ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ Information about Glands and Hormones Granthigalu mattu Harmonegala bagge Mahithi in Kannada
ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಗ್ರಂಥಿಗಳು :
ಸ್ರವಿಕೆಯ ಕಾರ್ಯಕ್ಕಾಗಿ ವೈಶಿಷ್ಟ್ಯತೆಯನ್ನು ಪಡೆದಿರುವ ಜೀವಕೋಶ ಗುಂಪಿಗೆ ಗ್ರಂಥಿ ಎಂದು ಕರೆಯುತ್ತೇವೆ. ಇದರಲ್ಲಿ 3 ವಿಧಗಳಿವೆ.
ನಾಳಸಹಿತ ಗ್ರಂಥಿ :
ಇವುಗಳಿಂದ ಸ್ರವಿಕೆಯಾಗುವ ದ್ರರೂಪದ ವಸ್ತು ನಿರ್ದಿಷ್ಟ ನಾಳಗಳ ಮೂಲಕ ಹರಿದು ಗುರಿಯ ಅಂಗಗಳನ್ನು ತಲುಪುತ್ತದೆ. ಆದರೆ ರಕ್ತದಲ್ಲಿ ಮಿಶ್ರಣವಾಗುವುದಿಲ್ಲ. ಉದಾಹರಣೆಗೆ ಲಾಲಾರಸ ಗ್ರಂಥಿ, ಬೆವರು ಗ್ರಂಥಿ, ಅಶ್ರು ಗ್ರಂಥಿ, ಲಿವರ್, ಕರುಳಿನ ಗ್ರಂಥಿ.
ಲಾಲಾರಸ ಗ್ರಂಥಿ :
- ಈ ಗ್ರಂಥಿಯು ಬಾಯಿಯಲ್ಲಿ ಕಂಡುಬರುತ್ತದೆ. ಇದರಲ್ಲಿರುವ ಮೂರು ಭಾಗಗಳ ಸಬ್ ಲಿಂಗ್ಯೂಯಲ್, ಸಬ್ಮ್ಯಾಂಡಿಬುಲ್ ಪ್ಯಾರೋಟಿಡ್ ಇದರಿಂದ ಬಿಡುಗಡೆಯಾಗುವ ರಸ ಲಾಲಾರಸ.
- ಲಾಲಾರಸದಲ್ಲಿ 2 ಕಿಣ್ವಗಳಿವೆ ಅಮೈಲೇಸ್ ಮತ್ತು ಟಾಲೀನ್
- ಪಿಷ್ಠ ರೂಪದ ಆಹಾರವನ್ನು ಅಮೈಲೇಸ್ ಮತ್ತು ಟಾಲೀನ್ ಕಿಣ್ವಗಳು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ.
- ಬಾಯಿಯಲ್ಲಿ ಜೀರ್ಣಕ್ರಿಯೆಗೆ ಒಳಪಟ್ಟಿರುವ ಆಹಾರವನ್ನು ಬೊಲಸ್ ಎಂದು ಕರೆಯುತ್ತೇವೆ.
ಬೆವರು ಗ್ರಂಥಿ :
ಈ ಗ್ರಂಥಿಯು ಹೊರಚರ್ಮದಲ್ಲಿ ಕಂಡುಬರುವ ಗ್ರಂಥಿಯಾಗಿದ್ದು ಇದರಿಂದ ಬೆವರು ಉತ್ಪಾದನೆಯಾಗುತ್ತದೆ.
ಅಶ್ರುಗ್ರಂಥಿ :
- ಕಣ್ಣಿನ ಹುಬ್ಬಿನ ಭಾಗದಲ್ಲಿ ಕಂಡುಬರುವ ಗ್ರಂಥಿಗಳಾಗಿವೆ ಇದರಿಂದ ಬಿಡುಗಡೆಯಾಗುವ ದ್ರವರೂಪದ ವಸ್ತು ಕಣ್ಣೀರು.
