ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ | Information about Glands and Hormones in Kannada

Join Telegram Group Join Now
WhatsApp Group Join Now

ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ Information about Glands and Hormones Granthigalu mattu Harmonegala bagge Mahithi in Kannada

ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ

Information about Glands and Hormones in Kannada
ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಗ್ರಂಥಿಗಳು :

ಸ್ರವಿಕೆಯ ಕಾರ್ಯಕ್ಕಾಗಿ ವೈಶಿಷ್ಟ್ಯತೆಯನ್ನು ಪಡೆದಿರುವ ಜೀವಕೋಶ ಗುಂಪಿಗೆ ಗ್ರಂಥಿ ಎಂದು ಕರೆಯುತ್ತೇವೆ. ಇದರಲ್ಲಿ 3 ವಿಧಗಳಿವೆ.

ನಾಳಸಹಿತ ಗ್ರಂಥಿ :

ಇವುಗಳಿಂದ ಸ್ರವಿಕೆಯಾಗುವ ದ್ರರೂಪದ ವಸ್ತು ನಿರ್ದಿಷ್ಟ ನಾಳಗಳ ಮೂಲಕ ಹರಿದು ಗುರಿಯ ಅಂಗಗಳನ್ನು ತಲುಪುತ್ತದೆ. ಆದರೆ ರಕ್ತದಲ್ಲಿ ಮಿಶ್ರಣವಾಗುವುದಿಲ್ಲ. ಉದಾಹರಣೆಗೆ ಲಾಲಾರಸ ಗ್ರಂಥಿ, ಬೆವರು ಗ್ರಂಥಿ, ಅಶ್ರು ಗ್ರಂಥಿ, ಲಿವರ್‌, ಕರುಳಿನ ಗ್ರಂಥಿ.

ಲಾಲಾರಸ ಗ್ರಂಥಿ :

 • ಈ ಗ್ರಂಥಿಯು ಬಾಯಿಯಲ್ಲಿ ಕಂಡುಬರುತ್ತದೆ. ಇದರಲ್ಲಿರುವ ಮೂರು ಭಾಗಗಳ ಸಬ್‌ ಲಿಂಗ್ಯೂಯಲ್‌, ಸಬ್ಮ್ಯಾಂಡಿಬುಲ್‌ ಪ್ಯಾರೋಟಿಡ್‌ ಇದರಿಂದ ಬಿಡುಗಡೆಯಾಗುವ ರಸ ಲಾಲಾರಸ.
 • ಲಾಲಾರಸದಲ್ಲಿ 2 ಕಿಣ್ವಗಳಿವೆ ಅಮೈಲೇಸ್‌ ಮತ್ತು ಟಾಲೀನ್‌
 • ಪಿಷ್ಠ ರೂಪದ ಆಹಾರವನ್ನು ಅಮೈಲೇಸ್‌ ಮತ್ತು ಟಾಲೀನ್‌ ಕಿಣ್ವಗಳು ಮಾಲ್ಟೋಸ್‌ ಆಗಿ ಪರಿವರ್ತಿಸುತ್ತದೆ.
 • ಬಾಯಿಯಲ್ಲಿ ಜೀರ್ಣಕ್ರಿಯೆಗೆ ಒಳಪಟ್ಟಿರುವ ಆಹಾರವನ್ನು ಬೊಲಸ್‌ ಎಂದು ಕರೆಯುತ್ತೇವೆ.

ಬೆವರು ಗ್ರಂಥಿ :

Join WhatsApp Join Telegram

ಈ ಗ್ರಂಥಿಯು ಹೊರಚರ್ಮದಲ್ಲಿ ಕಂಡುಬರುವ ಗ್ರಂಥಿಯಾಗಿದ್ದು ಇದರಿಂದ ಬೆವರು ಉತ್ಪಾದನೆಯಾಗುತ್ತದೆ.

