ಮಹಿಳಾ ದೌರ್ಜನ್ಯ ಮತ್ತು ಕಾನೂನುಗಳು ಪ್ರಬಂಧ | Women Violence And Laws Essay in Kannada

Join Telegram Group Join Now
WhatsApp Group Join Now

ಮಹಿಳಾ ದೌರ್ಜನ್ಯ ಮತ್ತು ಕಾನೂನುಗಳು ಪ್ರಬಂಧ Women Violence And Laws Essay Mahila Dowrjanya mattu Kanunugalu Prabandha in Kannada

ಮಹಿಳಾ ದೌರ್ಜನ್ಯ ಮತ್ತು ಕಾನೂನುಗಳು ಪ್ರಬಂಧ

ಮಹಿಳಾ ದೌರ್ಜನ್ಯ ಮತ್ತು ಕಾನೂನುಗಳು ಪ್ರಬಂಧ

ಈ ಲೇಖನಿಯಲ್ಲಿ ಮಹಿಳಾ ದೌರ್ಜನ್ಯ ಮತ್ತು ಕಾನೂನುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ದೇವತಾ” ಎನ್ನುವ ಮಾತಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದನ್ನು ಅರಿಯಲಾಗದ ಸ್ಥಿತಿಯಲ್ಲಿದ್ದೇವೆ. ಕುಟುಂಬದಲ್ಲಿ ಹೆಣ್ಣು ತಾಯಿ, ತಂಗಿ, ಹೆಂಡತಿ, ಮಗಳಾಗಿ ಎಲ್ಲಾ ಜವಬ್ದಾರಿಗಳನ್ನು ಹೊತ್ತಿದ್ದರೂ ಭಯ ಮತ್ತು ಆತಂಕದಲ್ಲಿ ದಿನ ದೂಡಬೇಕಾಗಿದೆ ಇದರಿಂದ ಹೊರಬರಲು ಮಹಿಳಾ ದೌರ್ಜನ್ಯ ತಡೆಯುವ ಕ್ರಮಗಳು ಅನಿವಾರ್ಯವಾಗಿದೆ.

ವಿಷಯ ವಿವರಣೆ :

ಮಹಿಳೆಯ ಮನಸ್ಥಿತಿಯನ್ನು ಅರಿಯದೆ ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಲೈಂಗಿಕವಾಗಿ ಹಿಂಸಿಸುವುದನ್ನು ಮಹಿಳಾ ದೌರ್ಜನ್ಯ ಎನ್ನುತ್ತೇವೆ.

ಮಹಿಳಾ ದೌರ್ಜನ್ಯಕ್ಕೆ ಕಾರಣಗಳು :

 • ಹೆಚ್ಚಿನ ಮಹಿಳೆಯರಿಗೆ ತಮ್ಮ ರಕ್ಷಣೆಯ ಬಗ್ಗೆ ಇರುವ ಕಾನೂನುಗಳ ಅರಿವಿಲ್ಲ.
 • ದೌರ್ಜನ್ಯಕ್ಕೊಳಗಾದವರು ದೂರು ನೀಡುತ್ತಿಲ್ಲ ಮತ್ತು ನೀಡಿದರೂ ಪರಿಹಾರ ದೊರೆಯುವ ನಂಬಿಕೆಯಿಲ್ಲ.
 • ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಅಲ್ಪ ಸಂಖ್ಯಾತೆಯಾಗಿದಾಳೆ ಜೊತೆಗೆ ಭಾವನಾತ್ಮಕವಾಗಿ ಸೂಕ್ಷವಾಗಿರುವುದು.
 • ದೈಹಿಕ ದೌರ್ಜನ್ಯಗಳು ಸಾಮಾನ್ಯ ಎಂಬಂತೆ ಮನಸ್ಥಿತಿ ನಿರ್ಮಾಣ.
 • ಮಾನಸಿಕ ಹಿಂಸೆಯನ್ನು ಕುಡುಂಬದ ಹಿತದೃಷ್ಠಿಯಿಂದ ಸಹಿಸಿಕೊಳ್ಳುತ್ತಿರುವುದು.
 • ದೌರ್ಜನ್ಯ ಎಸಗಿದವರ ಮೇಲೆ ಕಠಿಣ ಕಾನೂನು ಇಲ್ಲದಿರುವುದು.
 • ಶಿಕ್ಷಣದ ಕೊರತೆ ಮತ್ತು ಆರ್ಥಿಕವಾಗಿ ಪುರಷನನ್ನು ಅವಲಂಬಿಸಿರುವುದು.
 • ಲೈಂಗಿಕ ಪ್ರಕರಣಗಳು ಬೇಗ ತೀರ್ಮಾನವಾಗದಿರುವುದು.
 • ಮಾನವೀಯ ಮೌಲ್ಯಗಳು, ಧರ್ಮ, ಸಂಸ್ಕೃತಿ, ಸಂಸ್ಕಾರಗಳು ಆಧುನಿಕತೆಯ ಸೋಗಿನಲ್ಲಿ ತೂರಿ ಹೋಗಿರುವುದು.

