕರು ಮತ್ತು ಸಮಾಜ ಸುದಾರಕರ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮತ ಪ್ರವರ್ತಕರು ಮತ್ತು ಸಮಾಜ ಸುದಾರಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮತ ಪ್ರವರ್ತಕರು ಮತ್ತು ಸಮಾಜ ಸುದಾರಕರು :

ಭಾರತದಲ್ಲಿ ಅನೇಕ ಮಹಾಪುರುಷರು ಜನ್ಮತಾಳಿದರು. ಇವರು ಬೋಧಕರು ಮಾತ್ರವೇ ಆಗಿರದೆ ಸಕ್ರಿಯವಾಗಿ ಸಮಾಜ ಸುಧಾರಣೆಯನ್ನು ಮಾಡಿದರು. ಇವರ ಸುದಾರಣೆಗಳು ಜನರಲ್ಲಿದ್ದ ಅಜ್ಞಾನ ಮತ್ತು ಕೆಟ್ಟ ಸಂಪ್ರದಾಯವನ್ನು ತೊಡೆದು ಹಾಕಿದವು. ಇವರ ಪ್ರಭಾವ ಇಂದಿಗೂ ವ್ಯಾಪಕವಾಗಿ ಹರಡಿದೆ.

ಶಂಕರಾಚಾರ್ಯರು :

ಇವರು ಕೇರಳದ ಕಾಲಡಿ ಎಂಬ ಗ್ರಾಮದಲ್ಲಿ ಜನಿಸಿದರು. ಪ್ರತಿಭಾವಂತರಾದ ಅವರು 8 ನೇ ವಯಸ್ಸಿನಲ್ಲಿಯೇ ನಾಲ್ಕು ವೇದಗಳನ್ನು ಅರಿತರು. ಶಂಕರರ ತಂದೆ ಶಿವಗುರು ಮತ್ತು ತಾಯಿ ಆರ್ಯಾಂಬೆ. ಶಂಕರರು ಪ್ರತಿಪಾದಿಸಿದ ತತ್ವವನ್ನು ʼಅದ್ವೈತʼ ಎನ್ನುವರು.

ಶಂಕರಾಚಾರ್ಯರ ಕೊಡುಗೆಗಳು :

  • ಶಂಕರರು ಬದರಿ, ದ್ವಾರಕೆ, ಪುರಿ ಮತ್ತು ಕರ್ನಾಟಕದ ಶೃಂಗೇರಿಯಲ್ಲಿ ಪೀಠಗಳನ್ನು ಸ್ಥಾಪಿಸಿದರು. ಈ ಪೀಠಗಳು ಭಾರತೀಯರನ್ನು ಭಾವನಾತ್ಮಕವಾಗಿ ಹಾಗೂ ಧಾರ್ಮಿಕವಾಗಿ ಒಗ್ಗೂಡಿಸುವ ಕೇಂದ್ರಗಳಾದವು.
  • ಶಂಕರರು ಆನಂದ ಲಹರಿ, ಸೌಂದರ್ಯ ಲಹರಿ ಮುಂತಾದ ಗ್ರಂಥಗಳನ್ನು ಬರೆದರು. ಅವರ ಸ್ತ್ರೋತ್ರಗಳಲ್ಲಿ “ಭಜಗೋವಿದಂ” ಇಂದಿಗೂ ಜನಪ್ರಯವಾಗಿದೆ. ಶಂಕರರು ತಮ್ಮ 32 ವರ್ಷಗಳ ಜೀವಿತ ಕಾಲದೊಳಗೆ ಇಷ್ಟೆಲ್ಲಾ ಸಾಧಿಸಿದ್ದರು.

ರಾಮಾನುಜಾಚಾರ್ಯರು :

ರಾಮಾನುಜರು ಚೆನೈ ಸಮೀಪದ ಶ್ರೀ ಪೆರಂಬದೂರಿನಲ್ಲಿ ಜನಿಸಿದರು. ಕಾಂಚಿ ನಗರದಲ್ಲಿ ಶಾಸ್ತ್ರಾಧ್ಯಯನ ಮಾಡಿದರು. ಇವರ ತಂದೆ ಕೇಶವ ದೀಕ್ಷಿತರು, ತಾಯಿ ಕಾಂತಿಮತಿ. ಅವರು ಪ್ರತಿಪಾದಿಸಿದ ಸಿದ್ದಾಂತವನ್ನು “ವಿಶಿಷ್ಟಾದ್ವೈತ” ವೆಂದು ಕರೆಯುತ್ತೇವೆ.

Join WhatsApp Join Telegram

ರಾಮಾನುಜರ ಸುದಾರಣೆಗಳು :

  • ಜಾತಿವಾದವನ್ನು ಖಂಡಿಸಿದರು.
  • ಕೆಳವರ್ಗದ ಜನರೂ ಮೇಲೂಕೋಟೆ ದೇವಾಲಯ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಿದರು. ಇವರು 120 ವರ್ಷಗಳ ಕಾಲ ಜೀವಿಸಿದ್ದರು.

