ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ | Information about movements in Karnataka in Kannada

Join Telegram Group Join Now
WhatsApp Group Join Now

ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ Information about movements in Karnataka Karnatakada Chaluvaligala bagge Mahithi in Kannada

ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ

Information about movements in Karnataka in Kannada
ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ ಚಳುವಳಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕದ ಚಳುವಳಿಗಳು :

ಕೊಪ್ಪಳ ದಂಗೆ ಕ್ರಿ.ಶ.1819 :

 • ಕ್ರಿ.ಶ.1819 ರಲ್ಲಿ ಕೊಪ್ಪಳದಲ್ಲಿ ವೀರಪ್ಪನಾಯಕ ದಂಗೆ ಎದ್ದನು. ಬ್ರಿಟೀಷ್‌ ಅಧಿಕಾರಿ ಮೇಜರ್‌ ಪ್ಲೀಜರ್‌ ಈ ದಂಗೆಯನ್ನು ಹತ್ತಿಕ್ಕಿದನು.

ಸಿಂದಗಿ ಬಂಡಾಯ ಕ್ರಿ.ಶ.1824 :

 • 1824 ರಲ್ಲಿ ಸಿಂದಗಿಯಲ್ಲಿ ದಿವಾಕರ ದೀಕ್ಷಿತ್‌ ಮತ್ತು ದೇಶಪಾಂಡೆ ಬ್ರಿಟೀಷರ ಕಂದಾಯದ ವಿರುದ್ದ ದಂಗೆ ಎದ್ದರು. ಸ್ವತಃ ತಾವೇ ಕಂದಾಯ ಸಂಗ್ರಹಿಸಿದಾಗ ಬ್ರಿಟಿಷ್‌ ಅಧಿಕಾರಿ ಸ್ಟೀವನ್‌ ಸನ್‌ ಇವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿದರು.

ಕಿತ್ತೂರಿನ ಬಂಡಾಯ ಕ್ರಿ.ಶ.1824 :

 • ಕಿತ್ತೂರು ರಾಣಿ ಚೆನ್ನಮ್ಮ ಕಾಕತೀಯ ದೂಳಪ್ಪಗೌಡ ಮತ್ತು ಪದ್ಮಾವತಿಯರ ಮಗಳಾಗಿದ್ದಳು.
 • ಕಿತ್ತೂರ ದೇಸಾಯಿ ಮಲ್ಲಸರ್ಜನಿಗೆ ವೇರಮ್ಮ ಮತ್ತು ಚೆನ್ನಮ್ಮ ಎಂಬ ಇಬ್ಬರು ಪತ್ನಿಯರಿದ್ದರು.
 • 1816 ರಲ್ಲಿ ಮಲ್ಲಸರ್ಜನು ತೀರಿಕೊಂಡಾಗ ಹಿರಿಯ ರಾಣಿ ವೀರಮ್ಮಳ ಮಗನಾದ ಶಿವಲಿಂಗ ರುದ್ರಸರ್ಜ ಅಧಿಕಾರಕ್ಕೆ ಬಂದನು. ಇವನು ಅಕಾಲಿಕ ಮರಣಕ್ಕೆ ತುತ್ತಾದಾಗ, ಬಾಳಪ್ಪ ಗೌಡರ ಮಗ ಶಿವಲಿಂಗಪ್ಪನನ್ನು ಚನ್ನಮ್ಮ ದತ್ತು ತೆಗೆದುಕೊಂಡಳು ಧಾರವಾಡದ ಕಲೆಕ್ಟರನಾದ ಥ್ಯಾಕರೆ ಇದನ್ನು ವಿರೋಧಿಸಿದನು.
 • ಬ್ರಿಟೀಷ್‌ ಅಧಿಕಾರಿ ಥ್ಯಾಕರೆಯನ್ನು ಅಮಟೂರಿನ ಬಾಳಪ್ಪಗೌಡ ಕೊಲೆ ಮಾಡಿದರು.
 • ಮಲ್ಲಪ್ಪಶೆಟ್ಟಿ ಮತ್ತು ವೆಂಕನಗೌಡ ಎಂಬ ದೇಶದ್ರೋಹಿಗಳ ಸಹಾಯದಿಂದ ಡಿಸೆಂಬರ್‌ 31, 1824 ರಲ್ಲಿ ಚೆನ್ನಮ್ಮಳನ್ನು ಬಂಧಿಸಿ ಬೈಹೊಂಗಲ ಸೆರೆಮನೆಯಲ್ಲಿಟ್ಟರು. 1829 ಅವಳು ಅಲ್ಲಿಯೇ ಮರಣ ಹೊಂದಿದಳು.
 • ಕಿತ್ತೂರನ್ನು ಬ್ರಿಟೀಷರಿಂದ ವಶಪಡಿಸಿಕೊಂಡು ಆಡಳಿತ ಮುಂದುವರಿಸಬೇಕೆಂಬ ಯೋಜನೆಯಲ್ಲಿ ಸಂಗೊಳ್ಳಿ ರಾಯಣ್ನ ದಂಗೆ ಮುಂದುವರೆಸಿದನು.
 • ಸಂಗೊಳ್ಳಿ ರಾಯಣ್ಣನು ಧಾರವಾಡದ ಬೆಂಚಿ ಹಳ್ಳದಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಬಾಳಪ್ಪ ರಂಗನಗೌಡ ಎಂಬ ದೇಶ ದ್ರೋಹಿಯ ಸಹಯದಿಂದ ಬ್ರಿಟೀಷರು ಬಂಧಿಸಿದರು.
 • 1831 ಜನವರಿ 26 ರಂದು ಬೆಲಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಗಲ್ಲಿಗೇರಿಸಿದರು.

