ನೀರಿನ ಬಗ್ಗೆ ಮಾಹಿತಿ Information about water Nirina bagge Mahithi in Kannada
ನೀರಿನ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ನೀರಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ನೀರು :
ಪ್ರಾಚೀನ ಕಾಲದಿಂದಲೂ ಜನರು ನೀರನ್ನು ಮೂಲ ವಸ್ತುವೆಂದು ತಿಳಿದಿದ್ದರು. ಆದರೆ ನೀರು ಒಂದು ಮೂಲ ವಸ್ತುವಲ್ಲ ಅದೊಂದು ಸಂಯುಕ್ತ ಎಂದು ತಿಳಿಸಿದವರು ಹೆನ್ರಿ ಕ್ಯಾವೆಂಡಿಷ್. ನೀರು ಜಲಜನಕ ಮತ್ತು ಆಮ್ಲಜನಕಗಳಿಂದ ಉಂಟಾದ 2:1 ಅನುಪಾತದಲ್ಲಿರುತ್ತದೆ ಎಂದು ತಿಳಿಸಿದವರು ಫ್ರಾನ್ಸ್ ದೇಶದ ವಿಜ್ಞಾನಿ ಲ್ಯಾವೆಸಿಯರ್.
ನೀರಿನ ಭೌತಿಕ ಲಕ್ಷಣಗಳು :
- ನೀರು ಘನ, ದ್ರವ, ಅನಿಲ ಮೂರು ಸ್ಥಿತಿಗಳಲ್ಲಿ ಕಂಡು ಬರುತ್ತದೆ.
- ಶುದ್ದ ನೀರಿಗೆ ಬಣ್ಣ, ವಾಸನೆ, ರುಚಿ ಇರುವುದಿಲ್ಲ.
- ಶುದ್ದ ನೀರು ವಿದ್ಯುತ್ತಿನ ಅವಾಹಕ
- ನೀರು ಬಹಳಷ್ಟು ವಸ್ತುಗಳನ್ನು ತನ್ನಲ್ಲಿ ಕರಗಿಸಿಕೊಳ್ಳುವ ಸಾಮರ್ಥ್ಯವಿರುವುದರಿಂದ ನೀರನ್ನು ಸಾರ್ವತ್ರಿಕ ದ್ರಾವಕ ಎಂದು ಕರೆಯುತ್ತಾರೆ.
- ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್
- ನೀರಿನ ಘನೀಭವಿಸುವ ಬಿಂದು 0 ಡಿಗ್ರಿ ಸೆಲ್ಸಿಯಸ್
- ನೀರಿನ ಸಾಂದ್ರತೆ ಅತ್ಯಂತ ಹೆಚ್ಚು ಇರುವುದು 4 ಡಿಗ್ರಿ ಸೆಲ್ಸಿಯಸ್ ನಲ್ಲಿ.
ನೀರಿನ ರಾಸಾಯನಿಕ ಲಕ್ಚಣಗಳು :
- ನೀರು ಆಮ್ಲೀಯ ಅಲ್ಲ ಪ್ರತ್ಯಾಮ್ಲೀಯ ಅಲ್ಲ ಇದೊಂದು ತಟಸ್ಥ ದ್ರವ.
- ನೀರು ರಾಸಾಯನಿಕವಾಗಿ ಲಿಟ್ಮಸ್ ಕಾಗದದೊಂದಿಗೆ ವರ್ತಿಸುವುದಿಲ್ಲ.
- ನೀರು ರಾಸಾಯನಿಕ ಕ್ರಿಯೆಯ ವೇಗವನ್ನು ಹೆಚ್ಚಿಸುವಂತಹ ದ್ರವವಾಗಿದೆ.
- ನೀತು ವಿಭಜಿಸಲು ಸಾದ್ಯವಿಲ್ಲ.
- ನೀರಿನಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಪರಮಾಣುಗಳ ಇಲೆಕ್ಟ್ರೋನೆಗೆಟಿವಿಟಿಯಲ್ಲಿ ವ್ಯತ್ಯಾಸ ಇರುವುದರಿಂದ ನೀರಿನ ಅಣುವಿನ ದೃವಿಯತೆಗೆ ಕಾರಣವಾಗುತ್ತದೆ.
