ಸಂವಿಧಾನ ತಿದ್ದುಪಡಿ ಬಗ್ಗೆ ಮಾಹಿತಿ | Information about constitutional amendment in Kannada

Join Telegram Group Join Now
WhatsApp Group Join Now

ಸಂವಿಧಾನ ತಿದ್ದುಪಡಿ ಬಗ್ಗೆ ಮಾಹಿತಿ Information about constitutional amendment Samvidhana Tiddupadigala bagge Mahithi in Kannada

ಸಂವಿಧಾನ ತಿದ್ದುಪಡಿ ಬಗ್ಗೆ ಮಾಹಿತಿ

Information about constitutional amendment in Kannada
ಸಂವಿಧಾನ ತಿದ್ದುಪಡಿ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸಂವಿಧಾನ ತಿದ್ದುಪಡಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸಂವಿಧಾನ ತಿದ್ದುಪಡಿ :

ಸಂವಿಧಾನಿಕ ಕಾನೂನಿಗೆ ಸ್ಥಿರತೆ ಒಂದು ಅವಶ್ಯಕ ಲಕ್ಷಣವಾದರೂ ನಿರಂತರವಾಗಿ ನಡೆಯುವ ಸಾಮಾಜಿಕ ಬದಲಾವಣೆ ಹಾಗೂ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿಯ ಅವಶ್ಯಕತೆ ಇದೆ. ಸಂವಿಧಾನದ 20ನೇ ಭಾಗದಲ್ಲಿ ನಮೂದಿಸಲ್ಪಟ್ಟಿರುವ 368 ನೇ ವಿಧಿಯು ಸಂವಿಧಾನ ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರಗಳನ್ನು ತಿಳಿಸುತ್ತದೆ.

ಸಂವಿಧಾನದ ಸ್ವರೂಪ :

ತಿದ್ದುಪಡಿಗಳು ಆಧಾರದ ಮೇಲೆ ಸಂವಿಧಾನಗಳ ಸ್ವರೂಪವನ್ನು ನಿರ್ಧರಿಸಬಹುದು. ತಿದ್ದುಪಡಿ ವಿಧಾನವು ಸುಲಭವಾಗಿದ್ದರೆ ಅಂತಹ ಸಂವಿಧಾನವನ್ನು ಸರಳ ಸಂವಿಧಾನವೆಂದು, ತಿದ್ದುಪಡಿ ವಿಧಾನವು ಕ್ಲಿಷ್ಟಕರವಾಗಿದ್ದರೆ ಅಂತಹ ಸಂವಿಧಾನವನ್ನು ಕಠಿಣ ಸಂವಿಧಾನವೆಂದು ವಿಂಗಡಿಸಬಹುದು. ಭಾರತದ ಸಂವಿಧಾನವು ಸರಳ ಹಾಗೂ ಕಠಿಣ ಎರಡೂ ಅಂಶಗಳನ್ನು ಒಳಗೊಂಡಿದೆ.

ಸಂವಿಧಾನ ತಿದ್ದುಪಡಿ ವಿಧಾನಗಳು :

ನಮ್ಮ ಸಂವಿಧಾನವನ್ನು ಮೂರು ವಿಧಾನಗಳ ಮೂಲಕ ತಿದ್ದುಪಡಿ ಮಾಡಬಹುದು.

  • ಸರಳ ಬಹುಮತ ತಿದ್ದುಪಡಿ ವಿಧಾನ
  • ವಿಶೇಷ ಬಹುಮತ ತಿದ್ದುಪಡಿ ವಿಧಾನ
  • ವಿಶೇಷ ಬಹುಮತದೊಂದಿಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಪಡೆದು ತಿದ್ದುಪಡಿ ಮಾಡುವ ವಿಧಾನ.

ಸರಳ ಬಹುಮತ ತಿದ್ದುಪಡಿ ವಿಧಾನ :

  • ಪೌರತ್ವಕ್ಕೆ ಸಂಬಂಧಿಸಿದ ವಿಷಯಗಳು
  • ರಾಜ್ಯಗಳ ರಚನೆ, ಗಡಿ, ಹೆಸರು ಬದಲಾವಣೆ
  • ರಾಜ್ಯ ವಿಧಾನ ಪರಿಷತ್ತುಗಳ ರಚನೆ ಅಥವಾ ರದ್ದತಿ
  • ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವೇತನ ಭತ್ಯೆ ಮತ್ತು ಸೌಲಭ್ಯಗಳು
  • ಸಂಸತ್‌ ಸದಸ್ಯರ ವೇತನ ಮತ್ತು ಸೌಲಭ್ಯಗಳು
  • ಅಧಿಕೃತ ಭಾಷೆಗಳ ಬಳಕೆ
  • ಕೇಂದ್ರಾಡಳಿತ ಮತ್ತು ಆದಿವಾಸಿ ಪ್ರದೇಶಗಳ ಆಡಳಿತ
  • ಸಂಸತ್ತು ಮತ್ತು ರಾಜ್ಯ ಶಾಸನ ಸಭೆಗಳ ಚುನಾವಣೆಗಳು

ವಿಶೇಷ ಬಹುಮತ ತಿದ್ದುಪಡಿ ವಿಧಾನ :