ಅಶ್ರುಗ್ರಂಥಿ :

 • ಕಣ್ಣಿನ ಹುಬ್ಬಿನ ಭಾಗದಲ್ಲಿ ಕಂಡುಬರುವ ಗ್ರಂಥಿಗಳಾಗಿವೆ ಇದರಿಂದ ಬಿಡುಗಡೆಯಾಗುವ ದ್ರವರೂಪದ ವಸ್ತು ಕಣ್ಣೀರು.
 • ಕಣ್ಣೀರಿನಲ್ಲಿರುವ ರಾಸಾಯನಿಕಗಳು NaCl ಮತ್ತು ಲೈಸೋಜೋಮ್‌
 • NaCl ಮತ್ತು ಲೈಸೋಜೋಮ್‌ ಕಣ್ಣಿಗೆ ಬಿದ್ದ ಸೂಕ್ಷ್ಮಾಣು ಜೀವಿಗಳನ್ನು ನಾಶಗೊಳಿಸುತ್ತದೆ.

ಲಿವರ್‌ :

 • ನಾಳಸಹಿತ ಗ್ರಂಥಿಯಲ್ಲಿ ಅತ್ಯಂತ ದೊಡ್ಡ ಗ್ರಂಥಿಯಾಗಿದೆ(1.5kg)
 • ಲಿವರ್‌ ನಿಂದ ಸ್ರವಿಕೆಯಾಗುವ ದ್ರವರೂಪದ ವಸ್ತು ಪಿತ್ತರಸ
 • ಪಿತ್ತರಸವು ಜಠರದಲ್ಲಿ ಆಮ್ಲೀಯಗೊಂಡಿರುವ ಆಹಾರವನ್ನು ತಟಸ್ಥಿಗೊಳಿಸುತ್ತದೆ.
 • ದೇಹದ ರಾಸಾಯನಿಕ ಚಟುವಟಿಕೆಗಳು ಕಂಡುಬರುವ ಅಂಗವಾಗಿರುವುದರಿಂದ ಇದನ್ನು ರಾಸಾಯನಿಕ ಕಾರ್ಖಾನೆ ಎನ್ನುವರು.
 • ಕಾಮಾಲೆ ಮತ್ತು ಜಾಂಡೀಸ್‌ ಬಂದಿರುವ ವ್ಯಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಅಂಗ.
 • ಕಾಮಾಲೆ ಬಂದಿರುವ ರೋಗಿಗಳಲ್ಲಿ ಹಳದಿ ಬಣ್ಣ ಕಾಣಲು ಕಾರಣವಾಗಿರುವ ರಾಸಾಯನಿಕ ಬೈಲುರುಬಿನ.

ಕರುಳಿನ ಗ್ರಂಥಿ :

 • ಈ ಗ್ರಂಥಿಯಿಂದ ಕರುಳಿನ ರಸ ಸ್ರವಿಕೆಯಾಗುತ್ತದೆ.
 • ಕರುಳಿನ ರಸವು ಆಮ್ಲೀಯಗೊಂಡಿರುವ ಆಹಾರವನ್ನು ತಟಸ್ಥೀಕರಣಗೊಳಿಸುತ್ತದೆ.

ನಿರ್ನಾಳ ಗ್ರಂಥಿ :

ಇವುಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳು ರಕ್ತದಲ್ಲಿ ಮಿಶ್ರಣಗೊಂಡು ಆಂತರಿಕ ಪ್ರಚೋದನೆಯನ್ನು ನೀಡುತ್ತವೆ.

ಥೈರಾಯ್ಡ್‌ ಗ್ರಂಥಿ :

 • ಈ ಗ್ರಂಥಿಯು ಕುತ್ತಿಗೆಯ ಭಾಗದಲ್ಲಿ ಚಿಟ್ಟೆಯಾಕಾರದಲ್ಲಿ ಕಂಡು ಬರುವ ಗ್ರಂಥಿಯಾಗಿದೆ.
 • ಥೈರಾಯ್ಡ್‌ ನಿಂದ ಬಿಡುಗಡೆಯಾಗುವ ಹಾರ್ಮೋನ್‌ “ಥೈರಾಕ್ಸಿನ್”
 • ಥೈರಾಕ್ಸಿನ್‌ ಅಯೋಡಿನ ನನ್ನು ಹೊಂದಿದೆ.
 • ತೈರಾಕ್ಸಿನ್‌ ದೇಹದಲ್ಲಿನ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.
 • ಥೈರಾಕ್ಸಿನ್‌ ಬಿಡುಗಡೆಯ ಆಧಾರದ ಮೇಲೆ ಹೈಪೋಥೈರಾಡಿಸಂ ಮತ್ತು ಹೈಪರ್‌ಥೈರಾಡಿಸಂ ಎಂದು ವಿಭಾಗಿಸಲಾಗಿದೆ.

