ಆನ್ಲೈನ್‌ ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿ | Information about Online Election Campaign in Kannada

Join Telegram Group Join Now
WhatsApp Group Join Now

ಆನ್ಲೈನ್‌ ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿ Information about Online Election Campaign Online Chunavana Pracharadha bagge Mahithi in Kannada

ಆನ್ಲೈನ್‌ ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿ

Information about Online Election Campaign in Kannada
ಆನ್ಲೈನ್‌ ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಆನ್ಲೈನ್‌ ಚುನಾವಣಾ ಪ್ರಚಾರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಆನ್ಲೈನ್‌ ಚುನಾವಣಾ ಪ್ರಚಾರ :

ಆನ್ಲೈನ್‌ ಚುನಾವಣಾ ಪ್ರಚಾರವೆಂದರೆ, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಚಿಂತನೆಗಳನ್ನು ಮತ್ತು ಸಿದ್ದಾಂತಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸುವ ಮತ್ತು ಮಂಡಿಸುವ ವಿಧಾನವೆನ್ನಬಹುದು. ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ರಾಜಕೀಯ ಮತ್ತು ಮತದಾನಕ್ಕೆ ಸಂಬಂಧಪಟ್ಟ ಪ್ರಚಾರ ಮಾತ್ರವಲ್ಲದೆ, ಸಾಮಾಜಿಕ ಮಾಧ್ಯಮವನ್ನು ಬಳಸಿ ಮೌಖಿಕ ಸಂದೇಶವನ್ನು, ದೂರವಾಣಿ ಕರೆಗಳನ್ನು, ಸಾಕ್ಷ್ಯಚಿತ್ರಗಳನ್ನು ಮತ್ತು ಇತರೆ ಸ್ವರೂಪದ ವಿಧಾನವನ್ನು ಬಳಸಿ ತಮ್ಮ ಸಂದೇಶವನ್ನು ರವಾನಿಸುವ ಪ್ರಕ್ರಿಯೆಯೆಂದು ಪರಿಗಣಿಸಬಹುದು.

ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರದಲ್ಲಿ ಇರುವ ಉಪಯುಕ್ತ ಅಂಶಗಳು :

  • ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದ ವಾಸಿಗಳವರೆಗೂ, ಬಹುತೇಕ ಜನರು ಆನ್ಲೈನ್‌ ಸಾಮಾಜಿಕ ಮಾಧ್ಯಮವಾದ ಫೇಸ್ಬುಕ್‌ ಮತ್ತು ಯೂಟ್ಯೂಬ್‌ ನಂತಹ ಸಾಮಾಜಿಕ ಮಾಧ್ಯಮಗಳ ಬಳಕೆದಾರರಾಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಎಲ್ಲಾ ವರ್ಗದ ಜನರನ್ನು ಆನ್ಲೈನ್‌ ಪ್ರಚಾರದ ಮೂಲಕ ತಲುಪಲು ಸಾಧ್ಯ.
  • ಆನ್ಲೈನ್‌ ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ, ಗಣಕಯಂತ್ರದ ತಂತ್ರಾಂಶವನ್ನು ಬಳಸಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ವರ್ಗ ಆಧಾರಿತ ಪ್ರಚಾರವನ್ನು ಮಾಡಲು ಸಹಕಾರಿಯಾಗಿರುತ್ತದೆ.
  • ಗುರಿ ಆಧಾರಿತ ಪ್ರಚಾರ ಪ್ರಕ್ರಿಯೆಯಲ್ಲಿ ಕಡಿಮೆ ವೆಚ್ಚ ಮಾಡುವ ಮೂಲಕ ಹೆಚ್ಚುವರಿ ಮತದಾರರನ್ನು ಸೆಳೆಯಬಹುದು.
  • ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ತಮ್ಮ ಅಭಿಪ್ರಾಯಗಳನ್ನು ಮತ್ತು ಸಿದ್ದಾಂತಗಳನ್ನು ಮಂಡಿಸಿದಾಗ, ಸಾರ್ವಜನಿಕರಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆ.
  • ಸಾರ್ವಜನಿಕರ ಪ್ರತಿಕ್ರಿಯೆ ಆಧಾರದ ಮೇಲೆ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರ ವೈಖರಿಯನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗಬಹುದು.
  • ಕೋವಿಡ್‌ ಸಾಂಕ್ರಾಮಿಕ ರೋಗ ಪ್ರಾರಂಭವಾದ ನಂತರ ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಅಂತರವನ್ನು ಕಾಪಾಡುವ ಅವಶ್ಯಕತೆ ಇತ್ತು.
  • ಚುನಾವಣಾ ಪ್ರಚಾರಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸಾಧ್ಯವಾಗದ ಕಾರಣದಿಂದ ಸಾಂಪ್ರದಾಯಿಕ ಪ್ರಚಾರದ ಬದಲಾಗಿ ಕ್ರಿಯಾಶೀಲ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾದ ಕಾರಣದಿಂದ ಆನ್ಲೈನ್‌ ಪ್ರಚಾರ ಹೆಚ್ಚು ಸೂಕ್ತವಾಗಿದೆ.
  • ಎಲ್ಲದಕ್ಕಿಂತ ಮುಖ್ಯವಾಗಿ ನೂತನವಾಗಿ ರಾಕೀಯವನ್ನು ಪ್ರವೇಶ ಮಾಡುತ್ತಿರುವ ಹೊಸಬರಿಗೆ ಸಾಮಾಜಿಕ ಮಾಧ್ಯಮ ಸಮಾನ ವೇದಿಕೆಯನ್ನು ಕಲ್ಪಿಸುತ್ತದೆ.