ಮಹಿಳಾ ದೌರ್ಜನ್ಯ ನಿಯಂತ್ರಣಕ್ಕೆ ಪರಿಹಾರೋಪಾಯಗಳು :

 • ಮಹಿಳಾ ರಕ್ಷಣೆ ಕುರಿತು ಕಾನೂನು ಜಾಗೃತಿ ಮೂಡಿಸುವುದು.
 • ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದು.
 • ಮಹಿಳಾ ಪೊಲೀಸ್‌ ಠಾಣೆ ತೆರೆಯುವುದು ಮತ್ತು ಮಹಿಳಾ ಸಿಬ್ಬದಿಗಳಿಂದ ವಿಚಾರಣೆ, ತನಿಖೆ.
 • ಮಹಿಳೆಯರ ದೂರನ್ನು ಬೇಗ ದಾಖಲಿಸಿ ಕ್ರಮಕೈಗೊಳ್ಳವುದು.
 • ದೌರ್ಜನ್ಯಕ್ಕೊಳಗಾದವರಿಗೆ ಬೇಗ ಪರಿಹಾರ ಮತ್ತು ಪ್ರಕರಣ ವಿಲೇವಾರಿ.
 • ದೌರ್ಜನ್ಯ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ ಮತ್ತು ಉಚಿತ ಕಾನೂನು ನೆರವು.
 • ಮಹಿಳಾ ಆಯೋಗ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಸಕ್ರಿಯಗೊಳಿಸುವುದು.

ಮಹಿಳಾ ದೌರ್ಜನ್ಯ ತಡೆಯಲು ರೂಪಿಸಿರುವ ಕಾನೂನು ಕಾಯ್ದೆಗಳು :

 • ವಿಧವಾ ಮರುವಿವಾಹ ಕಾಯ್ದೆ – 1856
 • ಸತಿಸಹಗಮನ ಪದ್ದತಿ ನಿಷೇಧ ಕಾಯ್ದೆ – 1929
 • ಕೌಟುಂಬಿಕ ನ್ಯಯಾಲಯಗಳ ಕಾಯ್ದೆ – 1954
 • ವಿಶೇಷ ವಿವಾಹ ಕಾಯ್ದೆ – 1954
 • ಅನೈತಿಕ ವ್ಯವಹಾರ ನಿಗ್ರಹ ಕಾಯ್ದೆ – 1956
 • ವರದಕ್ಷಿಣೆ ನಿಷೇಧ ಕಾಯ್ದೆ – 1961
 • ದೇವದಾಸಿ ಪದ್ದತಿ ಕಾಯ್ದೆ – 1982
 • ದೇವದಾಸಿ ಪದ್ದತಿ ನಿಷೇಧ ಕಾಯ್ದೆ – 1982
 • ಪ್ರಸವ ಪೂರ್ವ ಭ್ರೂಣ ಲಿಂಗಪತ್ತೆ ನಿಷೇಧ ಕಾಯ್ದೆ – 1994 ಇದನ್ನು 2002 ರಲ್ಲಿ ಕೆಲವು ತಿದ್ದುಪಡಿಗಳೊಂದಿಗೆ ಮಾರ್ಪಾಡು ಮಾಡಲಾಗಿದೆ.
 • ಗೃಹ ಹಿಂಸೆಯ ವಿರುದ್ದ ರಕ್ಷಣಾ ಕಾಯ್ದೆ – 2005
 • ಬಾಲ್ಯವಿವಾಹ ನಿಷೇಧ ತಿದ್ದುಪಡಿ ಕಾಯ್ದೆ – 2006
 • ಕ್ರಿಮಿನಲ್‌ ಕಾನೂನು ತಿದ್ದುಪಡಿ ಕಾಯ್ದೆ – 2013

ಉಪಸಂಹಾರ :

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಮಹಿಳೆ ಭೋಗದ ವಸ್ತುವಲ್ಲ ತ್ಯಾಗದ ಮೂರ್ತಿ ಹೆಣ್ಣಿನ ಭಾವನೆಗಳನ್ನು ಅರ್ಥೈಸಿಕೊಳ್ಳಬೇಕು ಕೀಳು ಭಾವನೆ ತೊರೆದು ಸಮಾನತೆ ಸೃಷ್ಠಿಸಬೇಕು, ಹೆಣ್ಣನ್ನು ಅಗೌರವದಿಂಧ ಕಾಣುವವರನ್ನು ಸಮಾಜ ಗೌರವಿಸುವುದಿಲ್ಲ ಎಂಬುದನ್ನು ಅರಿಯಬೇಕು. ಸಹನೆ,ಪ್ರೀತಿ, ಸಮಾನತೆ, ಸೌಹಾರ್ದತೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು.

FAQ :

ಮಹಿಳಾ ದೌರ್ಜನ್ಯಕ್ಕೆ ಒಂದು ಕಾರಣ ತಿಳಿಸಿ?

ಹೆಚ್ಚಿನ ಮಹಿಳೆಯರಿಗೆ ತಮ್ಮ ರಕ್ಷಣೆಯ ಬಗ್ಗೆ ಇರುವ ಕಾನೂನುಗಳ ಅರಿವಿಲ್ಲ.
ದೌರ್ಜನ್ಯಕ್ಕೊಳಗಾದವರು ದೂರು ನೀಡುತ್ತಿಲ್ಲ ಮತ್ತು ನೀಡಿದರೂ ಪರಿಹಾರ ದೊರೆಯುವ ನಂಬಿಕೆಯಿಲ್ಲ.

Join WhatsApp Join Telegram

ಮಹಿಳಾ ದೌರ್ಜನ್ಯ ತಡೆಯಲು ರೂಪಿಸಿರುವ ಎರಡು ಕಾನೂನು ಕಾಯ್ದೆಗಳನ್ನು ತಿಳಿಸಿ?

ವಿಧವಾ ಮರುವಿವಾಹ ಕಾಯ್ದೆ – 1856
ಸತಿಸಹಗಮನ ಪದ್ದತಿ ನಿಷೇಧ ಕಾಯ್ದೆ – 1929

ಇತರೆ ವಿಷಯಗಳು :

ಬಾಲ್ಯ ವಿವಾಹದ ಬಗ್ಗೆ ಮಾಹಿತಿ

ಸಾಮಾಜಿಕ ಪಿಡುಗುಗಳು ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.