ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information about mineral resources of Karnataka in Kannada

Join Telegram Group Join Now
WhatsApp Group Join Now

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ Information about mineral resources of Karnataka Karnatakada Kanija Sampanmulagala bagge Mahithi in Kannada

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

Information about mineral resources of Karnataka in Kannada
ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕದ ಖನಿಜ ಸಂಪನ್ಮೂಲಗಳು :

ಒಂದು ದೇಶ, ರಾಜ್ಯ ಅಥವಾ ಪ್ರದೇಶವು ಆರ್ಥಿಕವಾಗಿ ಮುಂದುವೆರಯಲು ಅಲ್ಲಿ ಸಿಗುವ ಅಪಾರವಾದ ಖನಿಜ ಸಂಪನ್ಮೂಲಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕರ್ನಾಟಕ ರಾಜ್ಯವು ವಿವಿಧ ರೀತಿಯ ಖನಿಜ ಸಂಪತ್ತನ್ನು ಹೊಂದಿದೆ. ಅವುಗಳಲ್ಲಿ ಕಬ್ಬಿಣದ ಅದಿರು, ಚಿನ್ನ, ಮ್ಯಾಂಗನೀಸ್‌, ಸುಣ್ಣದ ಕಲ್ಲು, ತಾಮ್ರ, ಬಾಕ್ಸೈಟ್‌, ಕ್ರೋಮೈಟ್‌, ಕಲ್ನಾರು, ಅಬ್ರಕ ಮತ್ತು ಗ್ರಾನೈಟ್‌ ಪ್ರಮುಖವಾದವು.

ಕಬ್ಬಿಣದ ಅದಿರು :

 • ಇದು ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಕಚ್ಚಾವಸ್ತುವಾಗಿದೆ.
 • ಕರ್ನಾಟಕ ಉತ್ತಮ ದರ್ಜೆಯ ಮ್ಯಾಗ್ನಟೈಟ್‌ ಮತ್ತು ಹೆಮಟೈಟ್‌ ವರ್ಗದ ಅಪಾರವಾದ ಕಬ್ಬಿಣದ ಅದಿರಿನ ನಿಕ್ಷೇಪ ಹೊಂದಿದೆ.
 • ಭಾರತದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು 2ನೇ ಸ್ಥಾನ ಹೊಂದಿದೆ. ರಾಜ್ಯದಲ್ಲಿ 75 ಕಬ್ಬಿಣದ ಅದಿರಿನ ಗಣಿಗಳಿವೆ.
 • ನಮ್ಮ ರಾಜ್ಯ ಉತ್ಪಾದಿಸುವ ಕಬ್ಬಿಣದ ಅದಿರಿನಲ್ಲಿ ಶ್ರೇಷ್ಠ ದರ್ಜೆಯ ಮ್ಯಾಗ್ನಟೈಟ್‌ ನ ಪಾಲು ಶೇ.63 ಭಾಗದಷ್ಟಿದೆ. ಉಳಿದದ್ದು ಹೆಮಾಟೈಟ್‌ ದರ್ಜೆಯದಾಗಿದೆ.
 • ಕರ್ನಾಟಕದ ಬಳ್ಳಾರಿಯು ಕಬ್ಬಿಣ ನಿಕ್ಷೇಪದಲ್ಲಿ ಮೊದಲನೆ ಸ್ಥಾನದಲ್ಲಿದೆ.
 • ಡೋಣಿಮಲೈ, ವಿಭೂತಿಗುಡ್ಡ, ಬೆಳಗಾಳ, ಕುಮಾರಸ್ವಾಮಿ ಬೆಟ್ಟಗಳು, ತಿಮ್ಮಪ್ಪನ ಗುಡಿ, ದೇವಾದ್ರಿಶ್ರೇಣಿ, ರಾಮದುರ್ಗ ಬೆಟ್ಟಗಳಲ್ಲಿ ಕಬ್ಬಿಣದ ಅದಿರನ್ನು ಉತ್ಪಾದಿಸುವರು.
 • ಚಿಕ್ಕಮಗಳೂರು ಜಿಲ್ಲೆ 2ನೇ ಸ್ಥಾನದಲ್ಲಿದೆ. ಬಾಬಾ ಬುಡನ್ ಗಿರಿ, ಕೆಮ್ಮಣ್ಣು ಗುಂಡಿ, ಕುದುರೆಮುಖ, ಗಂಗಾಮೂಲ, ಕಪ್ಪತಗಿರಿ, ಜೇನುಸುರಿ ಗುಡ್ಡಗಳಲ್ಲಿ ಕಬ್ಬಿಣದ ಅದಿರು ದೊರೆಯುತ್ತದೆ.
 • ಜೀವ ವೈವಿದ್ಯತೆಯನ್ನು ಕಾಪಾಡಲು ರಾಷ್ಟ್ರದ ಸರ್ವೋಚ್ಚ ನ್ಯಾಯಾಲವು ರಾಷ್ಟ್ರೀಯ ಉದ್ಯಾನವಿರುವ ಕುದುರೆಮುಖದಲ್ಲಿ ಕಬ್ಬಿಣದ ಮುಖದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ತೀರ್ಪು ನೀಡಿದೆ.
 • ರಾಜ್ಯದಲ್ಲಿ ಉತ್ಪಾದನೆಯಾಗುವ ಕಬ್ಬಿಣದ ಅದಿರನ್ನು ಭದ್ರಾವತಿ ಮತ್ತು ಬಳ್ಳಾರಿ ಸಮೀಪದ ಜಿಂದಾಲ್‌ ವಿಜಯನಗರ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಿಗೆ ಉಪಯೋಗಿಸಿ, ಉಳಿದ ಭಾಗವನ್ನು ರಫ್ತು ಮಾಡಲಾಗುತ್ತದೆ.