ಕೊಡಗಿನ ಬಂಡಾಯ ಕ್ರಿ.ಶ.1834 :

Join WhatsApp Join Telegram

1834 ರಲ್ಲಿ ಕೊಡಗು ಚಿಕ್ಕ ಪ್ರಾಂತ್ಯವಾಗಿದ್ದು, ಅಲ್ಲಿನ ಮುಖ್ಯಸ್ಥನಾದ ಚಿಕ್ಕ ವೀರ ರಾಜೇಂದ್ರ ಒಡೆಯನನ್ನು ಬ್ರಿಟೀಷರು ಉಚ್ಛಾಟನೆ ಮಾಡಿದರು. ಇದನ್ನು ವಿರೋಧಿಸಿ ಕಲ್ಯಾನ ಸ್ವಾಮಿ ಮತ್ತು ಅಪರಂಪಾರ ಸ್ವಾಮಿಗಳು ಬಂಡಾಯವೆದ್ದರು ದೇಶ ದ್ರೋಹೊಗಳಾದ ಭೂಪಣ್ಣ ಮತ್ತು ಪೊನ್ನಪ್ಪರ ಕುತಂತ್ರದಿಂದ ಈ ಬಂಡಾಯಗಾರರನ್ನು ಬಂಧಿಸಿ ಗಲ್ಲಿಗೇರಿಸಲಾಯಿತು.

ಹಲಗಲಿ ಬೇಡರ ದಂಗೆ ಕ್ರಿ.ಶ.1857 :

1857 ಸೆಪ್ಟೆಂಬರ್‌ 11 ರಂದು ಬ್ರಿಟೀಷರು ನಿಶಸ್ತ್ರೀಕರಣ ಕಾಯ್ದೆ ಜಾರಿಗೆ ತಂದು ಶಸ್ತ್ರಾಸ್ತ್ರಗಳನ್ನು ಹೊಂದಲು ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿಯ ಅನುಮತಿ ಅಗತ್ಯ ಎಂದು ಹೇಳಿದ್ದು ಈ ದಂಗೆಗೆ ಕಾರಣವಾಯಿತು. ಈ ದಂಗೆಯು ಬಾಬುಜಿ ನಿಂಬಾಳ್ಕರ್‌ ನೇತೃತ್ವದಲ್ಲಿ ಜಗಡ್ಯಾ, ಬಾಳ್ಯ, ರಾಮ ಮತ್ತು ಹನುಮ ಸೇರಿಕೊಂಡು ಮುಂದಾಳತ್ವ ವಹಿಸಿದರು. ಇವರಿರುವ ಗ್ರಾಮಕ್ಕೆ ಬ್ರಿಟೀಷ್‌ ಅಧಿಕಾರಿಗಳಾದ ಕರ್ನಲ್‌ ಸೇಟನ್‌ ಕರ್‌ ಮತ್ತು ಮಾಲ್ಕಂ ಭೇಟಿ ನೀಡಿ ಶಶ್ತ್ರಾಸ್ತ್ರಗಳನ್ನು ಬ್ರಿಟೀಷ್‌ ಸರ್ಕಾರಕ್ಕೆ ಒಪ್ಪಪಿಸಲು ಕರೆ ನೀಡಿದರು. ಆದರೆ ಬೇಡರು ಒಪ್ಪದೆ ಇರುವ ಕಾರಣ ಇವರ ಗುಡಿಸಲಿಗಳಿಗೆ ಬೇಂಕಿ ಹಚ್ಚಿದರು. ಬೇಡರು ಸ್ವಾಭಿಮಾನಿಗಳಾಗಿ ಗುಡಿಸಲಿನಿಂದ ಹೊರ ಬರದೇ ಬೆಂಕಿಯಲ್ಲಿ ದಹನವಾದರು. ಎಂ.ವಿ.ಕೃಷ್ಣನ್‌ ರವರ ಪ್ರಕಾರ “ಒಂದೂರಿನ ಜನ ಸಮುದಾಯವು ಬಾರತೀಯ ಸ್ವಾತಂತ್ರ್ಯದ ಬಲಿಪೀಠದ ಮುಂದೆ ಧಗಧಗಿಸುವ ಅಗ್ನಿ ಜ್ವಾಲೆಯಲ್ಲಿ ಹೊತ್ತಿ ಉರಿದ ದೃಷ್ಟಾಂತ ದೊರೆಯುವದು ಕನ್ನಡ ನಾಡಿನಲ್ಲಿ ಮಾತ್ರ” ಎಂದು ಹೇಳಿದ್ದಾರೆ.

