ಓಝೋನ್ ಬಗ್ಗೆ ಮಾಹಿತಿ Information about Ozone Ozone bagge Mahithi in Kannada
ಓಝೋನ್ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಓಝೋನ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಓಝೋನ್ :
- ಓಝೋನ್ ಮೂರು ಆಮ್ಲಜನಕದ ಪರಮಾಣುಗಳನ್ನು ಒಳಗೊಂಡಿರುವ ಆಮ್ಲಜನಕದ ಒಂದು ರೂಪವಾಗಿದೆ.
- ಓಝೋನ್ ಪದವನ್ನು 1913 ರಲ್ಲಿ ಫ್ರೆಂಚ್ ಭೌತಶಾಸ್ತ್ರಜ್ಞರಾದ ಚಾರ್ಲ್ಸ್ ಫ್ಯಾಬ್ರಿ ಮತ್ತು ಹೆನ್ರಿ ಬ್ಯೂಸನ್ ಕಂಡುಹಿಡಿದರು.
- ಇದು ನಸು ನೀಲಿ ಬಣ್ಣದ ಒಂದು ಅನಿಲವಾಗಿದ್ದು, ಸ್ತರಗೋಳದಲ್ಲಿ ಕಂಡು ಬರುತ್ತದೆ.
- ವಾಯುಮಂಡಲದ 20 ಕಿ.ಮೀ. ನಿಂದ 50 ಕಿ.ಮೀ. ಎತ್ತರದವರೆಗೆ ಓಝೋನ್ ಪದರ ಹರಡಿಕೊಂಡಿದೆ.
- ಓಝೋನ್ ಪದರವು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.
- ಡಾಬ್ಸನ್ ಘಟಕದಿಂದ ಓಝೋನ್ ಪದರವನ್ನು ಅಳೆಯುವರಲ್ಲದೇ ಡಾಬ್ಸನ್ ಸ್ಪೆಕ್ಟ್ರೋಮೀಟರ್ ಎಂಬ ಸಾಧನವನ್ನು ಅಳೆಯಲು ಬಳಸಲಾಗುತ್ತದೆ. ಡಾಬ್ಸನ್ ಘಟಕವನ್ನು ನೀಡಿದ ವಿಜ್ಞಾನಿ ಕೇರಳದ ಕೆ.ಆರ್.ರಾಮಚಂದ್ರನ್.
ಓಝೋನ್‌ನ ಉಪಯೋಗಗಳು :
- ನೀರಿನ ಸೋಂಕು ನಿವಾರಕವಾಗಿ ಕ್ಲೋರಿನ್ ಬದಲಿಗೆ ಬಳಕೆ
- ಆಹಾರ ಸಂಸ್ಕರಣಾ ಘಟಕಗಳಲ್ಲಿ
- ಬ್ಯಾಕ್ಟೀರಿಯಾವನ್ನು ಸಾಯಿಸಲು
- ಸಂಶ್ಲೇಷಿತ ಕೀಲೆಣ್ಣೆಯ ತಯಾರಿಕೆಯಲ್ಲಿ
ಓಝೋನ್ ಪದರ ತೆಳುವಾಗುವಿಕೆ ಕಾರಣಗಳು :
- ಕ್ಲೋರೋಫ್ಲೋರೋ ಕಾರ್ಬನ್
- ಹ್ಯಾಲೋಜನ್‌ಗಳು
- ಕಾರ್ಬನ್ ಟೆಟ್ರಾಕ್ಲೋರೈಡ್
- ಮಿಥೈಲ್ ಕ್ಲೋರೋಫಾರಂ
ಓಝೋನ್ ಪದರ ತೆಳುವಾಗುವಿಕೆಯಿಂದಾಗುವ ಪರಿಣಾಮಗಳು :
- ನೇರಳಾತೀತ ಕಿರಣಗಳು ನೇರವಾಗಿ ಭೂಮಿಗೆ ಬೀಳುವುದರಿಂದ ಚರ್ಮದ ಕ್ಯಾನ್ಸರ್ ಮತ್ತು ಕಣ್ಣಿನ ಪೊರೆ ನಾಶಕ್ಕೆ ಕಾರಣವಾಗುತ್ತಿದೆ.
- ಸಸ್ಯವರ್ಗಗಳ ದ್ಯುತಿ ಸಂಶ್ಲೇಷಣೆ ಕ್ರಿಯೆ ಕುಂಠಿತ.
- ನೇರಳಾತೀತ ಕಿರಣಗಳು ಅನುವಂಶಿಕ ಕಣಗಳಾದ ಜೀನ್ ಗಳ ಮೇಲೆ ಪ್ರಭಾವ.
- ಖಂಂಡಾವರಣ ಪ್ರದೇಶದಲ್ಲಿರುವ ಹಸಿರು ಶೈವಲ, ಮೀನುಗಳು ಹಾಗೂ ಇತರ ಪ್ರಾಣಿ ಸಂಕುಲದ ಮೇಲೆ ನೇರಳಾತೀತ ಕಿರಣಗಳು ಪ್ರಭಾವ ಬೀರುತ್ತವೆ.
ಓಝೋನ್ ರಂಧ್ರದ ಶೋಧ :
- 1978 – ರಲ್ಲಿ ಓಝೋನ್ ರಂಧ್ರದ ಅಧ್ಯಯನಕ್ಕಾಗಿ ನಿಂಬಸ್ – 7 ಎಂಬ ಉಪಗ್ರಹವನ್ನು ಕಳುಹಿಸಲಾಗಿತ್ತು.