ಬಾಕ್ಸೈಟ್‌ :

 • ಇದನ್ನು ಅಲ್ಯೂಮಿನಿಯಂ ಲೋಹವನ್ನು ಉತ್ಪಾದಿಸಲು ಅಧಿಕವಾಗಿ ಬಳಸುವರು.
 • ಜೊತೆಗೆ ಸಿಮೆಂಟ್‌, ಉಕ್ಕು, ವಿದ್ಯುತ್‌ ತಂತಿಗಳ ತಯಾರಿಕೆಯಲ್ಲಿ ಬಳಸುವರು.
 • ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯ ಪ್ರಮುಖ ಬಾಕ್ಸೈಟ್‌ ಉತ್ಪಾದಿಸುವ ಜಿಲ್ಲೆಯಾಗಿದೆ. ಇಲ್ಲಿನ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಬಾಕ್ಸೈಟ್‌ ಗಣಿಗಳಿವೆ.
 • ಈ ಅದಿರನ್ನು ಬೆಳಗಾವಿಯ ಇಂಡಿಯನ್‌ ಅಲ್ಯೂಮಿನಿಯಂ ಕಂಪನಿಯ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ.

ಮ್ಯಾಂಗನೀಸ್‌ :

 • ಈ ಅದಿರು ಮುಖ್ಯವಾಗಿ ಪದರುಶಿಲೆ ಮತ್ತು ರೂಪಾಂತರ ಶಿಲೆಗಳಲ್ಲಿ ಅಕ್ಸೈಡ್‌ ರೂಪದಲ್ಲಿ ದೊರೆಯುತ್ತದೆ.
 • ಇದನ್ನು ಮಿಶ್ರಲೋಹವಾಗಿ ಉಕ್ಕಿನ ತಯಾರಿಕೆಯಲ್ಲಿ ಕಾಠಿಣ್ಯತೆಯನ್ನು ಹೆಚ್ಚಿಸಲು ಬಳಸುವರು. ಜೊತೆಗೆ ರಾಸಾಯನಿಕ, ವಿದ್ಯುತ್‌ ಕೈಗಾರಿಕೆ, ರಾಸಾಯನಿಕ ಗೊಬ್ಬರ. ಕ್ಯಾಲಿಕೋ ಪ್ರಿಂಟಿಂಗ್‌ ಹಾಗೂ ಬಣ್ಣ ತಯಾರಿಕೆಯಲ್ಲಿಯೂ ಬಳಸುವರು.
 • ಆದ್ದರಿಂದ ಇದನ್ನು ಬಹು ಉಪಯೋಗಿ ಖನಿಜ ಎನ್ನುವರು.
 • ದೇಶದ ಒಟ್ಟು ನಿಕ್ಷೇಪದಲ್ಲಿ ಶೇ.27 ಭಾಗ ಕರ್ನಾಟಕದಲ್ಲಿವೆ.
 • ಮ್ಯಾಂಗನೀಸ್‌ ಉತ್ಪಾದನೆಯಲ್ಲಿ ಒಡಿಸ್ಸಾ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 2ನೇ ಸ್ಥಾನ ಹೊಂದಿದೆ.
 • ಕರ್ನಾಟಕದಲ್ಲಿನ ಬಳ್ಳಾರಿ ಜಿಲ್ಲೆಯ ಸಂಡೂರು ಪ್ರಮುಖ ಮ್ಯಾಂಗನೀಸ್‌ ಉತ್ಪಾದಿಸುವ ಪ್ರದೇಶವಾಗಿದೆ. ಇಲ್ಲಿ ರಾಜ್ಯದ ಶೇ. 90 ರಷ್ಟು ಮ್ಯಾಂಗನೀಸ್‌ ಉತ್ಪಾದಿಸಲಾಗುತ್ತಿದೆ.
