ಸಂವಿಧಾನದ ಲಕ್ಷಣಗಳ ಬಗ್ಗೆ ಮಾಹಿತಿ | Information about features of constitution in Kannada

Join Telegram Group Join Now
WhatsApp Group Join Now

ಸಂವಿಧಾನದ ಲಕ್ಷಣಗಳ ಬಗ್ಗೆ ಮಾಹಿತಿ Information about features of constitution Samvidhanada Lakshanagala bagge Mahithi in Kannada

ಸಂವಿಧಾನದ ಲಕ್ಷಣಗಳ ಬಗ್ಗೆ ಮಾಹಿತಿ

Information about features of constitution in Kannada
ಸಂವಿಧಾನದ ಲಕ್ಷಣಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಸಂವಿಧಾನದ ಲಕ್ಷಣಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಸಂವಿಧಾನದ ಲಕ್ಷಣಗಳು :

 • ಬೃಹತ್‌ ಸಂವಿಧಾನವಾಗಿದೆ :

ಭಾರತದ ಸಂವುಧಾನವು ಬೃಹತ್‌ ಸಂವಿಧಾನವಾಗಿದೆ. ಇದು 1935ರ ಕಾಯ್ದೆಯಿಂದ 70% ರಷ್ಟು ಅಂಶವನ್ನು ಮತ್ತು ಇನ್ನುಳಿದ ಅಂಶಗಳನ್ನು ವಿವಿಧ ದೇಶಗಳಿಂದ ಎರವಲಾಗಿ ಪಡೆಯಲಾಗಿದೆ. ಭಾರತ ಸಂವಿಧಾನದಲ್ಲಿ ದಿನದಿಂದ ದಿನಕ್ಕೆ ತಿದ್ದುಪಡಿ ಮಾಡಿ ಅನೇಕ ವಿಷಯಗಳನ್ನು ಸೇರಿಸಲಾಗುತ್ತವೆ.

 • ವಯಸ್ಕರ ಮತದಾನ ಪದ್ದತಿ :

ಪ್ರಾರಂಭದಲ್ಲಿ ಮತದಾನದ ವಯಸ್ಸು 21 ಆಗಿತ್ತು. 1988 ರಲ್ಲಿ 61ನೇ ತಿದ್ದುಪಡಿ ಮಾಡುವುದರ ಮೂಲಕ ಮತದಾನದ ವಯಸ್ಸು 18ಕ್ಕೆ ಇಳಿಸಲಾಯಿತು. ಇದು ಜಾರಿಗೆ ಬಂದಿದ್ದು 1989 ರಲ್ಲಿ ಮತದಾನದ ಹಕ್ಕಿನ ಕುರಿತು ಸಂವಿದಾನದ 15ನೇ ಭಾಗದ 326ನೇ ವಿಧಿಯಲ್ಲಿ ತಿಳಿಸುತ್ತದೆ.

 • ಏಕಪೌರತ್ವ :

ಈ ಪದ್ದತಿಯನ್ನು ಬ್ರಿಟನ್‌ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಏಕಪೌರತ್ವ ಪದ್ದತಿಯನ್ನು ಅಳವಡಿಸಲು ಕಾರಣ ನಮ್ಮಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಸುವುದಾಗಿದೆ. ಪೌರತ್ವ ವಿಷತದ ಕುರಿತು ಸಂವಿಧಾನದ 2ನೇ ಭಾಗದಲ್ಲಿ 5ನೇ ವಿಧಿಯಿಂದ 11ನೇ ವಿಧಿಯವರೆಗೆ ವಿವರಿಸಲಾಗಿದೆ.

