ಆತ್ಮ ನಿರ್ಭರ ಭಾರತ ಪ್ರಬಂಧ | Atma Nirbhar Bharat Essay in Kannada

Join Telegram Group Join Now
WhatsApp Group Join Now

ಆತ್ಮ ನಿರ್ಭರ ಭಾರತ ಪ್ರಬಂಧ Atma Nirbhar Bharat Essay Athma Nirbhara Bharathada bagge Prabandha in Kannada

ಆತ್ಮ ನಿರ್ಭರ ಭಾರತ ಪ್ರಬಂಧ

ಆತ್ಮ ನಿರ್ಭರ ಭಾರತ ಪ್ರಬಂಧ

ಈ ಲೇಖನಿಯಲ್ಲಿ ಆತ್ಮ ನಿರ್ಭರ ಭಾರತ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

ಭಾರತದ ಆರ್ಥಿಕತೆಯ ಪ್ರಸ್ತುತ ಪ್ರಕ್ಷುಬ್ದ ಸ್ಥಿತಿಯಲ್ಲಿದ್ದು, ದೀರ್ಘಕಾಲದ ಮಂದಗತಿಯ ಬಗ್ಗೆ ಸುಳಿವು ನೀಡುತ್ತಿದೆ. ಕೊರೊನಾ ವೈರಸ್‌ ಸಾಂಕ್ರಾಮಿಕವು ಕಳೆದ ವರ್ಷದಿಂದಲೂ ಭಾರತದ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳನ್ನು ದುರ್ಬಲಗೊಳಿಸಿದೆ ಮತ್ತು ಈ ವರ್ಷವೇ ಅದನ್ನು ಚೇತರಿಸಲು ಅಸಂಭವವಾಗಿದೆ. ಬೆಳವಣಿಗೆಯ ಕುಸಿತದಿಂದಾಗಿ ಹಣದುಬ್ಬರ ಹೆಚ್ಚಾಗಿದ್ದು, ನಿರುದ್ಯೋಗ ಸಮಸ್ಯೆ ತೀರಾ ಉಲ್ಬಣವಾಗಿದೆ. ಭಾರತದ GDP ಯು ಇಡೀ ವರ್ಷ ಋಣಾತ್ಮಕವಾಗಿ ಉಳಿಯುವ ನಿರೀಕ್ಷೆಯಿದೆ.

ವಿಷಯ ವಿವರಣೆ :

“ಆತ್ಮ ನಿರ್ಭರ ಭಾರತಕ್ಕೆ ಕರೆ” :

  • ಜಾಗತಿಕ ಮಾರುಕಟ್ಟೆಯಲ್ಲಿ ಬಾರತದ ಉತ್ಪನ್ನಗಳು ಪಾಲನ್ನು ಪಡೆಯಲು ಮತ್ತು ಗುಣಮಟ್ಟದ ಸರಕುಗಳನ್ನು ವಿದೇಶಿ ಬ್ರಾಂಡ್ ಗಳಿಗೆ ಪರ್ಯಾಯವಾಗಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷ “ಆತ್ಮ ನಿರ್ಭರ ಭಾರತಕ್ಕೆ” ಕರೆ ನೀಡಿದ್ದಾರೆ.
  • ಇದು ದೇಶವನ್ನು ಸ್ವಾವಲಂಬನೆಯಾಗಿಸುತ್ತದೆ ಮತ್ತು ಯಾವುದೇ ರೀತಿಯ ಜಾಗತಿಕ ಮಾರುಕಟ್ಟೆಯಿಂದ ಹಿಂದೆ ಸರಿಯುವ ತಂತ್ರವನ್ನು ಇದು ಒಳಗೊಂಡಿಲ್ಲ.
  • ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಮತ್ತು RBI ತೆಗೆದುಕೊಂಡ ನಿರ್ಧಾರಗಳೊಂದಿಗೆ ಒಟ್ಟು 20 ಲಕ್ಷ ಕೋಟಿ ರೂಗಳ ಪ್ಯಾಕೇಜನ್ನು ಇದರಡಿ ಘೋಷಿಸಲಾಗಿದ್ದು, ಇದು ಭಾರತದ GDP ಯ ಸುಮಾರು 10% ಸಮಾನವಾಗಿದೆ.
  • ಆತ್ಮನಿರ್ಭರ ಭಾರತ ಪ್ಯಾಕೇಜಿನಿಂದ ಭೂಮಿ, ಕಾರ್ಮಿಕರು, ಕಾನೂನುಗಳು ಹತ್ತಿ ಬಟ್ಟೆ ಕೈಗಾರಿಕೆ, MSME ಗಳು ಹಾಗೂ ಕೈಗಾರಿಕೆಗಳ ವಿವಿಧ ವಿಭಾಗಗಳಿಗೆ ಚೇತರಿಕೆ ನೀಡಲಾಗುತ್ತದೆ.

