ಭಾರತದ ನದಿಗಳ ಬಗ್ಗೆ ಮಾಹಿತಿ Information about rivers in India Bharathada Nadigala bagge Mahithi in kannada
ಭಾರತದ ನದಿಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಭಾರತದ ನದಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಭಾರತದ ನದಿಗಳು :
ಸಿಂಧೂ ನದಿ :
- ಉಗಮ : ಕೈಲಾಸ ಪರ್ವತ
- ಉದ್ದ : 2880 ಕಿ.ಮೀ. ಭಾರತದಲ್ಲಿ 709 ಕಿ.ಮೀ
- ಜಲಾನಯನ ಕ್ಷೇತ್ರ : 596.800 ಚ.ಕಿ.ಮೀ. ಭಾರತದಲ್ಲಿ 1,17,864 ಕಿ.ಮೀ.
- ಉಪನದಿಗಳು : ಜೇಲಂ, ಚಿನಾಬ್, ರಾವಿ, ಬಿಯಾಸ್, ಸಟ್ಲೆಜ್.
ಜೇಲಂ ನದಿ :
- ಉಗಮ : ಜಮ್ಮು ಮತ್ತು ಕಾಶ್ಮೀರದ ಶೇಷನಾಗ
- ಉದ್ದ : 400 ಕಿ.ಮೀ
- ಜಲಾನಯನ ಕ್ಷೇತ್ರ : 28,490 ಚ.ಕಿ.ಮೀ
- ವಿಶೇಷತೆ : ಇದು ಚೀನಾಬ್ ನದಿಯನ್ನು ಪಾಕಿಸ್ತಾನದ ಟ್ರಮ್ಮುವಿನಲ್ಲಿ ಸಂಧಿಸುವುದು.
ಚಿನಾಬ್ ನದಿ :
- ರಾವಿ ನದಿ :
- ಉಗಮ : ಹಿಮಾಚಲ ಪ್ರದೇಶದ ಲಾಹುಲಸ್ಪತಿ ಕಣಿವೆ ಎಂಬಲ್ಲಿ.
- ಉದ್ದ : 1180 ಕಿ.ಮೀ.
- ಜಲಾನಯನ ಕ್ಷೇತ್ರ : 26,755 ಚ.ಕೀ.ಮೀ
- ಇದು ಸಟ್ಲೆಜ್ ನದಿಯನ್ನು ಪಾಕಿಸ್ತಾನದ ಪಂಚ ನಾಡಿನ ಬಳಿ ಸಂದಿಸುತ್ತದೆ.
ರಾವಿ ನದಿ :
- ಉಗಮ : ಹಿಮಾಚಲ ಪ್ರದೇಶದ ಕುಲು ಬೆಟ್ಟಗಳಲ್ಲಿ ಉಗಮ
- ಉದ್ದ : 725 ಕಿ.ಮೀ.
- ಜಲಾನಯನ ಕ್ಷೇತ್ರ : 505957 ಚ.ಕಿ.ಮೀ
- ಇದು ಚಿನಾಬ್ ನದಿಯನ್ನು ಪಾಕಿಸ್ತಾನದ ಪಂಚ ನಾಡಿನ ಬಳಿ ಸಂಧಿಸುತ್ತದೆ.
ಬಿಯಾಸ್ ನದಿ :
- ಉಗಮ : ಹಿಮಾಚಲ ಪ್ರದೇಶದ ರೋಟ್ಹಾಗ್ ಕಣಿವೆಯ ಬಿಯಾಸ್ ಕುಂಡ ಎಂಬಲ್ಲಿ ಉಗಮಿಸುವುದು.
- ಉದ್ದ : 460 ಕಿ.ಮೀ
- ಜಲಾನಯನ ಕ್ಷೇತ್ರ :25,900 ಚ.ಕಿ.ಮೀ. ಇದು ಸಟ್ಲೇಜ್ ನದಿಯನ್ನು ಪಾಕಿಸ್ತಾನದ ಹರಿಕೆ ಬಳಿ ಸಂಧಿಸುತ್ತದೆ.
