ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ | Information about 10 districts of Karnataka in Kannada

Join Telegram Group Join Now
WhatsApp Group Join Now

ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ Information about 10 districts of Karnataka Karnatakada 10 Jillegala Bagge Mahithi in Kannada

ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ

Information about 10 districts of Karnataka in Kannada
ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಕರ್ನಾಟಕದ 10 ಜಿಲ್ಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಿಜಯಪುರ ಜಿಲ್ಲೆ :

  • ಈ ಜಿಲ್ಲೆಯಲ್ಲಿ ತಾಳಿಕೋಟೆ ಅಥವಾ ರಕ್ಕಸ ತಂಗಡಗಿ ಎಂಬ ಯುದ್ದ ನಡೆದ ಭೂಮಿ ಇದೆ. ಈ ಕದನವು ಜನವರಿ 23 ರಂದು ಬಹುಮನಿ ಸುಲ್ತಾನರು ಮತ್ತು ವಿಜಯನಗರ ಸಾಮ್ರಾಜ್ಯದ ನಡುವೆ ನಡೆಯಿತು. ಇದರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ಸೋಲಾಯಿತು.
  • ಭಾರತದ ಅತಿ ದೊಡ್ಡ ಗುಮ್ಮಟವಾದ ಗೋಲ ಗುಮ್ಮಟವು ಬಿಜಾಪುರದಲ್ಲಿದೆ. ಈ ಕಟ್ಟಡವನ್ನು ಮಹಮ್ಮದ್‌ ಆದಿಲ ಷಾ ಕಟ್ಟಿಸಿದನು.
  • ಬಿಜಾಪುರದಲ್ಲಿರುವ ಇಬ್ರಾಹಿಂ ರೋಜಾವನ್ನು ದಕ್ಷಿಣ ಭರತದ ತಾಜ್ಮಹಲ್‌ ಎಂದು ಕರೆಯಲಾಗುತ್ತದೆ. ಇದನ್ನು 2 ನೇ ಇಬ್ರಾಹಿಂ ಆದಿಲ್‌ ಷಾ ಕಟ್ಟಿಸಿದನು.
  • ಬಿಜಾಪುರವನ್ನು ಕರ್ನಾಟಕದ ಪಂಜಾಬ್‌ ಎನ್ನುವರು.
  • ಇಲ್ಲಿ ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರ ನಿರ್ಮಿಸಲಾಗಿದೆ
  • ಆಲಮಟ್ಟಿ ಅಥವಾ ಲಾಲ್‌ ಬಹದ್ದೂರ್ ಶಾಸ್ತ್ರೀ ಜಲಾಶಯವನ್ನು ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  • ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.
  • ಇಲ್ಲಿ ಕೃಷ್ಣಾ, ದೋಣಿ, ಭೀಮಾ ನದಿಗಳು ಹರಿಯುತ್ತವೆ.
  • ಕರ್ನಾಟಕದಲ್ಲಿ ಅತಿ ಹೆಚ್ಚು ದ್ರಾಕ್ಷಿ ಮತ್ತು ಜೋಳ ಬೆಳೆಯುವ ಜಿಲ್ಲೆಯಾಗಿದೆ.
  • ಇಂಡಿಯಲ್ಲಿ ಲಿಂಬೆ ಪಾರ್ಕ್‌ ಸ್ಥಾಪನೆಯಾಗಿದೆ.

ಬಾಗಲಕೋಟೆ ಜಿಲ್ಲೆ :