- ಕಣ್ಣೀರಿನಲ್ಲಿರುವ ರಾಸಾಯನಿಕಗಳು NaCl ಮತ್ತು ಲೈಸೋಜೋಮ್
- NaCl ಮತ್ತು ಲೈಸೋಜೋಮ್ ಕಣ್ಣಿಗೆ ಬಿದ್ದ ಸೂಕ್ಷ್ಮಾಣು ಜೀವಿಗಳನ್ನು ನಾಶಗೊಳಿಸುತ್ತದೆ.
ಲಿವರ್ :
- ನಾಳಸಹಿತ ಗ್ರಂಥಿಯಲ್ಲಿ ಅತ್ಯಂತ ದೊಡ್ಡ ಗ್ರಂಥಿಯಾಗಿದೆ(1.5kg)
- ಲಿವರ್ ನಿಂದ ಸ್ರವಿಕೆಯಾಗುವ ದ್ರವರೂಪದ ವಸ್ತು ಪಿತ್ತರಸ
- ಪಿತ್ತರಸವು ಜಠರದಲ್ಲಿ ಆಮ್ಲೀಯಗೊಂಡಿರುವ ಆಹಾರವನ್ನು ತಟಸ್ಥಿಗೊಳಿಸುತ್ತದೆ.
- ದೇಹದ ರಾಸಾಯನಿಕ ಚಟುವಟಿಕೆಗಳು ಕಂಡುಬರುವ ಅಂಗವಾಗಿರುವುದರಿಂದ ಇದನ್ನು ರಾಸಾಯನಿಕ ಕಾರ್ಖಾನೆ ಎನ್ನುವರು.
- ಕಾಮಾಲೆ ಮತ್ತು ಜಾಂಡೀಸ್ ಬಂದಿರುವ ವ್ಯಕ್ತಿಗಳಿಗೆ ಹಾನಿಯನ್ನುಂಟು ಮಾಡುವ ಅಂಗ.
- ಕಾಮಾಲೆ ಬಂದಿರುವ ರೋಗಿಗಳಲ್ಲಿ ಹಳದಿ ಬಣ್ಣ ಕಾಣಲು ಕಾರಣವಾಗಿರುವ ರಾಸಾಯನಿಕ ಬೈಲುರುಬಿನ.
ಕರುಳಿನ ಗ್ರಂಥಿ :
- ಈ ಗ್ರಂಥಿಯಿಂದ ಕರುಳಿನ ರಸ ಸ್ರವಿಕೆಯಾಗುತ್ತದೆ.
- ಕರುಳಿನ ರಸವು ಆಮ್ಲೀಯಗೊಂಡಿರುವ ಆಹಾರವನ್ನು ತಟಸ್ಥೀಕರಣಗೊಳಿಸುತ್ತದೆ.
ನಿರ್ನಾಳ ಗ್ರಂಥಿ :
ಇವುಗಳಿಂದ ಸ್ರವಿಕೆಯಾಗುವ ಹಾರ್ಮೋನುಗಳು ರಕ್ತದಲ್ಲಿ ಮಿಶ್ರಣಗೊಂಡು ಆಂತರಿಕ ಪ್ರಚೋದನೆಯನ್ನು ನೀಡುತ್ತವೆ.
ಥೈರಾಯ್ಡ್ ಗ್ರಂಥಿ :
- ಈ ಗ್ರಂಥಿಯು ಕುತ್ತಿಗೆಯ ಭಾಗದಲ್ಲಿ ಚಿಟ್ಟೆಯಾಕಾರದಲ್ಲಿ ಕಂಡು ಬರುವ ಗ್ರಂಥಿಯಾಗಿದೆ.
- ಥೈರಾಯ್ಡ್ ನಿಂದ ಬಿಡುಗಡೆಯಾಗುವ ಹಾರ್ಮೋನ್ “ಥೈರಾಕ್ಸಿನ್”
- ಥೈರಾಕ್ಸಿನ್ ಅಯೋಡಿನ ನನ್ನು ಹೊಂದಿದೆ.
- ತೈರಾಕ್ಸಿನ್ ದೇಹದಲ್ಲಿನ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.
