ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ | Information about Karnataka State Commission for Women in Kannada

Join Telegram Group Join Now
WhatsApp Group Join Now

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ Information about Karnataka State Commission for Women Karnataka Rajya Mahila Ayogadha bagge Mahithi in Kannada

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ಆಯೋಗ :

ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಶಾಸನಬದ್ದ ಆಯೋಗವಾಗಿದ್ದು ದಿನಾಂಕ 6/8/1996 ರಿಂದ ಅಸ್ತಿತ್ವದಲ್ಲಿದ್ದು, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಮುಖ ಭಾಗ. ಅನ್ಯಾಯಕ್ಕೆ ಒಳಗಾಗಿರುವ ಮಹಿಳೆಯರಿಗೆ ಆಯೋಗಧ ವಿವಿಧ ಸೌಲಭ್ಯಗಳು ಮತ್ತು ಸಾರ್ವಜನಿಕರಿಗೆ, ಮಹಿಳೆಯರ ಬಗ್ಗೆ ತಿಳಿಸಿಕೊಡುತ್ತದೆ.

ಸೌಲಭ್ಯಗಳು :

 • ಕೌಟುಂಬಿಕ ಸಮಸ್ಯೆಗಳಾದ ವರದಕ್ಷಿಣೆ ಕಿರುಕುಳ, ಜೀವನಾಂಶ, ವಿವಾಹ ವಿಚ್ಛೇಧನ, ಕೌಟುಬಿಂಕ ಕಾನೂನು ಮತ್ತು ಆಸ್ತಿ ಹಕ್ಕುಗಳ ಬಗ್ಗೆ, ಲೈಂಗಿಕ ಕಿರುಕುಳದ ಬಗ್ಗೆ ಮಹಿಳೆಯರು ಕಾನೂನಿನ ಅಡಿಯಲ್ಲಿ ಪರಿಹಾರ ಪಡೆಯಲು ಮತ್ತು ಸಹಾಯ ಪಡೆದುಕೊಳ್ಳಲು ಸೌಲಭ್ಯವಿರುತ್ತದೆ.
 • ಕೌಟುಂಬಿಕ ನ್ಯಾಯಾಲಯದಲ್ಲಿ ಬಹಳ ಕಾಲದಿಂದ ಇತ್ಯರ್ಥವಾಗದೆ ಉಳಿದಂತಹ ಕೌಟುಂಬಿಕ ಪ್ರಕರಣಗಳ ವ್ಯಾಜ್ಯಗಳನ್ನು ಪಾರಿವಾರಿಕ್‌ ಲೋಕ್‌ ಅದಾಲತ್‌ನಲ್ಲಿ ಸಮಾಲೋಚಿಸಿ ಬಗೆಹರಿಸಿಕೊಳ್ಳುವ ಸೌಲಭ್ಯ ಇರುತ್ತದೆ.
 • ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾವೆ ಹೂಡಲು ಮಹಿಳೆಯರು ಕನಿಷ್ಠ 20,000 ರೂ ಗಳಿಂದ ಗರಿಷ್ಠ 2,00,000 ರೂ ವರೆಗೆ ಧನ ಸಹಾಯ/ಪರಿಹಾರ ಪಡೆದುಕೊಳ್ಳಲು ಸೌಲಭ್ಯಯಿರುತ್ತದೆ.

ಮಹಿಳೆಯರ ಬಗ್ಗೆ ಸಾರ್ವಜನಿಕರಿಗೆ ಇರಬೇಕಾದ ಮಾಹಿತಿಗಳು :

 • ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದು ಅಪರಾಧ.
 • ಹೆಣ್ಣ ಮಗಳ ಮದುವೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
 • ಮದುವೆಯ ಸಂದರ್ಭದಲ್ಲಿ ತೆಗೆಯಲಾಗಿದ ಭಾವಚಿತ್ರಗಳನ್ನು, ಉಡುಗೊರೆಗಳು, ಸ್ತ್ರೀಧನ ಇತ್ಯದಿಗಳ ದಾಖಲಾತಿಗಳನ್ನು ಇಟ್ಟುಕೊಳ್ಳುವುದರಿಂದ ಮುಂದೆ ತೊಂದರೆ ಆದಾಗ ಅನುಕೂಲವಾಗುತ್ತದೆ.
 • ಮಹಿಳೆಯರ ಮೇಲೆ ಅತ್ಯಾಚಾರ ಆದಾಗ ಅವಳಿಗೆ ಪ್ರಥಮ ಚಿಕಿತ್ಸೆಯನ್ನು ಸರ್ಕಾರಿ ವೈದ್ಯರಿಂದ ಕೊಡಿಸಿ, ಅವಳ ಬಟ್ಟೆಯನ್ನು ಸಾಕ್ಷಿಗೆ ಜೋಪಾನವಾಗಿ ಇಡುವುದು.
 • ಮಹಿಳೆಯ ಮೇಲೆ ದೌರ್ಜನ್ಯವಾದಾಗ ಸರ್ಕಾರಿ ವೈದ್ಯರಿಂದ ವೈದ್ಯಕೀಯ ಧೃಡೀಕರಣ ಪಡೆಯಲು ಮರೆಯಬೇಡಿ.
 • ಮಹಿಳೆಯರ ಅಸ್ವಭಾವಿಕ ಸಾವು ಆದಾಗ ಸರ್ಕಾರಿ ವೈದ್ಯರಿಂದ ಶವ ಪರೀಕ್ಷೆಯನ್ನು ಮಾಡಿಸುವುದು.
 • ಕುಟುಂಬದಲ್ಲಿ ಸಾವು, ಅಪಘಾತ, ಜಗಳ ಆಗಿರುವಾಗ, ಮಹಿಳೆಯು ಮಾನಸಿಕ ಅಸ್ಥಿರತೆಯಲ್ಲಿ ಇರುವಾಗ ಮಹಿಳೆಯರ ಸಂಬಂಧದವರು ನೀಡುವ ಯಾವುದೇ ಕಾಗದದ ಮೇಲೆ ರುಜು ಮಾಡಬೇಡಿ. ಇದರ ದುರುಪಯೋಗ, ಮೋಸ ಆಗಬಹುದು.
 • 1989 ರ ನಂತರ ಮದುವೆ ಆದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲೀನ ಹಕ್ಕಿದೆ.
 • ಸ್ಥಿರ ಆಸ್ತಿಗಳನ್ನು ಗಂಡ ಮತ್ತು ಹೆಂಡತಿ ಇಬ್ಬರ ಹೆಸರಿನಲ್ಲಿ ನೊಂದಾಯಿಸಬೇಕು.
 • ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಉದ್ಯೋಗಸ್ಥ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ದೂರು ನಿವಾರಣಾ ಸಮಿತಿ ರಚಿಸಬೇಕು.
 • ತಾಲ್ಲೂಕು ಕೇಂದ್ರಗಳ ಸಿಡಿಪಿ ಕಛೇರಿಗಳಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ ಅನ್ಯಾಯಗಳ ಬಗ್ಗೆ ಸಲಹೆ ಸಹಾಯ ನೀಡಲು ಸಾಂತ್ವನ ಕೇಂದ್ರಗಳಿವೆ.

FAQ :

ಕರ್ನಾಟಕ ರಾಜ್ಯ ಮಹಿಳಾ ಆಯೋಗ ಯಾವಾಗ ಅಸ್ಥಿತ್ವಕ್ಕೆ ಬಂದಿತು?

6/8/1996

ಮಹಿಳೆಯರ ಬಗ್ಗೆ ಸಾರ್ವಜನಿಕರಿಗೆ ಇರಬೇಕಾದ ಮಾಹಿತಿಗಳು ಯಾವುವು?

ವರದಕ್ಷಿಣೆ ನೀಡುವುದು ಹಾಗೂ ಪಡೆಯುವುದು ಅಪರಾಧ.
ಹೆಣ್ಣ ಮಗಳ ಮದುವೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಇತರೆ ವಿಷಯಗಳು :

Join WhatsApp Join Telegram

ಹಳೇಬೀಡು ಬಗ್ಗೆ ಮಾಹಿತಿ

ಗಣರಾಜ್ಯೋತ್ಸವದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.