ಕರ್ನಾಟಕದ ಜನಸಂಖ್ಯೆ ಬಗ್ಗೆ ಮಾಹಿತಿ Information about the population of Karnataka Karnatakada Janasankyeya bagge Mahithi in Kannada
ಕರ್ನಾಟಕದ ಜನಸಂಖ್ಯೆ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ ಜನಸಂಖ್ಯೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕರ್ನಾಟಕದ ಜನಸಂಖ್ಯೆ :
ಒಂದು ನಿರ್ದಿಷ್ಟವಾದ ಭೂ ಪ್ರದೇಶದಲ್ಲಿ ವಾಸಿಸುವ ಜನರ ಒಟ್ಟು ಸಮೂಹವನ್ನು ಜನಸಂಖ್ಯೆ ಎನ್ನುವರು. ಕರ್ನಾಟಕ ವಿಸ್ತೀರ್ಣದಲ್ಲಿ 8ನೇ ಸ್ಥಾನ ಹೊಂದಿದೆ. ಮತ್ತು ಜನಸಂಖ್ಯಾ ಪ್ರಮಾಣ ಗಾತ್ರದಲ್ಲಿ 9ನೇಸ್ಥಾನದಲ್ಲಿದೆ. 2011 ಜನಗಣತಿಯ ಪ್ರಕಾರ ಕರ್ನಾಟಕ 6,11,30,704 ಜನರನ್ನು ಹೊಂದಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆಗಳು ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು, ಕಲ್ಬುರ್ಗಿ, ಬಳ್ಳಾರಿ. ಕಡಿಮೆ ಜನಸಂಖ್ಯೆ ಹೊಂದಿರುವ ಜಿಲ್ಲೆ ಕೊಡಗು. 2011 ರ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆ ಪ್ರಮಾಣ 15.67%. ಪ್ರತಿ ಚದರ ಕಿ.ಮೀ. ಕ್ಷೇತ್ರದಲ್ಲಿ ವಾಸಿಸುವ ಸರಾಸರಿ ಜನಸಂಖ್ಯೆಯನ್ನು ಜನಸಾಂದ್ರತೆ ಎನ್ನುವರು. 2001ರ ಜನಗಣತಿ ಪ್ರಕಾರ ಕರ್ನಾಟಕದ ಜನಸಾಂದ್ರತೆ ಪ್ರತಿ ಚ.ಕಿ.ಮೀ. 275 ಜನರು. 2011ರ ಜನಗಣತಿ ಪ್ರಕಾರ ಕರ್ನಾಟಕದ ಜನಸಾಂದ್ರತೆ ಪ್ರತಿ ಚ.ಕಿ.ಮೀ. 319 ಜನರು. ಅಧಿಕ ಜನಸಾಂದ್ರತೆ ಹೊಂದಿರುವ ಜಿಲ್ಲೆ ಬೆಂಗಳೂರು ನಗರ. ಕೊಡಗು ಜಿಲ್ಲೆ ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದ ಜಿಲ್ಲೆಯಾಗಿದೆ.
ಗ್ರಾಮೀಣ ಮತ್ತು ನಗರ ಜನಸಂಖ್ಯೆ :
- ಕರ್ನಾಟಕವು ಗ್ರಾಮ ಪ್ರಧಾನವಾಗಿದ್ದು 29.340 ಹಳ್ಳಿಗಳನ್ನೊಳಗೊಂಡಿದೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.61.4% ಗ್ರಾಮೀಣ ಹಾಗೂ ಶೇ.38.6% ಭಾಗವು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
- ಬೆಂಗಳೂರು ನಗರ ಜಿಲ್ಲೆ ಅಧಿಕ ಪ್ರಮಾಣದ ನಗರ ಜನಸಂಖ್ಯೆಯನ್ನು ಹೊಂದಿದೆ.
