ಅಂತರಾಜ್ಯ ಜಲವಿವಾದಗಳ ಬಗ್ಗೆ ಪ್ರಬಂಧ | Essay on Interstate Water Disputes in Kannda

Join Telegram Group Join Now
WhatsApp Group Join Now

ಅಂತರಾಜ್ಯ ಜಲವಿವಾದಗಳ ಬಗ್ಗೆ ಪ್ರಬಂಧ Essay on Interstate Water Disputes Antarrajya Jala Vivadhagala bagge Mahithi in Kannada

ಅಂತರಾಜ್ಯ ಜಲವಿವಾದಗಳ ಬಗ್ಗೆ ಪ್ರಬಂಧ

Essay on Interstate Water Disputes in Kannda
ಅಂತರಾಜ್ಯ ಜಲವಿವಾದಗಳ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಅಂತರಾಜ್ಯ ಜಲವಿವಾದಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

“ಹನಿ ನೀರು ಅಮೃತಕ್ಕಿಂತ ಮಿಗಿಲು”, “ಜಲ ಸಂಪನ್ಮೂಲವೇ ಜನರ ಜೀವನದ ಮೂಲ” ಜಲಸಂಪನ್ಮೂಲವು ಜನರ ಜೀವ ಮೂಲವಾಗಿದೆ. ಆರೋದ್ಯ, ಕೃಷಿ, ಕೈಗಾರಿಕೆಗಳ ಬೆಳವಣಿಗೆಗೆ ನೀರು ಅವಶ್ಯ ಹಾಗೂ ಅನಿವಾರ್ಯವಾಗಿದೆ. ಅಂತರಾಜ್ಯ ನದಿ ನೀರಿನ ವಿವಾದಗಳು ಇಂದು ಭಾರತದಲ್ಲಿ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ.

ವಿಷಯ ವಿವರಣೆ :

ಅಂತರಾಜ್ಯ ಜಲ ವಿವಾದದ ಅರ್ಥ :

ಅನೇಕ ನದಿಗಳು ಅಂತರ ರಾಜ್ಯಗಳ ಮೂಲಕ ಹರಿಯುತ್ತಿದ್ದು, ನದಿ ನೀರಿನ ಬಳಕೆ, ಹಂಚಿಕೆ ಮತ್ತು ವ್ಯಾಪ್ತಿಗೆ ಸಂಬಂಧಿಸಿದಂತೆ ರಾಜ್ಯಗಳ ನಡುವಿನ ವಿವಾದಗಳಾಗುತ್ತಿದ್ದು ಅದನ್ನು ಅಂತರಾಜ್ಯ ಜಲ ವಿವಾದಗಳೆನ್ನುವರು.

ಕೆಲವು ಅಂತರಾಜ್ಯ ಜಲ ವಿವಾದಗಳು :

 • ಕಾವೇರಿ ಜಲವಿವಾದ – ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೆರಿ
 • ಮಹದಾಯಿ ಜಲವಿವಾದ – ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ
 • ಮುಲ್ಲ ಪೆರಿಯಾರ್‌ ಜಲವಿವಾದ – ಕೇರಳ ಮತ್ತು ತಮಿಳುನಾಡು
 • ಗೋದಾವರಿ ಜಲವಿವಾದ – ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ
 • ರಾವಿ ಮತ್ತು ಬಿಯಾಸ್‌ – ಪಂಜಾಬ್‌ ಮತ್ತು ಹರಿಯಾಣ
 • ನರ್ಮದಾ ನದಿ ವಿವಾದ – ರಾಜಸ್ತಾನ, ಗುಜರಾತ್‌, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
 • ವನ್ಸದಾರ ಜಲವಿವಾದ – ಆಂಧ್ರಪ್ರದೇಶ ಮತ್ತು ಒಡಿಸ್ಸಾ
 • ಯಮುನಾ ನದಿ ಜಲವಿವಾದ – ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಹರಿಯಾಣ.

ಇತರ ಅಂತರ – ರಾಜ್ಯ ನೀರಿನ ವಿವಾದಗಳು :

Join WhatsApp Join Telegram
 • ಇಂದಿರಾಸಾಗರ್‌ (ಪೋಲವರಂ) ಯೋಜನೆ, ಆಂದ್ರಪ್ರದೇಶ
 • ಬಾಭಾಲಿ ಬ್ಯಾರೆಜ್‌ ಸಂಚಿಕೆ
 • ಮುಲ್ಲಾ ಪೆರಿಯಾರ್‌ ಆಣೆಕಟ್ಟು ಸಂಚಿಕೆ.

ಜಿಲ್ಲಾ ಮಟ್ಟದ ಜಲ ವಿವಾದಗಳು :

ನೇತಾವತಿ ನದಿ ನೀರಿನ ಹಂಚಿಕೆಯಾದ ʼಎತ್ತಿನಹೊಳೆ ಯೋಜನೆʼ(ಜಿ.ಎಸ್.ಪರಮಶಿವಯ್ಯ ಸಮಿತಿ).

