ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ Information about National Commissions and Institutions Rastriya Ayogagalu mattu Samsthegala bagge Mahithi in Kannada
ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ರಾಷ್ಟ್ರೀಯ ಆಯೋಗಗಳು ಮತ್ತು ಸಂಸ್ಥೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ರಾಷ್ಟ್ರೀಯ ಪರಿಶಿಷ್ಟ ಜಾತಿ ಅಯೋಗ :
- ಸ್ಥಾಪನೆ : ಫೆಬ್ರವರಿ 20, 2004
- ಅಧ್ಯಕ್ಷ : ಸೂರಜ್ ಬಾನ್ (89ನೇ ತಿದ್ದುಪಡಿ, 2003 ಅನ್ವಯ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗವು ವಿಭಜನೆಯಾಗಿ ಪ್ರತ್ಯೇಕ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವಾಯಿತು)
- ಸ್ಥಾಪನೆಗೆ ಸಂಬಂಧಿಸಿದ ವಿಧಿ : 338ನೇ ವಿಧಿ
- ಪ್ರಸ್ತುತ ಅಧ್ಯಕ್ಷರು : ವಿಜಯ ಸಂಪ್ಲಾ
ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗ :
- ಸ್ಥಾಪನೆ : ಮಾರ್ಚ್, 2004 – ಅಧ್ಯಕ್ಷ ಕನ್ವರ್ ಸಿಂಗ್
- ಸ್ಥಾಪನೆಗೆ ಸಂಬಂಧಿಸಿದ ವಿಧಿ : 338 ನೇ ವಿಧಿ
- ಕೇಂದ್ರ ಕಛೇರಿ : ನವ ದೆಹಲಿ
- 5ನೇ ಆಯೋಗದ ಅಧ್ಯಕ್ಷರು : ಹರ್ಷಾ ಚವ್ಹಾಣ
ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ :
- ಸ್ಥಾಪನೆ : 2002 ರಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಕಾಯ್ದೆಯನ್ನು ರೂಪಿಸಲಾಯಿತು. ಈ ಕಾಯ್ದೆಯ ಅನ್ವಯ 2002, ಜನವರಿ 5 ರಿಂದ ಈ ಆಯೋಗವನ್ನು ಸ್ಥಾಪಿಸಲಾಯಿತು.
- ನೇಮಕ : ಈ ಆಯೋಗಕ್ಕೆ ಮುಖ್ಯಸ್ಥರನ್ನು, ಇಬ್ಬರು ಸದಸ್ಯರುಗಳನ್ನು ಸರ್ಕಾರವು ನಾಮಕರಣ ಮಾಡುತ್ತದೆ. ಅಧಿಕಾರವಧಿ – 3 ವರ್ಷ
ರಾಷ್ಟ್ರೀಯ ಮಹಿಳಾ ಆಯೋಗ :
- ಸ್ಥಾಪನೆ : ಜನವರಿ 31, 1992
- ಕೇಂದ್ರ ಕಛೇರಿ : ನವದೆಹಲಿ
- ಸ್ಥಾಪನೆಗೆ ಕಾರಣವಾದ ಕಾಯ್ದೆ : 1990ರ ರಾಷ್ಟ್ರೀಯ ಮಹಿಳಾ ಆಯೋಗದ ಕಾಯ್ದೆ
- ಉದ್ದೇಶ : ದೇಶದ ಮಹಿಳೆಯರ ಶೋಷಣೆಯನ್ನು ತಡೆಯಲು ಮತ್ತು ಮಹಿಳೆಯರ ಸಬಲೀಕರಣ.
- ಅಧಿಕಾರವಧಿ : 3 ವರ್ಷ
- ಮೊದಲ ಅಧ್ಯಕ್ಷರು : ಜಯಂತಿ ಪಾಟ್ನಾಯಕ್
- ಪ್ರಸ್ತುತ ಅಧ್ಯಕ್ಷರು : ಲಲಿತ ಕುಮಾರ ಮಂಗಳಂ
ಕರ್ನಾಟಕ ರಾಜ್ಯ ಮಹಿಳಾ ಆಯೋಗ :
- ಸ್ಥಾಪನೆ : 1996
- ಕೇಂದ್ರ ಕಛೇರಿ : ಬೆಂಗಳೂರು
- ಸ್ಥಾಪನೆಗೆ ಕಾರಣವಾದ ಕಾಯ್ದೆ – 1995ರ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕಾಯ್ದೆ
- ಉದ್ದೇಶ – ರಾಜ್ಯದ ಮಹಿಳೆಯರ ಶೋಷಣೆಯನ್ನು ತಡೆಯಲು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಸ್ಥಾಪಿಸಲಾಗಿದೆ.
