ಬಾಲ್ಯ ವಿವಾಹದ ಬಗ್ಗೆ ಮಾಹಿತಿ | Information about child marriage in Kannada

Join Telegram Group Join Now
WhatsApp Group Join Now

ಬಾಲ್ಯ ವಿವಾಹದ ಬಗ್ಗೆ ಮಾಹಿತಿ Information about child marriage Bhalya Vivahada Bagge Mahithi in Kannada

ಬಾಲ್ಯ ವಿವಾಹದ ಬಗ್ಗೆ ಮಾಹಿತಿ

Information about child marriage in Kannada
ಬಾಲ್ಯ ವಿವಾಹದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಬಾಲ್ಯ ವಿವಾಹದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಬಾಲ್ಯ ವಿವಾಹ

21 ವರ್ಷ ಒಳಗಿನ ಹುಡುಗ ಹಾಗೂ 18 ವರ್ಷದ ಒಳಗಿನ ಹುಡುಗಿಯರ ನಡುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಗೆ ಬಾಲ್ಯ ವಿವಾಹ ಎಂದು ಕರೆಯುತ್ತಾರೆ.

ಬಾಲ್ಯ ವಿವಾಹಕ್ಕೆ ಕಾರಣಗಳು

  • ಹೆಣ್ಣು ಬೇರೆಯವರ ಮನೆಗೆ ಹೋಗುವವಳು ಅವಳನ್ನು ಬೇಗ ಮದುವೆ ಮಾಡಿ ಕಳುಹಿಸಬೇಕು ಎಂಬ ನಂಬಿಕೆ. ʼಹೆಣ್ಣುʼ ಮತ್ತು ʼಗಂಡುʼ ಮಕ್ಕಳ ನಡುವಿನ ಬೇದಭಾವ ಇಂದು ಹೆಚ್ಚು ಬಾಲ್ಯವಿವಾಹಕ್ಕೆ ಕಾರಣವಾಗಿದೆ. ಶಿಕ್ಷಣ ಇಲ್ಲದಿರುವಿಕೆ, ಬಾಲಕಾರ್ಮಿಕತೆ, ಮಕ್ಕಳಕಳ್ಳ ಸಾಗಾಣಿಕೆ ಮತ್ತು ಮಾರಾಟ. ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಹೋಗದೇ ಬಾಲಕಾರ್ಮಿಕರಾಗಿದ್ದಲ್ಲಿ ಮುಂದೆ ಅನಕ್ಷರಸ್ಥರಾಗಿ ಬಾಲ್ಯವಿವಾಹದಂತಹ ಸಮಸ್ಯೆಗೆ ಒಳಗಾಗುತ್ತಾರೆ.
  • ಕಾನೂನಿನ ಕನಿಷ್ಠ ಮಟ್ಟದ ಅನುಷ್ಠಾನ ಮತ್ತು ಬಳಕೆಯ ಕೊರತೆ. ಶಿಕ್ಷಣ ವ್ಯವಸ್ಥೆಯಲ್ಲಿ ಕಾನೂನುಗಳ ಅನುಷ್ಠಾನದ ಕೊರತೆ. ಶಿಕ್ಷಣಕ್ಕೆ, ಸಮಾಜದ/ಸಮುದಾಯಗಳ/ಸಾರ್ವಜನಿಕ ಅಸಹಕಾರ. ಮಕ್ಕಳ ಹಕ್ಕುಗಳ ಮತ್ತು ಮಕ್ಕಳ ಅಭಿವೃದ್ದಿ ಕಾರ್ಯಗಳ ದೋಷಪೂರಿತವಾದ ಅನುಷ್ಠಾನ.