- ಥೈರಾಕ್ಸಿನ್ ಬಿಡುಗಡೆಯ ಆಧಾರದ ಮೇಲೆ ಹೈಪೋಥೈರಾಡಿಸಂ ಮತ್ತು ಹೈಪರ್‌ಥೈರಾಡಿಸಂ ಎಂದು ವಿಭಾಗಿಸಲಾಗಿದೆ.
ಪ್ಯಾರ ಥೈರಾಯ್ಡ್ :
- ಥೈರಾಯ್ಡ್ ಗ್ರಂಥಿಯಲ್ಲಿರುವ 4 ಚಿಕ್ಕದಾದ ಗ್ರಂಥಿಗಳಿಗೆ ಪ್ಯಾರಾಥೈರಾಯ್ಡ್ ಎನ್ನುತ್ತೇವೆ.
- ಇದು ಪ್ಯಾರಾಥಾರ್ಮೋನ್ ನನ್ನು ಉತ್ಪಾದಿಸುತ್ತದೆ.
- ಪ್ಯಾರಾಥಾರ್ಮೋನ್ ರಕ್ತದಲ್ಲಿನ ಕ್ಯಾಲ್ಸಿಯಂ ಅಂಶವನ್ನು ನಿಯಂತ್ರಿಸುತ್ತದೆ. ಒಂದು ವೇಳೆ ಪ್ಯಾರಾಥರ್ಮೋನ್ ಕಡಿಮೆ ಪ್ರಮಾಣದಲ್ಲಿ ಬಿಡುಗಡೆಯಾದರೆ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಯು ಬರುತ್ತದೆ.
- ಚಿಕ್ಕ ಮಕ್ಕಳಲ್ಲಿ ಬರುವ ರೋಗ – ರಿಕೆಟ್ಸ್ ಇದು ವಿಟಮಿನ್ D ಕೊರತೆಯಿಂದ ಬರುವ ರೋಗವಾಗಿದೆ.
- ವಯಸ್ಕಕರಲ್ಲಿ ಕಂಡುಬರುವ ರೋಗ – ಆಸ್ಟೀಯೋಮೆಲಾಸಿಯಾ
- ಪ್ಯಾರಾಥೈರಾಯ್ಡ್ ನ್ನು ಗ್ರಂಥಿಯೊಳಗೆ ಹುದುಗಿಕೊಂಡಿರುವ ಗ್ರಂಥಿ ಎನ್ನುವರು.
- ಈ ಗ್ರಂಥಿಯು ಪಿಟ್ಯುಟರಿಯ ನಿಯಂತ್ರಣಕ್ಕೆ ಒಳಪಡದೆ ಇರುವ ಗ್ರಂಥಿಯಾಗಿದೆ.
ಥೈಮಸ್ :
- ಥೈಮಸ್ ಗ್ರಂಥಿಯು ಹೃದಯದ ಮೇಲ್ಬಾಗದಲ್ಲಿ ಮತ್ತು ಕುತ್ತಿಗೆಯ ಕೆಳಭಾಗದಲ್ಲಿ ಕಂಡು ಬರುತ್ತದೆ.
- ಥೈಮಸ್ ಗ್ರಂಥಿಯಿಂದ ಥೈಮಿನ್/ಥೈಮೋಸಿನ್ ಹಾರ್ಮೋನು ಬಿಡುಗಡೆಯಾಗುತ್ತದೆ.
- ಥೈಮಿನ್ ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾರ್ಮೋನು ಆಗಿದೆ.
- ಥೈಮಸ್ ಗ್ರಂಥಿಯು 14 ವರ್ಷ ಒಳಗಿನ ಮಕ್ಕಳಲ್ಲಿ ಮಾತ್ರ ಕಂಡುಬರುತ್ತಿದ್ದು ಬೆಳವಣಿಗೆಯಾಗುತ್ತಾ ಬಂದಂತೆ ಇತರ ಅಂಗಗಳ ಜೊತೆಗೆ ಕೂಡಿಕೊಂಡು ಕಣ್ಮರೆಯಾಗುತ್ತದೆ.