ಬಸವೇಶ್ವರರು :

ಕರ್ನಾಟಕದ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನದಲ್ಲಿ ಬಸವೇಶ್ವರರು ಅತ್ಯಂತ ಕ್ರಾಂತಿಕಾರಿ ಪಾತ್ರವಹಿಸಿದರು. ಇವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯವರು. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಬಸವತತ್ವವನ್ನು “ಶಕ್ತಿವಿಶಿಷ್ಟಾದ್ವೈತ” ಎಂದು ಕರೆಯುತ್ತಾರೆ.

ಬಸವೇಶ್ವರರ ಸುಧಾರಣೆಗಳು :

  • ಇವರು ಜಾತಿರಹಿತ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೆ ಪಣತೊಟ್ಟರು.
  • ಇವರು ಜಾತೀಯತೆ, ಯಜ್ಞಯಾಗಾದಿಗಳನ್ನು ಖಂಡಿಸಿದರು. ʼದೇಹವೇ ದೇಗುಲʼ ಎಂದರು.
  • ʼಹೆಣ್ಣು ತಾಯಿ ಅವಳೇ ಸರ್ವಸ್ವʼ ಎಂಬ ಅವರ ಮಾತು ದನಿ ಕಳೆದುಕೊಂಡಿದ್ದ ಸ್ತ್ರೀಯರಿಗೆ ಆತ್ಮವಿಶ್ವಾಸ ತುಂಬಿತು.
  • ಅವರು ಬಸವಕಲ್ಯಾಣದಲ್ಲಿ ʼಅನುಭವ ಮಂಟಪʼ ವನ್ನು ಸ್ಥಾಪಿಸಿದರು. ಇದು ವಚನಕಾರರ ವೇದಿಕೆಯಾಗಿತ್ತು.
  • ಬಸವೇಶ್ವರರು ಅಸಂಖ್ಯಾತ ವಚನಗಳನ್ನು ರಚಿಸಿದರು. ಇವು ʼಕೂಡಲಸಂಗಮದೇವʼ ಎಂಬ ಅಂಕಿತದಿಂದ ಕೊನೆಗೊಳ್ಳುತ್ತವೆ.

ಮಧ್ವಾಚಾರ್ಯರು :

ಮಧ್ವರ ಉಡುಪಿಗೆ ಹತ್ತಿರವಿರುವ ಪಾಜಕ ಗ್ರಾಮದಲ್ಲಿ ಜನಿಸಿದರು. ಮಧ್ಯಗೇಹ ಭಟ್ಟ ಮತ್ತು ವೇದಾವತಿ ಅವರ ತಂದೆ ತಾಯಿ. ಅವರು ʼದ್ವೈತ ಸಿದ್ದಾಂತʼ ವನ್ನು ಪ್ರತಿಪಾದಿಸಿದರು. ಸನ್ಯಾಸ ಸ್ವೀಕರಿಸಿದ ಅನಂತರ ಮಧ್ವರು ತಮ್ಮ ಬೋಧನೆಗಳ ಪ್ರಸಾರಕ್ಕಾಗಿ ಭಾರತದ ಎಲ್ಲಡೆ ಎರಡು ಬಾರಿ ಸಂಚರಿಸಿದರು. ವಿಷ್ಣು ಅವರ ಅರಾಧ್ಯ ದೇವರು.

ಮಧ್ವರ ಕೊಡುಗೆಗಳು :

  • ಮಧ್ವರು ಗೀತಾತಾತ್ಪರ್ಯ ನಿರ್ಣಯ, ಮಾಹಾಭಾರತ ತಾತ್ಪರ್ಯ ನಿರ್ಣಯ; ಮುಂತಾದ 37 ಕೃತಿಗಳನ್ನು ಸಂಸ್ಕೃತದಲ್ಲಿ ರಚಿಸಿದರು.
  • ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು.
  • ಅವರು ಸರಳವಾದ ಭಕ್ತಿಮಾರ್ಗವನ್ನು ಉಪದೇಶ ಮಾಡಿದರು.

FAQ :

ಶಂಕರಾಚಾರ್ಯರ ಸಿದ್ದಾಂತ ಯಾವುದು?

ಅದ್ವೈತ ಸಿದ್ದಾಂತ

ರಾಮಾನುಜಾಚಾರ್ಯರ ಸಿದ್ದಾಂತ ಯಾವುದು?

ವಿಶಿಷ್ಟಾದ್ವೈತ

ಇತರೆ ವಿಷಯಗಳು :

ಪೌರತ್ವದ ಬಗ್ಗೆ ಮಾಹಿತಿ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.