ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ಮಾಹಿತಿ | Information about the Director Principles of State Policy in Kannada

Join Telegram Group Join Now
WhatsApp Group Join Now

ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ಮಾಹಿತಿ Information about the Director Principles of State Policy Rajyanithi Nirdheshaka Thatvagala bagge Mahithi in kannada

ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ಮಾಹಿತಿ

Information about the Director Principles of State Policy in Kannada
ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ರಾಜ್ಯ ನೀತಿ ನಿರ್ದೇಶಕ ತತ್ವಗಳ ಅರ್ಥ :

ಸುಖೀರಾಜ್ಯ ಸ್ಥಾಪನೆಯ ಗುರಿಯನ್ನು ಸಾಧಿಸುವುದಕ್ಕಾಗಿ ಸಂವಿದಾನವು ಕೆಲವು ತತ್ವಗಳನ್ನು ಮುಂದಿಟ್ಟು ರಾಜ್ಯಕ್ಕೆ ಮಾರ್ಗದರ್ಶನ ನೀಡಿದೆ. ಇಂತಹ ಮಾರ್ಗದರ್ಶಿ ಸೂತ್ರಗಳನ್ನು ರಾಜ್ಯನೀತಿ ನಿರ್ದೇಶಕ ತತ್ವಗಳು ಎನ್ನುವರು. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಇವುಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯಭಾರ ಮಾಡಬೇಕೆಂಬುದು ಇವುಗಳ ಉದ್ದೇಶವಾಗಿದೆ.

ರಾಜ್ಯನೀತಿ ನಿರ್ದೇಶಕ ತತ್ವಗಳ ಪ್ರಾಮುಖ್ಯತೆ :

ರಾಜ್ಯನೀತಿ ನಿರ್ದೇಶಕ ತತ್ವಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡುವ ನಿರ್ದೇಶನಗಳಾಗಿವೆ. ಕಾನೂನು ರಚಿಸುವಾಗ, ನೀತಿಗಳನ್ನು ರಚಿಸಿ ಜಾರಿಗೆ ತರುವಾಗ ಈ ತತ್ವಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಾಧಿಸಲು ಮತ್ತು ಸುಖಿಃ ರಾಜ್ಯವನ್ನು ಸ್ಥಾಪಿಸಲು ರಾಜ್ಯನೀತಿ ನಿರ್ದೇಶಕ ತತ್ವಗಳು ಮುಖ್ಯವೆನಿಸುತ್ತವೆ. ಸಂವಿದಾನದ 4ನೇ ಭಾಗದಲ್ಲಿ ವಿಧಿ 36 ರಿಂದ 51ನೇ ವಿಧಿಯವರೆಗೂ ರಾಜ್ಯನೀತಿ ನಿರ್ದೇಶಕ ತತ್ವಗಳ ಬಗ್ಗೆ ವಿವರಿಸಲಾಗಿದೆ.

ರಾಜ್ಯನೀತಿ ನಿರ್ದೇಶಕ ತತ್ವಗಳ ವಿಧಗಳು :

ವಿಧಿ 36 ರಾಜ್ಯ ಎಂಬ ಪದದ ಅರ್ಥ ತಿಳಿಸುತ್ತದೆ.

ಕೋರ್ಟ್‌ ಮೊರೆ ಹೋಗುವಂತಿಲ್ಲ – ವಿಧಿ 37 : ಈ ತತ್ವಗಳು ಸರ್ಕಾರಗಳಿಗೆ ನಿರ್ದೇಶನ ಮಾಡುತ್ತವೆ. ಅವುಗಳನ್ನು ಪಾಲನೆ ಮಾಡದೆ ಇದ್ದರೆ ಯಾವುದೇ ಕೋರ್ಟ್‌ ಮೊರೆ ಹೋಗುವಂತಿಲ್ಲ.

Join WhatsApp Join Telegram

ಅಸಮತೋಲನವನ್ನು ಹೋಗಲಾಡಿಸಲು – ವಿಧಿ 38 : ದೇಶದಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನವನ್ನು ಹೋಗಲಾಡಿಸಲು ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.

ರಾಜ್ಯ ಅನುಸರಿಸಬೇಕಾದ ತತ್ವಗಳು – ವಿಧಿ 39 : ಸಮಾನ ಕೆಲಸಕ್ಕೆ ಸಮಾನ ವೇತನ, ಪ್ರತಿಯೊಬ್ಬ ನಸಗರಿಕನಿಗೂ ಜೀವನಾವಶ್ಯಕವಾಗಿ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸುವುದು.

ಉಚಿತ ಕಾನೂನಿನ ನೆರವು – ವಿಧಿ 39ಎ : ಬಡವರಿಗೆ ನತ್ತು ನಿರ್ಗತಿಕರಿಗೆ ಅನುಕೂಲವಾಗಲೆಂದು ಉಚಿತ ಕಾನೂನಿನ ನೆರವನ್ನು ನೀಡಬೇಕೆಂದು ಈ ವಿಧಿಯಲ್ಲಿ ತಿಳಿಸಲಾಗುತ್ತದೆ.

