ಪೌರತ್ವದ ಬಗ್ಗೆ ಮಾಹಿತಿ Information about citizenship Powrathvadha bagge Mahithi in Kannada
ಪೌರತ್ವದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಪೌರತ್ವದ ಬಗ್ಗೆ ಸಂಪೂರ್ಣವಾದ ಮಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಪೌರತ್ವದ ಅರ್ಥ ಮತ್ತು ಮಹತ್ವ :
ಅರ್ಥ :
ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಜೀವನ ನಿರ್ವಹಿಸುವುದಕ್ಕೆ ಪೂರಕವಾಗಿರುವ ಸಂಘಟನೆಯನ್ನು ರಾಷ್ಟ್ರವೆಂದು ಕರೆಯಲಾಗುತ್ತದೆ. ಒಂದು ರಾಷ್ಟ್ರಕ್ಕೆ ಸೇರಿದ ಜವಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ. ಪೌರತ್ವವನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಆ ರಾಷ್ಟ್ರ ಒದಗಿಸುವ ಹಕ್ಕುಗಳನ್ನು ಪಡೆದಿರುತ್ತಾರೆ. ಅಂದರೆ ಕನಿಷ್ಠ ಜೀವನ ಮಟ್ಟ, ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ಹಾಗೂ ಇನ್ನಿತರ ಹಕ್ಕುಗಳನ್ನು ಪಡೆದಿರುತ್ತಾರೆ. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ರಾಷ್ಟ್ರಗಳ ಪೌರತ್ವ ಪಡೆಯಲು ಅವಕಾಶವಿರುವುದಿಲ್ಲ.
ಮಹತ್ವ :
ತಾನು ವಾಸಿಸುವ ರಾಷ್ಟ್ರದಲ್ಲಿ ಗೌರವಯುತ ಜೀವನ ನಡೆಸಲು, ರಾಷ್ಟ್ರ ಆಡಳಿತದಲ್ಲಿ ಭಾಗವಹಿಸಲು ಹಾಗೂ ಪ್ರತಿಯೊಬ್ಬರೂ ಉತ್ತಮ ಜೀವನ ನಡೆಸಲು ಅನುಕೂಲವಾದ ಆಡಳಿತ ಸ್ಥಾಪಿಸಲು ಪೌರತ್ವ ಅಗತ್ಯ. ಅಲ್ಲದೆ, ರಾಷ್ಟ್ರದ ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಲು ಪೌರತ್ವ ಅತಿ ಮುಖ್ಯವೆನಿಸುತ್ತದೆ.
ಪೌರತ್ವ ಪಡೆಯುವ ವಿಧಾನ :
ಜನನದ ಮೂಲಕ :
ಯಾವುದೇ ವ್ಯಕ್ತಿ ತಾನು ಯಾವ ದೇಶದಲ್ಲಿ ಜನಿಸುತ್ತಾನೋ ಅಥವಾ ಜನಿಸುತ್ತಾಳೋ ಅವರು ತಾನು ಜನಿಸಿದ ದೇಶದ ಪೌರತ್ವ ಪಡೆಯುತ್ತಾರೆ. ಅಂತವರಿಗೆ ತಂದೆ ತಾಯಿ ಯಾವ ರಾಷ್ಟ್ರದವರು ಎಂದು ಪರಿಗಣಿಸದೆ ಪೌರತ್ವವನ್ನು ನೀಡಲಾಗುತ್ತದೆ. ಉದಾಹರಣೆಗೆ ಜನವರಿ 26,1950 ರಂದು ಅಥವಾ ನಂತರ ಭಾರತದಲ್ಲಿ ಜನಿದವರು ಭಾರತದ ಪೌರರಾಗುತ್ತಾರೆ. ಏಕೆಂದರೆ ಈ ದಿನದಂದು ಸ್ವತಂತ್ರ ಭಾರತವು ತನ್ನದೇ ಆದ ಸಂವಿಧಾನವನ್ನು ಜಾರಿಗೊಳಿಸಿತು.
ವಂಶ ಪಾರಂಪರ್ಯದ ಮೂಲಕ :
ಈ ವಿಧಾನದ ಪ್ರಕಾರ ಒಬ್ಬ ವ್ಯಕ್ತಿಯ ತಂದೆ ತಾಯಿ ಯಾವ ದೇಶಕ್ಕೆ ಸೇರಿದವರು ಎನ್ನುವ ಆಧಾರದ ಮೇಲೆ ಪೌರತ್ವ ಪಡೆಯುತ್ತಾರೆ. ಉದಾಹರಣೆಗೆ ಜನವರಿ 26, 1950 ರಂದು ಅಥವಾ ನಂತರ ಭಾರತದ ಹೊರಗೆ ಭಾರತ ದೇಶದದವರಾದ ಕುಡುಂಬಗಳಲ್ಲಿ ಜನಿಸಿದವರಿಗೆ ಭಾರತದ ಪೌರತ್ವ ದೊರೆಯುತ್ತದೆ.
