ಮೆದುಳಿನ ಬಗ್ಗೆ ಮಾಹಿತಿ | Information about the brain in Kannada

Join Telegram Group Join Now
WhatsApp Group Join Now

ಮೆದುಳಿನ ಬಗ್ಗೆ ಮಾಹಿತಿ Information about the brain Medhulina bagge Mahithi in Kannada

ಮೆದುಳಿನ ಬಗ್ಗೆ ಮಾಹಿತಿ

Information about the brain in Kannada
ಮೆದುಳಿನ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮೆದುಳಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮೆದುಳು :

  • ಮೆದುಳು ದೇಹದ ಪ್ರಮುಖ ಸಹಭಾಗಿತ್ವ ಮತ್ತು ನಿಯಂತ್ರಣ ಭಾಗ ಮಾನವನ ಮೆದುಳಿನ ಹೊರ ನೋಟದಲ್ಲಿ ಮೂರು ನಿರ್ಧಿಷ್ಟ ಭಾಗಗಳನ್ನು ಕಾಣಬಹುದು. ಅವುಗಳೆಂದರೆ
  • ಮುಮ್ಮೆದುಳು
  • ಮಧ್ಯ ಮೆದುಳು
  • ಹಿಮ್ಮೆದುಳು

ಮುಮ್ಮೆದುಳು :

ಇದು ಮೆದುಳಿನ ಅತಿ ಸಂಕೀರ್ಣ ಭಾಗ. ಇದರಲ್ಲಿ ಮಹಾಮಸ್ತಿಷ್ಕ ಮತ್ತು ಡೈಎನ್ಸಫೆಲಾನ್‌ ಎಂಬ ಎರಡು ಪ್ರಮುಖ ಭಾಗಗಳಿವೆ.

ಮಹಾಮಸ್ತಿಷ್ಕ :

  • ಮೆದುಳಿನ ಅತ್ಯಂತ ದೊಡ್ಡ ಭಾಗ. ಇದು ಹೆಚ್ಚು ಅಭಿವೃದ್ದಿ ಹೊಂದಿದೆ.
  • ಮೆದುಳಿನ ಒಟ್ಟು ತೂಕದ ಸುಮಾರು ಶೇ 80 ರಷ್ಟು ತೂಕ ಇದರದು.
  • ಇದರ ಮೇಲ್ಮೈಯು ವಕರವಾಗಿ ಅನೇಕ ಮಡಿಕ್ಕಗಳಿಂದ ಕೂಡಿದೆ.
  • ಎರಡು ಗೋಳಾರ್ಧಗಳು ಒಂದು ಎಳೆಯಿಂದ ಬೇರ್ಪಟ್ಟಿದ್ದರೂ, ಒಳಗೆ ಒಂದಕ್ಕೊಂದು ಕಾರ್ಪಸ್‌ ಕಲೋಸಮ್‌ ಎಂಬ ನಗರಗಳ ಎಳೆಯಿಂದ ಸೇರ್ಪಡೆಯಾಗಿದೆ.
  • ದೇಹದ ಎಡಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡ ಗೋಳಾರ್ಧಕ್ಕೆ ಸಂಪರ್ಕಗೊಂಡಿವೆ.
  • ದೇಹದ ಬಲಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡ ಗೋಳಾರ್ಧಕ್ಕೆ ಸಂಪರ್ಕಗೊಂಡಿವೆ.
  • ಮಹಾಮಸ್ತಿಷ್ಕದ ಹೊರಗಿನ ಕಾರ್ಟೆಕ್ಸ್‌ ನರಕೋಶಗಳಿಂದ ಕೂಡಿದ ಬೂದು ಬಣ್ಣದ ವಸ್ತುವಿನಿಂದಾಗಿದೆ.
  • ಮಹಾಮಸ್ತಿಷ್ಕದ ಒಳಗಿನ ಮೆಡುಲ್ಲಾ ಭಾಗವು ಆಕ್ಸಾನ್‌ ಮತ್ತು ಡೆಂಡ್ರೈಟ್‌ ಗಳು ಸೇರಿದ ಬಿಳಿಯ ವಸ್ತುವಿನಿಂದಾಗಿದೆ.
  • ಮಾನವನ ಉನ್ನತವಾದ ಬುದ್ದಿವಂತಿಕೆಗೆ, ಹೆಚ್ಚಿನ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಕಾರ್ಟೆಕ್ಸ್‌ ನ ವಿಸ್ತೃತ ಬೆಳವಣಿಗೆಯೇ ಕಾರಣ.

ಡೈಎನ್ಸೆಫಲಾನ್‌ :

  • ಡೈಎನ್ಸೆಫಲಾನ್‌ ಮಹಾಮಸ್ತಿಷ್ಕದಿಂದ ಆವೃತವಾಗಿರುವ ಒಂದು ಭಾಗ.
  • ಇಲ್ಲಿ ಥಲಾಮಸ್‌ ಮತ್ತು ಹೈಪೋಥಲಾಮಸ್‌ ಎಂಬ ಎರಡು ಭಾಗಗಳಿವೆ.
  • ಥಲಾಮಸ್‌ ಜ್ಞಾನೇಂದ್ರಿಯಗಳಿಂದ ಸ್ವೀಕರಿಸಿದ ನರಾವೇಗಗಳನ್ನು ಮಿದುಳಿನ ಕಾರ್ಟೆಕ್ಸ್‌ ಗೆ ಕಳುಹಿಸುತ್ತದೆ.
  • ಹೈಪೋಥಲಾಮಸ್‌ ದೇಹದ ಉಷ್ಣತೆ, ದೇಹದಸಮತೋಲನ, ಹಸಿವು ಮತ್ತು ನಿದ್ರೆಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಸ್ವನಿಯಂತ್ರಕ ನರವ್ಯೂಹ ಮತ್ತು ಪಿಟ್ಯುಟರಿಗ್ರಂಥಿಯನ್ನು ನಿಯಂತ್ರಿಸುತ್ತದೆ.

