ಚಕ್ರವರ್ತಿ ಅಶೋಕನ ಬಗ್ಗೆ ಮಾಹಿತಿ Information about Emperor Ashoka Chakravarthi Ashokana bagge Mahithi in Kannada
ಚಕ್ರವರ್ತಿ ಅಶೋಕನ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಚಕ್ರವರ್ತಿ ಅಶೋಕನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಅಶೋಕನ ವೈಯಕ್ತಿಕ ಜೀವನ :
- ಅಶೊಕನ ತಂದೆ ಬಿಂದುಸಾರ, ತಾಯಿ ಸುಭದ್ರಾಂಗಿ
- ಅಶೋಕನಿಗೆ 5 ಜನ ಪತ್ನಿಯರಿದ್ದರು. ಅವರುಗಳೆಂದರೆ ವಿಧಿಸಾ ಮಹಾದೇವಿ, ಅಸಂಧಿ ಮಿತ್ರ, ಪದ್ಮಾವತಿ, ಕುರುಬಾಕಿ, ತಿಷ್ಯರಕ್ಷಿತೆ.
- ಅಶೋಕನು ವಿಧಿಶಾ ಮಹಾದೇವಿಯನ್ನು ಪ್ರೀತಿಸಿ ವಿವಾಹವಾಗಿದ್ದನು ಇವಳು ಅಶೋಕನು ಬೌದ್ದ ಧರ್ಮವನ್ನು ಸ್ವೀಕರಿಸುವಂತೆ ಪ್ರೋತ್ಸಾಹ ನೀಡುತ್ತಿದ್ದಳು.
- ಅಶೋಕನು ಬೌದ್ದ ಧರ್ಮಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ವಿರೋಧಿಸಿ ಬೋಧಿವೃಕ್ಷದ ಒಂದು ಟೊಂಗೆಯನ್ನು ಕತ್ತರಿಸಿದ ಪತ್ನಿ ತಿಸ್ಯ ರಕ್ಷಿತ
- ಅಶೋಕನ ಪ್ರಧಾನಮಂತ್ರಿ – ರಾಧಾಗುಪ್ತ
- ಅಶೋಕನ ನಂತರ ಕುಣಾಲ, ದಶರಥ, ಸಂಪ್ರತಿ ಮತ್ತು ಬೃಹದೃತ ಎಂಬ ಅರಸರು ಆಡಳಿತ ಮಾಡಿದರು.
- ಅಶೋಕನ ಆಧ್ಯಾತ್ಮಿಕ ಗುರು – ಉಪಗುಪ್ತ
- ಅಶೋಕನ ವಯಕ್ತಿಕ ಧರ್ಮ – ಅಶೋಕ ಧಮ್ಮ
- ಅಶೋಕನ ನಂತರ ಕುಣಾಲ, ದಶರಥ, ಸಂಪ್ರತಿ ಮತ್ತು ಬೃಹದೃತ ಎಂಬ ಅರಸರು ಆಡಳಿತ ಮಾಡಿದರು.
ಅಶೋಕನ ಆಡಳಿತ :
- ಈತನನ್ನು ವಿಶ್ವದ ಅಗ್ರಗಣ್ಯ ಚಕ್ರವರ್ತಿ ಎಂದು ಕರೆದವರು – ಹೆಚ್.ಜಿ.ವೆಲ್ಸ್
- ಮೌರ್ಯ ಸಾಮ್ರಾಜ್ಯದ ಪ್ರಸಿದ್ದ ದೊರೆ
- ತನ್ನ 99 ಜನ ಸಹೋದರರನ್ನು ಕೊಂದು ಅದಿಕಾರಕ್ಕೆ ಬಂದನೆಂದು ಬೌದ್ದ ಧರ್ಮದ ಮಹಾವಂಶ ಎಂಬ ಗ್ರಂಥದಿಂದ ತಿಳಿದು ಬಂದಿದೆ.