ನೀರಿನ ವಿಧಗಳು :
- ಮೆದು ನೀರು : ಯಾವ ನೀರು ಸಾಬೂನಿನೊಂದಿಗೆ ವರ್ತಿಸಿ ಚೆನ್ನಾಗಿ ನೊರೆಯನ್ನುಂಟು ಮಾಡುತ್ತದೆಯೋ ಆ ನೀರನ್ನು ಮೆದು ನೀರು ಎನ್ನುವರು.
- ಗಡಸು ನೀರು : ಯಾವ ನೀರು ಸಾಬೂನಿನೊಂದಿಗೆ ವರ್ತಿಸಿ ಚೆನ್ನಾಗಿ ನೊರೆಯನ್ನುಂಟು ಮಾಡುವುದಲ್ಲವೋ ಆ ನೀರನ್ನು ಗಡಸು ನೀರು ಎನ್ನುವರು.
ನೀರಿನ ಗಡಸುತನಕ್ಕೆ ಕಾರಣವಾಗಿರುವ Ca, Mg ಧನ ಅಯಾನುಗಳು ಯಾವ ಋಣ ಅಯಾನುಗಳೊಂದಿಗೆ ಕೂಡಿಕೊಂಡಿವೆ ಎನ್ನುವುದರ ಆಧಾರದ ಮೇಲೆ ಗಡಸು ನೀರನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
- ತಾತ್ಕಾಲಿಕ ಗಡಸು ನೀರು : ಗಡಸು ನೀರಿನಲ್ಲಿ Ca, Mg ಧನ ಅಯಾನುಗಳೊಂದಿಗೆ ಬೈ ಕಾರ್ಬೋನೇಟ್ಗಳು ಕೂಡಿ ಕೊಂಡಿದ್ದರೆ ಆ ನೀರನ್ನು ತಾತ್ಕಾಲಿಕ ಗಡಸು ನೀರು ಎನ್ನುವರು.
- ಶಾಶ್ವತ ಗಡಸು ನೀರು : ಗಡಸು ನೀರಿನಲ್ಲಿರುವ Ca, Mg ಧನ ಅಯಾನುಗಳೊಂದಿಗೆ ಕ್ಲೋರೈಡ್, ಸಲ್ಫೇಟ್‌ಗಳು ಕೂಡಿ ಕೊಂಡಿದ್ದರೆ ಆ ನೀರನ್ನು ಶಾಶ್ವತ ಗಡಸುನೀರು ಎನ್ನುವರು.
ನೀರಿನ ಗಡಸುತನವನ್ನು ಹೋಗಲಾಡಿಸುವ ವಿಧಾನಗಳು :
- ಕುದಿಸುವಿಕೆ ವಿಧಾನ :
ಈ ವಿಧಾನದಲ್ಲಿ ಕೇವಲ ತಾತ್ಕಾಲಿಕ ಗಡಸು ನೀರನ್ನು ಮಾತ್ರ ಮೆದುಗೊಳಿಸಲಾಗುತ್ತದೆ. ಗಡಸು ನೀರನ್ನು ಕುದಿಸಿದಾಗ ಗಡಸು ನೀರಿನಲ್ಲಿರುವ ಬೈ ಕಾರ್ಬೋನೇಟ್ ಗಳು ಕರಗದೇ ಇರುವ ಕಾರ್ಬೋನೇಟ್ಗಳಾಗಿ ಪರಿವರ್ತನೆಗೊಂಡು ಕಾರ್ಬೋನೇಟ್ಗಳು ಘನರೂಪ ಪಡೆದುಕೊಂಡು ಕೆಳಭಾಗದಲ್ಲಿ ಸಂಗ್ರಹಗೊಳ್ಳುತ್ತವೆ. ಕಾರ್ಬೋನೇಟ್ ಗಳು ಸಾಬೂನಿನೊಂದಿಗೆ ವರ್ತಿಸಿ ನೊರೆಯನ್ನುಂಟು ಮಾಡಲು ಅಡ್ಡಿಪಡಿಸುವುದಿಲ್ಲ. ಹೀಗಾಗಿ ಈ ನೀರು ಮೆದು ನೀರು ಹೊರತು ಶುದ್ದ ನೀರಲ್ಲ. ಆದರೆ ಈ ವಿದಾನವಿ ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರಿಂದ ಮತ್ತು ವೆಚ್ಚದಾಯಕವಾಗಿರುವುದರಿಂದ ಈ ವಿದಾನ ಸೂಕ್ತವಲ್ಲ.