ಮಧ್ಯಮೆದುಳು :

  • ನರತಂತುಗಳಿಂದ ಕೂಡಿದ ಮೆದುಳಿನ ಒಂದು ಭಾಗ.
  • ಮಧ್ಯಮೆದುಳು ಮುಮೆದುಳು ಮತ್ತು ಹಿಮೆದುಳಿಗೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಸಂದೇಶಗಳನ್ನು ಹಿಮೆದುಳಿನಿಂದ ಮುಮೆದುಳಿಗೆ ಸಾಗಿಸುತ್ತದೆ.
  • ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಚೋದನೆಗಳಿಗನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತದಲನೆಗಳಿಗೆ ಇದು ಕಾರಣ.

ಹಿಮೆದುಳು :

ಹಿಮೆದುಳಲ್ಲಿ ಅನುಮಸ್ತಿಷ್ಕ, ಪಾನ್ಸ್‌ ಮತ್ತು ಮೆಡುಲ್ಲಾ ಅಬ್ಲಾಂಗೇಟ್‌ ಎಂಬ ಮೂರು ಭಾಗಗಳಿವೆ.

Join WhatsApp Join Telegram

ಅನುಮಸ್ತಿಷ್ಕ :

  • ಅನುಮಸ್ತಿಷ್ಕ ಮೆದುಳಿನ ಎರಡನೇ ದೊಡ್ಡ ಭಾಗ.
  • ಅನುಮಸ್ತಿಷ್ಕ ಮಹಾಮಸ್ತಿಷ್ಕದ ಕೆಳಗೆ ಮತ್ತು ಹಿಂಭಾಗದಲ್ಲಿದೆ. ದೇಹದ ಸಮತೋಲನವನ್ನು ಕಾಪಾಡುತ್ತದೆ.

ಪಾನ್ಸ್‌ :

  • ಪಾನ್ಸ್‌ ಅನುಮಸ್ತಿಷ್ಕದ ಮುಂದೆ ಮಧ್ಯ ಮೆದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಂಗೇಟಾದ ಮೇಲೆ ಇದೆ.
  • ಪಾನ್ಸ್‌ ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.

ಮೆಡುಲ್ಲಾ ಅಂಬ್ಲಾಗೇಟ್ :

  • ಮೆಡುಲ್ಲಾ ಅಬ್ಲಂಗೇಟ್‌ ಮೆದುಳಿನ ಅತಿ ಹಿಂದಿನ ಭಾಗವಾಗಿದ್ದು, ಮುಂಡದ ಭಾಗದಲ್ಲಿ ಮೆದುಳು ಬಳ್ಳಿಯಾಗಿ ಮುಂದುವರೆಯುತ್ತದೆ.
  • ದೇಹದ ಅನೈಚ್ಛಿಕ ಕ್ರಿಯೆಗಳಾದ ಉಸಿರಾಟ, ಹೃದಯ ಬಡಿತ, ಜೀರ್ಣನಾಳದದಲನೆಗಳನ್ನುನಿಯಂತ್ರಿಸುತ್ತದೆ. ಜೊತೆಗೆ ಸ್ರವಿಕೆ ಮತ್ತು ರಕ್ತದ ಒತ್ತಡದ ನಿಯಂತ್ರಣ ಮುಂತಾದ ಕ್ರಿಯೆಗಳನ್ನು ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
  • ವಯಸ್ಕ ಮಾನವನ ಮಿದುಳಿನ ಸರಾಸರಿ ತೂಕ ಸುಮಾರು 1200 ರಿಂದ1400ಗ್ರಾಂಗಳು.
  • ಮಾನವನ ಮಿದುಳು ಆತನ ದೇಹದ ತೂಕದ ಶೇ 1.9 ರಷ್ಟು ಇರುತ್ತದೆ.
  • ದೇಹಕ್ಕೆ ಬೇಕಾದ ಒಟ್ಟು ರಕ್ತದ ಸರಬರಾಜಿನಲ್ಲಿ ಶೇ 20 ರಷ್ಟು ಮೆದುಳಿಗೆ ಬೇಕಾಗುತ್ತದೆ.

FAQ :

ಮೆದುಳಿನ ಭಾಗಗಳನ್ನು ತಿಳಿಸಿ?

ಮುಮ್ಮೆದುಳು
ಮಧ್ಯ ಮೆದುಳು
ಹಿಮ್ಮೆದುಳು

ಮೆದುಳಿನ ಅತ್ಯಂತ ದೊಡ್ಡ ಭಾಗ ಯಾವುದು?

ಮಹಾಮಸ್ತಿಷ್ಕ

ಇತರೆ ವಿಷಯಗಳು :

ನೀರಿನ ಬಗ್ಗೆ ಮಾಹಿತಿ

ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.