ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ | Information About the Transport System of Karnataka in Kannada

Join Telegram Group Join Now
WhatsApp Group Join Now

ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ Information about the transport system of Karnataka Karnatakada Sarige Vyavaste bagge Mahithi in Kannada

ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ

ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕದ ಸಾರಿಗೆ :

 • ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಕುಗಳ ಹಾಗೂ ಪ್ರಯಾಣಿಕರನ್ನು ಸಾಗಿಸುವ ಮಾಧ್ಯಮವೇ ಸಾರಿಗೆ.
 • ಕೃಷಿ, ಕೈಗಾರಿಕೆ ಮತ್ತು ವ್ಯಾಪಾರದ ಪ್ರಗತಿಯಲ್ಲಿ ಸಾರಿಗೆ ಸಂಪರ್ಕಗಳು ಜೀವನಾಡಿಯಿದ್ದಂತೆ.
 • ಕರ್ನಾಟಕವು ರಸ್ತೆ ಸಾರಿಗೆ, ರೈಲು ಸಾರಿಗೆ, ಜಲಸಾರಿಗೆ ಮತ್ತು ವಾಯು ಸಾರಿಗೆಯನ್ನು ಹೊಂದಿದೆ.

ರಸ್ತೆ ಸಾರಿಗೆ :

 • ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ರಸ್ತೆ ಸಾರಿಗೆಯು ರೂಢಿಯಲ್ಲಿದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿದ್ದವು. ಅವು ಸುವ್ಯವಸ್ಥಿತವಾಗಿರಲಿಲ್ಲ.
 • ಸ್ವಾತಂತ್ರ್ಯ ನಂತರ ವಿಶಾಲ ಮೈಸೂರು ರಾಜ್ಯ ನಿರ್ಮಾಣವಾದ ಮೇಲೆ 1961 ರ ನಂತರ ಒಟ್ಟು 43,182 ಕಿ.ಮೀ. ಉದ್ದ ರಸ್ತೆಗಳಿದ್ದವು.
 • ಪ್ರಸ್ತುತ ಒಟ್ಟು ರಸ್ತೆಗಳ ಉದ್ದ 2,53,601 ಕಿ.ಮೀ. ಇವುಗಳಲ್ಲಿ ಶೇ.35.70 ಭಾಗದಷ್ಟು ಪಕ್ಕಾ ರಸ್ತೆಗಳು ಮತ್ತು ಶೇ.64.30 ಭಾಗದಷ್ಟು ಕಚ್ಚಾ ರಸ್ತೆಗಳಿದ್ದವು.

ಕರ್ನಾಟಕದ ರಸ್ತೆಗಳನ್ನು 4 ವಿಧಗಳಾಗಿ ವಿಂಗಡಿಸಲಾಗಿದೆ.

 • ರಾಷ್ಟ್ರೀಯ ಹೆದ್ದಾರಿಗಳು
 • ರಾಜ್ಯ ಹೆದ್ದಾರಿಗಳು
 • ಜಿಲ್ಲಾ ಹೆದ್ದಾರಿಗಳು
 • ಗ್ರಾಮೀಣ ಹೆದ್ದಾರಿಗಳು

ರಾಷ್ಟ್ರೀಯ ಹೆದ್ದಾರಿಗಳು :

 • ಪ್ರಮುಖ ನಗರಗಳು, ರಾಜ್ಯಗಳ ರಾಜದಾನಿಗಳು ಹಾಗೂ ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿಗಳು ಎನ್ನುವರು.
 • ಇವು ಗುಣಮಟ್ಟದ ಮತ್ತು ಅಗಲವಾದ ರಸ್ತೆಗಳಾಗಿದ್ದು, ದ್ವಿಮುಖ, ನಾಲ್ಕು ಮುಖ ಮತ್ತು ಆರು ಪಥಗಳ ರಸ್ತೆಗಳನ್ನು ಹೊಂದಿರುತ್ತವೆ.
 • ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ಅಧೀನಲ್ಲಿದ್ದು, ಇವುಗಳ ನಿರ್ವಹಣಾ ಕಾರ್ಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದೆ.
 • ರಾಷ್ಟ್ರೀಯ ಹೆದ್ದಾರಿಗಳಿಲ್ಲದ ಜಿಲ್ಲೆಗಳು. ರಾಯಚೂರು ಮತ್ತು ಕೊಡಗು.