ಚುನಾವಣಾ ಆಯೋಗದಿಂದ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ನಿಯಂತ್ರಣ ಸಾಧನಗಳು :

  • ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ, ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗೆ ಸಂಬಂಧಪಟ್ಟಂತೆ ಸೂಕ್ತ ಮಾಹಿತಿಯನ್ನು ಕಲ್ಪಿಸುವುದು ಅವಶ್ಯಕವಾಗಿರುತ್ತದೆ.
  • ಸಾಮಾಜಿಕ ಮಾಧ್ಯಮದಲ್ಲಿ, ರಾಜಕೀಯ ಸಂಬಂಧಿತ ಜಾಹಿರಾತುಗಳನ್ನು ಹಾಕುವ ಮುನ್ನ, ಪೂರ್ವ ಅನುಮೋದನೆಯನ್ನು ಚುನಾವಣಾ ಆಯೋಗದಿಂದ ಪಡೆಯತಕ್ಕದ್ದು.
  • ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯಗಳು ಮತ್ತು ಚಿಂತನೆಗಳು ಚುನಾವಣಾ ನೀತಿ ಸಂಹಿತೆಗೆ ಅನ್ವಯವಾಗಿರತಕ್ಕದ್ದು.
  • ಸಾಮಾಜಿಕ ಮಾಧ್ಯಮದ ಪ್ರಚಾರಕ್ಕೆ ತಗಲುವ ವೆಚ್ಚವನ್ನು, ರಾಜಕಾರಣಿಗಳು ಚುನಾವಣಾ ಆಯೋಗಕ್ಕೆ ಮಂಡಿಸುವ ಅಂತಿಮ ವೆಚ್ಚದಲ್ಲಿ ಸೇರ್ಪಡಿಸತಕ್ಕದ್ದು.
  • ಇತ್ತೀಚಿಗೆ ಚುನಾವಣಾ ಆಯೋಗ ಪ್ರತ್ಯೇಕ ಸಾಮಾಜಿಕ ಮಾಧ್ಯಮದ ವಿಚಾರಗಳನ್ನು ಪರಿವೀಕ್ಷಿಸುವ ಕೆಲಸವನ್ನು ಈ ಸಂಸ್ಥೆಯು ನಿರ್ವಹಿಸುತ್ತದೆ.

ಚುನಾವಣಾ ಆಯೋಗ ಸಂಬಂಧಿತ ಇತರೆ ಮಾಹಿತಿಗಳು :

