ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ | Esaay on Karnataka Ekikarana in Kannada

Join Telegram Group Join Now
WhatsApp Group Join Now

ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ Esaay on Karnataka Ekikarana Karnataka Ekikaranada bagge Mahithi in Kannada

ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ

Esaay on Karnataka Ekikarana in Kannada
ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕ ಏಕೀಕರಣದ ಬಗ್ಗೆ ಮಾಹಿತಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಕರ್ನಾಟಕ ಏಕೀಕರಣದ ಹಿನ್ನಲೆ :

ಏಕೀಕರಣದ ಆರಂಭಿಕ ಹೆಜ್ಜೆಯನ್ನು ಇಟ್ಟವರು ಮುಂಬೈ ಕರ್ನಾಟಕ ಭಾಗದ ಜನರು. ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ 1890 ರಲ್ಲಿ ಆರಂಭವಾದ ʼಕರ್ನಾಟಕ ವಿದ್ಯಾವರ್ಧಕ ಸಂಘʼ ಏಕೀಕರಣ ಚಳವಳಿಯೆಂದು ಕರೆಯಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಲ್ಲಿ 1915 ರಲ್ಲಿ ಸ್ಥಾಪಿಸಲಾಯಿತು. ಇದು ಕರ್ನಾಟಕದ ಏಕೀಕರಣಕ್ಕೆ ಪ್ರೋತ್ಸಾಹ, ಕನ್ನಡ ಭಾಷೆ ಮತ್ತು ಸಾಹಿತ್ಯದ ಸರ್ವತೋಮುಖ ಬೆಳವಣಿಗೆ ಮುಂತಾದ ಗುರಿಗಳನ್ನು ಹೊಂದಿತ್ತು. ಕರ್ನಾಟಕ ಏಕೀಕರಣ ಸಭಾವನ್ನು ಧಾರವಾಡದಲ್ಲಿ 1916 ರಲ್ಲಿ ಪ್ರಾರಂಭಿಸಲಾಯಿತು. ಈ ಸಂಘಟನೆಗಳು ಕರ್ನಾಟಕ ಏಕೀಕರಣ ಚಳವಳಿಯನ್ನು ಮುಂದುವರೆಸಿದವು.

1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದಲ್ಲಿ ಹುಯಿಲಗೋಳ ನಾರಾಯಣ್ ರಾವ್‌ ಅವರು ʼಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುʼ ಎಂಬ ಸ್ವಾಗತಗೀತೆಯನ್ನು ಹಾಡುವ ಮೂಲಕ ಏಕೀಕರಣ ಚಳವಳಿಗೆ ವಿದ್ಯುತ್‌ ಸಂಚಲನವನ್ನು ತಂದುಕೊಟ್ಟರು. ಈ ಸಮ್ಮೇಳನದ ಅಧ್ಯಕ್ಷರಾಗಿದ್ದ ಮಹಾತ್ಮ ಗಾಂಧೀಜಿಯವರು ಏಕೀಕರಣಕ್ಕೆ ತಮ್ಮ ಬೆಂಬಲವನ್ನು ನೀಡಿದರು. ಏಕೀಕರಣ ಚಳವಳಿಗೆ ಪೂರಕವಾಗಿಯೇ ಕೆಲಸ ಮಾಡಿತು.

ಏಕೀಕರಣ ಚಳವಳಿಯಲ್ಲಿ ಪತ್ರಿಕೋದ್ಯಮ ಮತ್ತು ಸಾಹಿತ್ಯದ ಪಾತ್ರ :

ವಿಶ್ವಕರ್ನಾಟಕ, ನವಕರ್ನಾಟಕ, ವಾಗ್ಬೂಷಣ, ಜಯಕರ್ನಾಟಕ, ಸಂಯುಕ್ತ ಕರ್ನಾಟಕ ಮೊದಲಾದ ದಿನಪತ್ರಿಕೆಗಳು, ವಾರಪತ್ರಿಕೆಗಳು ಏಕೀಕರಣ ಚಳವಳಿಗೆ ಪ್ರೇರಣೆ ನೀಡಿದವು. ಈ ಪತ್ರಿಕೆಗಳು ವಿವಿಧ ಭಾಗಗಳಿಂದ ಪ್ರಕಟಗೊಳ್ಳುತ್ತಿದ್ದವು. ಇದರ ಜೊತೆಗೆ ಸಾಹಿತ್ಯ ಕೃತಿಗಳು ಏಕೀಕರಣಕ್ಕೆ ಸ್ಫೂರ್ತಿ ತುಂಬಿದವು.

