ಪಂಚವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ Information about Five Year Plans Panchavarshika Yojanegala bagge Mahithi in Kannada
ಪಂಚವಾರ್ಷಿಕ ಯೋಜನೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಪಂಚವಾರ್ಷಿಕ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪಂಚವಾರ್ಷಿಕ ಯೋಜನೆಗಳು :
- ಪ್ರಪಂಚದಲ್ಲಿ ಪ್ರಥಮವಾಗಿ ಪಂಚವಾರ್ಷಿಕ ಯೋಜನೆಗಳನ್ನು ಅಳವಡಿಸಿಕೊಂಡ ದೇಶ ರಷ್ಯಾ. ಪ್ರಪಂಚದ ಪಂಚವಾರ್ಷಿಕ ಯೋಜನೆಗಳ ಪಿತಾಮಹಾ – ಸ್ಟಾಲಿನ್.
- ಭಾರತದ ಆರ್ಥಿಕ ಯೋಜನೆಗಳ ಪಿತಾಮಹಾ – ಸರ್.ಎಂ.ವಿಶ್ವೇಶ್ವರಯ್ಯ
- ಸರ್.ಎಂ.ವಿಶ್ವೇಶ್ವರಯ್ಯನವರು 1934 ರಲ್ಲಿ ಭಾರತದ ಆರ್ಥಿಕತೆಯ ಕೃತಿಯಾದ A Planned Economy for India ಅಥವಾ ಭಾರತದ ಯೋಜಿತ ಅರ್ಥವ್ಯವಸ್ಥೆ ಎಂಬ ಕೃತಿಯನ್ನು ರಚಿಸಿದರು.
- ಬಾರತದ ಪಂಚವಾರ್ಷಿಕ ಯೋಜನೆಗಳ ಪಿತಾಮಹಾ ಜವಹಾರ್ ಲಾಲ್ ನೆಹರು.
- 1943 ರಲ್ಲಿ 8 ಜನ ಕೈಗಾರಿಕೊದ್ಯಮಿಗಳಿಂದ ಸ್ಥಾಪನೆಯಾದ ಬಾಂಬೆ ಯೋಜನೆ ಅಥವಾ ಟಾಟಾ ಯೋಜನೆ.
- 1944 ರಲ್ಲಿ ನಾರಾಯಣ ಅಗಲವಾಲರವರು ಆರಂಭಿಸಿದ ಯೋಜನೆ ಗಾಂಧಿ ಯೋಜನೆ.
- 1945 ರಲ್ಲಿ ಎಂ.ಎನ್.ರಾಯ್ ರವರು ಆರಂಭಿಸಿದ ಯೋಜನೆ ಜನತಾ ಯೋಜನೆ.
- 1950 ರಲ್ಲಿ ಜಯಪ್ರಕಾಶ ನಾರಾಯಣರವರು ಆರಂಭಿಸಿದ ಯೋಜನೆ ಜನತಾ ಯೋಜನೆ
- 1938 ರಲ್ಲಿ ಜವಹಾರ್ ಲಾಲ್ ನೆಹರೂರವರು ರಾಷ್ಟ್ರೀಯ ಯೋಜನಾ ಸಮಿತಿಯನ್ನು ಸ್ಥಾಪಿಸಿದರು.
1 ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಜವಹಾರ್ ಲಾಲ್ ನೆಹರು
- ಉಪಾಧ್ಯಕ್ಷರು – ಗುಲ್ಜರಿಲಾಲ ನಂದಾ
- ಆದ್ಯತೆ – ಕೃಷಿ
- ಮೊತ್ತ – 2378 ಕೋಟಿ
- ವೆಚ್ಚ – 1960 ಕೋಟಿ
- ಈ ಯೋಜನೆಯಲ್ಲಿ ಜಿ.ಡಿ.ಪಿ.ದರವನ್ನು 2.1% ನಿರೀಕ್ಷಿಸಲಾಗಿತ್ತು. ಆದರೆ ಸಾಧಿಸಿದ್ದು 3.6%
- ಈ ಯೋಜನೆಯಲ್ಲಿ ಶಿಶುಗಳ ಮರಣ ದರ ಪ್ರಮಾಣವನ್ನು ಕಡಿಮೆ ಮಾಡಲಾಯಿತು.
- ಆಹಾರ ಧಾನ್ಯಗಳು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು.