ಪ್ಯಾರ ಥೈರಾಯ್ಡ್‌ :

 • ಥೈರಾಯ್ಡ್‌ ಗ್ರಂಥಿಯಲ್ಲಿರುವ 4 ಚಿಕ್ಕದಾದ ಗ್ರಂಥಿಗಳಿಗೆ ಪ್ಯಾರಾಥೈರಾಯ್ಡ್‌ ಎನ್ನುತ್ತೇವೆ.
 • ಇದು ಪ್ಯಾರಾಥಾರ್ಮೋನ್‌ ನನ್ನು ಉತ್ಪಾದಿಸುತ್ತದೆ.
 • ಪ್ಯಾರಾಥಾರ್ಮೋನ್‌ ರಕ್ತದಲ್ಲಿನ ಕ್ಯಾಲ್ಸಿಯಂ ಅಂಶವನ್ನು ನಿಯಂತ್ರಿಸುತ್ತದೆ. ಒಂದು ವೇಳೆ ಪ್ಯಾರಾಥರ್ಮೋನ್‌ ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾದರೆ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಯು ಬರುತ್ತದೆ.
 • ಚಿಕ್ಕ ಮಕ್ಕಳಲ್ಲಿ ಬರುವ ರೋಗ – ರಿಕೆಟ್ಸ್‌ ಇದು ವಿಟಮಿನ್‌ D ಕೊರತೆಯಿಂದ ಬರುವ ರೋಗವಾಗಿದೆ.
 • ವಯಸ್ಕಕರಲ್ಲಿ ಕಂಡುಬರುವ ರೋಗ – ಆಸ್ಟೀಯೋಮೆಲಾಸಿಯಾ
 • ಪ್ಯಾರಾಥೈರಾಯ್ಡ್‌ ನ್ನು ಗ್ರಂಥಿಯೊಳಗೆ ಹುದುಗಿಕೊಂಡಿರುವ ಗ್ರಂಥಿ ಎನ್ನುವರು.
 • ಈ ಗ್ರಂಥಿಯು ಪಿಟ್ಯುಟರಿಯ ನಿಯಂತ್ರಣಕ್ಕೆ ಒಳಪಡದೆ ಇರುವ ಗ್ರಂಥಿಯಾಗಿದೆ.

ಥೈಮಸ್‌ :

 • ಥೈಮಸ್‌ ಗ್ರಂಥಿಯು ಹೃದಯದ ಮೇಲ್ಬಾಗದಲ್ಲಿ ಮತ್ತು ಕುತ್ತಿಗೆಯ ಕೆಳಭಾಗದಲ್ಲಿ ಕಂಡು ಬರುತ್ತದೆ.
 • ಥೈಮಸ್‌ ಗ್ರಂಥಿಯಿಂದ ಥೈಮಿನ್/ಥೈಮೋಸಿನ್‌ ಹಾರ್ಮೋನು ಬಿಡುಗಡೆಯಾಗುತ್ತದೆ.
 • ಥೈಮಿನ್‌ ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾರ್ಮೋನು ಆಗಿದೆ.
 • ಥೈಮಸ್‌ ಗ್ರಂಥಿಯು 14 ವರ್ಷ ಒಳಗಿನ ಮಕ್ಕಳಲ್ಲಿ ಮಾತ್ರ ಕಂಡುಬರುತ್ತಿದ್ದು ಬೆಳವಣಿಗೆಯಾಗುತ್ತಾ ಬಂದಂತೆ ಇತರ ಅಂಗಗಳ ಜೊತೆಗೆ ಕೂಡಿಕೊಂಡು ಕಣ್ಮರೆಯಾಗುತ್ತದೆ.