ಸುರಪುರ ದಂಗೆ ಕ್ರಿ.ಶ.1858 :

1858ರಲ್ಲಿ ರಾಜಾ ವೆಂಕಟಪ್ಪ ನಾಯಕ ಬ್ರಿಟೀಷರ ವಿರುದ್ದ ದಂಗೆ ಎದ್ದನು. ಈತ ಕಾನ್ಪುರ ನಾನಾಸಾಹೇಬ ಮತ್ತು ಜಮಖಂಡಿಯ ಪಟವರ್ಧನನ ಸ್ನೇಹ ಬೆಳೆಸಿದ್ದನು.

ಇವರ ಸಹಾಯದಿಂದ ಬ್ರಿಟೀಷ್‌ ಅಧಿಕಾರಿಯಾದ ನ್ಯೂಬೇರಿಯನ್ನು ಕೊಂದನು.

ರಾಜಾ ವೆಂಕಟಪ್ಪ ನಾಯಕನಿಗೆ ಆತನ ಆಪ್ತ ಸ್ನೇಹಿತನಾದ ವಾಗನಗೇರಿಯ ಭೀಮರಾಯ ಮೋಸ ಮಾಡಿದನು.

ನರಗುಂದ ದೇಸಾಯಿ ಬಂಡಾಯ :

 • ನರಗುಂದ ದೇಸಾಯಿ ಬಾಬಾ ಸಾಹೇಬ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ವಿರುದ್ದ ದಂಗೆ ಎದ್ದನು. ಆ ಸಂದರ್ಭದಲ್ಲಿ ಬ್ರಿಟೀಷ್‌ ಅಧಿಕಾರಿ ಮಾಲ್ಮನನ್ನು ಕೊಂದು ಹಾಕಿದರು.
 • ದೇಶದೇಶದ್ರೋಹಿಗಳಾದ ಬನಿಯಾ ಬಾಪು ಮತ್ತು ಕೃಷ್ಣಪ್ಪರ ಸಹಾಯದಿಂದ ಇವರನ್ನು ಬಂಧಿಸಿ ಬ್ರಿಟೀಷರು ಗಲ್ಲಿಗೇರಿಸಿದರು.

ಮುಂಡರಗಿ ಬಂಡಾಯ ಕ್ರಿ.ಶ.1858 :

1858 ರಲ್ಲಿ ಮುಂಡರಗಿ ಭೀಮರಾಯ ದಂಗೆ ಎದ್ದನು. ಹರಪ್ಪನಹಳ್ಳಿ ಮತ್ತು ಬಳ್ಳಾರಿಯ ತಹಶೀಲ್ದಾರನಾಗಿದ್ದ ಬ್ರಿಟೀಷ್‌ ಅಧಿಕಾರಿಯ ದಬ್ಬಾಳಿಕೆ ವಿರುದ್ದ ದಂಗೆ ಎದ್ದನು. ಗದಗ ಮತ್ತು ಕೊಪ್ಪಳದ ಮೇಲೆ ದಾಳಿ ಮಾಡಿ ಅಲ್ಲಿನ ಖಜಾನೆ ಲೂಟಿ ಮಾಡಿದರು. ಕೊಪ್ಪಳದಲ್ಲಿ ಬ್ರಿಟೀಷರು ಎದುರಾದಾಗ 1858 ಜೂನ್‌ 1 ರಂದು ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು.