- 1951 ಜೂನ್ 18 ರಂದು ಪ್ರಥಮ ತಿದ್ದುಪಡಿ ಮಾಡಿ ಭೂಸುದಾರಣೆ ಕಾರ್ಯಕ್ರಮ ಅಳವಡಿಸಲಾಯಿತು.
- 1952 ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆಯಿತು.
- 1952 ರಲ್ಲಿ ಭಾರತ ದೇಶವು ಪ್ರಪಂಚದಲ್ಲಿ ಪ್ರಥಮ ಬಾರಿಗೆ ಕುಡುಂಬ ಯೋಜನೆ ಅಳವಡಿಸಿಕೊಂಡಿತು.
- ಭಾರತದಲ್ಲಿ ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು 1952 ರಲ್ಲಿ ಪ್ರಥಮವಾಗಿ ಆರಂಭಿಸಿದ ಕಾರ್ಯಕ್ರಮ ಸಮುದಾಯ ಅಭಿವೃದ್ದಿ ಕಾರ್ಯಕ್ರಮ.
- ಈ ಯೋಜನೆಯಲ್ಲಿ ಜಮೀನ್ದಾರಿ ಪದ್ದತಿಯನ್ನು ನಿರ್ಮೂಲನೆಮಾಡುವ ಕಾನೂನನ್ನು ಜಾರಿಗೊಳಿಸಲಾಯಿತು.
- ಈ ಯೋಜನೆಯನ್ನು ಹೆರಾಲ್ಡ್ ಡ್ಯೂಮರ್ ಮಾದರಿ ಪಂಚವಾರ್ಷಿಕ ಯೋಜನೆ ಎನ್ನುವರು.
2ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಜವಹಾರ್ ಲಾಲ್ ನೆಹರು
- ಉಪಾಧ್ಯಕ್ಷರು – ಟಿ.ಟಿ.ಕೃಷ್ಣಮಾಚಾರಿ
- ಆದ್ಯತೆ – ಕೈಗಾರಿಕೆ
- ಈ ಯೋಜನೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಆಹಾರದ ಸಮಸ್ಯೆ ಮತ್ತು ಹಣದುಬ್ಬರ ಸಮಸ್ಯೆಯನ್ನು ಕಾಣಲಾಯಿತು.
- 1957 ರಲ್ಲಿ ಹೋಮಿ ಜಹಂಗೀರ್ ಬಾಬಾರವರು ಅಣುಶಕ್ತಿ ಆಯೋಗ ಸ್ಥಾಪಿಸಿದರು.
- ಈ ಯೋಜನೆಯನ್ನು ಕೈಗಾರಿಕೆ ಮತ್ತು ಸಾರಿಗೆ ಯೋಜನೆ ಎಂದು ಕರೆಯುತ್ತಾರೆ.
- ಈ ಯೋಜನೆಯನ್ನು ಪಿ.ಸಿ. ಮಹಲ್ ನೀಬಿಸ್ ನ ಮಾದರಿ ಪಂಚವಾರ್ಷಿಕ ಯೋಜನೆ ಎನ್ನುವರು.
- ಈ ಯೋಜನೆಯಲ್ಲಿ ಪ್ರಮುಖವಾದ 3 ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು.
- ರೂರ್ಕೆಲಾ – ಓಡಿಸ್ಸಾ – ಪಶ್ಚಿಮ ಜರ್ಮನ್ ಸಹಯೋಗದೊಂದಿಗೆ
- ಬಿಲಾಯಿ – ಛತ್ತಿಸಗಢ – ರಷ್ಯಾ ಸಹಯೋಗದೊಂದಿಗೆ
- ದುರ್ಗಾಪುರ – ಪಶ್ಚಿಮ ಬಂಗಾಳ – ಇಂಗ್ಲೆಂಡ್ ಸಹಯೋಗದೊಂದಿಗೆ
3ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಜವಹಾರ್ ಲಾಲ್ ನೆಹರು
- ಉಪಾಧ್ಯಕ್ಷರು – ಸಿ.ಎಂ.ತ್ರಿವೇದಿ
- ಆದ್ಯತೆ – ಸಾರಿಗೆ ಸಂಪರ್ಕ
- ಈ ಯೋಜನೆಯಲ್ಲಿ ಜಾರ್ಖಂಡದ ಬೋಕಾರೋದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು.