ರಾಜ್ಯ ಹೆದ್ದಾರಿಗಳು :

 • ರಾಜಧಾನಿ ಬೆಂಗಳೂರಿನಿಂದ ಜಿಲ್ಲಾ ಕೇಂದ್ರ ಪ್ರಮುಖ ಪಟ್ಟಣಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳೊಡನೆ ಸಂಪರ್ಕಿಸುವ ರಸ್ತೆಗಳಿಗೆ ರಾಜ್ಯ ಹೆದ್ದಾರಿ ಎನ್ನುವರು.
 • ಇವುಗಳ ನಿರ್ವಹಣೆಯು ರಾಜ್ಯ ಸರ್ಕಾರದ್ದಾಗಿರುತ್ತದೆ.
 • ಕರ್ನಾಟಕದಲ್ಲಿ 19,578 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳಿವೆ.
 • ಬೆಳಗಾವಿ ಜಿಲ್ಲೆ ಅತಿ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆಯಾಗಿದೆ.
 • ಬೆಂಗಳೂರು ಅತಿ ಕಡಿಮೆ ಉದ್ದದ ರಾಜ್ಯ ಹೆದ್ದಾರಿಯುಳ್ಳ ಜಿಲ್ಲೆಯಾಗಿದೆ.

ಜಿಲ್ಲಾ ರಸ್ತೆಗಳು :

Join WhatsApp Join Telegram
 • ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲ್ಲೂಕ್‌ ಕೇಂದ್ರಗಳಿಗೆ, ಪ್ರಮುಖ ಪಟ್ಟಣ , ಗ್ರಾಮಗಳು, ರೈಲು ಮಾರ್ಗ ಹಾಗೂ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜಿಲ್ಲಾ ರಸ್ತೆ ಎಂದು ಕರೆಯುವರು.
 • ಇವುಗಳ ನಿರ್ಮಾಣ, ಅಭಿವೃದ್ದಿ, ಮೇಲ್ವಿಚಾರಣೆಯು ಜಿಲ್ಲಾ ಪಂಚಾಯತದ್ದಾಗಿರುತ್ತದೆ.
 • ರಾಜ್ಯದಲ್ಲಿ ಒಟ್ಟು 49,909 ಕಿ.ಮೀ. ಉದ್ದ ಜಿಲ್ಲಾ ರಸ್ತೆಗಳಿವೆ.
 • ತುಮಕೂರು ಜಿಲ್ಲೆ ಹೆಚ್ಚು ಜಿಲ್ಲಾ ರಸ್ತೆಗಳನ್ನು ಒಳಗೊಂಡಿದೆ.

ಗ್ರಾಮೀಣ ರಸ್ತೆಗಳು :

 • ತಾಲ್ಲುಕು ಕೇಂದ್ರದಿಂದ ಪ್ರತಿಯೊಂದು ಗ್ರಾಮಗಳಿಗೂ, ಎಲ್ಲಾ ಜಿಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ಗ್ರಾಮೀನ ರಸ್ತೆಗಳು ಎನ್ನುವರು.
 • ಇವುಗಳ ನಿರ್ಮಾಣ ನಿರ್ವಹಣೆ-ತಾಲ್ಲುಕು ಪಂಚಾಯತಿ ಮತ್ತು ಗ್ರಾಮ ಪಂಚಾಯಿತಿಗರ ಸೇರಿದ್ದು.
 • ಕಲರ್ನಾಟಕದಲ್ಲಿ ಒಟ್ಟು 1,77,542 ಕಿ.ಮೀ ಉದ್ದ ರಸ್ತೆಗಳಿವೆ.