ಸಟ್ಲೇಜ್ ನದಿ :
- ಉಗಮ : ಟಿಬೆಟಿನ ಕೈಲಾಸ ಪರ್ವತದ ರಾಕಾಸ್ ಸರೋವರದಲ್ಲಿ ಉಗಮಿಸುವುದು.
- ಉದ್ದ : 1050 ಕಿ.ಮೀ.
- ಜಲಾನಯನ ಕ್ಷೇತ್ರ : 24087 ಮೀ
ಬ್ರಹ್ಮಪುತ್ರ ನದಿ :
ಉಗಮ : ಇದು ಟಿಬೇಟಿನ ಕೈಲಾಸ ಪರ್ವತದ ಚೆಮುಯಾಂಗ್ ಡಂಗ್ ಎಂಬಲ್ಲಿ ಉಗಮ.
ಉದ್ದ : 2900ಕಿ.ಮೀ ಭಾರತದಲ್ಲಿ 885 ಕಿ.ಮೀ.
ಜಲಾನಯನ ಕ್ಷೇತ್ರ : 58,0000 ಚ.ಕಿ.ಮೀ. ಭಾರತದಲ್ಲಿ 285,3000 ಚ.ಕಿ.ಮೀ
ಗಂಗಾ ನದಿ :
- ಉಗಮ : ಇದು ಗಂಗೋತ್ರಿಯಿಂದ 28 ಕಿ.ಮೀ. ದೂರದಲ್ಲಿರುವ ಗೋಮುಖ ಎಂಬಲ್ಲಿ ಉಗಮಿಸುತ್ತದೆ.
- ಉದ್ದ : 2465 ಕಿ.ಮೀ ಭಾರತದಲ್ಲಿ 2071ಕಿ.ಮೀ.
- ಜಲಾನಯನ ಕ್ಷೇತ್ರ : 951600 ಚ.ಕಿ.ಮೀ ಭಾರತದಲ್ಲಿ 2 ಲಕ್ಷಕ್ಕಿಂತ ಹೆಚ್ಚು.
- ಉಪನದಿಗಳು : ಯಮುನಾ, ರಾಮಗಂಗಾ, ಘಘಾರ, ಗಂಟಕ, ಕೋಸಿ, ದಾಮೋದರ್, ಸೋನ್ ಮುಂತಾದವುಗಳು.
ಯಮುನಾ ನದಿ :
- ಉಗಮ : ಇದು ಉತ್ತರಖಂಡ ತೇಹರಿಗಡವಾಲ ಜಿಲ್ಲೆಯ ಯಮನೋತ್ರಿ ಎಂಬಲ್ಲಿ ಉಗಮಿಸುತ್ತದೆ.
- ಉದ್ದ : 1360 ಕಿ.ಮೀ
- ಜಲಾನಯನ ಕ್ಷೇತ್ರ : 3,71,851 ಚ.ಕಿ.ಮೀ
- ಉಪನದಿಗಳು : ಚಂಬಲ್, ಬೇಟ್ವಾ
ರಾಮಗಂಗಾ :
- ಉಗಮ : ಇದು ಉತ್ತರಾಂಚಲದ ನೈನಿತಾಲ್ ಎಂಬಲ್ಲಿ ಉಗಮಿಸುತ್ತದೆ.
- ಉದ್ದ : 690 ಕಿ.ಮೀ
- ಜಲಾನಯನ ಕ್ಷೇತ್ರ : 32,800 ಚ.ಕಿ.ಮೀ
ಘಘ್ಘಾರ :
- ಉಗಮ : ಇದು ಟಿಬೇಟಿನ ಗುರ್ಲಾ ಮಂದಾತ ಶಿಖರದಲ್ಲಿ ಉಗಮಿಸುತ್ತದೆ.
- ಉದ್ದ : 1080 ಕಿ.ಮೀ
- ಜಲಾನಯನ ಕ್ಷೇತ್ರ : 1,27, 500 ಕಿ.ಮೀ
ಗಂಡಕ :
- ಉಗಮ : ಇದು ಕೇಂದ್ರ ಹಿಮಾಲಯದಲ್ಲಿ ಉಗಮಿಸುವುದು.