- 1966 ಜನವರಿ 11 ಲಾಲ್ ಬಹದ್ದೂರ್ ಶಾಸ್ತ್ರಿ ಮರಣ
- ತಾಷ್ಕೆಂಟ್ ಎಂಬ ಸ್ಥಳವು ರಷ್ಯಾದಲ್ಲಿದೆ. ಇದು ಭಾರತದ ಮತ್ತು ಪಾಕಿಸ್ತಾನದ ಭೂ ದೇಶಗಳ ನಡುವೆ ಭೂ ವಿವಾದದ ಒಪ್ಪಂದವಾಗಿದೆ.
- ಈ ಒಪ್ಪಂದದಲ್ಲಿ ಬಾಗವಹಿಸಿದ ಬಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಪಾಕಿಸ್ತಾನದ ಅಧ್ಯಕ್ಷ ಆಯೂಬ್ ಖಾನ್
- ಈ ಅವಧಿಯಲ್ಲಿ ಭಾರತ ದೇಶದಲ್ಲಿ ಮಾನ್ಸೂನ್ ಮಾರುತಗಳು ಕೈಕೊಟ್ಟಿದ್ದರಿಂದ ಭಾರತದಲ್ಲಿ ಆಹಾರ ಸಮಸ್ಯೆ ತಲೆದೋರಿತು.
- ಭಾರತದಲ್ಲಿ 1965 ರಲ್ಲಿ ಕ್ಷೀರಕ್ರಾಂತೀಯ ಪಿತಾಮಹನಾದ ವರ್ಗೀಸ್ ಕುರಿಯನ್ ರವರು ಗುಜರಾತ್ ರಾಜ್ಯದಲ್ಲಿ ಆನಂದ ಹೆಸರಿನಲ್ಲಿ ರಾಷ್ಟ್ರೀಯ ಹೈನುಗಾರಿಕೆ ಮಂಡಳಿ ಸ್ಥಾಪಿಸಿದರು.
- 1966-1969 ಇದನ್ನು ಪಂಚವಾರ್ಷಿಕ ಯೋಜನೆಗಳ ಮೊದಲ ರಜಾ ಅವಧಿ ಎನ್ನುವರು.
- ಇದನ್ನು ಹಸಿರು ಕ್ರಾಂತಿಯ ಅವಧಿ ಎನ್ನುವರು.
- ಹಸಿರು ಕ್ರಾಂತಿಯಿಂದ ಅತಿ ಹೆಚ್ಚು ಲಾಭ ಪಡೆದ ಭಾರತದ 2 ರಾಜ್ಯಗಳು ಪಂಜಾಬ್ ಮತತು ಹರಿಯಾಣ.
- ಹಸಿರು ಕ್ರಾಂತಿಯಿಂದ ಅತಿ ಹೆಚ್ಚು ಲಾಭ ಪಡೆದ ದಕ್ಷಿಣ ಬಾರತದ ರಾಜ್ಯವೆಂದರೆ ಆಂಧ್ರಪ್ರದೇಶ.
4ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಇಂದಿರಾಗಾಂಧಿ
- ಉಪಾಧ್ಯಕ್ಷರು – ಡಾ|| ಡಿ.ಆರ್.ಗಾಡ್ಗಿಲ್
- ಆದ್ಯತೆ – ಸ್ಥಿರತೆಯೊಂದಿಗೆ ಬೆಳವಣಿಗೆ
- 1969 ಜುಲೈ 19 ರಂದು ಮೂಲ ಬಂಡವಾಳ 50 ಕೋಟಿ ಹೊಂದಿರುವ 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಲಾಯಿತು.
- ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಬೆಳೆಗಳ ಮೇಲೆ ಸರ್ಕಾರವು ಕೊಡುವ ಪರಿಹಾರ ನಿಧಿಯನ್ನು ಬೇಳೆ ವಿಮೆಯನ್ನು ಜಾರಿಗೊಳಿಸಲಾಯಿತು.
- 1971 ಡಿಸೆಂಬರ್ 16ರ ಪೂರ್ವ ಪಾಕಿಸ್ತಾನವನ್ನು ಬಾಂಗ್ಲಾದೇಶವೆಂದು ವಿಮೋಚನೆಗೊಳಿಸಲಾಯಿತು.