ಕನ್ನಡನಾಡು ನುಡುಗಳ ವೈಭವವನ್ನು ಕನ್ನಡಿಗರಿಗೆ ತಿಳಿಸುವುದೇ ಆಲೂರು ವೆಂಕಟರಾಯರ ಉದ್ದೇಶವಾಗಿತ್ತು. ಅದಕ್ಕಾಗಿ ʼಕರ್ನಾಟಕ ಗತವೈಭವʼ ಎಂಬ ಗ್ರಂಥ ಬರೆದು ತಮ್ಮ ಖರ್ಚಿನಿಂದ ಪ್ರಕಟಿಸಿದರು. ಕುವೆಂಪುರವರ “ಜಯ ಹೇ ಕರ್ನಾಟಕ ಮಾತೆ”, ʼನೀ ಮೆಟ್ಟುವ ನೆಲ ಅದೆ ಕರ್ನಾಟಕʼ ಮುಂತಾದವು ಕನ್ನಡಿಗರ ಹೃದಯಗಳನ್ನು ತಟ್ಟಿದವು. ಹುಯಿಲಗೊಳ ನಾರಾಯಣ್‌ ರಾವ್‌ ಅವರ ʼಉದಲವಾಗಲಿ ನಮ್ಮ ಚೆಲುವ ಕನ್ನಡ ನಾಡುʼ ಎಂಬ ನಾಡಗೀತೆಯು ಅತ್ಯಂತ ಜನಪ್ರಿಯವಾಯಿತು.

Join WhatsApp Join Telegram

ಸ್ವಾತಂತ್ರ್ಯೋತ್ತರ ಏಕೀಕರಣ ಚಳುವಳಿ :

ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲಾವಧಿಯ ಏಕೀಕರಣದ ಕನಸು ನನಾಸಾದುದು ದೇಶ ಸ್ವಾತಂತ್ರ್ಯಗಳಿಸಿದ ಅನಂತರವೇ ಅದು ಮೂರು ಹಂತಗಳಲ್ಲಿ ನಡೆಯಿತು.

ಮೊದಲನೆಯ ಹಂತ (1947-1948) :

1947 ರ ಮೊದಲು ನಮ್ಮ ದೇಶದಲ್ಲಿ ಎರಡು ಬಗೆಯ ರಾಜ್ಯಗಳಿದ್ದವು, ಬ್ರಿಟಿಷ್‌ ಭಾರತದ ಪ್ರ್ಯಾಂತ್ಯಗಳು ಮತ್ತು ಅರಸೊತ್ತಿಗೆಯ 562 ರಾಜ್ಯಗಳು. ಸಂವಿಧಾನ ಸಭೆಯು ಭಾರತವನ್ನು ಭಾಷಾವಾರು ಪ್ರ್ಯಾಂತ್ಯಗಳಾಗಿ ರೂಪಿಸದೇ, ಭಾರತವನ್ನು ನಾಲ್ಕು ಬಗೆಯ ಆಡಳಿತ ಭಾಗಗಳನ್ನಾಗಿ ವಿಂಗಡಿಸಿತು. ಕರ್ನಾಟಕದ 20 ಆಡಳಿತ ಘಟಕಗಳನ್ನು 5 ಘಟಕಗಳನ್ನಾಗಿ ಪುನರ್‌ ವಿಂಗಡಿಸಲಾಯಿತು. ಈ ಐದು ಘಟಕಗಳೆಂದರೆ ಮುಂಬೈ, ಮದ್ರಾಸ್‌, ಮೈಸೂರು, ಹೈದರಾಬಾದ್‌ ಮತ್ತು ಕೊಡಗು. ಇದು ಕರ್ನಾಟಕ ಏಕೀಕರಣದ ನಿಟ್ಟಿನಲ್ಲಿ ಮೊದಲನೆಯ ಹಂತವಾಯಿತು.