ನೋಂದಣಿಯ ಮೂಲಕ :
ಯಾವುದೇ ಒಂದು ದೇಶದ ಪೌರತ್ವವನ್ನು ಸೂಕ್ತವಾದ ವಿಧಾನದ ಮೂಲಕ ಸಂಬಂಧಪಟ್ಟ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಪೌರತ್ವವನ್ನು ಪಡೆಯಬಹುದು. ಹೀಗೆ ಅರ್ಜಿ ಸಲ್ಲಿಸಲು ಕೆಲವೊಂದು ಮಾನದಂಡಗಳನ್ನು ಪ್ರತೊಯೋಂದು ರಾಷ್ಟ್ರವು ವಿಧಿಸಿರುತ್ತದೆ.
ಒಂದು ದೇಶದೊಂದಿಗೆ ಇನೊಂದು ದೇಶದ ಭೂಭಾಗ ಸೇರ್ಪಡೆಗೊಂಡರೆ ಯಾವ ದೇಶದೊಂದಿಗೆ ಇನ್ನೊಂದು ಭೂಪ್ರದೇಶ ಸೇರ್ಪಡೆಗೊಳ್ಳುತ್ತದೆಯೋ ಆದೇಶದ ಪೌರತ್ವ ಲಭ್ಯವಾಗುತ್ತದೆ.
ಪೌರತ್ವ ಕಳೆದುಕೊಳ್ಳುವ ವಿಧಾನ :
ಪರಿತ್ಯಾಗ :
ಯಾವುದೇ ಭಾರತೀಯ ಪೌರ, ಮತ್ತೊಂದು ರಾಷ್ಟ್ರದ ಪೌರತ್ವ ಪಡೆದರೆ ಸ್ವ ಇಚ್ಛೆಯಿಂದ ನೋಂದಣಿ ಮೂಲಕ ಪ್ರಕಟಿಸಿ ಭಾರತದ ಪೌರತ್ವವನ್ನು ತ್ಯಾಗಮಾಡಬಹುದು.
ಅಂತ್ಯಗೊಳ್ಳುವಿಕೆ :
ಭಾರತದ ಯಾವುದೇ ಪೌರನೊಬ್ಬ ವಿದೇಶವೊಂದರ ಪೌರತ್ವ ಪಡೆದರೆ ಅವನಿಂದ ಅರ್ಜಿ ಸಲ್ಲಿಕೆಯನ್ನು ನಿರೀಕ್ಷಿಸದೇ ಕಾನೂನು ಬದ್ದವಾಗಿ ಆತನ ಭಾರತದ ಪೌರತ್ವವನ್ನು ಅಂತ್ಯಗೊಳಿಸಲಾಗುತ್ತದೆ.
ಪದಚ್ಯುತಿ :
ಯಾರಾದರು ವ್ಯಕ್ತಿಯೊಬ್ಬ ವಂಚನೆಯ ಮೂಲಕ ಭಾರತದ ಪೌರತ್ವವನ್ನು ಹೊಂದಿದ್ದರೆ ಅಥವಾ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ಭಾರತದ ಸಂವಿಧಾನಕ್ಕೆ ಅವಿಧೇಯವಾಗಿ ನಡೆದುಕೊಂಡರೆ ಅಂತಹವರನ್ನು ಭಾರತ ಸರ್ಕಾರವು ಪೌರತ್ವದಿಂದ ರದ್ದುಗೊಳಿಸಬಹುದು.
FAQ :
ಪೌರತ್ವ ಪಡೆಯುವ ಒಂದು ವಿಧಾನ ತಿಳಿಸಿ?
ಜನನದ ಮೂಲಕ, ವಂಶ ಪಾರಂಪರ್ಯದ ಮೂಲಕ, ನೋಂದಣಿಯ ಮೂಲಕ.
ಪೌರತ್ವ ಕಳೆದುಕೊಳ್ಳುವ ವಿಧಾನ ತಿಳಿಸಿ?
ಪರಿತ್ಯಾಗ, ಅಂತ್ಯಗೊಳ್ಳುವಿಕೆ, ಪದಚ್ಯುತಿ.
ಇತರೆ ವಿಷಯಗಳು :
ಸ್ಕೌಟ್ಸ್ – ಗೈಡ್ಸ್ ಚಳುವಳಿ ಬಗ್ಗೆ ಮಾಹಿತಿ