 • ತುರ್ತು ಪರಿಸ್ಥಿತಿಯ ಅಧಿಕಾರಗಳು :

ಇದನ್ನು ಜರ್ಮನಿ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಸಂವಿಧಾನದಲ್ಲಿ 18ನೇ ಭಾಗದಲ್ಲಿ 352ನೇ ವಿಧಿಯಿಂದ 360ನೇ ವಿಧಿಯವರೆಗೂ 3 ಪ್ರಕಾರದ ತುರ್ತು ಪರಿಸ್ಥಿತಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ 352ನೇ ವಿಧಿ, ರಾಜ್ಯ ತುರ್ತು ಪರಿಸ್ಥಿತಿ 356ನೇ ವಿಧಿ, ಹಣಕಾಸು ತುರ್ತ ಪರಿಸ್ಥಿತಿ 360ನೇ ವಿಧಿ.

Join WhatsApp Join Telegram
 • ತಿದ್ದುಪಡಿಯ ವಿಧಾನ :

ಇದನ್ನು ದಕ್ಷಿಣ ಆಫ್ರಿಕಾ ದೇಶದ ಸಂವಿಧಾನದಿಂದ ಪಡೆಯಲಾಗಿದೆ. ಸಂವಿಧಾನದ 368ನೇ ತಿದ್ದುಪಡಿಯ ಮೂಲಕ ಎರಡು ರೀತಿಯಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ಸರಳ ತಿದ್ದುಪಡಿ ಮತ್ತು ಕಠಿಣ ತಿದ್ದುಪಡಿ ವಿಧಾನ.

 • ಮೂಲಭೂತ ಹಕ್ಕುಗಳು :

ಈ ವಿಷಯವನ್ನು ಅಮೇರಿಕಾ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ಸಂವಿಧಾನದ 3ನೇ ಭಾಗದಲ್ಲಿ 12ನೇ ವಿಧಿಯಿಂದ 35ನೇ ವಿಧಿಯವರೆಗೆ ಮೂಲಭೂತ ಹಕ್ಕುಗಳ ಕುರಿತು ವಿವರಿಸಲಾಗಿದೆ. ಇವುಗಳನ್ನು ಭಾರತದ ಮ್ಯಾಗ್ನಾಕಾರ್ಟ್‌ ಎಂದು ಕರೆಯಲಾಗುತ್ತದೆ.

 • ಸಂಯುಕ್ತ ಪದ್ದತಿ :

ಇದು ದೇಶದಲ್ಲಿ ಏಕಾತ್ಮಕ ಪದ್ದತಿ ಇದ್ದರೂ ಕೂಡಾ ನಮ್ಮ ದೇಶದಲ್ಲಿ 1ನೇ ಭಾಗದಲ್ಲಿ ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗಿದೆ.

 • ದ್ವಿಸದನ ಪದ್ದತಿ :

ಈ ಪದ್ದತಿಯನ್ನು ಬ್ರಿಟನ್‌ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ನಮ್ಮ ಸಂಸತ್ತು ದ್ವಿಸದನ ಹೊಂದಿದೆ.

 • ಲೋಕಸಭೆ : ಈ ಸದನವನ್ನು ಕೆಳಮನೆ, ಕಿರಿಯರ ಸದನ, ಜನತಾ ಸದನ ಎಂದು ಕರೆಯುವರು.

ರಾಜ್ಯ ಸಭೆ : ಈ ಸದನವನ್ನು ಮೇಲ್ಮನೆ, ಬುದ್ದಿವಂತರ ಸದನ, ಹಿರಿಯರ ಸದನ, ಶಾಶ್ವತ ಸದನ, ಎಂದು ಕರೆಯುವರು.

 • ಸ್ವತಂತ್ರ ಸಂಸ್ಥೆಗಳು :

ಭಾರತದ ಸಂವಿಧಾನವು ಭಾರತದಲ್ಲಿ ಸ್ವತಂತ್ರವಾಗಿ ಮತ್ತು ನಿರ್ಬಯವಾಗಿ ಕಾರ್ಯನಿರ್ವಹಿಸಲು ಕೆಲವು ಸಂವಿಧಾನಾತ್ಮಕ ಹುದ್ದೆಗಳಿಗೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

 • ಎರವಲು ಸಂವಿಧಾನ :

ಭಾರತದ ಸಂವಿಧಾನ ಈ ಕೆಳಗಿನ ವಿಷಯಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ಪಡೆದುಕೊಂಡಿದೆ.