- ಅಧಿಕಾರವಧಿ : 3 ವರ್ಷ
- ನೇಮಕ ಮಾಡುವವರು : ರಾಜ್ಯ ಸರ್ಕಾರ
- ಪ್ರಸ್ತುತ ಅಧ್ಯಕ್ಷರು : ಪ್ರಮೀಳಾ ನಾಯ್ಡು
ಕೇಂದ್ರ ತನಿಖಾ ದಳ :
- ಸ್ಥಾಪನೆ : ಏಪ್ರಿಲ್ 1, 1963
- ಕೇಂದ್ರ ಕಛೇರಿ : ನವದೆಹಲಿ
- ಸಂಸ್ಥಾಪಕ ನಿರ್ದೇಶಕ : ಕೋಲಿ ಡಿ.ಪಿ
- ಪ್ರಸ್ತುತ ನಿರ್ದೇಶಕರು : ಅನಿಲ್ ಸಿನ್ಹಾ
- ಸಂಸ್ಥೆಯ ನಿಯಂತ್ರಣ : ಪ್ರಧಾನಮಂತ್ರಿಗಳಿಂದ ನೇರವಾಗಿ ಹಾಗೂ ಸಿಬ್ಬಂದಿ ತರಬೇತಿ ಸಾರ್ವಜನಿಕ ಮತ್ತು ಪಿಂಚಣಿ ಇಲಾಖೆ.
ರಾಷ್ಟ್ರೀಯ ಹಿಂದುಳಿದ ವರ್ಗ ಆಯೋಗ :
- ಸ್ಥಾಪನೆ : ಆಗಸ್ಟ್ 14, 1993
- ಕೇಂದ್ರ ಕಛೇರಿ : ದೆಹಲಿ
- ಅಧಿಕಾರವಧಿ : 3 ವರ್ಷ
- ಸ್ಥಾಪನೆಗೆ ಅವಕಾಶ ಕಲ್ಪಿಸಿದ ವಿಧಿ : 340ನೇ ವಿಧಿ
- ಮೊದಲ ಅಧ್ಯಕ್ಷ : ನ್ಯಾ|| ಆರ್. ಎನ್. ಪ್ರಸಾದ್
- ಪ್ರಸ್ತುತ ಅಧ್ಯಕ್ಷ : ನ್ಯಾ|| ವಿ.ಈಶ್ವರಯ್ಯ
ಕೇಂದ್ರ ಜ್ಞಾನ ಆಯೋಗ :
- ಸ್ಥಾಪನೆ : ಜೂನ್ 13, 2005
- ಮುಖ್ಯಸ್ಥರು : ಸ್ಯಾಮ್ ಪಿತ್ರೋಡ್, ಸದಸ್ಯರು ನಂದನ್ ನಿಲೇಖೇಣಿ, ದೀಪಕ್ ನಾಯರ್ ಜ್ಯೋತಿಘೋಷ್, ಸುಜಾತ ರಾಮ್ ದೊರೈ, ಬಲರಾಮ್, ಅಮಿತಾಬ್ ಮೊಟೊ.
ರಾಷ್ಟ್ರೀಯ ಭದ್ರತಾ ಸಲಹೆಗಾರ :
- ಇದು ಪ್ರಧಾನ ಮಂತ್ರಿಗಳಿಗೆ ಭದ್ರತೆಗೆ ಸಂಬಂಧಿಸಿದಂತೆ ಸಲಹೆ ನೀಡುವಂತಹ ಸಲಹೆಗಾರಾಗಿರುತ್ತಾರೆ.