- ಉದ್ದ : 450 ಕಿ.ಮೀ
- ಜಲಾನಯನ ಕ್ಷೇತ್ರ : 9540 ಕಿ.ಮೀ
- ಉಪನದಿಗಳು : ಬ್ಯೂರಿ ಗಂಡಕ
ಬ್ಯೂರಿ ಗಂಡಕ :
- ಉಗಮ : ಇದು ಮಧ್ಯ ಹಿಮಾಲಯದ ಸೋಮೇಶ್ವರ ಬೆಟ್ಟದಲ್ಲಿ ಉಗಮಿಸುವುದು.
- ಉದ್ದ : 610 ಕಿ.ಮೀ
- ಜಲಾನಯನ ಕ್ಷೇತ್ರ : 12,200 ಚ.ಕಿ.ಮೀ
ಕೋಸಿ :
- ಉಗಮ : ಇದು ಟಿಬೇಟಿನ ಶೇಸ ಪಂಗ್ಮಾಎಂಬಲ್ಲಿ ಉಗಮಿಸುವುದು.
- ಉದ್ದ : 730 ಕಿ.ಮೀ.
- ಜಲಾನಯನ ಕ್ಷೇತ್ರ : 21,500 ಚ.ಕಿ.ಮೀ
ದಾಮೋದರ :
- ಉಗಮ : ಇದು ಛೋಟಾನಾಗ್ಪುರ ಪ್ರಸ್ಥಭೂಮಿಯ ಥೋರಿ ಎಂಬಲ್ಲಿ ಉಗಮಿಸುವುದು.
- ಉದ್ದ : 541 ಕಿ.ಮೀ
- ಜಲಾನಯನ ಕ್ಷೇತ್ರ : 22,000 ಚ.ಕಿ.ಮೀ
- ಉಪನದಿಗಳು : ಬಾರಾಕಾ
ಮಹಾನದಿ :
- ಉಗಮ : ಇದು ಛತ್ತೀಸ್ ಘಡದ ಬಸ್ತಾರ ಜಿಲ್ಲೆಯ ಸಿವಾಯ್ ಎಂಬಲ್ಲಿ.
- ಉದ್ದ : 890 ಕಿ.ಮೀ.
- ಜಲಾನಯನ ಕ್ಷೇತ್ರ : 1,92,300 ಚ.ಕಿ.ಮೀ.
- ಉಪನದಿಗಳು : ಇಬ್ಬ, ಮಂಡ, ಹಾಸ್ಟೋ, ಶಿಯೋನಾಥ್, ಇಂಧ್ರ
ಗೋದಾವರಿ :
- ಉಗಮ : ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಎಂಬಲ್ಲಿ ಉಗಮ
- ಉದ್ದ : 1465 ಕಿ.ಮೀ
- ಜಲಾನಯನ ಕ್ಷೇತ್ರ : 3,23,800 ಚ.ಕಿ.ಮೀ.
- ಉಪನದಿಗಳು : ಮಾಂಜಾರಾ, ಪೇನುಗಂಗಾ, ವಾರ್ದಾ, ಪ್ರಣಹಿತೆ, ಇಂದ್ರಾವತಿ,ಸಬರಿ.
ಕೃಷ್ಣಾ ನದಿ :
- ಉಗಮ : ಇದು ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಉಗಮಿಸುತ್ತದೆ.
- ಉದ್ದ : 1392 ಕಿ.ಮೀ.
- ಜಲಾನಯನ ಕ್ಷೇತ್ರ : ಕೋಯ್ನಾ, ಯರ್ಲಾ, ವರ್ಣಾ, ದೂಧ್ ಗಂಗಾ, ಪಂಚಗಂಗಾ, ಘಟಪ್ರಭಾ, ಮಲಪ್ರಭಾ, ಭೀಮಾ, ಡೋಣಿ, ತುಂಗಾಭದ್ರಾ ಮೂಸಿ, ಕೃಷ್ಣಾ ನದಿಯ ಉಪನದಿಗಳಲ್ಲಿ ಅತ್ಯಂತ ಉದ್ದವಾದ ನದಿ ತುಂಗಭದ್ರಾ.