ರೈಲು ಸಾರಿಗೆ :

 • 1859 ರಲ್ಲಿ ಕರ್ನಾಟಕದಲ್ಲಿ ಮೊದಲು ರೈಲು ಸಂಚಾರವು ಬೆಂಗಳೂರು ಮತ್ತು ಜೋಲಾರ್‌ ಪೇಠೆ ನಗರಗಳ ಮಧ್ಯೆ ಸಂಚರಿಸಿತು. ಆರಂಭಿಸಿದವರು ಮಾರ್ಕ್‌ ಕಬ್ಬನ್.‌
 • 1956 ರ ವೇಳೆಗೆ ಒಟ್ಟು 2595 ಕಿ.ಮೀ. ಗಳಿದ್ದು ಅದು ದಕ್ಷಿಣ ರೇಲ್ವೆ ವಲಯಕ್ಕೆ ಸೇರಿತ್ತು. ಈಗ ನೈರುತ್ಯ ರೈಲುವಲಯವು ಅಸ್ತತ್ವಕ್ಕೆ ಬಂದಿತು.
 • ಕರ್ನಾಟಕದಲ್ಲಿ ಪ್ರಸ್ತುತ ಒಟ್ಟು 3244ಕಿ.ಮೀ. ಉದ್ದದ ರೈಲು ಮಾರ್ಗಗಳಿವೆ.
 • ಕರ್ನಾಟಕದ ಜಿಲ್ಲೆಗಳಲ್ಲಿ ಸರಾಸರಿ ಉದ್ದ 150-200 ಕಿ.ಮೀ. ಹೊಂದಿದ ಜಿಲ್ಲೆಗಳೆಂದರೆ ಬೆಂಗಳೂರು, ಬಳ್ಳಾರಿ. ಹಾಸನ, ಬೆಳಗಾವಿ.

ಕೊಂಕಣ ರೇಲ್ಚೆ :

 • ಇದು ಪಶ್ಚಿಮ ಕರಾವಳಿಯು ಮಹತ್ವ ಪೂರ್ಣವಾದ ರೈಲು ಮಾರ್ಗವಾಗಿದೆ.
 • ಇದು ಮಂಗಳೂರು ಮತ್ತು ಮುಂಬೈನ ನಡುವಿನ ಪ್ರಯಾಣದ ಅವಧಿ 41 ಗಂಟೆಗಳಿಂದ 18 ಗಂಟೆಗಳಿಗೆ ಕಡಿಮೆ ಮಾಡಿದೆ.
 • ಕೊಂಕಣ ರೇಲ್ವೆ ಮಾರ್ಗವು ಅತ್ಯಂತ ಸುಂದರವಾದ ಪ್ರಾಕೃತಿಕ ದೃಶ್ಯಾವಳಿಯಿಂದ ಕೂಡಿದೆ.

ಮೆಟ್ರೊ ರೈಲು :

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ನಿವಾರಿಸಲು ನಮ್ಮ ಮೆಟ್ರೋ ನಗರ ರೈಲು ಯೋಜನೆಯನ್ನು ಅಕ್ಟೋಬರ್‌ 20, 2011ರಲ್ಲಿ ಜಾರಿಗೆ ತಂದು ಮೊದಲ ಬಾರಿಗೆ ಬೆಂಗಳೂರು ನಗರದ ಬೈಯಪ್ಪನ ಹಳ್ಳಿಯಿಂದ ಎಂ.ಜಿ.ರಸ್ತೆಯವರೆಗೆ ಕಾರ್ಯಾರಂಭವಾಯಿತು.

ವಾಯು ಸಾರಿಗೆ :