ಎರಡನೆಯ ಹಂತ (1953) :

1951-52 ರಲ್ಲಿ ಲೋಕಸಭೆಗೆ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆಯಿತು, ಚುನಾವಣೆಯ ನಂತರ ಉಗ್ರ ಚಳವಳಿಯ ಮನೋಭಾವದ ʼಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್‌ʼ ಎಂಬ ಪಕ್ಷ ಉದಯಿಸಿತು. ಈ ಪಕ್ಷ ಏಕೀಕರಣಕ್ಕಾಗಿ ಸತ್ಯಾಗ್ರಹ ನಡೆಸಿ ಸುಮಾರು 5 ಸಾವಿರ ಮಂದಿ ಬಂಧಿತರಾಗಿ ಸೆರೆಮನೆ ಸೇರಿದರು. ಕೆಂಗಲ್‌ ಹನುಮಂತಯ್ಯ, ಎಸ್.ನಿಜಲಿಂಗಪ್ಪ ಇವರುಗಳು ಏಕೀಕರಣಕ್ಕೆ ಬೆಂಬಲವನ್ನು ನೀಡಿದರು ಮತ್ತು ಏಕೀಕರಣದ ಪರವಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡರು. ಪ್ರಚಾರ ಭಾಷಣಗಳನ್ನು ಮಾಡಿದರು.

ಕೊನೆಯ ಹಂತ :

ಆಂಧ್ರಪ್ರದೇಶ ರಚನೆಯಾದ ನಂತರ ಭಾಷೆಯ ಆಧಾರದಲ್ಲಿ ಪ್ರಾಂತ್ಯ ಪುನರ್ವಿಂಗಡನೆಯ ಬೇಡಿಕೆ ತೀವ್ರಗೊಂಡಿತು. ಕೇಂದ್ರ ಸರ್ಕಾರವು ರಾಜ್ಯಗಳ ಪುನರ್‌ ವಿಂಗಡಣೆಯನ್ನು ಕುರಿತು ವರದಿ ನೀಡಲುʼರಾಜ್ಯ‌ ಪುನರ್ವಿಂಗಡಣಾ ಆಯೋಗʼವನ್ನು ನೇಮಿಸಿತು. ಇದರ ಅಧ್ಯಕ್ಷರು ಫಜಲ್‌ ಅಲಿ. ಈ ಆಯೋಗವು 1955 ರಲ್ಲಿ ವರದಿಯನ್ನು ಸಲ್ಲಿಸಿತು. ನಾಡಿನ ಎಲ್ಲಾ ಪಕ್ಷಗಳು ವರದಿಯನ್ನು ಮಾನ್ಯ ಮಾಡಿದವು.

ಕೇಂದ್ರ ಸರ್ಕಾರವು ರಾಜ್ಯ ಪುನರ್‌ ವಿಂಗಡಣಾ ಆಯೋಗದ ವರದಿಯನ್ನು ಒಪ್ಪಿದ್ದರಿಂದ 1956 ನವೆಂಬರ್‌ 1 ರಂದು ʼವಿಶಾಲ ಮೈಸೂರು ರಾಜ್ಯʼ ಅಸ್ತಿತ್ವಕ್ಕೆ ಬಂತು. 1956 ರಲ್ಲಿ ಏಕೀಕೃತ ವಿಶಾಲ ಮೈಸೂರು ರಾಜ್ಯಕ್ಕೆ ಎಸ್.ನಿಜಲಿಂಗಪ್ಪನವರು ಪ್ರಥಮ ಮುಖ್ಯಮಂತ್ರಿಗಳಾದರು. ಮುಂದೆ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸರು 1973 ರ ನವೆಂಬರ್‌ 1 ರಂದು ವಿಶಾಲ ಮೈಸೂರು ರಾಜ್ಯಕ್ಕೆ ʼಕರ್ನಾಟಕʼ ಎಂದು ಮರುನಾಮಕರಣ ಮಾಡಿದರು.

FAQ :

ವಿಶಾಲ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಯಾರು?

ಎಸ್.ನಿಜಲಿಂಗಪ್ಪನವರು.

ವಿಶಾಲ ಮೈಸೂರು ರಾಜ್ಯಕ್ಕೆ ʼಕರ್ನಾಟಕʼ ಎಂದು ಯಾವಾಗ ಮರುನಾಮಕರಣ ಮಾಡಲಾಯಿತು?

1973.

ಇತರೆ ವಿಷಯಗಳು :

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಬಗ್ಗೆ ಮಾಹಿತಿ

ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ

Leave your vote

10 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.