ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ | Information about Election Commission of India in Kannada

Join Telegram Group Join Now
WhatsApp Group Join Now

ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ Information about Election Commission of India Bharathadha Chunavana Ayogadha bagge Mahithi in Kannada

ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಭಾರತದ ಚುನಾವಣಾ ಆಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಭಾರತದ ಚುನಾವಣಾ ಆಯೋಗ :

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತದಲ್ಲಿ ಚುನಾವಣೆಗಳ ಪಾತ್ರ ಮಹತ್ವದ್ದು, ಇದನ್ನು ಅರಿತ ಸಂವಿದಾನ ರಚನಾಕಾರರು ಸಂವಿಧಾನದ ಭಾಗ-15 ರಲ್ಲಿ 324 ರಿಂದ 329 ರವರೆಗಿನ ವಿಧಿಗಳಲ್ಲಿ ಸ್ವತಂತ್ರ ಚುನಾವಣಾ ಆಯೋಗ ಮತ್ತು ಚುನಾವಣೆ ನಿಯಮಗಳ ಬಗ್ಗೆ ಮಾಹಿತಿ ಇದೆ.

ಭಾರತದ ಚುನಾವಣಾ ಆಯೋಗವು ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸುವ ಅಧಿಕಾರವನ್ನು ಹೊಂದಿರುವ ಸಂವಿಧಾನದ ಸ್ವಾಯತ್ತ ಸಂಸ್ಥೆಯಾಗಿದೆ. ಹಾಗಾಗಿ ಭಾರತದಲ್ಲಿ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸುವ ಅಧಿಕಾರವನ್ನು ಹೊಂದಿರುವ ಸಂವಿಧಾನದ ಸ್ವಾಯತ್ತ ಸಂಸ್ಥೆಯನ್ನು ಚುನಾವಣಾ ಆಯೋಗ ಎಂದು ಕರೆಯುತ್ತೇವೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕಸಬೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್ ಮುಂತಾದ ಚುನಾವಣೆಗಳನ್ನು ನ್ಯಾಯಸಮ್ಮತವಾಗಿ ನಡೆಸುತ್ತದೆ. ಭಾರತದಲ್ಲಿ ಒಂದೇ ಚುನಾವಣೆ ಆಯೋಗವಿದೆ. ಇದರ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ವಯ ದೇಶಾದ್ಯಂತ ಚುನಾವಣೆಗಳನ್ನು ನಡೆಸಲಾಗುತ್ತದೆ.

  • ಆಯುಕ್ತರ ಸಂಖ್ಯೆ :

ಸಂವಿಧಾನದ 324 ನೇ ವಿಧಿ ಅನ್ವಯ ಚುನಾವಣಾ ಆಯೋಗವು ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಇತರ ಚುನಾವಣಾ ಆಯುಕ್ತರನ್ನು ಹೊಂದಿರುತ್ತದೆ. ಪ್ರಾರಂಭದಲ್ಲಿ 1993 ರವರೆಗೆ ಏಕಸದಸ್ಯ ಆಯೋಗವಿತ್ತು. 1990ರ ದಿನೇಶ್‌ ಗೋಸ್ವಾಮಿ ಸಮಿತಿಯು ಏಕಸದಸ್ಯ ಆಯೋಹಕ್ಕೆ ಬದಲಾಗಿ ಬಹು ಸದಸ್ಯ ಆಯೋಗಕ್ಕೆ ಶಿಫಾರಸ್ಸು ಮಾಡಿತು. ಭಾರತದ ಸರ್ವೋಚ್ಛ ನ್ಯಾಯಾಲಯದಿಂದಲೂ ಇದಕ್ಕೆ ಸಮರ್ಥನೆ ಸಿಕ್ಕಿತು. ಪ್ರಸ್ತುತ ಭಾರತದ ಚುನಾವಣಾ ಆಯೋಗವು ತ್ರಿಸದಸ್ಯರಿಂದ ಕೂಡಿದೆ.

Join WhatsApp Join Telegram
  • ಚುನಾವಣಾ ಅಯುಕ್ತರ ನೇಮಕ :

ಸಂವಿಧಾನದ 324(2) ನೇ ವಿಧಿಯ ಪ್ರಕಾರ, ಭಾರತದ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಇತರ ಚುನಾವಣಾ ಆಯುಕ್ತರನ್ನು ಕೇಂದ್ರ ಸಚಿವ ಸಂಪುಟ ಸಲಹೆ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

  • ಅಧಿಕಾರವಧಿ :

ಚುನಾವಣಾ ಆಯುಕ್ತರ ಅಧಿಕಾರವಧಿ 6 ವರ್ಷಗಳು ಅಥವಾ ಅವಧಿ ಮುಗುವುದರೊಳಗೆ ಅವರಿಗೆ 65 ವರ್ಷಗಳು ತುಂಬಿದರೆ ನಿವೃತ್ತರಾಗುತ್ತಾರೆ. 1973 ರಲ್ಲಿ ಇವರ ಅಧಿಕಾರವಧಿಯನ್ನು 5 ವರ್ಷಕ್ಕೆ ನಿಗದಿಪಡಿಸಲಾಗಿತ್ತು. ಜನವರಿ 1, 1986 ರಿಂದ ಇವರ ಅಧಿಕಾರವಧಿ 6 ವರ್ಷಕ್ಕೆ ವಿಸ್ತರಣೆ.