- ಭಟ್ಟಿ ಇಳಿಸುವಿಕೆ ವಿಧಾನ :
ಈ ವಿಧಾನದಲ್ಲಿ ಶಾಶ್ವತ ಹಾಗೂ ತಾತ್ಕಾಲಿಕ ಎರಡೂ ಗಡಸು ನೀರನ್ನು ಮೆದುಗೊಳಿಸಲಾಗುತ್ತದೆ. ನೀರನ್ನು ಕುದಿಸಿದಾಗ ಬಂದಂತಹ ಆವಿಯನ್ನುಸಾಂದ್ರೀಕರಿಸುವುದೇ ಈ ವಿಧಾನವಾಗಿದೆ. ಸಾಂದ್ರೀಕರಿಸಿ ಬಂದಂತ ನೀರು ಮೆದು ನೀರು. ಇದು ಶುದ್ದ ನೀರಾಗಿರುತ್ತದೆ. ಆದರೆ ಈ ವಿಧಾನ ಅತ್ಯಂತ ವೆಚ್ಚದಾಯಕವಾಗಿದ್ದು.
ಸೋಡಾ ವಿಧಾನ :
ಈ ವಿಧಾನದಲ್ಲಿ ನೀರನ್ನು ಕುದಿಸುವ ಹಾಗಿಲ್ಲ. ಸಾಂದ್ರೀಕರಿಸುವ ಹಾಗಿಲ್ಲ. ನೀರಿಗೆ ನೇರವಗಿ ಸೋಡಾ ಬೆರೆಸುವುದರ ಮೂಲಕ ಮೆದುಗೊಳಿಸಲಾಗುತ್ತದೆ. ಗಡಸು ನೀರಿನಲ್ಲಿರುವ ಬೈಕಾರ್ಬೋನೇಟ್, ಕ್ಲೋರೈಡ್ ಮತ್ತು ಸಲ್ಫೇಟ್ ಸೋಡಾದೊಂದಿಗೆ ವರ್ತಿಸಿ ಕಾರ್ಬೋನೇಟ್ಗಳಾಗಿ ಪರಿವರ್ತಿಸಿ ಈ ನೀರು ಮೆದು ನೀರಾಗುತ್ತದೆ. ಇದು ಅತ್ಯಂತ ಸರಳ ವಿಧಾನವಾಗಿದೆ.
ಗಡಸು ನೀರಿನಿಂದಾಗುವ ಅನಾನುಕೂಲಗಳು :
- ಗಡಸು ನೀರಿನಿಂದ ಬೇಳೇಕಾಳುಗಳು ಹಾಗೂ ಆಹಾರ ಪದಾರ್ಥಗಳು ಬೀಗನೆ ಬೇಯುವುದಿಲ್ಲ.
- ಸ್ನಾನ ಮಾಡಲು ಉಪಯೋಗಿಸಿದರೆ ಚರ್ಮವು ಶುಷ್ಕಗೊಂಡು ಚರ್ಮದ ಮೇಲೆ ಬಿಳಿಯ ಬೂದಿ ಉಂಟಾಗುತ್ತದೆ.
- ಕುಡಿಯಲು ಬಳಸಿದರೆ ಹಲ್ಲುಗಳ ಸವೆತಕ್ಕೆ ಒಳಗಾಗಿಮ ಅವುಗಳ ಮೇಲೆ ಶಾಶ್ವತ ಹಳದಿ ಕಲೆಗಳು ಉಂಟಾಗುತ್ತವೆ.