ಕರ್ನಾಟಕದಲ್ಲಿ ಅಹಿಂಸಾತ್ಮಕ ಚಳುವಳಿಗಳು :

 • 1907 ರಲ್ಲಿ ಹನುಮಂತರಾವ ಮತ್ತು ಗೋವಿಂದರಾವಯಾಳಗಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮ್ಯಾಜಿನಿ ಕ್ಲಬ್‌ ಸ್ಥಾಪನೆಯಾಯಿತು.
 • 1916 ರಲ್ಲಿ ಧಾರವಾಡ ಮತ್ತು ಬೆಳಗಾವಿಯಲ್ಲಿ ಬಾಲಗಂಗಾಧರ ತಿಲಕರ ಪ್ರಭಾವದಿಂದ ಕರ್ನಾಟಕದಲ್ಲಿ ಹೋ ರೂಲ್‌ ಚಳುವಳಿ ಪ್ರಾರಂಭವಾಯಿತು.
 • 1922 ರಲ್ಲಿ ಗಂಗಾಧರರಾವ ದೇಶಪಾಂಡೆರವರು ಬೆಂಗಳೂರಿನಲ್ಲಿ ಚರಕ ಸಂಘ ಸ್ಥಾಪಿಸಿದರು.
 • 1923 ರಲ್ಲಿ ಎನ್.ಎಸ್..ಹರ್ಢೇಕರ್‌ರು ಹುಬ್ಬಳ್ಳಿಯಲ್ಲಿ ಸೇವಾದಳ ಸ್ಥಾಪಿಸಿದರು.
 • 1924ರಲ್ಲಿ 39ನೇ ರಾಷ್ಟ್ರೀಯ ಕಾಂಗ್ರೇಸ್‌ ಅಧಿವೇಶನ ಬೆಳಗಾವಿಯಲ್ಲಿ ನಡೆಯಿತು.
 • 1930 ಏಪ್ರಿಲ್‌ 13 ರಂದು ಕರ್ನಾಟಕದ ಅಂಕೋಲಾದಲ್ಲಿ ಎಂ.ಪಿ.ನಾಡಕರ್ಣಿಯವರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯಿತು.
 • ಇದು 45 ದಿನಗಳ ಸತ್ಯಾಗ್ರಹವಾಗಿತ್ತು.
 • 40,000 ಜನ ಭಾಗವಹಿಸಿದ್ದರು.
 • ಇದಕ್ಕೆ ಕರ್ನಾಟಕದ ಬಾರ್ಡೋಲಿ ಎಂದು ಕರೆಯುತ್ತಾರೆ.

ಶಿವಪುರ ಧ್ವಜಸತ್ಯಾಗ್ರಹ :

 • ಮಂಡ್ಯ ಜಿಲ್ಲೆಯ ಶಿವಪುರದಲ್ಲಿ ಮೈಸೂರು ಸಂಸ್ಥಾನ ಜವಬ್ದಾರಿ ಸರ್ಕಾರದ ಸ್ಥಾಪನೆಗಾಗಿ ಈ ಚಳುವಳಿ ನಡೆಯಿತು.
 • ಈ ಸತ್ಯಾಗ್ರಹಕ್ಕೆ ಸ್ಥಳಾವಕಾಶ ನೀಡಿದ ರೈತ ಮಂಡ್ಯ ಜಿಲ್ಲೆಯ ತುಂಬೆಗೌಡರು.
 • 1938 ಏಪ್ರಿಲ್‌ 11 ರಂದು ಟಿ.ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ಈ ಸತ್ಯಾಗ್ರಹ ನಡೆಯಿತು. ಸುಮಾರು 25 ಸಾವಿರ ಜನಸಂಖ್ಯೆಯೊಂದಿಗೆ ಮೈಸೂರಿನ ಅರಮನೆವರೆಗೆ ಈ ಸತ್ಯಾಗ್ರಹ ನಡೆಯಿತು.