ಬಾಲ್ಯ ವಿವಾಹದ ದುಷ್ಪರಿಣಾಗಳು

  • ವಯಸ್ಸಿಗೆ ಮೀರಿದ ಜವಬ್ದಾರಿ ಹೊರಿಸಿದಂತಾಗುತ್ತದೆ.
  • ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಗರ್ಭಪಾತ, ಗರ್ಭ ಚೀಲಕ್ಕೆ ಪೆಟ್ಟು ಬೀಳುವುದರಿಂದ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ.
  • ವಿಕಲಾಂಗ ಮಕ್ಕಳು ಜನಿಸುವ ಸಂಭವ.
  • ಲೈಂಗಿಕ ಖಾಯಿಲೆಗಳಾದ H.I.V/ಏಡ್ಸ್ ಗೆಗುರಿಯಾಗುವ ಸಾಧ್ಯತೆ ಇರುತ್ತದೆ.
  • ಬಾಲ್ಯಾವಸ್ಥೆ- ಬಾಲ್ಯಾವಕಾಶದಿಂದ ವಂಚಿತರಾಗುವುದು.
  • ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ.
  • ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ.
  • ದೇಶದ ಅಭಿವೃದ್ದಿ ಕುಂಠಿತವಾಗುತ್ತದೆ.

ಬಾಲ್ಯ ವಿವಾಹ ನಿಷೇಧ ಕಾಯ್ದೆ

2006 ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಿಂದೆ 1929 ಮತ್ತು 1986ರಲ್ಲಿ ಇತ್ತು. ಆದರೆ ಭಾರತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992 ಡಿಸೆಂಬರ್‌ 11 ರಂದು ಸಹಿ ಮಾಡಿದ ಮೇಲೆ, ಕೆಲವು ಮಕ್ಕಳ ಸ್ನೇಹಿ ಕಾನೂನನ್ನು ಜಾರಿಗೆ ತರಲಾಯಿತು. ಇದನ್ನು ಉಲ್ಲಂಘಿಸಿದವರಿಗೆ 2 ವರ್ಷ ಕಠಿಣ ಜೈಲು ವಾಸ, 1 ಲಕ್ಷ ದಂಡ ವಿಧಿಸಲಾಗುತ್ತದೆ.

ಬಾಲ್ಯ ವಿವಾಹದಲ್ಲಿ ತಪ್ಪಿತಸ್ಥರು ಯಾರು?

  • ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ.
  • ಬಾಲ್ಯ ವಿವಾಹವನ್ನು ಏರ್ಪಡಿಸುವ ನಿರ್ದೇಶಿಸುವ ನೆರವೇರಿಸುವ ಮತ್ತು ಕುಮ್ಮಕ್ಕು ನೀಡುವ ಯಾವುದೇ ವ್ಯಕ್ತಿ, ಸಂಸ್ಥೆ.
  • ಮಗುವನ್ನು ಹೆತ್ತವರು, ಮದುವೆಯಲ್ಲಿ ಭಾಗವಹಿಸಿದವರು.
  • ಮಗುವಿನ ಜವಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ.
  • ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು.

ಬಾಲ್ಯ ವಿವಾಹ ತಡೆಯುವ ಸಲುವಾಗಿ ನೇಮಿಸಿರುವ ಬಾಲ್ಯ ವಿವಾಹ ನಿಷೇಧಾಧಿಕಾರಗಳು

ಮಹಿಳಾ ಮತ್ತು ಮಕ್ಕಳ ಅಭಿವದ್ದಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಹಿಂದುಳೀದ ವರ್ಗಗಳ ಅಭಿವೃದ್ದಿ ಇಲಾಖೆ, ಪೊಲೀಸ್‌ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ, ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು.

FAQ :

ಬಾಲ್ಯವಿವಾಹ ಎಂದರೇನು?

21 ವರ್ಷ ಒಳಗಿನ ಹುಡುಗ ಹಾಗೂ 18 ವರ್ಷದ ಒಳಗಿನ ಹುಡುಗಿಯರ ನಡುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಗೆ ಬಾಲ್ಯ ವಿವಾಹ ಎಂದು ಕರೆಯುತ್ತಾರೆ.

Join WhatsApp Join Telegram

ಬಾಲ್ಯ ವಿವಾಹ ನಿಷೇಧ ಕಾಯ್ದೆ ಯಾವಾಗ ಜಾರಿಗೆ ತರಲಾಗಿದೆ?

2006

ಇತರೆ ವಿಷಯಗಳು :

ಸಾಮಾಜಿಕ ಪಿಡುಗುಗಳು ಪ್ರಬಂಧ

ನಿರುದ್ಯೋಗದ ಬಗ್ಗೆ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.