- 1998 ನವೆಂಬರ್ 19 ರಂದು ಅಟಲ್ ಬಿಹಾರಿ ವಾಜಪೇಯಿರವರು ಬ್ರಿಜೇಶ್ ಮಿಶ್ರಾ ರವರನ್ನು ನೇಮಕ ಮಾಡುವ ಮೂಲಕ ಈ ಹುದ್ದೆ ಸೃಷ್ಟಿಸಿದರು.
- ಪ್ರಸ್ತುತ ಅಧ್ಯಕ್ಷರು : ಅಜಿತ್ ಕುಮಾರ್ ಧೋವಲ್
ಕರ್ನಾಟಕ ಜ್ಞಾನ ಆಯೋಗ :
- ಸ್ಥಾಪನೆ : ಸೆಪ್ಟೆಂಬರ್ 2008
- ಅಧ್ಯಕ್ಷರು : ಡಾ|| ಕೆ.ಕಸ್ತೂರಿ ರಂಗನ್
- ಕೇಂದ್ರ ಕಛೇರಿ : ಬೆಂಗಳೂರು
- ಇತ್ತೀಚೆಗೆ ಕಣಜ ಎಂಬ ಕನ್ನಡದ ವೆಬ್ಸೈಟ್ ನ್ನು ಬಿಡುಗಡೆ ಮಾಡಲಾಗಿದೆ.
ಕೇಂದ್ರ ಮಾಹಿತಿ ಹಕ್ಕುಗಳ ಆಯೋಗ :
- ಅಕ್ಟೋಬರ್ 13, 2005
- ಕೇಂದ್ರ ಕಛೇರಿ : ನವದೆಹಲಿ
- ಮೊಟ್ಟಮೊದಲ ಬಾರಿಗೆ ಮಾಹಿತಿ ಹಕ್ಕು ಜಾರಿಗೆ ತಂದ ರಾಜ್ಯ ತಮಿಳುನಾಡು
- ಮಾಹಿತಿ ಹಕ್ಕು ಕಾಯ್ದೆ 2005ರ ಅನ್ವಯ ಸ್ಥಾಪನೆ
- ಆಯುಕ್ತರು ಮತ್ತು ಮುಖ್ಯ ಆಯುಕ್ತರ ನೇಮಕ :ಬಾರತದ ರಾಷ್ಟ್ರಪತಿಗಳು
- ಮುಖ್ಯ ಆಯುಕ್ತರ ಅಧಿಕಾರವಧಿ : 5 ವರ್ಷ ಅಥವಾ 65 ವರ್ಷ ವಯಸ್ಸು
ರಾಷ್ಟ್ರೀಯ ತನಿಖಾ ದಳ :
- ಸ್ಥಾಪನೆ : 2009
- ಕೇಂದ್ರ ಕಛೇರಿ : ನವದೆಹಲಿ
- ಭಯೋತ್ಪಾದನೆಯನ್ನು ನಿಗ್ರಹಿಸಲು ಭಾರತ ಸರ್ಕಾರವು ಸ್ಥಾಪಿಸಿದ ಕೇಂದ್ರೀಯ ಸಂಸ್ಥೆಯಾಗಿದೆ.
- 2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳವನ್ನು 2009 ರಲ್ಲಿ ಸ್ಥಾಪಿಸಲಾಯಿತು.
- ರಾದ್ ವಿನೋದ್ ರಾಜ್ ಅವರು ರಾಷ್ಟ್ರೀಯ ತನಿಖಾ ದಳದ ಸಂಸ್ಥಾಪಕ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಯಿತು.
- ಭಾರತದ ಸಂಸತ್ ನಲ್ಲಿ ರಾಷ್ಟ್ರೀಯ ತನಿಖಾ ದಳದ ಕಾಯ್ದೆ 2008 ನ್ನು ಜಾರಿಗೆ ತಂದು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯು ಗೃಹಸಚಿವಾಲಯ ದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
FAQ :
ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸಂಬಂಧಿಸಿದ ವಿಧಿ ಯಾವುದು ?
338ನೇ ವಿಧಿ
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಯಾವಾಗ ಸ್ಥಾಪನೆ ಆಯಿತು?
1996
ಇತರೆ ವಿಷಯಗಳು :
ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ
ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ಮಾಹಿತಿ