- 1973 ರಲ್ಲಿ ಬರಪೀಡಿತ ಪ್ರದೇಶಗಳಿಗೆ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
- 1974 ಮೆ 18 ರಂದು ರಾಜಸ್ತಾನದ ಪ್ರೋಖ್ರಾನ್ ಎಂಬ ಸ್ಥಳದಲ್ಲಿ ಸ್ಮೈಲಿಂಗ್ ಬುದ್ದ ಅಥವಾ ನಗುವ ಬುದ್ದ ಎಂಬ ಅಣು ಪರೀಕ್ಷೆ ಮಾಡಲಾಯಿತು.
- ಈ ಯೋಜನೆಯನ್ನು ಡಿ.ಆರ್.ಗಾಡ್ಗಿಲ್ ರವರ ಮಾದರಿಯ ಪಂಚವಾರ್ಷಿಕ ಯೋಜನೆ ಎನ್ನುವರು.
5ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಇಂದಿರಾಗಾಂಧಿ
- ಉಪಾಧ್ಯಕ್ಷರು – ಪಿ.ಎನ್.ಹಕ್ಸಾರ್
- ಆದ್ಯತೆ – ಬಡತನ ನಿರ್ಮೂಲನೆ
- 1974 ರಲ್ಲಿ ಅಗತ್ಯ ಅಂಶಗಳನ್ನು ಜಾರಿಗೊಳಿಲಾಯಿತು.
- 1975ರಲ್ಲಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಯಿತು.
- ಉಳುವವನೆ ಭೂಮಿಯ ಒಡೆಯ
- ಗರಿಬಿ ಹಟಾವೊ
- ಪ್ರಾದೇಶಿಕ ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಸ್ಥಾಪಿಸಲಾಯಿತು
- ಕೂಲಿಗಾಗಿ ಕಾಳು ಯೋಜನೆ
- ಜೀತಪದ್ದತಿ ವಿಮುಕ್ತ ಕಾಯ್ದೆ ಕಾನೂನು ಜಾರಿಗೊಳಿಸಲಾಯಿತು(1976)
- ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಲಾಯಿತು(1976)
6ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಇಂದಿರಾಗಾಂಧಿ
- ಉಪಾಧ್ಯಕ್ಷರು – ಎನ್.ಡಿ.ತಿವಾರಿ
- ಆದ್ಯತೆ – ಸ್ವಾವಲಂಬನೆ, ಗ್ರಾಮೀಣಾಭಿವೃದ್ದಿ ಮತ್ತು ಬಡತನ ನಿರ್ಮೂಲನೆ
- 1980 ಏಪ್ರಿಲ್ 15 ರಂದು ಮೂಲ ಬಂಡವಾಳ 200ಕೋಟಿ ಹೊಂದಿರುವ 6 ಬ್ಯಾಂಕ್ಗಳನ್ನು ಮತ್ತೇ ರಾಷ್ಟ್ರೀಕರಣಗೊಳಿಸಿದರು.
- 1982 ಜುಲೈ 12 ರಂದು ಕೆ. ಶಿವರಾಮನ್ ಸಮಿತಿಯ ಶಿಫಾರಸ್ಸಿನ ಮೇರೆಗೆ ನಬಾರ್ಡ್ ಬ್ಯಾಂಕ್ ಸ್ಥಾಪಿಸಲಾಯಿತು.
- 1982 ರಲ್ಲಿ Exim ಬ್ಯಾಂಕ್ ನ್ನು ಸ್ಥಾಪಿಸಲಾಯಿತು.
- 1984 ಅಕ್ಟೋಬರ್ 31 ರಂದು ಇಂದಿರಾಗಾಂಧಿ ಮರಣ ಹೊಂದಿದರು.
7ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ರಾಜೀವಗಾಂಧಿ
- ಉಪಾಧ್ಯಕ್ಷರು – ಮನಮೋಹನ್ ಸಿಂಗ್
- ಆದ್ಯತೆ – ಆಹಾರ ಧಾನ್ಯಗಳ ಉತ್ಪಾದನೆ
- 1985 ರಲ್ಲಿ ಇಂದಿರಾಗಾಂಧಿ ಆವಾಸ ಯೋಜನೆ ಸ್ಥಾಪಿಸಲಾಯಿತು.
- 1986 ರಲ್ಲಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದರು.