- ಮೂತ್ರ ಕೋಶದ ಕಲ್ಲುಗಳು ಉಂಟಾಗುತ್ತವೆ.
- ಪಾತ್ರೆಗಳಲ್ಲಿ ಸಂಗ್ರಹಿಸಿದರೆ ಪಾತ್ರೆಗಳು ಕೊರೆತಕ್ಕೆ ಒಳಗಾಗಿ ಅವುಗಳ ಮೇಲೆ ಕಲೆಗಳು ಉಂಟಾಗುತ್ತವೆ.
- ಕೈಗಾರಿಕೆಗಳಲ್ಲಿ ಗಡಸು ನೀರಿನಿಂದಾಗಿ ಬಾಯ್ಲರ್ ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ.
- ಬಟ್ಟೆ ತೊಳೆಯಲು ಉಪಯೋಸಿದರೆ ಗಡಸು ನೀರಿನಲ್ಲಿರುವ ಗಡಸು ನೀರಿನಲ್ಲಿರುವ ಕಬ್ಬಿಣದಂಶವು ಬಟ್ಟೆಗಳ ಮೇಲೆ ಶಾಶ್ವತ ಹಳದಿ ಕಲೆಗಳ್ನುಂಟು ಮಾಡುತ್ತವೆ. ಹಾಗೂ ಬಟ್ಟೆಗಳ ಸೆಳೆತ್ರಾಣ ಕಡಿಮೆಯಾಗುತ್ತದೆ.
ನೀರಿನ ಸಂರಕ್ಷಣೆಯ ಕ್ರಮಗಳುನೀರಿನ ಸಂರಕ್ಷಣೆಯ ಕ್ರಮಗಳುನೀರಿನ ಸಂರಕ್ಷಣೆಯ ಕ್ರಮಗಳು :
- ನೀರನ್ನು ಮಿತವಾಗಿ ಬಳಸಬೇಕು.
- ನದಿಗಳಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಬೇಕು.
- ಮಳೆನೀರಿನ ಕೊಯ್ಲುಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು.
- ನೀರಿನ ಮಾಲಿನ್ಯ ತಡೆಗಟ್ಟಬೇಕು.
- ಕೃಷಿಯಲ್ಲಿ ಹನಿ ನೀರಾವರಿ, ತುಂತುರು ನೀರಾವರಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು.
- ಹೆಚ್ಚಿನ ಪ್ರಮಾಣದ ನೀರನ್ನು ಬಯಸುವ ಬೆಳೆಗಳನ್ನು ನಿಯಂತ್ರಿಸಬೇಕು.
- ಕೆರೆ, ಬಾವಿ, ಕೊಳ್ಳಗಳಲ್ಲಿನ ಹೂಳೆತ್ತುವುದರ ಮೂಲಕ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಬೇಕು.
- ನೀರು ಪುನರ್ಬಳಕೆ ಮಾಡಬೇಕು.
FAQ :
ನೀರಿನ ಸಂರಕ್ಷಣೆಯ ಒಂದು ಕ್ರಮ ತಿಳಿಸಿ?
ನೀರನ್ನು ಮಿತವಾಗಿ ಬಳಸಬೇಕು.
ನದಿಗಳಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಬೇಕು
ಗಡಸು ನೀರಿನಿಂದಾಗುವ ಅನಾನುಕೂಲಗಳೇನು?
ಗಡಸು ನೀರಿನಿಂದ ಬೇಳೇಕಾಳುಗಳು ಹಾಗೂ ಆಹಾರ ಪದಾರ್ಥಗಳು ಬೀಗನೆ ಬೇಯುವುದಿಲ್ಲ.
ಸ್ನಾನ ಮಾಡಲು ಉಪಯೋಗಿಸಿದರೆ ಚರ್ಮವು ಶುಷ್ಕಗೊಂಡು ಚರ್ಮದ ಮೇಲೆ ಬಿಳಿಯ ಬೂದಿ ಉಂಟಾಗುತ್ತದೆ.
ಇತರೆ ವಿಷಯಗಳು :
ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ :