ಸೂಕ್ಮಾಣುಜೀವಿಗಳ ಬಗ್ಗೆ ಮಾಹಿತಿ | Information about microorganisms in Kannada

Join Telegram Group Join Now
WhatsApp Group Join Now

ಸೂಕ್ಮಾಣುಜೀವಿಗಳ ಬಗ್ಗೆ ಮಾಹಿತಿ Information about microorganisms Sukshmajivigala bagge Mahithi in Kannada

ಸೂಕ್ಮಾಣುಜೀವಿಗಳ ಬಗ್ಗೆ ಮಾಹಿತಿ

Information about microorganisms in Kannada
ಸೂಕ್ಮಾಣುಜೀವಿಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸೂಕ್ಮಾಣುಜೀವಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸೂಕ್ಮಾಣುಜೀವಿಗಳು :

  • ಬರಿಗಣ್ಣಿಗೆ ಕಾಣಲಾರದ ಜೀವಿಗಳನ್ನು ಸೂಕ್ಷ್ಮಾಣು ಜೀವಿಗಳು ಎನ್ನುವರು.
  • ಸೂಕ್ಷ್ಮಾಣುಗಳ ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು ಮೈಕ್ರೋಬಯೋಲಜಿ ಎನ್ನುವರು.
  • ಸೂಕ್ಷ್ಮಾಣು ಜೀವಿಗಳ ಪಿತಾಮಹಾ – ಲೆವನ್‌ ಹುಕ್‌
  • ಸೂಕ್ಷ್ಮಾಣುಜೀವಿಗಳ ಗಾತ್ರವನ್ನು ಅಳೆಯುವ ಮಾನ – ಮೈಕ್ರಾನ್‌
  • ಒಂದು ಮೈಕ್ರಾನ್‌ ಎಂದರೆ – 1/1000 mm
  • ಸೂಕ್ಷ್ಮಾಣುಜೀವಿಗಳನ್ನು ಗಾತ್ರ ಮತ್ತು ಆಕಾರಗಳ ಆಧಾರದ ಮೇಲೆ 5 ಗುಂಪುಗಳಾಗಿ ವಿಂಗಡಿಸಲಾಗಿದೆ.
  • ವೈರಸ್‌
  • ಬ್ಯಾಕ್ಟೀರಿಯಾ
  • ಶಿಲೀಂಧ್ರ
  • ಶೈವಲ
  • ಆದಿ ಜೀವಿಗಳು

ವೈರಸ್‌ :

  • ವೈರಸ್‌ ಪದವನ್ನು ಕೊಟ್ಟವರು – ಲೂಯಿಪಾಶ್ಚರ್‌
  • ವೈರಸ್ ನ್ನು ಕಂಡುಹಿಡಿದವರು – ಡಿಮಿಟ್ರಿ ಐವಾನೊವಾಸ್ಕಿ
  • ವೈರಾ ಎಂದರೆ – ವಿಷ
  • ವೈರಸ್ ಗಳ ಕುರಿತು ಅಧ್ಯಯನ – ವೈರಾಲಜಿ
  • ವೈರಸ್‌ ಗಳ ಗಾತ್ರ 0.015 ರಿಂದ 0.2 ಮೈಕ್ರಾನ್‌
  • ಇವು ಸೂಕ್ಷ್ಮಾಣು ಜೀವಿಗಳಲ್ಲಿ ಚಿಕ್ಕದಾದ ಸೂಕ್ಷ್ಮಾಣು ಜೀವಿಗಳಾಗಿವೆ.
  • ವೈರಸ್‌ ಗಳು ನ್ಯೂಕ್ಲಿಕ್‌ ಆಸಿಡ್‌ ಮತ್ತು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದೆ.
  • ವೈರಸ್ ಗಳು ಜೀವಕೋಶವನ್ನು ಹೊಂದಿರುವುದಿಲ್ಲ.
  • ಇವುಗಳಲ್ಲಿ ಅನುವಂಶೀಯ ವಸ್ತು DNA ಅಥವಾ RNA ಕಂಡುಬರುತ್ತದೆ.
  • ಇವು ನಿರ್ಜೀವಿಯ ಕೊಂಡಿಯಾಗಿರುವುದರಿಂದ ಯಾವುದೇ ಸಾಮ್ರಾಜ್ಯಕ್ಕೆ ಸೇರಿಸಿಲ್ಲ.
  • ಇವುಗಳನ್ನು ಎಲೆಕ್ಟ್ರಾನ್‌ ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಬಹುದು.
  • ಇವು ಭಯಾನಕ ಮತ್ತು ಆಕ್ರಮಣಕಾರಿ ಜೀವಿಗಳಾಗಿದ್ದು ಮಾನವನಿಗೆ ಮತ್ತು ಅನೇಕ ಜೀವಿಗಳಿಗೆ ಹಾನಿಕಾರಕ ರೋಗಗಳನ್ನು ಉಂಟುಮಾಡುತ್ತವೆ.

ವೈರಸ್ ಗಳಲ್ಲಿ 3 ಪ್ರಕಾರಗಳು :

  • ಸಸ್ಯ ವೈರಸ್‌
  • ಬ್ಯಾಕ್ಟೀರಿಯೋಫೇಜ್‌
  • ಪ್ರಾಣಿ ವೈರಸ್‌

ಸಸ್ಯ ವೈರಸ್‌ :

  • ಸಸ್ಯಗಳಿಗೆ ರೋಗವನ್ನು ಉಂಟು ಮಾಡುವ ವೈರಸ್ಗಳಾಗಿವೆ. ಉದಾಹರಣೆಗೆ ಟೊಬ್ಯಾಕೋ ಮೊಸ್ಯಾಕೋ ವೈರಸ್‌, ಕಾಲಿಫ್ಲವರ್‌ ಮೊಸ್ಯಾಕೋ ವೈರಸ್‌.
  • ಟೊಬ್ಯಾಕೋ ಮೊಸ್ಯಾಕೋ ವೈರಸ್‌ ಹೊಗೆಸೊಪ್ಪಿಗೆ ಬರುತ್ತದೆ.

ಬ್ಯಾಕ್ಟೀರಿಯಾಫೇಜ್‌ :

ಬ್ಯಾಕ್ಟೀರಿಯಾಗಳಿಗೆ ಸೋಂಕು ಉಂಡುಮಾಡುವ ವೈರಸ್ ಗಳಿಗೆ ಬ್ಯಾಕ್ಟೀರಿಯಾಫೇಜ್‌ ಎನ್ನುವರು.

ಪ್ರಾಣಿ ವೈರಸ್‌ :

Join WhatsApp Join Telegram

ಪ್ರಾಣಿಗಳಿಗೆ ರೋಗ ಉಂಟುಮಾಡುವ ವೈರಸ್ ಗಳಾಗಿವೆ

ಬ್ಯಾಕ್ಟೀರಿಯಾ :

  • ಇವು ಕೋಶ ಕೇಂದ್ರವನ್ನು ಹೊಂದಿರುತ್ತವೆ.
  • ಇವುಗಳ ಗಾತ್ರ 0.2 ರಿಂದ 1.0 ಮೈಕ್ರಾನ್‌
  • ಇವು ಕಶಾಂಗದ ಮೂಲಕ ಚಲಿಸುತ್ತವೆ.
  • ವಿದಳನದ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.
  • ಇವುಗಳ ಬೆಳವಣಿಗೆಗೆ 30 ರಿಂದ 35 ಡಿಗ್ರಿ ಉಷ್ಣಾಂಶ ಬೇಕು.
  • ಬ್ಯಾಕ್ಟೀರಿಯಾ ಕಂಡುಹಿಡಿದವರು – ಲೆವನ್‌ ಹುಕ್‌
  • ಬ್ಯಾಕ್ಟೀರಿಯಾ ಅಧ್ಯಯನ – ಬ್ಯಾಕ್ಟೀರಿಯಾಲಾಜಿ
  • ಬ್ಯಾಕ್ಟೀರಿಯಾಗಳು ಮೊನೆರಾ ಸಾಮ್ರಾಜ್ಯಕ್ಕೆ ಸೇರಿವೆ.
  • ಬ್ಯಾಕ್ಟೀರಿಯಾಗಳ ಪಿತಾಮಹಾ – ರಾಬರ್ಟ್ ಕೋಚ್‌
  • ಇದರ ದೇಹವು ಕೋಶಭಿತ್ತಿ ಮತ್ತು ಕೋಶಪೊರೆ ಎಂಬ ಹೊದಿಕೆಯಿಂದ ಕೂಡಿದೆ.
  • ಇವು ರೈಬೋಸೋಮಗಳನ್ನು ಹೊಂದಿರುತ್ತವೆ.
  • ಇದರ ಕೋಶದ ಅನುವಂಶೀಯ ವಸ್ತು – ಡಿ.ಎನ್.ಎ
  • ಬ್ಯಾಕ್ಟೀರಿಯಾಗಳು ಹಾಲು ಮೊಸರಾಗಲು ಟೀ ಎಲೆಯನ್ನು ಹದಗೊಳಿಸಲು, ವಿನೆಗರ್‌ ಉತ್ಪಾದಿಸಲು, ಚರ್ಮ ಹದಗೊಳಿಸಲು, ಜೀವಸತ್ವಗಳನ್ನು ಉತ್ಪಾದಿಸಲು ಬೇಕಾಗುತ್ತವೆ.
  • ಉಪಯುಕ್ತ ಬ್ಯಾಕ್ಟೀರಿಯಾಗಳನ್ನು – ಲ್ಯಾಕ್ಟೋಬ್ಯಾಸಿಲಸ್‌, ಎಶ್ಚರಿಯಾ ಕೊಲೈ, ರೈಜೋಬಿಯಮ್.‌
  • ಇವು ಕೊಳೆಯುತ್ತಿರುವ ವಸ್ತುಗಳನ್ನು ಬೇರ್ಪಡಿಸುತ್ತವೆ.
  • ಇವು ಸತ್ತ ಮತ್ತು ಕೊಳೆಯುತ್ತಿರುವ ವಸ್ತುಗಳಿಂದ ಆಹಾರವನ್ನು ಪಡೆಯುತ್ತವೆ, ಆದ್ದರಿಂದ ಇವುಗಳನ್ನು ಕೊಳೆತಿನಿಗಳು ಎನ್ನುವರು.

ವಿವಿಧ ಆಕಾರದ ಬ್ಯಾಕ್ಟೀರಿಯಾಗಳು :

  • ಬ್ಯಾಸಿಲಸ್‌ – ದಂಡಾಕಾರದಲ್ಲಿದೆ
  • ವಿಬ್ರಿಯೋ – ಅರ್ಧಚಂದ್ರಾಕೃತಿಯಲ್ಲಿದೆ.
  • ಸ್ಪಿರುಲೈ – ಸುರುಳಿಯಾಕಾರದಲ್ಲಿದೆ
  • ಕಾಕೈ – ದುಂಡಾಕಾರದಲ್ಲಿದೆ

ಶಿಲೀಂದ್ರಗಳು :

  • ಇವು ಮೈಕೋಟಾ ಸಾಮ್ರಾಜ್ಯಕ್ಕೆ ಸೇರುತ್ತವೆ.
  • ಇವು ಯೂಕ್ಯಾರಿಯೋಟ್ಸ್‌ ಜೀವಕೋಶವನ್ನು ಹೊಂದಿವೆ.
  • ಶಿಲೀಂಧ್ರ ರೋಗಗಳಿಗೆ ಮೈಕ್ರೋಸಿಸ್‌ ಎನ್ನುವರು.
  • ಶಿಲೀಂಧ್ರಗಳ ಗಾತ್ರ 2 ರಿಂದ 10 ಮೈಕ್ರಾನ್‌
  • ಶಿಲೀಂಧ್ರಗಳಲ್ಲಿ ಪತ್ರಹರಿತ್ತು ಇರುವುದಿಲ್ಲ.
  • ಶಿಲೀಂಧ್ರಗಳಲ್ಲಿ 3 ಪ್ರಕಾರ ಅವು ಯೀಸ್ಟ್‌, ಬೂಸ್ಟ್‌, ಅಣಬೆ
  • ಯೀಸ್ಟ್‌ ಒಂದು ಏಕಕೋಶೀಯ ಜೀವಿಯಾಗಿದೆ.
  • ಯೀಸ್ಟ್‌ ಆಮ್ಲಜನಕ ಸಹಿತ ಮತ್ತು ಆಮ್ಲಜನಿಕ ರಹಿತ ಉಸಿರಾಟ ಮಾಡುತ್ತದೆ.
  • ಬೂಸ್ಟ್‌ ಮತ್ತು ಅಣಬೆ ಬಹುಕೋಶೀಯ ಶಿಲೀಂಧ್ರಗಳಾಗಿವೆ.
  • ಪೆನ್ಸಿಲಿನ್‌ ನೊಟೇಟಂ ಶಿಲೀಂಂಧ್ರದಿಂದ ಔಷಧವನ್ನು ತಯಾರಿಸುತ್ತಾರೆ.

