ಆಹಾರದ ಘಟಕಗಳ ಬಗ್ಗೆ ಮಾಹಿತಿ | Information about food units in Kannada

Join Telegram Group Join Now
WhatsApp Group Join Now

ಆಹಾರದ ಘಟಕಗಳ ಬಗ್ಗೆ ಮಾಹಿತಿ Information about food units Aharadha Gatakagala bagge Mahithi in Kannada

ಆಹಾರದ ಘಟಕಗಳ ಬಗ್ಗೆ ಮಾಹಿತಿ

Information about food units in Kannada
ಆಹಾರದ ಘಟಕಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಆಹಾರದ ಘಟಕಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಆಹಾರದ ಘಟಕಗಳು :

  • ಪ್ರತಿದಿನ ದೇಹಕ್ಕೆ ಶಕ್ತಿಯನ್ನು ಒದಗಿಸುವ ಆಹಾರದ ಘಟಕ – ಕಾರ್ಬೋಹೈಡ್ರೇಟ್‌
  • ಪ್ರೋಟಿನಗಳ ಜೀವಕೋಶಗಳ ಬೆಳವಣಿಗೆಗೆ, ದೇಹದ ದುರಸ್ತಿಗೆ, ರೋಗನಿರೋಧಕ ಕಾರ್ಯ ಮಾಡಲು, ದೇಹವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ.
  • ಅತಿ ಹೆಚ್ಚಿನ ಶಕ್ತಿಯನ್ನು ಒದಗಿಸುವ ಆಹಾರ ಘಟಕವೆಂದರೆ‌ – ಲಿಪಿಡ್ಸ್
  • ಜೀವಸತ್ವಗಳು ದೇಹದ ರಕ್ಷಕವಾಗಿ ದೇಹವನ್ನು ಆರೋಗ್ಯವಾಗಿಡಲು ಬೇಕಾದ ಸಣ್ಣ ಪ್ರಮಾಣದ ಆಹಾರ ಘಟಕಗಳಾಗಿವೆ.
  • ಖನಿಜಗಳು ಮತ್ತು ಲವಣಗಳು ಹಲ್ಲು, ಮೂಳೆ ಮತ್ತು ಸ್ನಾಯುಗಳನ್ನು ಆರೋಗ್ಯವಾಗಿಡುತ್ತವೆ.
  • ನಾರು ಪದಾರ್ಥ ಕರುಳಿನ ಸಮರ್ಪಕ ಕಾರ್ಯನಿರ್ವಹಣೆಗೆ ಮತ್ತು ಮಲಬದ್ದತೆಯ ನಿವಾರಣೆಗೆ ಸಹಾಯಕವಾಗಿದೆ.
  • ಶಕ್ತಿಯ ಆಕರಗಳು/ಶಕ್ತಿಯ ವಿಮೋಚಕಗಳು/ಶಕ್ತಿಯ ಆಹಾರಗಳು – ಕಾರ್ಬೋಹೈಡ್ರೇಟಗಳು ಮತ್ತು ಲಿಪಿಡ್ಸ್‌

ಖನಿಜಗಳು :

  • ಖನಿಜಗಳು ಮೂಳೆ ಮತ್ತು ಹಲ್ಲುಗಳ ಘಟಕವಾಗಿದೆ.
  • ದೇಹದಲ್ಲಿ ರಾಸಾಯನಿಕಗಳ ಸಮತೋಲನವನ್ನು ಕಾಪಾಡುತ್ತದೆ.
  • ನಮ್ಮ ಶರೀರದಲ್ಲಿ 24 ಖನಿಜಾಂಶಗಳಿವೆ.

ಕ್ಯಾಲ್ಸಿಯಂ :

  • ನಮ್ಮ ಶರೀರದ ಅಸ್ಥಿಮಾಂಡಲದಲ್ಲಿರುತ್ತದೆ.
  • ಇದು ಹುಲ್ಲು ಮತ್ತು ಮೂಳೆಗಳ ಘಟಕವಾಗಿದೆ.
  • ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
  • ಹೃದಯದ ಸ್ನಾಯುಗಳ ಕ್ರಿಯಾಶೀಲವಾಗಿರಲು ಕ್ಯಾಲ್ಸಿಯಂ ಅಗತ್ಯವಾಗಿರಬೇಕು.
  • ಶಿಶುಗಳು ಮತ್ತು ಮಕ್ಕಳ ಬೆಳವಣಿಗೆಗೆ ಅವಶ್ಯಕವಾಗಿದೆ.
  • ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.
  • ಕ್ಯಾಲ್ಸಿಯಂ ನ್ಯೂನ್ಯತೆಯಿಂದ ಮಕ್ಕಳಲ್ಲಿ ರಿಕೆಟ್ಸ್‌ ಕಾಯಿಲೆ ಬರುತ್ತದೆ.
  • ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ ಆಸ್ಟಿಯೋಮೆಲಾಸಿಸ್‌ ರೋಗ ಕಂಡುಬರುತ್ತದೆ.
  • ನಮ್ಮ ದೇಹದಲ್ಲಿ ಬಹುಪಾಲು ಕಬ್ಬಿಣ ಅಂಶ ಶೇಖರಣೆಯಾಗುವುದು – ಹಿಮೋಗ್ಲೋಬಿನ ನಲ್ಲಿ
  • ಇದು ಹಾಲು ಹಾಲಿನ ಉತ್ಪನ್ನಗಳು ಎಳ್ಳು, ಹಸಿರು ಎಲೆ, ತರಕಾರಿಗಳು ರಾಗಿ ಮತ್ತು ಮೀನಿನಲ್ಲಿ ಅಧೀಕವಾಗಿರುತ್ತದೆ.
  • ಹಿಮೋಗ್ಲೋಬಿನ್‌ ಆಮ್ಲಜನಕ ಸಾಗಾಣಿಕೆ ಮಾಡುತ್ತದೆ.
  • ಅವರೆ, ಸೂರ್ಯಕಾಂತಿ ಬೀಜ, ಬಟಾಣಿಗಳಲ್ಲಿ ಕ್ಯಾಲ್ಸಿಯಂ ದೊರೆಯುತ್ತದೆ.