ಗ್ರಾಮ ಪಂಚಾಯಿತಿಯ ರಚನೆಯ ಕುರಿತು ಮಾಹಿತಿ ನೀಡುತ್ತದೆ – ವಿಧಿ 40 : ಇದರ ಕುರಿತು 1957 ರಲ್ಲಿ ಬಲವಂತರಾಯ್‌ ಮೆಹ್ತಾ ಸಿಮಿತಿ ರಚಿಸಲಾಯಿತು. ಈ ಸಮಿತಿಯು ಸ್ಥಳೀಯ ಆಡಳಿತ ಅವಶ್ಯಕ ಎಂದು ವರದಿ ನೀಡಿತು. 1977 ರಲ್ಲಿ ಇದರ ಕುರಿತು ಅಶೋಕ ಮೆಹ್ತಾ ಸಮಿತಿ ರಚಿಸಲಾಯಿತು. ಈ ಸಮಿತಿಯು 132 ಶಿಫಾರಸ್ಸು ಮಾಡಿತು. ಗ್ರಾಮ ಪಂಚಾಯಿತಿ ರಚನೆಗೆ ಸಂಬಂಧಿಸಿದ ತಿದ್ದುಪಡಿ 73. ಅಕ್ಟೋಬರ್‌ 2 1959 ರಂದು ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ರಾಜಸ್ತಾನದ ನಾಗೋರ್‌. ಕರ್ನಾಟಕದಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನುಅಳವಡಿಸಿಕೊಂಡಿದ್ದು 1983 ರಲ್ಲಿ.

ಸಹಾಯ ಧನ – ವಿಧಿ 41 : ಅಂಗವಿಕಲರಿಗೆ, ವೃದ್ದರಿಗೆ, ನಿರುದ್ಯೋಗಿಗಳಿಗೆ ಸಹಾಯಧನ ನೀಡಬೇಕೆಂದು ಈ ವಿಧಿಯಲ್ಲಿ ಮಾಹಿತಿ ನೀಡಲಾಗುತ್ತದೆ.

ಉತ್ತಮ ವಾತಾವರಣ – ವಿಧಿ 42 : ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತವಾದ ಮತ್ತು ನ್ಯಾಯ ಸಂಬಂಧದ ವಾತಾವರಣ ಕಲ್ಪಿಸಬೇಕೆಂದು ತಿಳಿಸುತ್ತದೆ. ಜೊತೆಗೆ ಸ್ತ್ರೀಯರಿಗೆ ಹೆರಿಗೆ ಸೌಲಭ್ಯ ಒದಗಿಸುವಂತೆ ಅವಕಾಶ ಕಲ್ಪಿಸಿಕೊಡಬೇಕೆಂದು ಈ ವಿಧಿಯಲ್ಲಿ ಮಾಹಿತಿ ನೀಡಲಾಗುತ್ತದೆ.

ಕೆಲಸಗಾರರಿಗೆ ಜೀವನಾವಶ್ಯಕ ವೇತನ ನೀಡುವುದು – ವಿಧಿ 43 : ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸುವುದು ಮತ್ತು ಗೌರವಯುತವಾಗಿ ಜೀವನ ನಡೆಸಲು ಜೀವನಾವಶ್ಯಕವಾದ ವೇತನವನ್ನು ನೀಡುವಂತೆ ಮಾಡುವುದು.

ಕಾರ್ಮಿಕ ಸಂಘಗಳ ಸ್ಥಾಪನೆ – ವಿಧಿ 43ಎ : ಕೈಗಾರಿಕಾ ವ್ಯವಸ್ಥಾಪನೆಯಲ್ಲಿ ಕಾರ್ಮಿಕರಿಗೆ ಭಾಗವಹಿಸುವ ಅವಕಾಶ ಕಲ್ಪಿಸುವುದು ಮತ್ತು ಕಾರ್ಮಿಕರ ಸಂಘಗಳನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಸಹಕಾರ ಸಂಘಗಳ ಸ್ಥಾಪನೆ – ವಿಧಿ 43ಬಿ : 2011ರಲ್ಲಿ 97ನೇ ತಿದ್ದುಪಡಿ ಮಾಡುವ ಮೂಲಕ ಇದನ್ನು ಸೇರಿಸಲಾಗಿದೆ.

ಏಕರೂಪ ನಾಗರಿಕ ಸಂಹಿತೆ – ವಿಧಿ 44 : ಎಲ್ಲಾ ನಾಗರಿಕರಿಗೂ ಮತ್ತು ಎಲ್ಲಾ ಧರ್ಮದವರಿಗೂ ದೇಶಾದಾದ್ಯಂತ ಒಂದೇ ರೀತಿಯ ಸಿವಿಲ್‌ ಸಂಹಿತೆ ಜಾರಿಗೊಳಿಸುವುದರ ಕುರಿತು ತಿಳಿಸಲಾಗಿದೆ.