ಕಾವೇರಿ ನದಿ :
- ಉಗಮ : ಇದು ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಲಕಾವೇರಿಯಲ್ಲಿ ಉಗಮಿಸುತ್ತದೆ.
- ಉದ್ದ : 804 ಕಿ.ಮೀ.
- ಜಲಾನಯನ ಕ್ಷೇತ್ರ : 94400 ಕಿ.ಮೀ.
- ಉಪನದಿಗಳು : ಹಾರಂಗಿ, ಹೇಮಾವತಿ, ಕಬಿನಿ, ಅರ್ಕಾವತಿ, ಸುವರ್ಣಾವತಿ, ಭವಾನಿ, ಲಕ್ಷ್ಮಣ ತೀರ್ಥ.
ನರ್ಮದಾ ನದಿ :
- ಉಗಮ : ಇದು ಕೇಂದ್ರದ ಉನ್ನತ ಪ್ರದೇಶದ ಅಮರಕಂಟಕ ಪ್ರಸ್ಥಭೂಮಿಯಲ್ಲಿ ಉಗಮಿಸುವುದು ಇದು ವಿಂದ್ಯ ಮತ್ತು ಸಾತ್ಪುರ ಪರ್ವತಗಳ ಮಧ್ಯದಲ್ಲಿ 1312 ಕಿ.ಮೀ. ಉದ್ದವನ್ನು ಹೊಂದಿದೆ.
- ಜಲಾನಯನ ಕ್ಷೇತ್ರ : 945000 ಚ.ಕಿ.ಮೀ
ತಪತಿ :
- ಉಗಮ : ಇದು ಮಧ್ಯಪ್ರದೇಶದ ಬೆಟ್ಟಲ್ ಜಿಲ್ಲೆಯ ಮುಲ್ತಾಯಿ ಕೆರೆಯಲ್ಲಿ ಉಗಮಿಸುವುದು.
- ಉದ್ದ : 724 ಕಿ.ಮೀ
- ಜಲಾನಯನ ಕ್ಷೇತ್ರ : 64750 ಚ.ಕಿ.ಮೀ.
- ಉಪನದಿಗಳು : ಪೂರ್ಣಬೇಟುಲ್
ಲೂನಿ :
- ಉಗಮ : ಇದು ಸಾಂಬಾರ ಸರೋವರ ಉತ್ತರಕ್ಕಿರುವ ಅನಾಸಾಗರದಲ್ಲಿ ಉಗಮಿಸುವುದು.
- ಉದ್ದ : 450 ಕಿ.ಮೀ
- ಜಲಾನಯನ ಕ್ಷೇತ್ರ :37,250 ಚ.ಕಿ.ಮೀ
ಸಾಬರಮತಿ :
- ಉಗಮ : ಇದು ರಾಜಸ್ತಾನದ ಜೈಸಮುದ್ರದ ಬಳಿ ಉಗಮಿಸುತ್ತದೆ.
- ಉದ್ದ : 320.ಕಿ.ಮೀ.
- ಜಲಾನಯನ ಕ್ಷೇತ್ರ : 18,750.ಕಿ.ಮೀ.
- ಉಪನದಿಗಳು : ಸಾಬರ ಹಾತಮತಿ, ವಾತ್ರಾಕ್,ಮೇಷಿ.
FAQ :
ಸಿಂಧೂ ನದಿ ಎಲ್ಲಿ ಉಗಮಿಸುತ್ತದೆ?
ಕೈಲಾಸ ಪರ್ವತ
ನರ್ಮದಾ ನದಿ ಎಲ್ಲಿ ಉಗಮಿಸುತ್ತದೆ?
ಅಮರಕಂಟಕ
ಇತರೆ ವಿಷಯಗಳು :
ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ
ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