ಅಡ್ರಿನಲ್ :
- ಕಿಡ್ನಿಯ ಮೇಲ್ಬಾಗದಲ್ಲಿ ಟೋಪಿಯಾಕಾರದಲ್ಲಿ ಕಂಡು ಬರುವ ಗ್ರಂಥಿಯಾಗಿದೆ.
- ಅಡ್ರಿನಲ್ ಹೊರಭಾಗವನ್ನು ಕಾರ್ಟೆಕ್ಸ್ ಎಂದು ಒಳಭಾಗವನ್ನು ಮೆಡುಲ್ಲಾ ಎಂದು ಕರೆಯುತ್ತೇವೆ.
- ಕಾರ್ಟೆಕ್ಸ್ – ಕಾರ್ಟಿಸೋನ್ ಎಂಬ ಹಾರ್ಮೋನು ಸ್ರವಿಸುತ್ತದೆ.
- ಮೆಡುಲ್ಲಾ – ಅಡ್ರಿನಲಿನ್, ನಾರ್ ಅಡ್ರಿನಲ್ ಮತ್ತು ಡೋಪೊಮಿನ್ ಎಂಬ ಹಾರ್ಮೋನು ಸ್ರವಿಸುತ್ತದೆ.
- ಭಯ, ಜಗಳ ಮತ್ತು ಕೋಪ ಮುಂತಾದ ತುರ್ತು ಸಂದರ್ಭಗಳಲ್ಲಿ ಬಿಡುಗಡೆಯಾಗುವ ಹಾರ್ಮೋನು ಆಗಿರುವುದರಿಂದ ಇದನ್ನು ತುರ್ತುಪರಿಸ್ಥಿತಿಯ ಹಾರ್ಮೋನು ಎಂದು ಕರೆಯುತ್ತಾರೆ.
ಜನನ ಗ್ರಂಥಿ :
- ಪುರುಷರಲ್ಲಿ ಪ್ರೌಢಾವಸ್ಥೆಯನ್ನು ತಲುಪಿದಾಗ ದೈಹಿಕ ಬದಲಾವಣೆ ಧ್ವನಿ ಗಡಸಾಗುವುದು, ಮೇಸೆಯ ಬೆಳವಣಿಗೆ, ಲೈಂಗಿಕ ಆಸಕ್ತಿ ಮುಂತಾದ ಬದಲಾವಣೆಗಳಿಗೆ ಕಾರಣವಾಗುವ ಹಾರ್ಮೋನ್ – ಟೆಸ್ಟೋಸ್ಟಿರಾನ್
- ಮಹಿಳೆಯರಲ್ಲಿ ಫ್ರೌಢಾವಸ್ಥೆಯನ್ನು ತಲುಪಿದಾಗ ಋತುಚಕ್ರದ ಪ್ರಾರಂಭವಾಗುವಿಕೆ ಮತ್ತು ದೈಹಿಕ ಬದಲಾವಣೆ, ಮಾನಸಿಕ ಬದಲಾವಣೆ, ಲೈಂಗಿಕ ಆಸಕ್ತಿ ಮುಂತಾದ ಬದಲಾವಣೆಗಳಿಗೆ ಕಾರಣವಾಗುವ ಹಾರ್ಮೋನು – ಈಸ್ಟ್ರೋಜನ್
- ಗರ್ಭಾವ್ಯಸ್ಥೆಯ ಸಂದರ್ಭದಲ್ಲಿ ಬಿಡುಗಡೆಗೊಳ್ಳುವ ಹಾರ್ಮೋನು – ಪ್ರೊಜೆಸ್ಟಿರಾನ್
- ಮಗು ಜನಿಸಿದ ಸಂದರ್ಭದಲ್ಲಿ ಗರ್ಭಕೋಶದ ಸಂಕೋಚನ ಮತತು ವಿಕಸನ ಕ್ರಿಯೆಗೆ ಕಾರಣವಾಗುವ ಹಾರ್ಮೋನು – ಆಕ್ಸಿಟೋಸಿನ್
ಪಿಟ್ಯೂಟರಿ ಗ್ರಂಥಿ :
- ಪಿಟ್ಯೂಟರಿಯು ಮೆದುಳಿನಲ್ಲಿ ಚಿಕ್ಕ ಬಟಾಣಿ ಕಾಳಿನ ಗಾತ್ರದಷ್ಟು ಕಂಡುಬರುವ ಗ್ರಂಥಿಯಾಗಿದೆ.