ಅಡ್ರಿನಲ್‌ :

 • ಕಿಡ್ನಿಯ ಮೇಲ್ಬಾಗದಲ್ಲಿ ಟೋಪಿಯಾಕಾರದಲ್ಲಿ ಕಂಡು ಬರುವ ಗ್ರಂಥಿಯಾಗಿದೆ.
 • ಅಡ್ರಿನಲ್‌ ಹೊರಭಾಗವನ್ನು ಕಾರ್ಟೆಕ್ಸ್‌ ಎಂದು ಒಳಭಾಗವನ್ನು ಮೆಡುಲ್ಲಾ ಎಂದು ಕರೆಯುತ್ತೇವೆ.
 • ಕಾರ್ಟೆಕ್ಸ್‌ – ಕಾರ್ಟಿಸೋನ್‌ ಎಂಬ ಹಾರ್ಮೋನು ಸ್ರವಿಸುತ್ತದೆ.
 • ಮೆಡುಲ್ಲಾ – ಅಡ್ರಿನಲಿನ್‌, ನಾರ್‌ ಅಡ್ರಿನಲ್‌ ಮತ್ತು ಡೋಪೊಮಿನ್‌ ಎಂಬ ಹಾರ್ಮೋನು ಸ್ರವಿಸುತ್ತದೆ.
 • ಭಯ, ಜಗಳ ಮತ್ತು ಕೋಪ ಮುಂತಾದ ತುರ್ತು ಸಂದರ್ಭಗಳಲ್ಲಿ ಬಿಡುಗಡೆಯಾಗುವ ಹಾರ್ಮೋನು ಆಗಿರುವುದರಿಂದ ಇದನ್ನು ತುರ್ತುಪರಿಸ್ಥಿತಿಯ ಹಾರ್ಮೋನು ಎಂದು ಕರೆಯುತ್ತಾರೆ.

ಜನನ ಗ್ರಂಥಿ :

 • ಪುರುಷರಲ್ಲಿ ಪ್ರೌಢಾವಸ್ಥೆಯನ್ನು ತಲುಪಿದಾಗ ದೈಹಿಕ ಬದಲಾವಣೆ ಧ್ವನಿ ಗಡಸಾಗುವುದು, ಮೇಸೆಯ ಬೆಳವಣಿಗೆ, ಲೈಂಗಿಕ ಆಸಕ್ತಿ ಮುಂತಾದ ಬದಲಾವಣೆಗಳಿಗೆ ಕಾರಣವಾಗುವ ಹಾರ್ಮೋನ್‌ – ಟೆಸ್ಟೋಸ್ಟಿರಾನ್
 • ಮಹಿಳೆಯರಲ್ಲಿ ಫ್ರೌಢಾವಸ್ಥೆಯನ್ನು ತಲುಪಿದಾಗ ಋತುಚಕ್ರದ ಪ್ರಾರಂಭವಾಗುವಿಕೆ ಮತ್ತು ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ, ಲೈಂಗಿಕ ಆಸಕ್ತಿ ಮುಂತಾದ ಬದಲಾವಣೆಗಳಿಗೆ ಕಾರಣವಾಗುವ ಹಾರ್ಮೋನು – ಈಸ್ಟ್ರೋಜನ್
 • ಗರ್ಭಾವ್ಯಸ್ಥೆಯ ಸಂದರ್ಭದಲ್ಲಿ ಬಿಡುಗಡೆಗೊಳ್ಳುವ ಹಾರ್ಮೋನು – ಪ್ರೊಜೆಸ್ಟಿರಾನ್‌
 • ಮಗು ಜನಿಸಿದ ಸಂದರ್ಭದಲ್ಲಿ ಗರ್ಭಕೋಶದ ಸಂಕೋಚನ ಮತತು ವಿಕಸನ ಕ್ರಿಯೆಗೆ ಕಾರಣವಾಗುವ ಹಾರ್ಮೋನು – ಆಕ್ಸಿಟೋಸಿನ್

ಪಿಟ್ಯೂಟರಿ ಗ್ರಂಥಿ :