  • ವಿಜಯಪುರ ಜಿಲ್ಲೆಯಿಂದ 1997 ರಲ್ಲಿ ಪ್ರತ್ಯೇಕವಾಯಿತು.
  • ಈ ಜಿಲ್ಲೆಯವರಾದ ಬಿ.ಡಿ. ಜತ್ತಿಯವರು ಉಪರಾಷ್ಟ್ರಪತಿಯಾದ ಏಕೈಕ ಕನ್ನಡಿಗರು ಮತ್ತು ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ.
  • ನವನಗರದ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ.
  • ಇಲ್ಲಿನ ಬಾದಾಮಿಯಲ್ಲಿರುವ ಗುಹಾಂತರ ದೇವಾಲಯವನ್ನು ಚಾಲುಕ್ಯರು ನಿರ್ಮಿಸಿದ್ದಾರೆ.
  • ಐಹೊಳೆ ದೇವಾಲಯವು ಭಾರತದ ಸಂಸತ್ತಿಒನ ಆಕಾರವನ್ನು ಹೊಂದಿದೆ. ಇದನ್ನು ದೇವಾಲಯಗಳ ತೊಟ್ಟಿಲು ಎಂದು ಕರೆಯುವರು.
  • ಯಡೆಹಳ್ಳಿ ಎಂಬ ಪ್ರದೇಶವು ಚಿಂಕಾರ ಜಿಂಕೆಗಳಿಗೆ ಪ್ರಸಿದ್ದಿಯಾಗಿದೆ.
  • ಇಲಕಲ್‌ ಪಿಂಕ್‌ ಕಲ್ಲಿನ ಗ್ರಾನೈಟ್‌ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ.
  • ಮುಧೋಳ ತಾಲೂಕಿನಲ್ಲಿ ಹಲಗಲಿ ಎನ್ನುವ ಊರು ಇದೆ.
  • ಇಲ್ಲಿ ಬೇಡರ ದಂಗೆಯು 1857 ರಲ್ಲಿ ನಡೆಯಿತು. ಈ ದಂಗೆಯು ಸಶಸ್ತ್ರ ದಂಗೆಯಾಗಿದೆ.
  • ಇಲ್ಲಿ ಐಹೊಳೆ, ಪಟ್ಟದಕಲ್ಲು, ಬಾದಾಮಿ ಎಂಬ ಊರುಗಳಿವೆ.
  • ಪಟ್ಟದಕಲ್ಲು 1987 ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ.

ಕಲ್ಬುರ್ಗಿ ಜಿಲ್ಲೆ :

  • ಕರ್ನಾಟಕದಲ್ಲಿ ಅತಿ ಹೆಚ್ಚು ತೊಗರಿ ಬೇಳೆ ಬೆಳೆಯುವ ಜಿಲ್ಲೆಯಾಗಿದೆ. ಇಲ್ಲಿ ತೊಗರಿ ಬೇಳೆ ನಿಗಮ ಕೇಂದ್ರ ಕಛೇರಿ ಸ್ಥಾಪಿಸಲಾಗಿದೆ.
  • ಕರ್ನಾಟಕದಲ್ಲಿ ಪ್ರತಿ ಕುಟುಂಬ ಬ್ಯಾಂಕ್‌ ಖಾತೆ ಹೊಂದಿದ ಮೊದಲ ಜಿಲ್ಲೆಯಾಗಿದೆ.
  • ಇಲ್ಲಿ ಖ್ವಾಜ ಬಂದೇನವಾಜ್ ದರ್ಗಾ ಇದೆ.
  • ಕರ್ನಾಟಕದಲ್ಲಿ ಅತಿ ಹೆಚ್ಚು ಸಿಮೆಂಟ್‌ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.
  • ಇದು ಅತಿ ಹೆಚ್ಚು ಬೀಳು ಭೂಮಿ ಹೊಂದಿದ ಜಿಲ್ಲೆಯಾಗಿದೆ.
  • ಜಾಮೀಯ ಮಸೀದಿ ದಕ್ಷಿಣ ಭಾರತದ ಎರಡನೇ ಅತೀ ದೊಡ್ಡ ಮಸೀದಿ ಹಾಗೂ ಕರ್ನಾಟಕದ ದೊಡ್ಡ ಮಸೀದಿಯಾಗಿದೆ.
  • ಕರ್ನಟಕದಲ್ಲಿ ಮೊದಲ ದೂರದರ್ಶನ ಬಂದಿದ್ದು ಕಲ್ಬುರ್ಗಿ ಜಿಲ್ಲೆಯಾಗಿದೆ.
  • ಕರ್ನಾಟಕದಲ್ಲಿ ಪ್ರತಿ ಕುಟುಂಬ ಬ್ಯಾಂಕ್‌ ಖಾತೆ ಹೊಂದಿದ ಮೊದಲ ಜಿಲ್ಲೆಯಾಗಿದೆ.
  • ಕರ್ನಾಟಕದಲ್ಲಿ ವಿಸ್ತೀರ್ಣದಲ್ಲಿ 2ನೇ ಅತಿದೊಡ್ಡ ಜಿಲ್ಲೆಯಾಗಿದೆ.

