ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ | Untouchability is a social scourge Essay in Kannada

Join Telegram Group Join Now
WhatsApp Group Join Now

ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ Untouchability is a social scourge Essay Asprushyathe Ondu Samajika Pidugu Prabandha in Kannada

ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

Untouchability is a social scourge Essay in Kannada
ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

ಈ ಲೇಖನಿಯಲ್ಲಿ ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ಅಸ್ಪೃಶ್ಯತೆಯ ಆಚರಣೆಯು ವರ್ಣವ್ಯವಸ್ಥೆಯ ಹುಟ್ಟಿನೊಂದಿಗೆ ಅಸ್ತಿತ್ವವನ್ನು ಪಡೆದುಕೊಂಡಿದೆ. ಸ್ಪೃಶ್ಯ ಮತ್ತು ಅಸ್ಪೃಶ್ಯ ಭಾವನೆ ಮುಖ್ಯವಾಗಿ ಸಾಮಾಜಿಕ, ಆರ್ಥಿಕ, ಅಸಮಾನತೆಯ ಮೂಲದಿಂದ ರೂಪಿತಗೊಂಡಿದ್ದು. ಅಸ್ಪೃಶ್ಯ ಎಂಬುದು ಮುಟ್ಟಬಾರದ, ಮುಟ್ಟಲಾಗದ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಮಹಾತ್ಮ ಗಾಂಧೀಜಿಯವರ ಪ್ರಕಾರ ʼಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರಾರ್ಹವಾದ ಅಭಿವ್ಯಕ್ತಿ. ಇದು ಹಿಂದೂ ಸಮಾಜದ ಶರೀರವನ್ನು ಕುಷ್ಠ ರೋಗದ ಹಿಣ್ಣಿನಂತೆ ಪೀಡಿಸುತ್ತದೆʼ.

ವಿಷಯ ವಿವರಣೆ :

ಅಸ್ಪೃಶ್ಯತೆಯ ಸಮಸ್ಯೆಗಳು :

ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳಮಟ್ಟದ ಸ್ಥಾನ : ಅಸ್ಪೃಶ್ಯರಿಗೆ ಸಮಾಜ ವ್ಯವಸ್ಥೆಯಲ್ಲಿ ಅತ್ಯಂತ ಕೆಳ ಸ್ಥಾನ ನೀಡಲಾಗಿದೆ. ಮನುಸ್ಮೃತಿ ಪ್ರಕಾರ ಚಂಡಾಲರನ್ನು ಮುಟ್ಟಿದವರು ಹತ್ತು ಹಲವು ಪ್ರಾಯಶ್ಚಿತ್ತಕ್ಕೊಳಪಡಬೇಕಾಗಿತ್ತು. ವ್ಯಾಘ್ರವಾದ ಸ್ಮೃತಿಯು ಹೇಳುವಂತೆ ಹಸುವಿನ ಬಾಲದ ಉದ್ದಕ್ಕಿಂತ ಕಡಿಮೆ ಅಂತರದಲ್ಲಿ ಅಂತ್ಯಜರನ್ನು ಭೇಟಿಯಾದರೆ ಆ ಸುವರ್ಣೀಯರು ಸ್ನಾನಮಾಡಿ ಮೈಲಿಗೆಯನ್ನು ಹೋಗಲಾಡಿಸಿಕೊಳ್ಳಬೇಕಾಗಿತ್ತು.

ಮಲಬಾರಿಯಲ್ಲಿ ತಾವೇ ತಯಾರಿಸಿದ ಚಪ್ಪಲಿಗಳನ್ನು ಅಂತ್ಯಜರು ದರಿಸುವಂತಿರಲಿಲ್ಲ. ಸವರ್ಣೀಯರ ಕೆರೆ, ಬಾವಿ, ಕೊಳ, ಕಟ್ಟೆ, ಸ್ಮಶಾನವನ್ನು ಬಳಸುವಂತಿರಲಿಲ್ಲ. ಬಿ.ಕುಪ್ಪಸ್ವಾಮಿಯವರು ದಾಖಲಿಸಿರುವಂತೆ,ʼಮಲಹೊರುವ, ಸತ್ತ ಪ್ರಾಣಿಗಳನ್ನು ಸಾಗಿಸುವ, ಬೀದಿ ಚರಂಡಿ ಗುಡಿಸುವ ಹೀನ ವೃತ್ತಿಗಳನ್ನು ಮಾಡಬೇಕಾಗಿತ್ತು. ಹೀಗೆ ಸಾಮಾಜಿಕವಾಗಿ ಅತ್ಯಂತ ಕೆಳ ಸ್ಥಾನಗಳನ್ನು ಅಸ್ಪೃಶ್ಯರಿಗೆ ನೀಡಿ, ಅವರು ಹುಟ್ಟಿನ ಕಾರಣಕ್ಕಾಗಿಯೇ ಅವರ ಸಾಮಾಜಿಕ ಚಲನೆಯನ್ನು ನಿಯಂತ್ರಣ ಮಾಡಲಾಗಿತ್ತು.