ಆತ್ಮನಿರ್ಭರ ಭಾರತದ 5 ಸ್ತಂಭಗಳು :

  • ಆರ್ಥಿಕತೆ : ಇದು ಭಾರತದ ಆರ್ಥಿಕತೆಗೆ ತಕ್ಷಣದ ಮತ್ತು ದೀರ್ಘಕಾಲೀನ ಉತ್ತೇಜನಗಳನ್ನು ನೀಡಲಿದೆ.
  • ಮೂಲಸೌಕರ್ಯ : ಇದು ಭಾರತದಲ್ಲಿ ಉನ್ನತ ಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಿದೆ.
  • ವ್ಯವಸ್ಥೆ : 21 ನೇ ಶತಮಾನದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಬರಲಿವೆ.
  • ಜನಸಂಖ್ಯಾ ಲಾಭ : ಭಾರತದ ಯುವಶಕ್ತಿಯನ್ನು ಬಳಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ.
  • ಬೇಡಿಕೆ : ಜನರ ಹೆಚ್ಚಿನ ಬೇಡಿಕೆಗಳಿಂದಾಗಿ ಪೂರೈಕೆ ಸರಪಳಿಯನ್ನು ಉತ್ತಮಪಡಿಸಬಹುದು.

ಆತ್ಮನಿರ್ಭರ ಭಾರತ ಅಭಿಯಾನದ ಮಹತ್ವ :

  • ಬಿಕ್ಕಟ್ಟ ನ್ನು ಅವಕಾಶವಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಸಾಂಕ್ರಾಮಿಕ ಬಿಕ್ಕಟ್ಟು, ಭಾರತದ PPE ಕಿಟ್ಗಳು ಮತ್ತ N-95 ಮುಖಗವಸುಗಳ ಉತ್ಪಾದನೆಯನ್ನು ಪ್ರತಿದಿನ 2 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವಂತೆ ಮಾಡಿದೆ.
  • “ಸ್ವಾವಲಂಬಿ” ಯಾಗುವುದೇ ಭಾರತದ ನಿಜವಾದ ಗುರಿ ಎಂದು ಪ್ರಧಾನಿ ಮೋದಿ ವೇದ ಶಾಸ್ತ್ರಗಳಲ್ಲಿನ “ಈಶಃಪಂಥಃ” ಎಂಬ ಉಕ್ತಿಯನ್ನು ಉದ್ಘೋಷಿಸಿದರು. ಇದು ಆರ್ಥಿಕ ಕೇಂದ್ರಿತ ಜಾಗತೀಕರಣ ಬದಲು, ಮಾನವ ಕೇಂದ್ರಿತ ಜಾಗತೀಕರಣ ಸ್ಥಾಪಿಸುತ್ತವೆ.
  • ಸ್ಥಳೀಯ ಉತ್ಪನ್ನಗಳಿಗೆ ಧ್ವನಿ ನೀಡುವ ಅಗತ್ಯವಿದೆ ಎಂದ ಪ್ರಧಾನಿ ಒತ್ತಿ ಹೇಳಿದರು. ಇದಕ್ಕಾಗಿ ಜನರಿಗೆ ಸ್ಥಳೀಯ ಉತ್ಪನ್ನ ಖರೀದಿಸಲು ಒತ್ತಾಯಿಸಿದ್ದಾರೆ.