 • ವಾಯು ಸಾರಿಗೆ ಅತೀ ವೇಗ ಚಾಲಿತ ಸಾರಿಗೆ ಮಾಧ್ಯಮವಾಗಿದ್ದು ಅತ್ಯಂತ ದುಬಾರಿಯಾದ ಸಾರಿಗೆಯಾಗಿದ್ದು, ಎಲ್ಲಾ ವರ್ಗದ ಜನರಿಗೆ ಲಭ್ಯವಾಗದು.
 • ಕರ್ನಾಟಕದಲ್ಲಿ ಮೊದಲು ವಿಮಾನ ಯಾನವನ್ನು 1946 ರಲ್ಲಿ ಬೆಂಗಳೂರಿನಿಂದ ಹೈದರಾಬಾದ್‌ ನಡುವೆ ಡೆಕ್ಕನ್‌ ಏರ್ವೇಸ್‌ ಕಂಪನಿಯು ಪ್ರಾರಂಭಿಸಿತು.
 • ಭಾರತೀಯ ವಿಮಾನ ಸಂಚಾರವು 1953 ರಲ್ಲಿ ರಾಷ್ಟ್ರೀಕರಣಗೊಂಡು ಇಂಡಿಯನ್‌ ಏರ್‌ ಲೈನ್ಸ್‌ ಸಂಸ್ಥೆ ಆರಂಭಗೊಂಡ ಮೇಲೆ ಬೆಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ಕೇಂದ್ರಗಳಿಗೆ ವಿಮಾನಯಾನದ ಸೌಲಭ್ಯವನ್ನು ಕಲ್ಪಿಸಲಾಯಿತು.
 • ರಾಜ್ಯದ ರಾಜಧಾನಿಯಾದ ಬೆಂಗಳೂರು 1996 ರಲ್ಲಿ ಅಂತರಾಷ್ಟ್ರೀಯ ವಿಮಾನನಿಲ್ದಾಣವೆಂದು ಘೋಷಿಸಲ್ಪಟ್ಟಿತ್ತು.
 • ಪ್ರಸ್ತುತ HAL ವಿಮಾನನಿಲ್ದಾಣವನ್ನು ಪೈಲಟ್ಗಳ ತರಬೇತಿಗೆ ಬಳಸಲಾಗುತ್ತಿದೆ.
 • ಹೊಸದಾಗಿ ನಿರ್ಮಿಸಿದ ದೇವನಹಳ್ಳಿ ವಿಮಾನ ನಿಲ್ದಾಣವು ಭಾರತದ ಮೊದಲ ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದೆ. ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿದ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. ಇದನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯುವರು.

ಜಲಸಾರಿಗೆ :

 • ಕರ್ನಾಟಕದಲ್ಲಿ ಒಳನಾಡಿನ ಮತ್ತು ಸಮುದ್ರ ಜಲ ಸಂಚಾರಗಳೆರಡೂ ರೂಢಿಯಲ್ಲಿವೆ. ಅವುಗಳ ಲಭ್ಯತೆ ಬಹು ಸೀಮಿತವಾಗಿವೆ.
 • ಒಳನಾಡ ಜಲಸಾರಿಗೆಯು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುತ್ತವೆ.
 • ಕರಾವಳಿ ಜಿಲ್ಲೆಗಳಲ್ಲಿ ಹರಿಯುವ ಗಂಗಾವಳಿ, ಕಾಳಿ, ಶರಾವತಿ, ಹಾಲಾಡಿ ಚಕ್ರ, ಕೊಲ್ಲೂರು, ಉದ್ಯಾವರ, ನೇತ್ರಾವತಿ ನದಿಗಳು ಒಳನಾಡಿನ ಮುಖ್ಯ ಜಲಸಾರಿಗೆಯನ್ನು ಪೂರೈಸುತ್ತವೆ.

FAQ :

ಕರ್ನಾಟಕದ ರಸ್ತೆಗಳ ವಿಧಗಳನ್ನು ತಿಳಿಸಿ?

ರಾಷ್ಟ್ರೀಯ ಹೆದ್ದಾರಿಗಳು
ರಾಜ್ಯ ಹೆದ್ದಾರಿಗಳು
ಜಿಲ್ಲಾ ಹೆದ್ದಾರಿಗಳು
ಗ್ರಾಮೀಣ ಹೆದ್ದಾರಿಗಳು

ಕರ್ನಾಟಕದಲ್ಲಿ ಮೊದಲು ರೈಲು ಸಂಚಾರವು ಎಲಲಿ ಸಂಚರಿಸಿತು?

ಬೆಂಗಳೂರು ಮತ್ತು ಜೋಲಾರ್‌ ಪೇಠೆ ನಗರಗಳ ಮಧ್ಯೆ ಸಂಚರಿಸಿತು.

ಇತರೆ ವಿಷಯಗಳು :

ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ

ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.