- ಅಶೋಕನನ್ನು ಬೆಂಬಲಿಸಿದ ಆತನ ಸಹೋದರ – ತಿಸ್ಸಾ
- ಕ್ರಿ.ಪೂ.269 ರಲ್ಲಿ ಅಶೋಕನಿಗೆ ಪಟ್ಟಾಭಿಷೇಕವಾದ 8 ವರ್ಷಗಳ ತರುವಾಯ ಕ್ರಿ.ಪೂ.261 ರಲ್ಲಿ ಅಶೋಕನಿಗೂ ಕತ್ತು ಕಳಿಂಗದ ಅರಸ ಖಾರವೇಲನ ಮಧ್ಯ ಪ್ರಸಿದ್ದವಾದ ಕಳಿಂಗ ಯುದ್ದ ನಡೆಯಿತು.
- ಈ ಯುದ್ದ ಓಡಿಸ್ಸಾದ ದಯಾ ನದಿಯ ದಂಡೆ ಮೇಲಿನ ದೌಳಿ ಬೆಟ್ಟದ ಮೇಲೆ ನಡೆಯಿತು.
- ಈ ಯುದ್ದದಲ್ಲಿ 1.50 ಲಕ್ಷ ಜನ ಸಾವು ನೋವು ಕಂಡರು. ಈ ಯುದ್ದದಲ್ಲಿನ ರಕ್ತಪಾತ ಕಂಡ ಅಶೋಕ ಇನ್ನೆಂದಿಗೂ ಖಡ್ಗ ಹಿಡಿಯುವುದಿಲ್ಲ ಎಂದು ತೀರ್ಮಾನಿಸಿ ಬೌದ್ದ ಸನ್ಯಾಸಿ ಉಪಗುಪ್ತನ ಸಹಾಯದಿಂದ ಬೌದ್ದ ಧರ್ಮ ಸ್ವೀಕರಿಸಿದನು.
- ಈ ಯುದ್ದದಲ್ಲಿ ಅಶೋಕನ ಮನಃಪರಿವರ್ತನೆಗೆ ಕಾರಣವಾದ ಬಾಲಕ ನೆಗ್ರೋದ.
- ಅಶೋಕ ಬೌದ್ದ ಧರ್ಮದ ಪ್ರಚಾರಕ್ಕಾಗಿ ಧರ್ಮ ಮಹಾಮಾತ್ರರು ಎಂಬ ಅಧಿಕಾರಿಗಳನ್ನು ನೇಮಿಸಿ ಅವರನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಕಳುಹಿಸಿದನು.
- ಅಶೋಕನ ರಾಜ್ಯವು ಪೂರ್ವದ ಬಂಗಾಳದದಿಂದ ಪಶ್ಚಿಮದ ಸಿಂಧ್ ವರೆಗೆ ವಿಸ್ತಾರವಾಗಿತ್ತು.
ಅಶೋಕನ ಶಾಸನಗಳು :
- ಅಶೋಕನನ್ನು ಭಾರತದ ಶಿಲಾಶಾಸನಗಳ ಪಿತಾಮಹಾನೆಂದು ಕರೆಯುತ್ತಾರೆ.
- ಅಶೋಕನ ಶಾಸನಗಳು ಬ್ರಾಹ್ಮಿ, ಖರೋಷ್ಠಿ, ಗ್ರೀಕ್, ಅರಾಮಿಕ ಮತ್ತು ದೇವನಾಗರಿ ಲಿಪಿಯಲ್ಲಿದೆ.
- ಅಶೋಕನ ಶಾಸನಗಳು ಪ್ರಾಕೃತ, ಪಾಳಿ ಭಾಷೆಯಲ್ಲಿವೆ.
- ಅಶೋಕನ ಶಾಸನಗಳು ಹೆಚ್ಚಾಗಿ ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಕಂಡು ಬಂದಿದೆ.
- ಅಶೋಕನ ಶಾಸನವನ್ನು ಮೊಟ್ಟ ಮೊದಲ ಬಾರಿಗೆ ಅಧ್ಯಯನ ಮಾಡಿದವರು – ಜೇಮ್ಸ್ ಪ್ರಿನ್ಸೆಪ್
- ಅಶೋಕನ ಶಾಸನಗಳನ್ನು ಕೆತ್ತಿದ ಶಿಲ್ಪಿಯ ಹೆಸರು ಕಂಡುಬಂದ ಶಾಸನ – ಬ್ರಹ್ಮಗಿರಿ ಶಾಸನ
- ಅಶೋಕನ ಹೆಸರು ಕಂಡು ಬಂದ ಶಾಸನ – ಮಸ್ಕಿ ಶಾಸನ ಮತ್ತು ಗುಜರ್ರಾ ಶಾಸನ
- ಮಸ್ಕಿ ಶಾಸನವನ್ನು 1915 ರಲ್ಲಿ ಸಿ.ಬಿಡ್ ಎಂಬುವವರು ಸಂಶೋಧನೆ ಮಾಡಿದರು.