- ಕೊಡಗು ಜಿಲ್ಲೆ ಅತೀ ಕಡಿಮೆ ನಗರ ಜನಸಂಖ್ಯೆಯುಳ್ಳ ಜಿಲ್ಲೆಯಾಗಿದೆ.
ಲಿಂಗಾನುಪಾತ :
- ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆಯನ್ನು ಲಿಂಗಾನುಪಾತ ಎನ್ನುವರು.
- 2011 ರಲ್ಲಿನ ಕರ್ನಾಟಕದ ಸರಾಸರಿ ಲಿಂಗಾನುಪಾತವು 968 ಇತ್ತು.
- 2001 ರಲ್ಲಿನ ಕರ್ನಾಟಕದ ಸರಾಸರಿ ಲಿಂಗಾನುಪಾತವು 965 ಇತ್ತು.
- ರಾಜ್ಯದಲ್ಲೇ ಅತೀ ಹೆಚ್ಚು ಸ್ತ್ರೀಯರ ಪ್ರಮಾಣವುಳ್ಳ ಜಿಲ್ಲೆ ಉಡುಪಿ ಜಿಲ್ಲೆ, ಕೊಡಗು, ದಕ್ಷಿಣ ಕನ್ನಡ.
- ಬೆಂಗಳೂರು ನಗರ ಜಿಲ್ಲೆ ಪ್ರತಿ ಸಾವಿರ ಪುರುಷರಿಗೆ 908 ಮಹಿಳೆಯರಿದ್ದು, ರಾಜ್ಯದ ಕಡೆಯ ಸ್ಥಾನದಲ್ಲಿದೆ.
ವಯೋಮಾನ ರಚನೆ :
2011 ರ ಜನಗಣತಿಯ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ 15 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಶೇ. 29.7 ಭಾಗದಷ್ಟಿದ್ದಾರೆ. 60 ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವೃದ್ದರ ಸಂಖ್ಯೆ ಶೇ. 5.5 ರಷ್ಟು ಮತ್ತು ದುಡಿಯುವ ವರ್ಗದ ಪ್ರಮಾಣ ಶೇ. 64.9 ಭಾಗದಷ್ಟಿದೆ.
ಸಾಕ್ಷರತೆಯ ಪ್ರಮಾಣ :
- ಓದು, ಬರಹದ ತಿಳಿವಳಿಕೆಯುಳ್ಳ ವ್ಯಕ್ತಿಯನ್ನು ಸಾಕ್ಷರ ಅಥವಾ ಅಕ್ಷರಸ್ಥನೆಂದು ಕರೆಯಲಾಗುತ್ತದೆ.
- ರಾಜ್ಯದ ಸರಾಸರಿ ಸಾಕ್ಷರತೆಯ ಪ್ರಮಾಣ 2011 ರಲ್ಲಿ ಶೇ. 75.6% ರಷ್ಟು.
- ಭಾರತದ ಸರಾಸರಿ ಸಾಕ್ಷರತೆಯ ಪ್ರಮಾಣ 2001 ರಲ್ಲಿ ಶೇ. 74% ರಷ್ಟಿದೆ.
- ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಜಿಲ್ಲೆ ದಕ್ಷಿಣ ಕನ್ನಡ.
- ಅತೀ ಕಡಿಮೆ ಸಾಕ್ಷರತೆಯುಳ್ಳ ಜಿಲ್ಲೆ ಯಾದಗಿರಿ.
- ಕರ್ನಾಟಕದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಶೇ. 82.9% ರಷ್ಟು.
- ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ. 68.2% ರಷ್ಟು.
FAQ :
ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ ಯಾವುದು?
ಬೆಂಗಳೂರು
ಅತೀ ಹೆಚ್ಚು ಸಾಕ್ಷರತೆಯನ್ನು ಹೊಂದಿರುವ ಜಿಲ್ಲೆ ಯಾವುದು?
ದಕ್ಷಿಣ ಕನ್ನಡ
ಇತರೆ ವಿಷಯಗಳು :
ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ
ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