ಪೂರ್ವ ಬಾಲ್ಯ ಶಿಕ್ಷಣ – ವಿಧಿ 45 : 6 ವರ್ಷದ ಒಳಗಿನ ಮಕ್ಕಳನ್ನು ಪೂರ್ವ ಬಾಲ್ಯ ಶಿಕ್ಷಣಕ್ಕೆ ಒಳಪಡಿಸಬೇಕೆಂದು ಈ ವಿಧಿಯಲ್ಲಿ ಮಾಹಿತಿ ನೀಡಲಾಗಿದೆ.

ಅನುಸೂಚಿತ ಜಾತಿ ಮತ್ತು ಬುಡಕಟ್ಟು ಜನಾಂಗದವರಿಗೆ ವಿಶೇಷ ಸೌಲಭ್ಯ – ವಿಧಿ 46 : ಸಾಮಾಜಿಕ ಕ್ಷೇತ್ರದಲ್ಲಿ ಹಿಂದುಳಿದ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಜನಾಂಗದವರಿಗೆ ವಿಶೇಷ ಸೌಲಭ್ಯ ನೀಡಬಹುದೆಂದು ಈ ವಿಧಿಯಲ್ಲಿ ತಿಳಿಸಲಾಗುತ್ತದೆ.

ಸಾರಾಯಿ ನಿಷೇಧ – ವಿಧಿ 47 : ಪೌಷ್ಟಿಕತೆಯ ಮಟ್ಟ ಮತ್ತು ಜನರ ಜೀವನಮಟ್ಟ ಹೆಚ್ಚಿಸುವುದು, ಸಾರ್ವಜನಿಕ ಆರೋಗ್ಯ ಸುಧಾರಿಸುವುದು ಜೊತೆಗೆ ಸಾರಾಯಿ ನಿಷೇಧ ಕುರಿತು ಈ ವಿಧಿಯಲ್ಲಿ ತಿಳಿಸಲಾಗಿದೆ.

ಕೃಷಿಯಲ್ಲಿ ಆಧುನೀಕರಣ – ವಿಧಿ 48 : ಕೃಷಿಯಲ್ಲಿ ಆಧುನೀಕರಣಗೊಳಿಸುವುದು, ಪಶು ಸಂಗೋಪನೆ ಮಾಡುವುದು, ಗೋವು, ಕರು ಮತ್ತು ಇತರೆ ಹಾಲು ಕೊಡುವ ಮೂಕ ಪ್ರಾಣಿಯ ಹತ್ಯೆಯನ್ನು ಮಾಡುವಂತಿಲ್ಲ ಎಂದು ಈ ವಿಧಿಯಲ್ಲಿ ತಿಳಿಸಲಾಗುತ್ತದೆ.

ಪರಿಸರ ಸಂರಕ್ಷಣೆ – ವಿಧಿ 48ಎ : 1976 ರಲ್ಲಿ 42ನೇ ತಿದ್ದುಪಡಿ ಮಾಡುವ ಮೂಲಕ 48ಎ ಹೊಸದಾದ ವಿಧಿ ಮಾಡಿಕೊಂಡು ಈ ವಿಧಿಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುತ್ತದೆ.

ಐತಿಹಾಸಿಕ ಸ್ಮಾರಕಗಳ ರಚನೆ – ವಿಧಿ 49 : ಐತಿಹಾಸಿಕ ಸ್ಮಾರಕಗಳ, ಐತಿಹಾಸಿಕ ಕಟ್ಟಡಗಳ, ಕಲಾತ್ಮಕ ವಸ್ತುಗಳ ರಕ್ಷಣೆ ಮಾಡಬೇಕೆಂದು ಈ ವಿಧಿಯಲ್ಲಿ ತಿಳಿಸಲಾಗುತ್ತದೆ.

ನ್ಯಾಯಾಂಗವನ್ನು ಬೇರ್ಪಡಿಸುವುದು – ವಿಧಿ 50 : ನ್ಯಾಯಾಂಗವನ್ನು ಕಾರ್ಯಾಂಗದಿಂದ ಬೇರ್ಪಡಿಸುವುದರ ಬಗ್ಗೆ ಹೇಳುತ್ತದೆ.

ವಿಧಿ 51 ಅಂತರಾಷ್ಟ್ರೀಯ ಒಪ್ಪಂದಗಳಿಗೆ ಗೌರವ ನೀಡುವುದು.

FAQ :

ಸಂವಿಧಾನದ ಎಷ್ಟನೆ ಭಾಗ ರಾಜ್ಯ ನೀತಿ ನಿರ್ದೇಶಕ ತತ್ವಗಳ ಬಗ್ಗೆ ತಿಳಿಸಿಕೊಡುತ್ತದೆ?

4ನೇ ಭಾಗ

ಸಂವಿಧಾನದ 4ನೇ ವಿಧಿ ಯಾವುದರ ಬಗ್ಗೆ ಹೇಳುತ್ತದೆ ?

ಏಕರೂಪ ನಾಗರೀಕ ಸಂಹಿತೆ

ಇತರೆ ವಿಷಯಗಳು :

ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ

ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.