- ಮಸ್ಕಿ ಶಾಸನದಲ್ಲಿ ಅಶೋಕನ ಹೆಸರು ದೇವನಾಂಪ್ರಿಯ ಪ್ರಿಯದರ್ಶಿನಿ ಅಶೋಕ ಎಂದು ಓದಿದವನು.
- ಅಶೋಕ ಬೌದ್ದ ಧರ್ಮ ಸ್ವೀಕರಿಸಿದ ಬಗ್ಗೆ ತಿಳಿಸುವ ಶಾಸನ – ಬಾಬ್ರು ಶಾಸನ
- ಅಶೋಕನ ಕಳಿಂಗ ಯುದ್ದದ ಬಗ್ಗೆ ತಿಳಿಸುವ ಶಾಸನ – 13ನೇ ಬಂಡೆಗಲ್ಲು ಶಾಸನ
- ಅಶೋಕನ ಕಂದಾಯ ವ್ಯವಸ್ಥೆಯ ಬಗ್ಗೆ ತಿಳಿಸುವ ಏಕೈಕ ಶಾಸನ – ರುಮಿಂಡೈ ಶಾಸನ
- ಅಶೋಕನ ಖರೋಷ್ಠಿ ಲಿಪಿ ಹೊಂದಿರುವ ಶಾಸನಗಳು – ಶಬಾಜಗಿರಿ ಮತ್ತು ಮನ್ಸೀರ್
- ಅಶೋಕನ ಗ್ರೀಕ್ ಮತ್ತು ಅರಾಮಿಕ್ ಲಿಪಿಯಲ್ಲಿರುವ ಶಾಸನ ಕಂದಹಾರ ಶಾಸನ ಇದರಲ್ಲಿ ಅಶೋಕನನ್ನು ಸಮಸ್ತ ಪೃಥ್ವಿಪತಿ ಎಂದು ಉಲ್ಲೇಖಿಸಲಾಗಿದೆ.
- ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು 14 ಅವುಗಳಲ್ಲಿ ಪ್ರಮುಖವಾದವುಗಳೆಂದರೆ
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ
- ಸಿದ್ದಾಪುರ ಮತ್ತು ಜಟ್ಟಿಂಗರಾಮೇಶ್ವರ
- ಕೊಪ್ಪಳ ಜಿಲ್ಲೆಯ ಗವಿಮಠ ಮತ್ತು ಪಾಲ್ಕಿಗುಂಡ
- ರಾಯಚೂರು ಜಿಲ್ಲೆಯ ಮಸ್ಕಿ
- ಬಳ್ಳಾರಿ ಜಿಲ್ಲೆಯ ನಿಟ್ಟೂರು ಮತ್ತು ಉದಯಗೋಳ
- ಕಲ್ಬುರ್ಗಿ ಜಿಲ್ಲೆಯ ಸನ್ನತಿ
- ಕರ್ನಾಟಕದಲ್ಲಿ ದೊರೆತ ಅಶೋಕನ ಮೊಟ್ಟ ಮೊದಲ ಶಾಸನ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಶಾಸನ
- ಕರ್ನಾಟಕದಲ್ಲಿರುವ ಅಶೋಕನ ದೊಡ್ಡ ಶಾಸನ ಸನ್ನತಿ ಶಾಸನ
FAQ :
ಭಾರತದ ಶಿಲಾಶಾಸನಗಳ ಪಿತಾಮಹಾನೆಂದು ಯಾರನ್ನು ಕರೆಯುತ್ತಾರೆ?
ಅಶೋಕ
ಅಶೋಕನ ಕಳಿಂಗ ಯುದ್ದದ ಬಗ್ಗೆ ತಿಳಿಸುವ ಶಾಸನ ಯಾವುದು?
13ನೇ ಬಂಡೆಗಲ್ಲು ಶಾಸನ
ಇತರೆ ವಿಷಯಗಳು :