 • 1935 ರ ಕಾಯ್ದೆ : ಒಕ್ಕೂಟ ವ್ಯವಸ್ಥೆ, ರಾಜ್ಯಪಾಲರ ಹುದ್ದೆ, ಸಾರ್ವಜನಿಕ ಸೇವೆಗಳು, ನ್ಯಾಯಾಂಗ ಪದ್ದತಿ.
 • ಬ್ರಿಟನ್‌ : ಸಂಸದೀಯ ಪದ್ದತಿ, ಏಕಪೌರತ್ವ, ರಿಟ್ಗಳು, ದ್ವಿಸದನ, ಕ್ಯಾಬಿನೆಟ್‌ ಪದ್ದತಿ.
 • ಅಮೇರಿಕಾ : ಪೂರ್ವ ಪೀಠಿಕೆ, ಮೂಲಭೂತ ಹಕ್ಕುಗಳು, ನ್ಯಾಯಿಕ ವಿಮರ್ಶೆ, ರಾಷ್ಟ್ರಾಧ್ಯಕ್ಷರ ಮಹಾಭಿಯೋಗ, ನ್ಯಾಯಾಧೀಶರ ಹುದ್ದೆ, ಉಪರಾಷ್ಟ್ರಪತಿ ಹುದ್ದೆ.
 • ಐರ್ಲೆಂಡ್‌ : ರಾಜ್ಯ ನಿರ್ದೇಶಕ ತತ್ವಗಳು, ರಾಜ್ಯ ಸಭೆಗೆ ಸದಸ್ಯರ ನಾಮಕರಣ, ರಾಷ್ಟ್ರಪತಿಯವರ ಚುನಾವಣಾ ವಿಧಾನ.
 • ಕೆನಡಾ : ಕೇಂದ್ರದಿಂದ ರಾಜ್ಯಪಾಲರ ನೇಮಕ, ಕೇಂದ್ರ ಸರ್ಕಾರದಿಂದ ಕೂಡಿದ ಒಕ್ಕೂಟ ವ್ಯವಸ್ಥೆ.
 • ಆಸ್ಟ್ರೇಲಿಯಾ : ಸಮವರ್ತಿ ಪಟ್ಟಿ, ಜಂಟಿ ಅಧಿವೇಶನ.
 • ಜರ್ಮನಿ : ತುರ್ತು ಪರಿಸ್ಥಿತಿ.
 • ರಷ್ಯಾ : ಮೂಲಭೂತ ಕರ್ತವ್ಯಗಳು, ಪೂರ್ವ ಪೀಟಿಕೆಯಲ್ಲಿರುವ ಸಾಮಾಜಿಕ , ಆರ್ಥಿಕ ರಾಜಕೀಯ ನ್ಯಾಯ ಎಂಬ ಪದಗಳು.
 • ಫ್ರೆಂಚ್‌ : ಪೂರ್ವ ಪೀಠಿಕೆಯಲ್ಲಿರುವ ಸಮಾನತೆ, ಸ್ವಾತಂತ್ರ್ಯ,ಭಾತೃತ್ವ ಎಂಬ ಪದಗಳು.
 • ದಕ್ಷಿಣ ಆಫ್ರಿಕಾ : ತಿದ್ದುಪಡಿ ವಿಧಾನ.

FAQ :

ತುರ್ತುಪರಿಸ್ಥಿತಿ ಬಗ್ಗೆ ಭಾರತ ಸಂವಿಧಾನದ ಎಷ್ಟನೇ ಭಾಗ ಹೇಳುತ್ತದೆ?

18 ನೇ

ಮೂಲಭೂತ ಹಕ್ಕುಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?

ಅಮೇರಿಕಾ

ಇತರೆ ವಿಷಯಗಳು :

ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ

ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.