- 1989 ರಲ್ಲಿ 61ನೇ ತಿದ್ದುಪಡಿ ಮೂಲಕ ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಇಳಿಸಲಾಯಿತು.
- ಈ ಅವಧಿಯಲ್ಲಿದ್ದ ಪ್ರಧಾನಿ – ಪಿ.ವಿ.ನರಸಿಂಹರಾವ್
- ಹಣಕಾಸು ಸಚಿವರು – ಮನಮೋಹನ್ ಸಿಂಗ್
- 1991 ಜುಲೈ 24 ಭಾರತದಲ್ಲಿ ಹೊಸ ಕೈಗಾರಿಕಾ ನೀತಿಗಳಾದ ಎಲ್.ಪಿ.ಜಿ.ಯನ್ನು ಜಾರಿಗೊಳಿಸಲಾಯಿತು.
- ದಕ್ಷಿಣ ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಚಾಣಕ್ಯ ಎಂದು ಪಿ.ವಿ.ನರಸಿಂಹರಾವರನ್ನು ಕರೆಯುತ್ತಾರೆ.
- ಆಧುನಿಕ ಭಾರತದ ಕೈಗಾರಿಕಾ ನೀತಿಯ ಪಿತಾಮಹಾ – ಸರ್.ಎಂ.ವಿಶ್ವೇಶ್ವರಯ್ಯ
8ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಪಿ.ವಿ.ನರಸಿಂಹರಾವ್
- ಉಪಾಧ್ಯಕ್ಷರು – ಪ್ರಣಬ್ ಮುಖರ್ಜಿ
- ಆಧ್ಯತೆ – ಮಾನವ ಸಂಪನ್ಮೂಲ
- 1995 ಜನವರಿ 1ರಲ್ಲಿ ಭಾರತವು WTO ದ ಸದಸ್ಯತ್ವವನ್ನು ಪಡೆದುಕೊಂಡಿತು.
- 1995 ರಲ್ಲಿ ಅಮರ್ತ್ಯಸೇನರವರು ಭಾರತದಲ್ಲಿ ಪ್ರಥಮ ಬಾರಿಗೆ HDI ನ್ನು ಅಳತೆ ಮಾಡಿದರು.
9ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಪಿ.ವಿ.ನರಸಿಂಹರಾವ್
- ಉಪಾಧ್ಯಕ್ಷರು – ಮಧುದಂಡವತೆ
- ಆದ್ಯತೆ – ಸಾಮಾಜಿಕ ನ್ಯಾಯ ಮತ್ತು ಸಮಾನತೆಯೊಂದಗಿನ ಆರ್ಥಿಕ ಬೆಳವಣಿಗೆ
- 1997 ರಲ್ಲಿ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ. ಇದು ನಗರ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಯೋಜನೆಯಾಗಿದೆ.
- 1999 ರಲ್ಲಿ ಸ್ವರ್ಣ ಜಯಂತಿ ಗ್ರಾಮೀಣ ರೋಜಗಾರ ಯೋಜನೆ. ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಯೋಜನೆಯಾಗಿದೆ.
- 1999 ರಲ್ಲಿ ಭಾರತ ಮತ್ತು ಪಾಕಿಸ್ತಾನ ಜೊತೆ ಕಾರ್ಗಿಲ್ ಯುದ್ದ ಸಂಭವಿಸಿತು.
- ಭಾರತವು ಪಾಕಿಸ್ತಾನವನ್ನು ಸೋಲಿಸಿ 1999 ಜುಲೈ 26 ರಂದು ಕಾರ್ಗಿಲ್ ವಶಪಡಿಸಿಕೊಂಡು ವಿಜಯೋತ್ಸವವನ್ನು ಆಚರಿಸಿಕೊಂಡಿತು. ಆಗಿದ್ದ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ರಾಷ್ಟ್ರಪತಿ – ಕೆ.ಆರ್ ನಾರಾಯಣ್.
- 1999 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ರವರ ಅವಧಿಯಲ್ಲಿ ಪ್ರಮುಖವಾದ 4 ನಗರಗಳಾದ ದೆಹಲಿ, ಕೋಲ್ಕತ್ತಾ, ಚೆನೈ, ಮುಂಬೈ, ನಗರಗಳಿಗರ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಕೋನ ಯೋಜನೆಯನ್ನು ಜಾರಿಗೊಳಿಲಾಯಿತು.