ಯಾದಗಿರಿ ಜಿಲ್ಲೆ :

  • ಇಲ್ಲಿ ಶಹಪುರ, ಸುರಪುರ, ಎಂಬ ತಾಲೂಕುಗಳನ್ನು ಒಳಗೊಂಡಿದೆ.
  • ಸುರಪುರದಲ್ಲಿ ರಾಜಾ ವೆಂಕಟಪ್ಪ ನಾಯಕ 1857 ರಲ್ಲಿ ಬ್ರಿಟೀಷರ ವಿರುದ್ದ ಹೋರಾಟ ಮಾಡಿದ.
  • ಕರ್ನಾಟಕದ ಅತಿ ದೊಡ್ಡ ಭೋನಾಳ ಪಕ್ಷಿಧಾಮವಿದೆ.
  • ಇಲ್ಲಿ ಮಲಗಿರುವ ಬುದ್ದನ ಬೆಟ್ಟ ಕಂಡು ಬರುತ್ತದೆ. ಇದು ಶಹಪುರ ತಾಲ್ಲೂಕಿನಲ್ಲಿದೆ.
  • ಕರ್ನಾಟಕದಲ್ಲಿ ಅತಿ ಕಡಿಮೆ ಸಾಕ್ಷರತೆ ಮತ್ತುತಲಾ ಆದಾಯ ಹೊಂದಿದ ಜಿಲ್ಲೆಯಾಗಿದೆ.
  • ಇಲ್ಲಿ ನಾರಾಯಣ ಜಲಾಶಯವನ್ನು ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದಕ್ಕೆ ಬಸವ ಸಾಗರ ಆಣೆಕಟ್ಟು ಎಂದು ನಾಮಕರಣ ಮಾಡಲಾಗಿದೆ.

ಬೀದರ್‌ ಜಿಲ್ಲೆ :

  • ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ರವರು ಬೀದರ್‌ ಜಿಲ್ಲೆಗೆ ಭೇಟಿಕೊಟ್ಟಿದ್ದರು. ಇಲ್ಲಿ ಗುರುನಾನಕ್‌ ಝರಾ ಇದೆ.
  • ಬಹುಮನಿ ಸುಲ್ತಾನರ 2ನೇ ರಾಜಧಾನಿ ಆಗಿತ್ತು.
  • ಮೀನುಗಾರಿಕೆ ವಿಶ್ವವಿದ್ಯಾಲಯ ಇದೆ.
  • ಇಲ್ಲಿ ಕಾರಂಜಾ ಆಣೆಕಟ್ಟು ಇದೆ. ಇದನ್ನು ಮಾಂಜ್ರಾ ನದಿಯ ಉಪನದಿಯಾದ ಕಾರಂಜಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  • ಇಲ್ಲಿ ಮಹಮ್ಮದ್‌ ಗವಾನ್‌ ಕಟ್ಟಿಸಿದ ಮದರಸ ಇದೆ.
  • ಇಲ್ಲಿ ಬುಡಕಟ್ಟು ಪಾರ್ಕ್‌ ಇದೆ.

ಧಾರವಾಡ ಜಿಲ್ಲೆ :

  • ಕರ್ನಾಟಕದಲ್ಲಿ ಹೋಂರೂಲ್ ಚಳುವಳಿ ಧಾರವಾಡದಿಂದ ಪ್ರಾರಂಭವಾಯಿತು.
  • 1890 ರಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿದೆ.
  • ಹುಬ್ಬಳ್ಳಿಯಲ್ಲಿ ಡಾ. ಎನ್. ಎಸ್.‌ ಹರ್ಡೇಕರ್ ರವರು ಹಿಂದೂಸ್ತಾನಿ ಸೇವಾದಳವನ್ನು ಸ್ಥಾಪಿಸಿದರು.
  • ಇಲ್ಲಿ ಆಲೂರು ವೆಂಕಟರಾಯರು ರಾಷ್ಟ್ರೀಯ ಶಾಲೆಯನ್ನು ಸ್ಥಾಪಿಸಿದರು.
  • ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಇದೆ.
  • ಧಾರವಾಡ ಎಮ್ಮೆಗೆ ರಾಷ್ಟ್ರೀಯ ಮಾನನ್ಯತೆ ನೀಡಲಾಗಿದೆ.