- ಪಿಟ್ಯೂಟರಿಯಿಂದ ಹಾರ್ಮೋನುಗಳ ಸರಿಯಾದ ಪ್ರಮಾಣದಲ್ಲಿ ಬಿಡುಗಡೆಯಾದರೆ ವ್ಯಕ್ತಿಯು ನಿರ್ದಿಷ್ಟ ಮಟ್ಟದ ವ್ಯಕ್ತಿಯಾಗಿ ಬೆಳೆಯುತ್ತಾನೆ, ಇಲ್ಲವಾದರೆ ವ್ಯಕ್ತಿಯ ಎತ್ತರವು ಕುಂಠಿತಗೊಳ್ಳುತ್ತದೆ. ಪರೋಕ್ಷವಾಗಿ ಬೆಳವಣಿಗೆಗೆ ಕಾರಣವಾಗಿರುವುದರಿಂದ ಇದನ್ನು “ಬೆಳವಣಿಗೆಯ ಗ್ರಂಥಿ” ಎಂದು ಕರೆಯುತ್ತಾರೆ.
ಹೈಪೋಥಲಾಮಸ್ :
- ಇದರಿಂದ ಬಿಡುಗಡೆಗೊಳ್ಳುವ ಹಾರ್ಮೋನು antidiyotics ಹಾರ್ಮೋನು ಇದಕ್ಕಿರುವ ಇನ್ನೊಂದು ಹೆಸರು ವ್ಯಾಸೋಪ್ರೆಸಿನ್.
- ADH ದೇಹದಲ್ಲಿನ ನೀರಿನ ಸಮತೋಲನವನ್ನು ನಿಯಂತ್ರಿಸುತ್ತದೆ.
- ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಣ ಮಾಡುವುದರಿಂದ ಇದನ್ನು “Master of Master Gland” ಎಂದು ಕರೆಯುತ್ತೇವೆ.
ಮಿಶ್ರಗ್ರಂಥಿಗಳು :
- ಮೆದೋಜಿರಕಗ್ರಂಥಿ ನಾಳ ಸಹಿತ ಮತ್ತು ನಿರ್ನಾಳದಂತೆ ವರ್ತಿಸುವುದರಿಂದ ಇದನ್ನು ಮಿಶ್ರಗ್ರಂಥಿ ಎಂದು ಕರೆಯುತ್ತೇವೆ.
- ಇದರಲ್ಲಿ 2 ಕೋಶಗಳಿವೆ ಅವು ಅಲ್ಫಾ ಮತ್ತು ಬೀಟಾ ಕೋಶಗಳು
- ಅಲ್ಫಕೋಶ – ಗ್ಲುಕೋಗಾನ್ ನ್ನು ಸ್ರವಿಸುತ್ತವೆ.
- ಬೀಟಾಕೋಶ – ಇನ್ಸುಲಿನ್ ನ್ನು ಸ್ರವಿಸುತ್ತದೆ.
- ಇನ್ಸುಲಿನ್ ಒಂದು ವಿಧದ ಪ್ರೋಟಿನ್
FAQ :
“Master of Master Gland”ಎಂದು ಯಾವುದನ್ನು ಕರೆಯುತ್ತಾರೆ?
ಪಿಟ್ಯೂಟರಿ ಗ್ರಂಥಿ
ಮಗು ಜನಿಸಿದ ಸಂದರ್ಭದಲ್ಲಿ ಗರ್ಭಕೋಶದ ಸಂಕೋಚನ ಮತತು ವಿಕಸನ ಕ್ರಿಯೆಗೆ ಕಾರಣವಾಗುವ ಹಾರ್ಮೋನು ಯಾವುದು?
ಆಕ್ಸಿಟೋಸಿನ್
ಇತರೆ ವಿಷಯಗಳು :