ಮಂದಗಾಮಿಗಳ ಬಗ್ಗೆ ಮಾಹಿತಿ Information about Mandhagamigalu Mandhagamigala Bagge Mahithi in Kannada
ಮಂದಗಾಮಿಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಮಂದಗಾಮಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಮಂದಗಾಮಿಗಳು :
ಕ್ರಿ.ಶ. 1885 ರಿಂದ 1905 ರ ಕಾಲವನ್ನು ಮಂದಗಾಮಿ ಯುಗ ಎಂದು ಕರೆಯಲಾಗುತ್ತದೆ. ನಾಲ್ಕು ಗೋಡೆಗಳ ಮಧ್ಯ ನ್ಯಾಯದ ಮೂಲಕ ನಿಧಾನ ಚಳುವಳಿಯ ಮೂಲಕ ಆಡಳಿತ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಹೊಂದಿದ್ದರು.
ಇವರ ಉದ್ದೇಶಗಳು :
- ಭಾರತದಲ್ಲಿ ಮತ್ತು ಇಂಗ್ಲೆಂಡ್ ದಲ್ಲಿ ಏಕಕಾಲಕ್ಕೆ I.C.S. ಪರೀಕ್ಷೆಗಳನ್ನು ನಡೆಯಿಸಿ ಭಾರತೀಯರಿಗೆ ಹೆಚ್ಚು ಅವಕಾಶಗಳನ್ನು ಒದಗಿಸುವುದು.
- ಭಾರತ ಆಡಳಿತದಲ್ಲಿ ಸಾಂವಿಧಾನಿಕ ಬದಲಾವಣೆ ತರಬೇಕು.
- ಶಾಸನ ಸಭೆಯನ್ನು ವಿಸ್ತರಿಸುವುದು ಮತ್ತು ಅದರ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದು.
- ಭೂ ಕಂದಾಯವನ್ನು ಕಡಿಮೆಮಾಡುವುದು.
ಮಂದಗಾಮಿಗಳ ಕುರಿತ ಟೀಕೆಗಳು :
ತಿಲಕರು :
ಹೊಗಳು ಭಟ್ಟರ ಕಾಂಗ್ರೆಸ್ ಅಧಿವೇಶನದಲ್ಲಿ ಇದು ರಜೆಯ ವಿನೋದ ಎಂದು ಟೀಕಿಸಿದರು.
ಅಶ್ವಿನಿಕುಮಾರ್ ದತ್ತ :
1897 ರ ಅಮರಾವತಿ ಅಧಿವೇಶನದಲ್ಲಿ ಇದು ಮೂರು ದಿನಗಳ ವಿನೋದ ಎಂದು ಟೀಕಿಸಿದರು.
ಲಾಲಾಲಜಪತರಾಯ :
ಭಾರತೀಯ ವಿದ್ಯಾವಂತ ವರ್ಗದ ರಾಷ್ಟ್ರೀಯ ಹಬ್ಬ ಎಂದು ಟೀಕಿಸಿದರು.
ಮಂದಗಾಮಿಗಳ ಚಳುವಳಿಯ ಪ್ರಮುಖ ನಾಯಕರು :
ದಾದಾಬಾಯಿ ನವರೋಜಿ :
- ಕ್ರಿ.ಶ.1825 ರಲ್ಲಿ ಮಹಾರಾಷ್ಟ್ರದ ಖಾದರಕ ಎಂಬಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು.
- ಭಾರತದ ವೃದ್ದ ಪಿತಾಮಹಾ ಎಂದು ಕರೆಯಲಾಗುತ್ತದೆ.
- 1866 ರಲ್ಲಿ ಈಸ್ಟ ಇಂಡಿಯಾ ಅಸೋಸಿಯೇಷನ್ ಎಂಬ ಸಂಸ್ಥೆಯನ್ನು ಲಂಡನ್ ನಲ್ಲಿ ಸ್ಥಾಪಿಸಿದರು.
- ಭಾರತದ ಸಂಪತ್ತಿನ ಸೋರಿಕೆಯನ್ನು ಪಾವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ ಎಂಬ ಗ್ರಂಥದಲ್ಲಿ ಸಾಧಾರವಾಗಿ ಚರ್ಚಿಸಿದ್ದಾರೆ.
ಸುರೇಂದ್ರನಾಥ್ ಬ್ಯಾನರ್ಜಿ :
- ಭಾರತದ ರಾಷ್ಟ್ರೀಯ ಚಳುವಳಿಯ ಪಿತಾಮಹಾ ಎಂದು ಇವರನ್ನು ಕರೆಯಲಾಗುತ್ತದೆ.
- ಇವರು 1876 ರಲ್ಲಿ ಕಲ್ಕತ್ತಾ ಇಂಡಿಯನ್ ಅಸೋಷಿಯೇಷನ್ ಮತ್ತು 1883 ರಲ್ಲಿ ಆಲ್ ಇಂಡಿಯಾ ನ್ಯಾಷನಲ್ ಕಾನ್ಪರೆನ್ಸ್ ಎಂಬ ಸಂಸ್ಥೆಗಳನ್ನು ಸ್ಥಾಪಿಸಿದರು.
- ಇವರನ್ನು ಅರಾಜಕತೆಯ ಪಿತಾಮಹಾ ಎಂದು ಕರೆಯುತ್ತಾರೆ.
ಗೋಪಾಲ ಕೃಷ್ಣ ಗೋಖಲೆ :
- 1866 ರಲ್ಲಿ ಮಹಾರಾಷ್ಟ್ರದ ಕೊತಳೂಕು ಎಂಬ ಗ್ರಾಮದಲ್ಲಿ ಜನಿಸಿದರು.
- ರಾಷ್ಟ್ರೀಯ ಜಾಗೃತಿಗಾಗಿ ಮತ್ತು ರಾಷ್ಟ್ರವಾದಿಗಳನ್ನು ತರಬೇತುಗೊಳಿಸಲು 1905 ರಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು.
- ತಿಲಕರು ಇವರನ್ನು ಮಹಾರಾಷ್ಟ್ರದ ಕಪ್ಪು ವಜ್ರ ಎಂದು ಸಂಭೋಧಿಸಿದರು.
ಮದನ ಮೋಹನ ಮಾಳವೀಯ :
- ಅಲಹಬಾದ್ ನಲ್ಲಿ 1861 ರಲ್ಲಿ ಜನಿಸಿದರು.
- ದಿ ಇಂಡಿಯನ್ ಯೂನಿಯನ್, ಲೀಡರ್, ಹಿಂದೂಸ್ತಾನ್ ಎಂಬ ಪತ್ರಿಕೆಗಳನ್ನು ಹೊರಡಿಸಿದರು.
- 1909 ಮತ್ತು 1918 ರಲ್ಲಿ ಲಾಹೋರ್ ಮತ್ತು ದೆಹಲಿ ಕಾಂಗ್ರೇಸ್ ನ ಅಧ್ಯಕ್ಷರಾಗಿದ್ದರು.
FAQ :
ಮಂದಗಾಮಿಗಳ ಯುಗವನ್ನು ತಿಳಿಸಿ?
ಕ್ರಿ.ಶ. 1885 ರಿಂದ 1905
ಭಾರತದ ವೃದ್ದ ಪಿತಾಮಹಾ ಎಂದು ಯಾರನ್ನು ಕರೆಯಲಾಗುತ್ತದೆ?
ದಾದಾಬಾಯಿ ನವರೋಜಿ
ಇತರೆ ವಿಷಯಗಳು :