  • ವೇತನ ಮತ್ತು ಸವಲತ್ತುಗಳು :

ಚುನಾವಣಾ ಆಯುಕ್ತರುಗಳು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಿಗೆ ನೀಡುವ ಸ್ಥಾನಮಾನ, ವೇತನ ಮತ್ತು ಸವಲತ್ತುಗಳನ್ನು ಪಡೆಯುತ್ತಾರೆ. ಜನವರಿ 8, 1991 ರಲ್ಲಿ ಸಂಸತ್ತು ಮಸೂದೆಯೊಂದನ್ನು ಪಾಸು ಮೂಲಕ ನಿರ್ಧರಿಸಿದೆ. ಇದರ ವೇತನವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವುದು. ಪ್ರಸ್ತುತ ಇವರ ವೇತನ ತಿಂಗಳಿಗೆ 2,50,000 ರೂಗಳು. ಸೇವಾ ನಿಯಮಗಳನ್ನು ಕೇಂದ್ರ ಸಂಸತ್ತು ನಿರ್ಧರಿಸುತ್ತದೆ.

  • ಪದಚ್ಯುತಿ ವಿಧಾನ :

ಸಂವಿಧಾನದ 324(5) ನೇ ವಿಧಿಯನ್ವಯ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು ಸುಪ್ರೀಂಕೋರ್ಟಿನ ನ್ಯಾಯಾಧೀಶರಿಗೆ ಅನುಸರಿಸುವ ವಿಧಾನವನ್ನು ಮಾಡಲಾಗುತ್ತದೆ. ತಮ್ಮ ಅಧಿಕಾರವಧಿಯಲ್ಲಿ ಸಂವಿಧಾನದ ಮಿತಿ ಮೀರಿ ವರ್ತಿಸಿದಾಗ, ತಮ್ಮ ಕಾರ್ಯ ನಿರ್ವಹಿಸಲು ಅಸಮರ್ಥರಾದಾಗ ದೋಷಾರೋಪಣೆ ಮೂಲಕ ಪದಚ್ಯುತಿ. ಕೇಂದ್ರ ಸಂಸತ್ತಿನ ವಿಸೇಷ ಬಹುಮತದ ನಿರ್ಣಯದ ನಂತರ ರಾಷ್ಟ್ರಪತಿಗಳಿಂದ ಪದಚ್ಯುತಿಮುಖ್ಯ ಚುನಾವಣೆ ಆಯುಕ್ತರ ಶಿಫಾರಸ್ಸಿನ ಮೇರೆಗೆ ಇತರ ಚುನಾವಣಾ ಅಯುಕ್ತರನ್ನು ರಾಷ್ಟ್ರಪತಿಗಳು ಪದಚ್ಯುತಿಗೊಳಿಸಬಹುದೆಂದು ಇದೇ 324(5) ನೇ ಉಪವಿಧಿ ಹೇಳುತ್ತದೆ.

  • ಚುನಾವಣಾ ಆಯೋಗದ ಪ್ರಮುಖ ಕಾರ್ಯಗಳು :

ಮತದಾರರ ಪಟ್ಟಿಯನ್ನು ಸಿದ್ದಪಡಿಸುವುದು, ಪರಿಷ್ಕರಿಸುವುದು, ಪರಿಶೀಲಿಸುವುದು ಮತ್ತು ಈ ಎಲ್ಲಾ ಕಾರ್ಯಗಳಿಗೆ ನಿರ್ದೇಶನ ನೀಡುವುದು. ರಾಷ್ಟ್ರಪತಿ, ಉಪರಾಷ್ಟ್ರತಿ, ಕೇಂದ್ರ ಸಂಸತ್ತಿನ ಲೋಕಸಭೆ, ರಾಜ್ಯ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು.

FAQ :

ಭಾರತ ಸಂವಿಧಾನದ ಎಷ್ಟನೇ ವಿಧಿಯು ಭಾರತದ ಚುನಾವಣಾ ಆಯೋಗದ ಬಗ್ಗೆ ಹೇಳುತ್ತದೆ?

324 ನೇ ವಿಧಿ

ಭಾರತದ ಚುನಾವಣಾ ಆಯೋಗದ ಮೊದಲ ಆಯುಕ್ತರು ಯಾರು?

ಸುಕುಮಾರ್‌ ಸೇನ್

ಇತರೆ ವಿಷಯಗಳು :

ಭಾರತದ ಸಂವಿಧಾನ ರಚನೆ ಬಗ್ಗೆ ಮಾಹಿತಿ

ಪೌರತ್ವದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.