ಶೈಕ್ಷಣಿಕ ಅವಕಾಶಗಳಿಂದ ಹೊರಗಿಡಲಾಗಿತ್ತು :

Join WhatsApp Join Telegram

ಅನೇಕ ಶತಮಾನಗಳಿಂದ ಅಸ್ಪೃಶ್ಯರನ್ನು ಶೈಕ್ಷಣಿಕ ಚಟುವಟಿಕೆಗಳಿಂದ ದೂರವಿಡಲಾಗಿತ್ತು. ವೇದಗಳನ್ನು ಕೇಳುವಂತಿರಲಿಲ್ಲ ಮತ್ತು ಓದುವಂತಿರಲಿಲ್ಲ. ಸಂಸ್ಕೃತ ಭಾಷೆಯನ್ನು ಕಲಿಯುವಂತಿರಲಿಲ್ಲ. ಧರ್ಮ ಗ್ರಂಥಗಳ ಬಗ್ಗೆ ತಿಳುವಳಿಕೆ ಪಡೆಯುವಂತಿರಲಿಲ್ಲ. ಮಧ್ಯಯುಗದಲ್ಲೂ ಇದೇ ಸ್ಥಿತಿ ಇತ್ತು. ಬ್ರಿಟಿಷರು ಭಾರತಕ್ಕೆ ಬರುವುದಕ್ಕೂ ಮುಂಚೆ ಅಸ್ಪೃಶ್ಯ ವಿದ್ಯಾರ್ಥಿಗಳಿಗೆ ಸವರ್ಣೀಯ ವಿದ್ಯಾರ್ಥಿಗಳ ಜೊತೆ ಬೆರೆಯಲು ಬಿಡುತ್ತಿರಲಿಲ್ಲ. ಒಟ್ಟಿಗೆ ಕುಳಿತು ಪಾಠಗಳನ್ನು ಕಲಿಯುವಂತಿರಲಿಲ್ಲ.

ಶಿಕ್ಷಣಕ್ಕಿರುವ ಸಾರ್ವಜನಿಕ ಮಹತ್ವದ ಮೂಲಕವೇ ಬಿ.ಆರ್.‌ಅಂಬೇಡ್ಕರ್‌ ಅವರು “ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು” ಎಂದು ಪ್ರತಿಪಾದಿಸುತ್ತಾರೆ. ಈ ರೀತಿಯಾದ ಕ್ರಾಂತಿಕಾರಿ ಚಿಂತನೆಗಳಿಂದಲೇ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ಸಂವಿಧಾನ ಕರಡು ರಚನೆಯಲ್ಲಿ ನಿರ್ಣಾಯಕವಾದ ಹಾಗೂ ಮಹತ್ವದ ಪಾತ್ರವನ್ನು ನಿರ್ವಹಿಸಿ ʼಸಂವಿಧಾನ ಶಿಲ್ಪಿʼ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಆಸ್ತಿಯ ಒಡೆತನದ ಹಕ್ಕಿನ ನಿರಾಕರಣೆ :