 • ರಾಜ್ಯದಲ್ಲಿ ಉತ್ಪಾದಿಸುವ ಬಹುಪಾಲು ಮ್ಯಾಂಗನೀಸ್‌ ಜಪಾನ್‌, ಚೀನಾ ಮುಂತಾದ ರಾಷ್ಟ್ರಗಳಿಗೆ ರಫ್ತಾಗುವುದು.

ಚಿನ್ನ :

 • ಚಿನ್ನವು ಅಪರೂಪವಾಗಿ, ಹೊಳೆಯುವ, ಹೆಚ್ಚು ಬಾಳಿಕೆ ಬರುವ ಹಳದಿ ಲೋಹವಾಗಿದೆ.
 • ಚಿನ್ನವನ್ನು ಆಭರಣಗಳ ತಯಾರಿಕೆ, ಗಡಿಯಾರ, ಮುಂತಾದ ಅಮೂಲ್ಯ ವಸ್ತುಗಳ ತಯಾರಿಕೆಯಲ್ಲಿ ಅಧಿಕವಾಗಿ ಬಳಸುವರು.
 • ಕರ್ನಾಟಕವು ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿದೆ.
 • ಕರ್ನಾಟಕದಲ್ಲಿ ಚಿನ್ನದ ನಾಡು ಎಂದು ಕರೆಯಲು ಕಾರಣ ಚಿನ್ನವನ್ನು ಹೆಚ್ಚು ಉತ್ಪಾದಿಸುವುದರಿಂದ.
 • ದೊಡ್ಡ ಪ್ರಮಾಣದ ಚಿನ್ನದ ಗಣಿಗಾರಿಕೆ 1880 ರಲ್ಲಿ ಜಾನ್‌ ಟೇಲರ್‌ ಎಂಬುವವರು ಪ್ರಾರಂಭ ಮಾಡಿದರು. ಇದು 1885 ರಲ್ಲಿ ಕೆ.ಜಿ.ಎಫ್.‌ ನಲ್ಲಿ ಅಸ್ತಿತ್ವಕ್ಕೆ ಬಂದಿತು.
 • ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ ನಾಲ್ಕು ಪ್ರಮುಖ ಗಣಿಗಳಿವೆ. ಅವುಗಳೆಂದರೆ ನಂದಿದುರ್ಗ, ಉರಿಗಾಂ, ಚಾಂಪಿಯನ್‌ ರೀಪ್‌, ಮೈಸೂರು.

FAQ :

ಭಾರತದ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಕರ್ನಾಟಕವು ಎಷ್ಟನೇ ಸ್ಥಾನ ಹೊಂದಿದೆ?

2ನೇ

ಚಿನ್ನದ ಗಣಿಗಾರಿಕೆಯಲ್ಲಿ ಭಾರತದಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಜ್ಯ ಯಾವುದು?

ಕರ್ನಾಟಕ

ಇತರೆ ವಿಷಯಗಳು :

Join WhatsApp Join Telegram

ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.