ಉಪಸಂಹಾರ :

“ಆತ್ಮನಿರ್ಭರ ಭಾರತ” ಅಭಿಯಾನ ಕಾರ್ಯತಂತ್ರವು ಬಂಡವಾಳದ ಹರಿವನ್ನು ಹೆಚ್ಚಿಸಿ, ಕೃಷಿ ಮತ್ತ ವ್ಯಾಪಾರ ಕ್ಷೇತ್ರಗಳನ್ನು ಬಲಪಡಿಸುವ ಅವಕಾಶವನ್ನು ಒದಗಿಸುತ್ತದೆ. ಇದು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಯಾಗಬೇಕಿದೆ ಆಗ ಹಲವು ಕ್ಷೇತ್ರಗಳಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ.

FAQ :

ಆತ್ಮನಿರ್ಭರ ಭಾರತದ 5 ಸ್ತಂಭಗಳನ್ನು ತಿಳಿಸಿ?

ಆರ್ಥಿಕತೆ : ಇದು ಭಾರತದ ಆರ್ಥಿಕತೆಗೆ ತಕ್ಷಣದ ಮತ್ತು ದೀರ್ಘಕಾಲೀನ ಉತ್ತೇಜನಗಳನ್ನು ನೀಡಲಿದೆ.
ಮೂಲಸೌಕರ್ಯ : ಇದು ಭಾರತದಲ್ಲಿ ಉನ್ನತ ಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಿದೆ.
ವ್ಯವಸ್ಥೆ : 21 ನೇ ಶತಮಾನದ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಗಳು ಬರಲಿವೆ.
ಜನಸಂಖ್ಯಾ ಲಾಭ : ಭಾರತದ ಯುವಶಕ್ತಿಯನ್ನು ಬಳಸಿ ಸ್ವಾವಲಂಬಿಯಾಗುವ ಉದ್ದೇಶ ಹೊಂದಿದೆ.
ಬೇಡಿಕೆ : ಜನರ ಹೆಚ್ಚಿನ ಬೇಡಿಕೆಗಳಿಂದಾಗಿ ಪೂರೈಕೆ ಸರಪಳಿಯನ್ನು ಉತ್ತಮಪಡಿಸಬಹುದು

Join WhatsApp Join Telegram

ಆತ್ಮನಿರ್ಭರ ಭಾರತ ಅಭಿಯಾನದ ಮಹತ್ವ ತಿಳಿಸಿ?

ಬಿಕ್ಕಟ್ಟ ನ್ನು ಅವಕಾಶವಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. ಸಾಂಕ್ರಾಮಿಕ ಬಿಕ್ಕಟ್ಟು, ಭಾರತದ PPE ಕಿಟ್ಗಳು ಮತ್ತ N-95 ಮುಖಗವಸುಗಳ ಉತ್ಪಾದನೆಯನ್ನು ಪ್ರತಿದಿನ 2 ಲಕ್ಷಕ್ಕಿಂತ ಹೆಚ್ಚು ಉತ್ಪಾದಿಸುವಂತೆ ಮಾಡಿದೆ.
“ಸ್ವಾವಲಂಬಿ” ಯಾಗುವುದೇ ಭಾರತದ ನಿಜವಾದ ಗುರಿ ಎಂದು ಪ್ರಧಾನಿ ಮೋದಿ ವೇದ ಶಾಸ್ತ್ರಗಳಲ್ಲಿನ “ಈಶಃಪಂಥಃ” ಎಂಬ ಉಕ್ತಿಯನ್ನು ಉದ್ಘೋಷಿಸಿದರು. ಇದು ಆರ್ಥಿಕ ಕೇಂದ್ರಿತ ಜಾಗತೀಕರಣ ಬದಲು, ಮಾನವ ಕೇಂದ್ರಿತ ಜಾಗತೀಕರಣ ಸ್ಥಾಪಿಸುತ್ತವೆ.

ಇತರೆ ವಿಷಯಗಳು :

ನನ್ನ ಜೀವನ ನನ್ನ ಆರೋಗ್ಯ ಪ್ರಬಂಧ

ಸಾಮಾಜಿಕ ಪಿಡುಗುಗಳು ಪ್ರಬಂಧ

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.