ದಾವಣಗೆರೆ ಜಿಲ್ಲೆ :

  • ಇದಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್‌ ಎಂದು ಕರೆಯುತ್ತಾರೆ.
  • ದಾವಣಗೆರೆ ವಿಶ್ವ ವಿದ್ಯಾಲಯವಿದೆ. ಇದರ ದ್ಯೇಯ ವಾಕ್ಯ : ತಮಸೋಮ ಜ್ಯೋತಿರ್ಗಮಯ.
  • ಇಲ್ಲಿ ಸಮಗ್ರ ಅಂಗವಿಕಲರ ಪುನರ್ವಸತಿ ಪ್ರಾದೇಶಿಕ ಕೇಂದ್ರವಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ :

  • ಇಲ್ಲಿ ದೇವನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಭಾರತದ ಮೊದಲ ಹುಲ್ಲು ಹಾಸಿನ ವಿಮಾನ ನಿಲ್ದಾಣವಾಗಿದೆ.
  • ಇಲ್ಲಿನ ದೇವನಳ್ಳಿಯು ರೇಷ್ಮೆಗೆ ಹೆಸರುವಾಸಿಯಾಗಿದೆ.
  • ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ್‌ 1750 ನವೆಂಬರ್‌ 20 ಜನಿಸಿದರು.

ಕೊಡಗು ಜಿಲ್ಲೆ :

  • ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
  • ಕರ್ನಾಟಕದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ.
  • ಕರ್ನಾಟಕದ ಕಾಶ್ಮೀರ ಎಂದು ಕರೆಯುತ್ತಾರೆ.
  • ಭಾರತದ ಪ್ರಥಮ ಸೇನಾ ದಂಡನಾಯಕ ಜನರಲ್‌ ಕೆ. ಎಂ.ಕಾರ್ಯಪ್ಪ ಇದೇ ಜಿಲ್ಲೆಯವರು.
  • ಇಲ್ಲಿ ತಲಕಾವೇರಿಯಲ್ಲಿ ಕಾವೇರಿ ನದಿ ಉಗಮವಾಗುತ್ತದೆ.
  • ಇದನ್ನು ಭಾರತದ ಸ್ಕಾಟ್‌ ಲ್ಯಾಂಡ್‌ ಎಂದು ಕರೆಯುತ್ತಾರೆ.
  • ಇದು ರೈಲು ಮಾರ್ಗ ಹೊಂದಿರದ ಏಕೈಕ ಜಿಲ್ಲೆಯಾಗಿದೆ.
  • ಇಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಇದೆ. ಇದನ್ನು ರಾಜೀವಗಾಂಧೀ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣ ಮಾಡಿದ್ದಾರೆ.

ಚಾಮರಾಜನಗರ ಜಿಲ್ಲೆ :

  • ಇದು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಜಿಲ್ಲೆಯಾಗಿದೆ.
  • ಇಲ್ಲಿ ಗಗನಚುಕ್ಕಿ, ಭರಚುಕ್ಕಿ ಎಂಬ ಜುಪಾತ ಇದೆ.
  • ಇಲ್ಲಿ ಸುವರ್ಣವತಿ ಡ್ಯಾಂ ಇದೆ.
  • ಇಲ್ಲಿ ಬಿಳಿಗಿರಿ ರಂಗನ ಬೆಟ್ಟವಿದೆ. ಇಲ್ಲಿ ಆನೆಗಳನ್ನು ರಕ್ಷಿಸಲಾಗಿದೆ.
  • ಹೊಗೆನ್‌ಕಲ್ ಜಲಪಾತ ವಿವಾದವು ಕರ್ನಾಟಕದ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಇದೆ.
  • ಇಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಇದೆ. ಇದು ಭಾರತದ ಮೊದಲ ಹುಲಿ ಸಂರಕ್ಷಣಾ ತಾಣವಾಗಿದೆ. ಮತ್ತು ಕರ್ನಾಟಕದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ.

FAQ :

ಕರ್ನಾಟಕದ ಮ್ಯಾಂಚೆಸ್ಟರ್‌ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?

ದಾವಣಗೆರೆ

ಕರ್ನಾಟಕದ ಪಂಜಾಬ್‌ ಎಂದು ಯಾವ ಜಿಲ್ಲೆಯನ್ನು ಕರೆಯುವರು?

ಬಿಜಾಪುರ

ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆ ಯಾವುದು?

ಕೊಡಗು

ಕರ್ನಾಟಕದ ಅತಿ ದೊಡ್ಡ ಪಕ್ಷಿಧಾಮ ಯಾವುದು?

ಭೋನಾಳ

Join WhatsApp Join Telegram

ಇತರೆ ವಿಷಯಗಳು :

ಅಪ್ಪನ ಬಗ್ಗೆ ಪ್ರಬಂಧ 

ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.