ಸಾಂಪ್ರದಾಯಿಕವಾಗಿ ಅಸ್ಪೃಶ್ಯರು ಪ್ರಮುಖ ಆರ್ಥಿಕ ಚಟುವಟಿಕೆಗಳನ್ನು ಮತ್ತು ಆಸ್ತಿಯ ಒಡೆತನದ ಹಕ್ಕನ್ನು ಹೊಂದದೆ, ಮೇಲು ಜಾತಿಗಳ ಸೇವೆಯನ್ನು ಮಾಡಬೇಕಾಗಿತ್ತು. ಇವರು ಸ್ವಯಂ ಆಸ್ತಿಯ ಭೂಮಿಯನ್ನು ಹೊಂದಿರದಂತೆ ಧರ್ಮ ಗ್ರಂಥಗಳನ್ನು ಉಲ್ಲೇಖಿಸಿ ಅಸ್ಪೃಶ್ಯರಿಗೆ ಆಸ್ತಿಯ ಹಕ್ಕನ್ನು ನಿರಾಕರಣೆ ಮಾಡಲಾಗಿತ್ತು. ಇದು ಮಾನವ ಜೀವ ವಿರೋಧಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.

ರಾಜಕೀಯ ಭಾಗವಹಿಸುವಿಕೆ ನಿರಾಕರಣೆ :

ಸಾಂಪ್ರಾದಾಯಿಕ ಆಡಳಿತ ವ್ಯವಸ್ಥೆಯಲ್ಲಿ ಅಸ್ಪೃಶ್ಯರಿಗೆ ಪ್ರವೇಶವಿರಲಿಲ್ಲ. ಬ್ರಿಟಿಷರ ಕಾಲದಲ್ಲಿ ಅಸ್ಪೃಶ್ಯರಿಗೆ ಕೆಲವು ಮಟ್ಟಿಗೆ ರಾಜಕೀಯವಾದ ಹಕ್ಕುಗಳು ದೊರೆತವು. ಡಾ.ಬಿ.ಆರ್ ಅಂಬೇಡ್ಕರ್‌ ಅವರ ಹೋರಾಟದ ಫಲವಾಗಿ ಅಸ್ಪೃಶ್ಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹಾಗೂ ಆಡಳಿತದಲ್ಲಿ ಅವಕಾಶಗಳು ದೊರೆತವು. ಸ್ವಾತಂತ್ರ್ಯ ನಂತರ ಮುಖ್ಯವಾಗಿ ಅಸ್ಪೃಶ್ಯ ಸಮುದಾಯಗಳನ್ನು ಒಳಗೊಂಡಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳನ್ನು ಮೀಸಲಾತಿಯನ್ನು ಜಾರಿಗೆ ತರಲಾಯಿತು.

ಅಸ್ಪೃಶ್ಯತೆ ಎನ್ನುವ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವ ಸಲುವಾಗಿಯೇ ಇಂಡಿಯಾದ ಸಂವಿಧಾನವು ವಿಶ್ವದಲ್ಲಿಯೆ ವಿಶಿಷ್ಟವಾದ ನ್ಯಾಯ ಮತ್ತು ಸಮಾನತೆಯನ್ನು ನೀಡುವ ದಿಕ್ಕಿನಲ್ಲಿ ಬದ್ದತೆಯ ವಾಗ್ದಾನ ಮಾಡುತ್ತದೆ. ಎಲ್ಲಾ ಜನರು ಘನತೆ, ಗೌರವ, ಸ್ವಾತಂತ್ರ್ಯ, ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಪಡೆಯಲು ಅವಕಾಶ ಒದಗಿಸಿರುವ ನಮ್ಮ ಸಂವಿಧಾನವು ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿಯೇ ಅಸ್ಪೃಶ್ಯತೆಯ ನಿವಾರಣೆಗೆ ಕಾನೂನು ಕ್ರಮಗಳನ್ನು ಜಾರಿಗೆ ತರಲಾಗಿದೆ.

ಅಸ್ಪೃಶ್ಯತೆ ನಿವಾರಣೆ ಕಾನೂನು ಕ್ರಮಗಳು :

ಅಸ್ಪೃಶ್ಯತೆಯ ಕಳಂಕವನ್ನು ತೊಡೆದು ಹಾಕಲು ಜ್ಯೋತಿಭಾ ಫುಲೆ, ಡಾ.ಬಿ.ಆರ್ ಅಂಬೇಡ್ಕರ್‌ ಮೊದಲಾದವರು ತೀವ್ರ ಪ್ರಯತ್ನಪಟ್ಟರು. ಇಷ್ಟಾದರೂ ಇದನ್ನು ಪ್ರಮಾಣದಲ್ಲಿ ಹೋಗಲಾಡಿಸಲು ಇನ್ನೂ ಸಾಧ್ಯವಾಗಿಲ್ಲ.

ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ. ಭಾರತ ಸರ್ಕಾರ ʼಅಸ್ಪೃಶ್ಯತಾ ಅಪರಾಧಗಳ ಕಾಯ್ದೆʼ ಯನ್ನು 1955ರಲ್ಲಿ ಜಾರಿಗೊಳಿಸಿದೆ. ಇದರಲ್ಲಿ ಕಂಡುಬಂದ ಕೆಲವು ಲೋಪ ದೋಷಗಳನ್ನು ತಿದ್ದುಪಡಿಮಾಡಿ ʼನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆʼ ಎಂದು 1976ರಲ್ಲಿ ಮಾರ್ಪಾಡುಗೊಳಿಸಲಾಯಿತು. ಈ ಕಾಯ್ದೆಯ ಪ್ರಕಾರ ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಲ್ಲದೆ ಸಂವಿಧಾನತ್ಮಕವಾಗಿ ಸಾರ್ವತ್ರಿಕ ಮತದಾನದ ಹಾಗೂ ಸಮಾನತೆಯ ಹಕ್ಕನ್ನು ದೇಶದ ಎಲ್ಲಾ ನಾಗರಿಕರಿಗೂ ನೀಡಲಾಗಿದೆ. ವಿಶೇಷವಾಗಿ ಪರಿಶಿಷ್ಟರನ್ನೊಳಗೊಂಡಂತೆ ಹಿಂದುಳಿದ ಜಾತಿಯವರಿಗೆ ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳಲ್ಲಿ ಮೀಸಲಾತಿಗಳನ್ನು ಕಲ್ಪಿಸಲಾಗಿದೆ. 1989ರ ಶಾಸನವು ಅಸ್ಪೃಶ್ಯತೆಯ ನಿರ್ಮೂಲನೆ ಕುರಿತಾದ ವಿಶೇಷ ಜವಬ್ದಾರಿಗಳನ್ನು ರಾಜ್ಯ ಸರ್ಕಾರಗಳಿಗೆ ವಹಿಸಿದೆ.

ಉಪಸಂಹಾರ :

ಇಂದು ಅಸ್ಫೃಶ್ಯತೆಯು ಸಾಮಾಜಿಕ ಪಿಡುಗಾಗಿದೆ. ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇದು ಸಮಾಜಕ್ಕೆ ಅಂಟಿರುವ ಕಪ್ಪು ಚುಕ್ಕೆಯಾಗಿದೆ. ಸ್ವತಂತ್ರ ಭಾರತವು ಅಸ್ಪೃಶ್ಯತೆಯ ನಿವಾರಣೆಗಾಗಿ ವಿಶೇಷ ಆಸಕ್ತಿ ವಹಿಸಿ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲು ಶ್ರಮಿಸುತ್ತಾ ಬಂದಿದೆ. ಆದರೆ ಇದನ್ನು ತೊಡೆದು ಹಾಕಲು ಎಲ್ಲರೂ ಕೈ ಜೋಡಿಸಬೇಕಾಗಿದೆ. ಎಲ್ಲ ವರ್ಗದವರನ್ನು ಒಂದೇ ರೀತಿ ಕಾಣಬೇಕಾಗಿದೆ.

FAQ :

ಸಂವಿಧಾನದ ಎಷ್ಟನೇ ವಿಧಿಯು ಅಸ್ಫೃಶ್ಯತೆಯ ಬಗ್ಗೆ ಹೇಳುತ್ತದೆ?

ವಿಧಿ 17

ಭಾರತ ಸರ್ಕಾರ ʼಅಸ್ಪೃಶ್ಯತಾ ಅಪರಾಧಗಳ ಕಾಯ್ದೆʼ ಯನ್ನು ಎಷ್ಟರಲ್ಲಿ ಜಾರಿಗೊಳಿಸಿದೆ?

1955

ಇತರೆ ವಿಷಯಗಳು :

ಅಂತರಾಜ್ಯ ಜಲವಿವಾದಗಳ ಬಗ್ಗೆ ಪ್ರಬಂಧ

ವಿಶ್ವ ಭೂ ದಿನದ ಬಗ್ಗೆ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.