  • ಇತ್ತೀಚಿನ ಚುನಾವಣಾ ಆಯೋಗ ಸಂಸದೀಯ ಕ್ಷೇತ್ರಗಳ ಚುನಾವಣಾ ವೆಚ್ಚ, ಮತ್ತು ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚದ ಮಿತಿಯನ್ನು ಹೆಚ್ಚಿಸಿದೆ. ಈ ಹೆಚ್ಚಳದ ಹಿಂದಿನ ಉದ್ದೇಶವೇನೆಂದರೆ, ವರ್ಷದಿಂದ ವರ್ಷಕ್ಕೆ ಹಣದುಬ್ಬರ ಹೆಚ್ಚಾಗುತ್ತಿದ್ದು, ಚುನಾವಣಾ ವೆಚ್ಚವನ್ನು ಕೂಡ ಹೆಚ್ಚಿಸುವ ಪರಿಸ್ಥಿತಿ ಉದ್ಭವವಾಗಿದೆ.
  • ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚವನ್ನು ಕೂಡ ಹೆಚಿಸಿದ್ದು, ಅತಿ ದೊಡ್ಡ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚವನ್ನು 28 ಲಕ್ಷ ರೂಪಾಯಿಯಿಂದ 40ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದ್ದು, ಸಣ್ಣ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚವನ್ನು 20 ಲಕ್ಷಕ್ಕೆ ಹೆಚ್ಚಿಸಲಾಗಿದೆ.
  • ಪಂಜಾಬ್‌ ವಿಧಾನಸಭಾ ಚುನಾವಣಾಯನ್ನು ಚುನಾವಣಾ ಆಯೋಗ ಮುಂದೂಡಿತು.
  • ಗುರು ರವಿದಾಸ್‌ ಜಯಂತಿಯ ಅಂಗವಾಗಿ, ಪಂಜಾಬಿನ ವಿಧಾನಸಭಾ ಚುನಾವಣಾಯನ್ನು ಚುನಾವಣಾ ಆಯೋಗ ಮುಂದೂಡಿತು.
  • ಪ್ರಜಾಪ್ರತಿನಿಧಿ ಕಾಯ್ದೆ 1951, ಸೆಕ್ಷನ್‌ 153ರ ಅನ್ವಯ ಚುನಾವಣಾ ಆಯೋಗಕ್ಕೆ, ಚುನಾವಣಾ ಪ್ರಕ್ರಿಯೆಯಲ್ಲಿ ಪೀರ್ಣಗೊಳಿಸಲು ಸಮಯವನ್ನು ವಿಸ್ತರಿಸುವ ಅಧಿಕಾರವಿರುತ್ತದೆ.

FAQ :

ಆನ್ಲೈನ್‌ ಚುನಾವಣಾ ಪ್ರಚಾರ ಎಂದರೇನು?

ಆನ್ಲೈನ್‌ ಚುನಾವಣಾ ಪ್ರಚಾರವೆಂದರೆ, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಚಿಂತನೆಗಳನ್ನು ಮತ್ತು ಸಿದ್ದಾಂತಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಕಟಿಸುವ ಮತ್ತು ಮಂಡಿಸುವ ವಿಧಾನವೆನ್ನಬಹುದು.

ಅಂತರ್ಜಾಲದ ಮೂಲಕ ಚುನಾವಣಾ ಪ್ರಚಾರದಲ್ಲಿ ಇರುವ ಉಪಯುಕ್ತ ಅಂಶಗಳಾವುವು?

ಪ್ರಸ್ತುತ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದ ವಾಸಿಗಳವರೆಗೂ, ಬಹುತೇಕ ಜನರು ಆನ್ಲೈನ್‌ ಸಾಮಾಜಿಕ ಮಾಧ್ಯಮವಾದ ಫೇಸ್ಬುಕ್‌ ಮತ್ತು ಯೂಟ್ಯೂಬ್‌ ನಂತಹ ಸಾಮಾಜಿಕ ಮಾಧ್ಯಮಗಳ ಬಳಕೆದಾರರಾಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಎಲ್ಲಾ ವರ್ಗದ ಜನರನ್ನು ಆನ್ಲೈನ್‌ ಪ್ರಚಾರದ ಮೂಲಕ ತಲುಪಲು ಸಾಧ್ಯ.
ಆನ್ಲೈನ್‌ ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ, ಗಣಕಯಂತ್ರದ ತಂತ್ರಾಂಶವನ್ನು ಬಳಸಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ವರ್ಗ ಆಧಾರಿತ ಪ್ರಚಾರವನ್ನು ಮಾಡಲು ಸಹಕಾರಿಯಾಗಿರುತ್ತದೆ.

ಇತರೆ ವಿಷಯಗಳು :

Join WhatsApp Join Telegram

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ

ಸಂವಿಧಾನದ ಲಕ್ಷಣಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.