ಕಬ್ಬಿಣ :

  • ಶರೀರದಲ್ಲಿರುವ ಒಟ್ಟು ಕಬ್ಬಿಣಾಂಶದಲ್ಲಿ ಅರ್ಧದಷ್ಟು ಪಿತ್ತಜನಕಾಂಗ ಮತ್ತು ಮೂಳೆಗಳಲ್ಲಿ ಉಳಿದ ಅರ್ಧಭಾಗ ರಕ್ತದಲ್ಲಿನ ಹಿಮೋಗ್ಲೋಬಿನಲ್ಲಿರುತ್ತದೆ.
  • ಹಿಮೋಗ್ಲೋಬಿನ್‌ ರಕ್ತದ ಮೂಲ ಘಟಕ.
  • ಮಾನವನ ದೇಹದಲ್ಲಿ ಬಹುಪಾಲು ಕಬ್ಬಿಣದ ಅಂಶ ಹಿಮೋಗ್ಲೋಬಿನಲ್ಲಿ ಸಂಗ್ರಹವಾಗಿರುತ್ತದೆ.
  • ರಕ್ತದಲ್ಲಿ ಕಬ್ಬಿಣ ಆಕ್ಸಿಜನ್‌ ಅವಶ್ಯಕ ಘಟಕವಾಗಿಯೂ ಕಾರ್ಯನಿರ್ವಹಿಸುತ್ತದೆ.

ಅಯೋಡಿನ್‌ :

Join WhatsApp Join Telegram
  • ಥೈರಾಯಿಡ್‌ ಗ್ರಂಥಿಯ ಕ್ರಿಯಾಶೀಲತೆಗೆ ಸಹಾಯಕ.
  • ಥೈರಾಕ್ಸಿನ್‌ ಕ್ರಮಬದ್ದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ
  • ಥೈರಾಕ್ಸಿನ್‌ ಹಾರ್ಮೋನ್‌ ಸ್ರವಿಕೆಗೆ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಗಳ ವೇಗ ಹೆಚ್ಚಿಸಲು
  • ಇದು ಗಾಯಿಟರ್‌ ಅಥವಾ ಗಳಗಂಡ ಕಾಯಿಲೆಯಿಂದ ದೂರ ಇಡುತ್ತದೆ.
  • ಕೊಬ್ಬಿನ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಸೋಡಿಯಂ :

  • ಆಮ್ಲ ಮತ್ತು ಪ್ರತಾಮ್ಲಗಳ ಸಮತೋಲನ ಕಾಪಾಡುತ್ತದೆ.
  • ಹೃದಯದ ಸ್ನಾಯುಗಳ ಕ್ರಿಯಾಶೀಲತೆಗೆ ಸಹಕಾರಿಯಾಗಿದೆ.
  • ಸೋಡಿಯಂ ಹೆಚ್ಚಾಗಿ ಅಡುಗೆ ಉಪ್ಪು, ಹಾಲು, ಹಾಲಿನ ಉತ್ಪನ್ನಗಳು ಮೊಟ್ಟೆ ಮಾಂಸ ಮತ್ತು ಮೀನುಗಳು ಹೊಂದಿವೆ.

ಪೊಟ್ಯಾಸಿಯಂ :

  • ಇದು ಬಹುಭಾಗ ಜೀವಕೋಶಗಳು ಮತ್ತು ಕೆಂಪು ರಕ್ತ ಕಣದಲ್ಲಿ ಇರುತ್ತದೆ.
  • ಸೋಡಿಯಂನಂತೆ ಇದು ಶರೀರದಲ್ಲಿ ಆಮ್ಲ ಪ್ರತ್ಯಾಮ್ಲೀಯಗಳ ಸಮತೋಲನವನ್ನು ಕಾಪಾಡುತ್ತದೆ.
  • ಸ್ನಾಯು ಚಟುವಟಿಕೆಯನ್ನು ನಿಯಂತ್ರಿಸುತ್ತದೆ.
  • ಪ್ರಾಣಿ ಜೀವಕೋಶದಲ್ಲಿ ಕೋಶದ ಕಾರ್ಯಕ್ಕೆ ಸಹಾಯ ಮಾಡುತ್ತದೆ.