ಅಂತರಾಷ್ಟ್ರೀಯ ಮಟ್ಟದ ಜಲವಿವಾದಗಳು :

 • ಸಿಂಧೂ ಜಲವಿವಾದ – ಭಾರತ ಮತ್ತು ಪಾಕಿಸ್ತಾನ
 • ತೀಸ್ತಾ ಜಲವಿವಾದ – ಭಾರತ ಮತ್ತು ಬಾಂಗ್ಲಾದೇಶಗಳ ನಡುವೆ
 • ಬ್ರಹ್ಮಪುತ್ರ ಜಲವಿವಾದ – ಭಾರತ, ಚೀನಾ ಮತ್ತು ಬಾಂಗ್ಲಾದೇಶಗಳ ನಡುವೆ

ಅಂತರಾಜ್ಯ ಜಲವಿವಾದಗಳಿಗೆ ಕಾರಣಗಳು :

 • ಒಂದು ರಾಜ್ಯವು ತನಗೆ ಹಂಚಿಕೆಯಾಗಿರುವ ನೀರಿಗಿಂತ ಅಧಿಕ ನೀರನ್ನು ಬಳಸಿದಾಗ ಮತ್ತೊಂದು ರಾಜ್ಯವು ವಿವಾದವನ್ನು ಮಾಡುತ್ತವೆ.
 • ರಾಜ್ಯ ರಾಜ್ಯಗಳ ನಡುವೆ ಮತ್ತು ಕೇಂದ್ರ ಸರ್ಕಾರದ ನಡುವೆ ಒಮ್ಮತ ಅಭಿಪ್ರಾಯವಿಲ್ಲದಿರುವುದು.
 • ರಾಜಕೀಯ ಪಕ್ಷಗಳ ಸಮನ್ವಯ ಕೊರತೆ, ರಾಜಕೀಯ ಪಕ್ಷಗಳ ಭಿನ್ನ ನಿಲುವುಗಳು.
 • ವಿವಾದ ಏರ್ಪಟ್ಟಾಗ ರಾಜ್ಯಗಳು ನ್ಯಾಯ ಮಂಡಳಿಗಳ ಹೊರಗೆ ಸಭೆ ಸೇರಿ ಬಗೆಹರಿಸದೇ ಇರುವುದು.
 • ಒಪ್ಪಂದಗಳನ್ನು ಉಲ್ಲಂಘಿಸಿದಾಗ ಜಲವಿವಾದ ಉಂಟಾಗುತ್ತದೆ.
 • ಪ್ರಾಕೃತಿಕ ವಿಕೋಪದಿಂದಲೂ ಜಲವಿವಾದಗಳು ಉಂಟಾಗುತ್ತವೆ.
 • ರಾಜಕೀಯ ಪಕ್ಷಗಳ ಸಮನ್ವಯ ಕೊರತೆ.
 • ಪ್ರಾದೇಶಿಕ ಪಕ್ಷ, ರಾಷ್ಟ್ರೀಯ ಪಕ್ಷ, ಬಹುಮತ ಕೊರತೆಗಳಿಂದಲೂ ಸಮಸ್ಯೆ ಉಂಟಾಗುತ್ತದೆ.
 • ಒಂದು ರಾಜ್ಯವು ಅನಧಿಕೃತ ಜಲ ಯೋಜನೆಯನ್ನು ಕೈಗೆತ್ತಿಕೊಂಡಾಗ ಮತ್ತೊಂದು ರಾಜ್ಯವು ಅದಕ್ಕೆ ವಿರೋಧ ಒಡ್ಡುವುದರಿಂದ ಜಲವಿವಾದಗಳು ಉಂಟಾಗುತ್ತವೆ.
 • ನೀರಿನ ಹಂಚಿಕೆಯಲ್ಲಿ ಏರು ಪೇರುಗಳಾದಾಗ.

ಅಂತರಾಜ್ಯ ಜಲವಿವಾದದಿಂದ ಆಗುವ ಪರಿಣಾಮಗಳು :

 • ರಾಜ್ಯ ರಾಜ್ಯಗಳ ನಡುವೆ ಇರುವಂತಹ ಸೌಹಾರ್ದ ಸಂಬಂಧ ಕಡಿಮೆಯಾಗುತ್ತದೆ.
 • ಜಲವಿವಾದಗಳುಂಟಾದಾಗ ಬಂದ್ ಗಳು, ಗಲಭೆಗಳು ಉಂಟಾದಾಗ ಆರ್ಥಿಕತೆಗೆ ಹೊಡೆತ ಬೀಳುತ್ತದೆ.
 • ದೇಶದ ಸರ್ವತೋಮುಖ ಅಭಿವೃದ್ದಿಗೆ ಮಾರಕ.
 • ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುತ್ತದೆ.
 • ಸಾರ್ವಜನಿಕ ಆಸ್ತಿ ಪಾಸ್ತಿಗಳು ನಾಶವಾಗುತ್ತವೆ.
 • ಕೃಷಿಯಲ್ಲಿ ಹಿನ್ನಡೆಯಾಗುತ್ತವೆ.
 • ದೇಶದ ಅರ್ಥಿಕಾಭಿವೃದ್ದಿಗೆ ಪೆಟ್ಟು ಬೀಳುತ್ತದೆ.
 • ನೀರಿನ ವಿವಾದದಿಂದ ಜನರ ಜೀವನ ಸಂಕಷ್ಟಕೀಡಾಗುತ್ತದೆ.