- 1985 – ಬ್ರಿಟೀಷ್ ವಿಜ್ಞಾನಿ ಡಾ. ಜೋಸೆಫ್ ಫೋರ್ಮನ್ ಅಂಟಾರ್ಟಿಕಾ ಖಂಡದಲ್ಲಿ ಓಝೋನ್ ರಂಧ್ರವನ್ನು ಗುರುತಿಸಿದನು.
- ಓಝೋನ್ ಪದರಿನ ಅಳತೆ ಮಾಡಲು ಟೋಟಲ್ ಓಝೋನ್ ಮ್ಯಾಪಿಂಗ್ ಸ್ಪೆಕ್ಟ್ರೋಮೀಟರ್ ಬಲಸುವವರು.
- ಅಮೇರಿಕಾದ ಪ್ರತಿಷ್ಠಿತ “ನೇಚರ್” ವೈಜ್ಞಾನಿಕ ಪತ್ರಿಕೆಯು ಪ್ರಕಟಿಸಿದ ಮಾಹಿತಿಯ ಪ್ರಕಾರ ಮೇ 16, 1985ರಲ್ಲಿ ಓಝೋನ್ ರಂಧ್ರ ಗುರುತಿಸಲಾಗಿದೆ.
- 1987 ರ ಸೆಪ್ಟೆಂಬರ್ 16 ರಂದು ವಿಶ್ವಸಂಸ್ಥೆಯು ಕೆನಡಾದ ಮಾಂಟ್ರಿಯಲ್ ನಲ್ಲಿ ಓಝೋನ್ ನ ಸಂರಕ್ಷಣೆಯ ಚರ್ಚೆಗಾಗಿ ಮಹತ್ತರ ಸಭೆ ಏರ್ಪಡಿಸಿತ್ತು. ಈ ದಿನದ ಸಿನಿನೆನೆಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.
ನಿಯಂತ್ರಿಸುವ ಕ್ರಮಗಳು :
- ಅಂತರಾಷ್ಟ್ರೀಯ ಕಾಳಜಿ ಅಥವಾ ಸಂಸ್ಥೆ ಓಝೋನ್ ಪದರ ಸಂರಕ್ಷಿಸಲು ಸ್ಥಾಪನೆಯಾಗಿದೆ.
- 1985ರಲ್ಲಿ ವಿಯೆನ್ನಾ ಸಾಂಪ್ರದಾಯ ಓಝೋನ್ ಪದರಿನ ರಕ್ಷಣೆಗಾಗಿ ಒಪ್ಪಿಕೊಂಡಿದೆ ಈ ಒಪ್ಪಿಗೆಯಲ್ಲಿ ಮಾಂಟ್ರಿಯಲ್ ಪ್ರೋಟೋಕಾಲ್ 140 ದೇಶಗಳು ಭಾಗವಹಿಸಿವೆ.
- ಈ ಎಲ್ಲಾ ಒಪ್ಪಿತ ದೇಶಗಳು CFC ಬಳಕೆಯನ್ನು ನಿಲ್ಲಿಸಿವೆ.
- ಹೆಲ್ಸಿಂಕಿ ಸಮಾವೇಶ : ಮಾಂಟ್ರಿಯಲ್ ಪ್ರೋಟೋಕಾಲ್ ಪರಿಷ್ಕರಿಸಲು 1989 ರಲ್ಲಿ ಓಝೋನ್ ಪದರಿನ ನಾಶಕ್ಕೆ ಸಂಬಂಧಿಸಿದಂತೆ ಸಮಾವೇಶ ಹೆಲ್ಸಿಂಕಿಯಲ್ಲಿ ನಡೆಯಿತು.
- ಓಝೋನ್ ನಾಶಕ್ಕೆ ಕಾರಣವಾದ 2000 ರಾಸಾಯನಿಕಗಳನ್ನು ಸಂಪೂರ್ಣವಾಗಿ ನಿರ್ಭಂದಿಸಲು 80 ದೇಶಗಳು ಒಪ್ಪಿಕೊಂಡವು.
FAQ :
ಓಝೋನ್‌ನ ಉಪಯೋಗಗಳೇನು?
ನೀರಿನ ಸೋಂಕು ನಿವಾರಕವಾಗಿ ಕ್ಲೋರಿನ್ ಬದಲಿಗೆ ಬಳಕೆ
ಆಹಾರ ಸಂಸ್ಕರಣಾ ಘಟಕಗಳಲ್ಲಿ
ಬ್ಯಾಕ್ಟೀರಿಯಾವನ್ನು ಸಾಯಿಸಲು
ಸಂಶ್ಲೇಷಿತ ಕೀಲೆಣ್ಣೆಯ ತಯಾರಿಕೆಯಲ್ಲಿ
ಓಝೋನ್ ಪದರ ತೆಳುವಾಗುವಿಕೆ ಕಾರಣಗಳೇನು?
ಕ್ಲೋರೋಫ್ಲೋರೋ ಕಾರ್ಬನ್
ಹ್ಯಾಲೋಜನ್‌ಗಳು
ಕಾರ್ಬನ್ ಟೆಟ್ರಾಕ್ಲೋರೈಡ್
ಮಿಥೈಲ್ ಕ್ಲೋರೋಫಾರಂ
ಇತರೆ ವಿಷಯಗಳು :