ರಂಜಕ :

  • ಹಲ್ಲುಗಳಲ್ಲಿಯೂ, ಮೂಳೆಗಳಲ್ಲಿಯೂ ಇರುತ್ತದೆ.
  • ಕ್ಯಾಲ್ಸಿಯಂ, ರಂಜಕ ಮತ್ತು ಆಮ್ಲಜನಕಗಳನ್ನೊಳಗೊಂಡ ಸಂಯುಕ್ತ ವಸ್ತುವಾದ ಕ್ಯಾಲ್ಸಿಯಂ ಘಟಕವಾಗಿರುತ್ತದೆ.
  • ದೇಹದ ಅನೇಕ ಚಯಾಪಚಯ ಕ್ರಿಯೆಗಳಲ್ಲಿ ಅಯಾನು ರೂಪದಲ್ಲಿ ಪಾಲಗೊಳ್ಳುತ್ತದೆ.
  • ಅಸ್ಥಿಮಜ್ಜೆಯಲ್ಲಿ ಕೆಂಪುರಕ್ತಗಳ ಉತ್ಪಾದನೆಗೆ ನೆರವಾಗುತ್ತದೆ.
  • DNA, RNA ಮತ್ತು ATP ಗಳಲ್ಲಿ ಇರುತ್ತದೆ.
  • ಮೂಳೆ ಮತ್ತು ಹಲ್ಲುಗಳ ಪ್ರಧಾನ ಘಟಕವಾಗಿದೆ.

ಕ್ಲೋರಿನ್‌ :

ಇದು ಜಠರದಲ್ಲಿ HCl ನ ಉತ್ಪಾದನೆಗೆ ಸಹಾಯಕಾರಿಯಾಗಿದೆ.

ಸತು :

  • ಇದು ಕೊಲೆಸ್ಟ್ರಾಲ್‌ ಸಂಗ್ರಹವನ್ನು ಕಡಿಮೆ ಮಾಡುತ್ತದೆ.
  • ಇನ್ಸುಲಿನ್‌ ಹಾಗೂ ಕಿಣ್ವಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
  • ಕಾರ್ಬೋ ಹೈಡ್ರೇಟಗಳ ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತದೆ.

ಪ್ರೋಟಿನಗಳು :

  • ಇದರಲ್ಲಿ ನೈಟ್ರೋಜನ್‌ ಇರುತ್ತದೆ.
  • ಇವು ಪ್ರಾಣಿಜನ್ಯ ಪದಾರ್ಥಗಳಲ್ಲಿರುತ್ತದೆ.
  • ಪ್ರತಿಯೊಂದು ಸಜೀವ ಜೀವಕೋಶದ ಜೀವನಾರಂಭ ರಸದ ಮೂಲ ವಸ್ತುವಾಗಿದೆ.
  • ಇವು ಶರೀರದ ಬೆಳವಣಿಗೆಗೆ ಸಹಾಯಕವಾಗಿದೆ.
  • ಇವು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ.
  • ಇವುಗಳು ಜೀವಕೋಶದ ಬೃಹತ್‌ ಅಣುಗಳಾಗಿವೆ.
  • ದೇಹದ ಜೀವಕೋಶಗಳನ್ನು ಕಟ್ಟುವ ಕಾರ್ಯ ಮಾಡುತ್ತದೆ.
  • ಪ್ರೋಟಿನಗಳು ಕಿಣ್ವಗಳನ್ನು ಉತ್ಪಾದಿಸುತ್ತದೆ.
  • ಇವು ದೇಹದಲ್ಲಿ ರಕ್ಷಣೆ ನೀಡುವ ರೋಗ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ.
  • ಪ್ರೋಟಿನಗಳ ಸಂಯೋಜನೆಗೆ RNA ಸಹಕಾರಿಯಾಗಿದೆ.
  • ಇವು ಇಂಗಾಲ, ಜಲಜನಕ,ಆಮ್ಲಜನಕ, ಸಾರಜನಕ, ಗಂಧಕ ಮತ್ತು ರಂಜಕಗಳಿಂದ ಮಾಡಲ್ಪಟ್ಟಿದೆ.
  • ಇವು ಚಿಕ್ಕಮಕ್ಕಳಿಗೆ ದಿನನಿತ್ಯ ಆಹಾರವನ್ನು ಒದಗಿಸುತ್ತದೆ.

FAQ :

ಜಠರದಲ್ಲಿ HCl ನ ಉತ್ಪಾದನೆಗೆ ಯಾವುದು ಸಹಾಯಕಾರಿಯಾಗಿದೆ?

ಕ್ಲೋರಿನ್

ಪ್ರತಿದಿನ ದೇಹಕ್ಕೆ ಶಕ್ತಿಯನ್ನು ಒದಗಿಸುವ ಆಹಾರದ ಘಟಕ ಯಾವುದು?

ಕಾರ್ಬೋಹೈಡ್ರೇಟ್‌

ಇತರೆ ವಿಷಯಗಳು :

ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ

ಮೆದುಳಿನ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.