ಜಲವಿವಾದಕ್ಕೆ ಸಂಬಂಧಿಸಿದ ಕಾನೂನು ಮತ್ತು ಕಾಯ್ದೆಗಳು :

 • ಸಂವಿಧಾನದ 131 ನೇ ವಿಧಿಯ ಪ್ರಕಾರ ರಾಜ್ಯಗಳ ನಡುವಿನ ವಿವಾದಗಳನ್ನು ಇತ್ಯರ್ಥ ಪಡಿಸಲು, ಸುಪ್ರೀಂ ಕೋರ್ಟ್‌ ಗೆ ಅಧಿಕಾರ ನೀಡಿದೆ.
 • ಸಂವಿಧಾನದ 262ನೇ ವಿಧಿಯು ಅಂತರಾಜ್ಯ ಜಲವಿವಾದ ಇತ್ಯರ್ಥ ಪಡಿಸಲು ಅವಕಾಶ ನೀಡುತ್ತದೆ.
 • ರಾಜ್ಯಪಟ್ಟಿಯಲ್ಲಿ 17 ನೇ ಅಂಶ, ಕೇಂದ್ರಪಟ್ಟಿಯಲ್ಲಿ 56 ನೇ ಅಂಶ ಇದರ ಬಗ್ಗೆ ತಿಳಿಸುತ್ತದೆ.
 • 1956ರ ಅಂತರಾಜ್ಯ ಜಲವಿವಾದ ಕಾಯ್ದೆ.
 • 1956 ರಲ್ಲಿ ನದಿ ಮಂಡಳಿಗಳ ಕಾಯ್ದೆಯನ್ನು ಸಂಸತ್ತು ಜಾರಿಗೆ ತಂದಿದೆ.

ಉಪಸಂಹಾರ :

“ನದಿಗಳು ದೇಶದ ನರನಾಡಿಗಳಿದ್ದಂತೆ” ಜಲಸಂಪನ್ಮೂಲವೇ ಮನುಷ್ಯನ ಜೀವನದ ಆಧಾರ ಮೂಲವಾಗಿದೆ. ಜಲಸಂಪನ್ಮೂಲಗಳು ನಮ್ಮ ರಾಷ್ಟ್ರಕ್ಕೆ ಒಂದು ರೀತಿಯ ಪ್ರಮುಖ ಆಸ್ತಿಯಾಗಿದೆ. ಕೃಷಿ ನಮ್ಮರಾಷ್ಟ್ರದ ಬೆನ್ನೆಲುಬು ಮತ್ತು ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಕೃಷಿಯನ್ನೇ ಆಧರಿಸಿ ಕೃಷಿಗೆ ಮುಖ್ಯವಾಗಿ ಜಲಸಂಪನ್ಮೂಲದ ಅವಶ್ಯಕತೆ ಇದೆ. ಈ ರೀತಿ ಜಲಸಂಪನ್ಮೂಲವು ಮನುಷ್ಯನು ಜೀವನಕ್ಕೆ ದೈನಂದಿನ ಚಟುವಟಿಗಳಿಗೆ ಅತೀ ಮುಖ್ಯವಾಗಿದೆ.

FAQ :

ಎರಡು ಅಂತರಾಜ್ಯ ಜಲ ವಿವಾದಗಳನ್ನು ತಿಳಿಸಿ?

ಕಾವೇರಿ ಜಲವಿವಾದ – ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೆರಿ
ಮಹದಾಯಿ ಜಲವಿವಾದ – ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ

ಜಲವಿವಾದಕ್ಕೆ ಸಂಬಂಧಿಸಿದ ಒಂದು ಕಾನೂನು ಮತ್ತು ಕಾಯ್ದೆ ತಿಳಿಸಿ?

ಸಂವಿಧಾನದ 262ನೇ ವಿಧಿಯು ಅಂತರಾಜ್ಯ ಜಲವಿವಾದ ಇತ್ಯರ್ಥ ಪಡಿಸಲು ಅವಕಾಶ ನೀಡುತ್ತದೆ.
ರಾಜ್ಯಪಟ್ಟಿಯಲ್ಲಿ 17 ನೇ ಅಂಶ, ಕೇಂದ್ರಪಟ್ಟಿಯಲ್ಲಿ 56 ನೇ ಅಂಶ ಇದರ ಬಗ್ಗೆ ತಿಳಿಸುತ್ತದೆ

ಇತರೆ ವಿಷಯಗಳು :

ವಿಶ್ವ ಜಲ ದಿನದ ಬಗ್ಗೆ ಮಾಹಿತಿ

ಹಳೇಬೀಡು ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.