  • ಉಭಯ ಸದನಗಳ 2/3 ರಷ್ಟು ಸದಸ್ಯರ ಅಂಗೀಕಾರದ ಮೂಲಕ ತಿದ್ದುಪಡಿ ಮಾಡುವುದು.
  • ಮೂಲಭೂತ ಹಕ್ಕುಗಳು
  • ರಾಜ್ಯ ನೀತಿ ನಿರ್ದೇಶಕ ತತ್ವಗಳು

ವಿಶೇಷ ಬಹುಮತ ಮತ್ತು ಅರ್ಧ ರಾಜ್ಯಗಳ ಒಪ್ಪಿಗೆ ಮೂಲಕ ತಿದ್ದುಪಡಿ :

  • ರಾಷ್ಟ್ರಪತಿ ಚುನಾವಣೆ ಸಂಬಂಧಿಸಿದಂತೆ
  • ಕೇಂದ್ರ ಮತ್ತು ರಾಜ್ಯಗಳ ಅಧಿಕಾರ ವಿಭಜನೆ
  • ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್ಗಳ ರಚನೆ ಮತ್ತು ಅಧಿಕಾರ
  • ಸಂಸತ್ತಿನಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ
  • ಸಂವಿಧಾನ ತಿದ್ದುಪಡಿ ವಿಧಾನ

ಸಂವಿಧಾನದ ತಿದ್ದುಪಡಿಯ ಕಾರ್ಯವಿಧಾನ :

  • ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಲೋಕಸಭೆಯಲ್ಲಾಗಲೀ/ರಾಜ್ಯಸಬೆಯಲ್ಲಾಗಲಿ ಮೋಡಿಸಬಹುದು. ಆದರೆ ರಾಜ್ಯ ಶಾಸಕಾಂಗದಲ್ಲಿ ಮಂಡಿಸುವಂತಿಲ್ಲ.
  • ಮಂತ್ರಯಾಗಲಿ/ಸಂಸದರಾಗಲಿ ಮಸೂದೆಯನ್ನು ಮಂಡಿಸಬಹುದು. ಇದಕ್ಕಾಗಿ ರಾಷ್ಟ್ರಾಧ್ಯಕ್ಷರ ಪೂರ್ವಾನುಮತಿ ಅಗತ್ಯವಿಲ್ಲ.
  • ತಿದ್ದುಪಡಿ ಮಸೂದೆಗೆ ಸಂಸತ್ತಿನ ಪ್ರತಿ ಸದನದಲ್ಲಿ ಒಟ್ಟು ಸದಸ್ಯರ ವಿಶೇಷ ಬಹುಮತ ಅಂಗೀಕೃತವಾಗಬೇಕು ಹಾಗೂ ಹಾಜರಿರುವ 2/3ರಷ್ಟು ಬಹುಮತ ಮತ್ತು ಮತ ಚಲಾಯಿಸಬೇಕು.
  • ತಿದ್ದುಪಡಿ ಮಸೂದೆಯನ್ನು ಒಂದು ಸದನವು ಅಂಗೀಕರಿಸಿ ಇನ್ನೊಂದು ಸದನವು ತಿರಸ್ಕರಿಸಿದರೆ, ಸಂಸತ್ತಿನ ಜಂಟಿ ಅಧಿವೇಶನ ಕರೆಯುವಂತಿಲ್ಲ.
  • ಸಂಸತ್ತಿನ ಎರಡು ಸದನಗಳಿಂದ ಅಂಗೀಕರಿಸಲ್ಪಟ್ಟ ತಿದ್ದುಪಡಿ ಮಸೂದೆಯನ್ನು ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸಿದಾಗ, ತಿರಸ್ಕರಿಸುವುದಾಗಲೀ/ಮರು ಪರಿಶೀಲನೆಗೆ ಕಳುಹಿಸುವುದಾಗಲೀ ಮಾಡುವಂತಿಲ್ಲ. ಕಡ್ಡಾಯವಾಗಿ ತಮ್ಮ ಅನುಮೋದನೆಯನ್ನು ನೀಡಬೇಕು. ನಂತರ ಸಂವಿಧಾನವನ್ನು ತಿದ್ದುಪಡಿ ಮಾಡಲಾಗುವುದು.

FAQ :

ಸಂವಿಧಾನದ ಮೊದಲನೇ ತಿದ್ದುಪಡಿ ಕಾಯ್ದೆ ಎಷ್ಟರಲ್ಲಿ ಜಾರಿಗೆ ಬಂದಿತು?

1951, ಜೂನ್‌ 18

Join WhatsApp Join Telegram

ಸಂವಿಧಾನ ತಿದ್ದುಪಡಿ ವಿಧಾನಗಳನ್ನು ತಿಳಿಸಿ?

ಸರಳ ಬಹುಮತ ತಿದ್ದುಪಡಿ ವಿಧಾನ
ವಿಶೇಷ ಬಹುಮತ ತಿದ್ದುಪಡಿ ವಿಧಾನ
ವಿಶೇಷ ಬಹುಮತದೊಂದಿಗೆ ಕನಿಷ್ಠ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಪಡೆದು ತಿದ್ದುಪಡಿ ಮಾಡುವ ವಿಧಾನ

ಇತರೆ ವಿಷಯಗಳು :

ಭಾರತದ ಸಂವಿಧಾನ ರಚನೆ ಬಗ್ಗೆ ಮಾಹಿತಿ

ಸರ್ವೋಚ್ಛ ನ್ಯಾಯಾಲಯದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.