ಶಿಲೀಂಧ್ರಗಳಿಂದ ಮಾನವನಿಗೆ ಬರುವ ರೋಗಗಳು :

  • ಅಥ್ಲೆಟಿಕ್‌
  • ರಿಂಗ್‌ ವರ್ಮ್‌
  • ಡೋಬಿಈಚ್

ಶೈವಲಗಳು :

  • ಇವು ಪತ್ರಹರಿತ್ತನ್ನು ಒಳಗೊಂಡು ಹಸಿರಾಗಿರುತ್ತವೆ.
  • ಇವುಗಳ ಗಾತ್ರ 1.0 ಮೈಕ್ರಾನ್‌ ನಿಂದ ಹಲವು ಮೀಟರ್‌ ಉದ್ದ ಹೊಂದಿರುತ್ತದೆ.
  • ಕಂದು ಶೈವಲಗಳಲ್ಲಿ ಕ್ಸಾಂಥೋಲಿನ್‌ ವರ್ಣಕವಿರುತ್ತದೆ.
  • ಹಸಿರು ಶೈವಲಗಳಲ್ಲಿ ಕ್ಲೋರೋಫಿಲ್‌ ವರ್ಣಕವಿರುತ್ತದೆ.
  • ಅಜೋಲಾ ಎಂಬ ಶೈವಲವನ್ನು ದನಕರುಗಳ ಆಹಾರದಲ್ಲಿ ಬಳಸುತ್ತಾರೆ.
  • ಶೈವಲಗಳನ್ನು ವಾಣಿಜ್ಯೋತ್ಪನ್ನಗಳಲ್ಲಿ ಉಪಯೋಗಿಸುತ್ತಾರೆ.
  • ನೀಲಿ ಹಸಿರು ಶೈವಲಗಳನ್ನು ಸಾರಜನಕ ಸ್ಥಿರೀಕರಣದಲ್ಲಿ ಬಳಸುತ್ತಾರೆ.
  • ಇವು ಜಲಚರ ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತವೆ.

ಆದಿ ಜೀವಿಗಳು/ ಏಕಕೋಶೀಯ ಜೀವಿಗಳು :

  • ಇವುಗಳ ದೇಹದಲ್ಲಿರುವ ಒಂದೇ ಕೋಶವು ಎಲ್ಲಾ ಜೈವಿಕ ಚಟುವಟಿಕೆಗಳನ್ನು ನಡೆಸುತ್ತದೆ.
  • ಏಕಕೋಶ ಜೀವಿಗಳು, ಮಿಥ್ಯಪಾದ, ಲೋಮಾಂಗ ಕಶಾಂಗಗಳಿಂದ ಚಲಿಸುತ್ತವೆ.

FAQ :

ಸೂಕ್ಮಾಣುಜೀವಿಗಳು ಎಂದರೇನು?

ಬರಿಗಣ್ಣಿಗೆ ಕಾಣಲಾರದ ಜೀವಿಗಳನ್ನು ಸೂಕ್ಷ್ಮಾಣು ಜೀವಿಗಳು ಎನ್ನುವರು.

ಶಿಲೀಂಧ್ರಗಳಿಂದ ಮಾನವನಿಗೆ ಬರುವ ರೋಗಗಳನ್ನು ತಿಳಿಸಿ?

ಅಥ್ಲೆಟಿಕ್‌
ರಿಂಗ್‌ ವರ್ಮ್‌
ಡೋಬಿಈಚ್

ಇತರೆ ವಿಷಯಗಳು :

ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ

ರಕ್ತದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.