1938ರ ವಿಧುರಾಶ್ವತ ದುರಂತ :

 • ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರ ತಾಲ್ಲೂಕಿನ ವಿಧುರಾಶ್ವತ ಎಂಬಲ್ಲಿ ನಡೆದ ಘಟನೆ.
 • ಕಾಂಗ್ರೇಸ್‌ ಕಾರ್ಯಕರ್ತರು ಧ್ವಜವನ್ನು ಹಾರಿಸಿ ಕಾರ್ಯಕ್ರಮ ಪ್ರಾರಂಭಿಸಿದರು.
 • ಕಾಂಗ್ರೆಸ್‌ ಕಾರ್ಯಕರ್ತರನ್ನು ಶಿಕ್ಷಿಸುವ ನೆಪದಲ್ಲಿ ಪೊಲೀಸರು ಮನ ಬಂದಂತೆ ಗೋಲಿ ಬಾರ ಮಾಡಿ 35 ಜನ ಅಮಾಯಕರನ್ನು ಬಲಿ ತೆಗೆದುಕೊಂಡರು.
 • ಇದಕ್ಕೆ ಕರ್ನಾಟಕದ ಜಲಿಯನ್‌ ವಾಲಾಬಾಗ ಎಂದು ಕರೆಯುತ್ತಾರೆ.

ಈಸೂರು ದುರಂತ ಕ್ರಿ.ಶ.1942 :

 • ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಸಣ್ಣ ಗ್ರಾಮ ಈಸೂರು.
 • ಭಾರತದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಗ್ರಾಮ.
 • 1942 ಸೆಪ್ಟೆಂಬರ್‌ 26 ಈಸೂರು ಜನತೆ ವೀರಭದ್ರ ದೇವಾಲಯದ ಮುಂದೆ ತ್ರಿವರ್ಣ ಧ್ವಜವನ್ನು ಹಾರಿಸಿ ತಾವು ಸ್ವತಂತ್ರರು ಎಂದು ಘೋಷಿಸಿಕೊಂಡರು.
 • ಊರ ಹೆಬ್ಬಾಗಿಲಿನ ಮುಂದೆ ಬೇಜವಬ್ದಾರಿ ಅಧಿಕಾರಿಗಳಿಗೆ ಪ್ರವೇಶ ಇಲ್ಲ ಏಸೂರು ಕೊಟ್ಟರು, ಈಸೂರು ಬಿಡಲಾರೆವು ಎಂಬ ನಾಮಫಲಕ ಹಾಕಿ ಸರ್ಕಾರ ಸ್ಥಾಪಿಸಿಕೊಂಡರು.
 • ಪೊಲೀಸರು ಆಜ್ಞೆ ಹೊರಡಿಸಿದಾಗ ಅವರ ಮಾತಿಗೂ ತಲೆ ಭಾಗದ ಜನತೆ ಸಂಘರ್ಷಕ್ಕೆ ಇಳಿದರು ಇದರಿಂದ ಪೊಲೀಸರು ಗೋಲಿಬಾರ ಮಾಡಿ 3 ಜನ ಅಮಾಯಕರನ್ನು ಬಲಿ ತೆಗೆದುಕೊಂಡರು. ಇದರಿಂದ ಕೋಪಗೊಂಡ ಈಸೂರು ಜನತೆ ತಹಶೀಲ್ದಾರ ಚನ್ನಕೃಷ್ಣಪ್ಪ ಮತ್ತು ಪೊಲೀಸ ಅಧಿಕಾರಿ ಕೆಂಚೆಗೌಡರನ್ನು ಬಲಿ ತೆಗೆದುಕೊಂಡರು. 1944 ರಲ್ಲಿ ದಂಗೆ ಸ್ಥಗಿತಗೊಂಡಿತು.

FAQ :

ವಿಧುರಾಶ್ವತ ಎಲ್ಲಿದೆ?

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರ ತಾಲ್ಲೂಕಿನಲ್ಲಿದೆ.

ಭಾರತದಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡ ಪ್ರಥಮ ಗ್ರಾಮ ಯಾವುದು?

ಈಸೂರು

ಇತರೆ ವಿಷಯಗಳು :

ವಿವಿಧ ವಿಷಯಗಳು ಮತ್ತು ಅವುಗಳ ಅಧ್ಯಯನದ ಬಗ್ಗೆ ಮಾಹಿತಿ

ಭೂಮಿಯ ಚಲನೆಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.