- ಡಿಸೆಂಬರ್ 25,2000 ರಲ್ಲಿ ಕಚ್ಚಾ ರಸ್ತೆಗಳನ್ನು ಪಕ್ಕಾ ರಸ್ತೆಗಳನ್ನಾಗಿಸಿ ಮುಖ್ಯವಾದ ರಸ್ತೆಗಳಿಗೆ ಸೇರಿಸುವ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯ ಉದ್ದೇಶವಾಗಿದೆ.
- 2001 ರಲ್ಲಿ ಸಾಕ್ಷರತೆಯನ್ನು ಹೆಚ್ಚಿಸಲು ಸರ್ವ ಶಿಕ್ಷಣ ಅಭಿಯಾನ ಯೋಜನೆಯನ್ನು ಜಾರಿಗೊಳಿಸಲಾಯಿತು.
- ಡಿಸೆಂಬರ್ 25, 2002 ರಂದು ಅಂತ್ಯೋದಯ ಅನ್ನಯೋಜನೆ ಜಾರಿಗೊಳಿಸಲಾಯಿತು.
10 ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಅಟಲ್ ಬಿಹಾರಿ ವಾಜಪೇಯಿ
- ಉಪಾಧ್ಯಕ್ಷರು – ಕೆ.ಸಿ.ಪಂತ್
- ಆದ್ಯತೆ – ಸಮಾನತೆ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಆರ್ಥಿಕ ಬೆಳವಣಿಗೆ
- 2002 ರಲ್ಲಿ 86ನೇ ತಿದ್ದುಪಡಿ ಪ್ರಕಾರ 6ರಿಂದ 14 ವರ್ಷದ ಒಳಗಿನ ಮಕ್ಕಿಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು 21(ಎ) ಮತ್ತು ಪೋಷಕರ ಮೂಲಭೂತ ಕರ್ತವ್ಯವಾಗಿ 51(ಎ)ಕೆ ಯಲ್ಲಿ ಸೇರಿಸಲಾಯಿತು. ಇದು 11ನೇ ಮೂಲಭೂತ ಕರ್ತವ್ಯವಾಗಿದೆ.
- 2005 ರಲ್ಲಿ ಭಾರತ ನಿರ್ಮಾಣ ಎಂಬ ಯೋಜನೆ ಜಾರಿಗೊಳಿಸಲಾಯಿತು. ಈ ಯೋಜನೆ 2005 ರಿಂದ 2009 ರ ವರೆಗೆ ಜಾರಿಯಲ್ಲಿತ್ತು.
- ಭಾರತ ನಿರ್ಮಾಣ ಯೋಜನೆ ಪ್ರಮುಖವಾದ 6 ಕ್ಚೇತ್ರಗಳ ಅಭಿವೃದ್ದಿಗೆ ಆಧ್ಯತೆ ನೀಡಿತು. ಅವುಗಳೆಂದರೆ ಗ್ರಮೀಣ ರಸ್ತೆ, ಗ್ರಾಮೀಣವಸತಿ, ಗ್ರಾಮೀಣ ಸಾರಿಗೆ ಸಂಪರ್ಕ, ಗ್ರಾಮೀಣ ನೀರಾವರಿ, ಗ್ರಾಮೀಣ ವಿದ್ಯುಚ್ಛಕ್ತಿ, ಗ್ರಾಮೀಣ ಕುಡಿಯುವ ನೀರು.
- 2005 ರಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಧಿನಿಯಮವನ್ನು ಜಾರಿಗೊಳಿಸಿ 2006 ಫೆಬ್ರವರಿ 2 ರಂದು ಉತ್ತರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಈ ಯೋಜನೆ ಪ್ರಾರಂಭವಾಯಿತು.
- ನರೇಗಾ – ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
11ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಮನಮೋಹನ್ ಸಿಂಗ್
- ಉಪಾಧ್ಯಕ್ಷರು – ಮೌಟೆಂಕ್ ಸಿಂಗ್ ಅಹ್ಲುವಾಲಿಯಾ
- ಆದ್ಯತೆ – ತ್ವರಿತಗತಿ ಅಥವಾ ಶೀಘ್ರಗತಿಯ ಆರ್ಥಿಕ ಬೆಳವಣಿಗೆ
- 2008 ರಲ್ಲಿ ಕರ್ನಾಟಕವು ಎಲ್ಲಾ ಜಿಲ್ಲೆಗಳಲ್ಲಿ ನರೇಗಾವನ್ನು ಜಾರಿಗೊಳಿಸಲಾಯಿತು.
- 2009 ಅಕ್ಟೋಬರ್ 2 ರಂದು ನರೇಗಾವನ್ನು ಎಮ್.ಜಿ.ನರೇಗಾ ಎಂದು ಪುನರ್ ಎಂದು ಪುನರ್ ನಾಮಕರಣ ಮಾಡಲಾಯಿತು.
- ಈ ಯೋಜನೆಯಲ್ಲಿ 70 ಮಿಲಿಯನ್ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಯಿತು.
- ಈ ಯೋಜನೆಯಲ್ಲಿ ಪ್ರಮುಖವಾದ ವರಮಾನ, ಶಿಕ್ಷಣ, ಮಕ್ಕಳ ಮತ್ತು ಮಹಿಳೆಯರ ಲಿಂಗಾನುಪಾತ ಮೂಲ ಸೌಕರ್ಯಗಳು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಈ ಕ್ಚೇತ್ರಗಳ ಅಭಿವೃದ್ದಿ ಮಾಡಲು ಆದ್ಯತೆ ನೀಡಲಾಯಿತು.
12ನೇ ಪಂಚವಾರ್ಷಿಕ ಯೋಜನೆ :
- ಅಧ್ಯಕ್ಷರು – ಮನಮೋಹನ್ ಸಿಂಗ್
- ಉಪಾಧ್ಯಕ್ಷರು – ಮೌಟೆಂಕ್ ಸಿಂಗ್ ಅಹ್ಲುವಾಲಿಯಾ
- ಆದ್ಯತೆ – ಭ್ರಷ್ಟಾಚಾರ ನಿರ್ಮೂಲನೆ, ವಿದ್ಯಾಭ್ಯಾಸ ಮತ್ತು ಆರೋಗ್ಯ
- ಈ ಯೋಜನೆಯಲ್ಲಿ ಜಿ.ಡಿ.ಪಿ. 8% ಕ್ಕೆ ಏರಿಕೆ ಮಾಡಲಾಗುವುದು.
- ಕೃಷಿ ಜಿ.ಡಿ.ಪಿ.ದರವನ್ನು ಶೇ 4 ಕ್ಕೆ ಏರಿಸಲಾಯಿತು.
- ಕೈಗಾರಿಕಾ ವಲಯದ ಜಿ.ಡಿ.ಪಿ. ದರವನ್ನು ಶೇ 7.6 ಕ್ಕೆ ಏರಿಸಲಾಗುವುದು
- ಸೇವಾವಲಯದ ಜಿ.ಡಿ.ಪಿ. ದರವನ್ನು ಶೇ 9 ಕ್ಕೆ ಏರಿಸಲಾಗುವುದು.
- ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದು.
- ಸಾಕ್ಷರತೆಯನ್ನು ಹೆಚ್ಚಿಸಲಾಗುವುದು.
- ಮಕ್ಕಳ ಮತ್ತು ಹೆಣ್ಣು ಮಕ್ಕಳ ಲಿಂಗಾನುಪಾತವನ್ನು 950ಕ್ಕೆ ಏರಿಸಲಾಗುವುದು.
- ಈ ಯೋಜನೆ ಮುಗಿಯುದರೊಳಗೆ ಎಲ್ಲಾ ಗ್ರಾಮಗಳಿಗೆ ರಸ್ತೆ ಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಯಿತು.
FAQ :
6ರಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು 21(ಎ) ಗೆ ಮೂಲಭೂತ ಹಕ್ಕನಾಗಿ ಎಷ್ಟನೇ ಪಂಚವಾರ್ಷಿಕ ಯೋಜನೆಯಲ್ಲಿ ತರಲಾಯಿತು?
10ನೇ ಪಂಚವಾರ್ಷಿಕ ಯೋಜನೆ
1 ನೇ ಪಂಚವಾರ್ಷಿಕ ಯೋಜನೆಯ ಅಧ್ಯಕ್ಷ ಯಾರು?
ಜವಹಾರ್ ಲಾಲ್ ನೆಹರು
ಇತರೆ ವಿಷಯಗಳು :
ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