 • ಪಿಟ್ಯೂಟರಿಯು ಮೆದುಳಿನಲ್ಲಿ ಚಿಕ್ಕ ಬಟಾಣಿ ಕಾಳಿನ ಗಾತ್ರದಷ್ಟು ಕಂಡುಬರುವ ಗ್ರಂಥಿಯಾಗಿದೆ.
 • ಪಿಟ್ಯೂಟರಿಯಿಂದ ಹಾರ್ಮೋನುಗಳ ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾದರೆ ವ್ಯಕ್ತಿಯು ನಿರ್ದಿಷ್ಟ ಮಟ್ಟದ ವ್ಯಕ್ತಿಯಾಗಿ ಬೆಳೆಯುತ್ತಾನೆ, ಇಲ್ಲವಾದರೆ ವ್ಯಕ್ತಿಯ ಎತ್ತರವು ಕುಂಠಿತಗೊಳ್ಳುತ್ತದೆ. ಪರೋಕ್ಷವಾಗಿ ಬೆಳವಣಿಗೆಗೆ ಕಾರಣವಾಗಿರುವುದರಿಂದ ಇದನ್ನು “ಬೆಳವಣಿಗೆಯ ಗ್ರಂಥಿ” ಎಂದು ಕರೆಯುತ್ತಾರೆ.

ಹೈಪೋಥಲಾಮಸ್‌ :

 • ಇದರಿಂದ ಬಿಡುಗಡೆಗೊಳ್ಳುವ ಹಾರ್ಮೋನು antidiyotics ಹಾರ್ಮೋನು ಇದಕ್ಕಿರುವ ಇನ್ನೊಂದು ಹೆಸರು ವ್ಯಾಸೋಪ್ರೆಸಿನ್.‌
 • ADH ದೇಹದಲ್ಲಿನ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ.
 • ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಣ ಮಾಡುವುದರಿಂದ ಇದನ್ನು “Master of Master Gland” ಎಂದು ಕರೆಯುತ್ತೇವೆ.

ಮಿಶ್ರಗ್ರಂಥಿಗಳು :

 • ಮೆದೋಜಿರಕಗ್ರಂಥಿ ನಾಳ ಸಹಿತ ಮತ್ತು ನಿರ್ನಾಳದಂತೆ ವರ್ತಿಸುವುದರಿಂದ ಇದನ್ನು ಮಿಶ್ರಗ್ರಂಥಿ ಎಂದು ಕರೆಯುತ್ತೇವೆ.
 • ಇದರಲ್ಲಿ 2 ಕೋಶಗಳಿವೆ ಅವು ಅಲ್ಫಾ ಮತ್ತು ಬೀಟಾ ಕೋಶಗಳು
 • ಅಲ್ಫಕೋಶ – ಗ್ಲುಕೋಗಾನ್‌ ನ್ನು ಸ್ರವಿಸುತ್ತವೆ.
 • ಬೀಟಾಕೋಶ – ಇನ್ಸುಲಿನ್‌ ನ್ನು ಸ್ರವಿಸುತ್ತದೆ.
 • ಇನ್ಸುಲಿನ್‌ ಒಂದು ವಿಧದ ಪ್ರೋಟಿನ್

‌FAQ :

“Master of Master Gland”ಎಂದು ಯಾವುದನ್ನು ಕರೆಯುತ್ತಾರೆ?

ಪಿಟ್ಯೂಟರಿ ಗ್ರಂಥಿ

ಮಗು ಜನಿಸಿದ ಸಂದರ್ಭದಲ್ಲಿ ಗರ್ಭಕೋಶದ ಸಂಕೋಚನ ಮತತು ವಿಕಸನ ಕ್ರಿಯೆಗೆ ಕಾರಣವಾಗುವ ಹಾರ್ಮೋನು ಯಾವುದು?

ಆಕ್ಸಿಟೋಸಿನ್

ಇತರೆ ವಿಷಯಗಳು :

ಮೆದುಳಿನ ಬಗ್ಗೆ ಮಾಹಿತಿ

ನೀರಿನ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.