ಆಹಾರದ ಘಟಕಗಳ ಬಗ್ಗೆ ಮಾಹಿತಿ Information about food units Aharadha Gatakagala bagge Mahithi in Kannada
ಆಹಾರದ ಘಟಕಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಆಹಾರದ ಘಟಕಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಆಹಾರದ ಘಟಕಗಳು :
- ಪ್ರತಿದಿನ ದೇಹಕ್ಕೆ ಶಕ್ತಿಯನ್ನು ಒದಗಿಸುವ ಆಹಾರದ ಘಟಕ – ಕಾರ್ಬೋಹೈಡ್ರೇಟ್
- ಪ್ರೋಟಿನಗಳ ಜೀವಕೋಶಗಳ ಬೆಳವಣಿಗೆಗೆ, ದೇಹದ ದುರಸ್ತಿಗೆ, ರೋಗನಿರೋಧಕ ಕಾರ್ಯ ಮಾಡಲು, ದೇಹವರ್ಧಕಗಳಾಗಿ ಕಾರ್ಯನಿರ್ವಹಿಸುತ್ತವೆ.
- ಅತಿ ಹೆಚ್ಚಿನ ಶಕ್ತಿಯನ್ನು ಒದಗಿಸುವ ಆಹಾರ ಘಟಕವೆಂದರೆ – ಲಿಪಿಡ್ಸ್
- ಜೀವಸತ್ವಗಳು ದೇಹದ ರಕ್ಷಕವಾಗಿ ದೇಹವನ್ನು ಆರೋಗ್ಯವಾಗಿಡಲು ಬೇಕಾದ ಸಣ್ಣ ಪ್ರಮಾಣದ ಆಹಾರ ಘಟಕಗಳಾಗಿವೆ.
- ಖನಿಜಗಳು ಮತ್ತು ಲವಣಗಳು ಹಲ್ಲು, ಮೂಳೆ ಮತ್ತು ಸ್ನಾಯುಗಳನ್ನು ಆರೋಗ್ಯವಾಗಿಡುತ್ತವೆ.
- ನಾರು ಪದಾರ್ಥ ಕರುಳಿನ ಸಮರ್ಪಕ ಕಾರ್ಯನಿರ್ವಹಣೆಗೆ ಮತ್ತು ಮಲಬದ್ದತೆಯ ನಿವಾರಣೆಗೆ ಸಹಾಯಕವಾಗಿದೆ.
- ಶಕ್ತಿಯ ಆಕರಗಳು/ಶಕ್ತಿಯ ವಿಮೋಚಕಗಳು/ಶಕ್ತಿಯ ಆಹಾರಗಳು – ಕಾರ್ಬೋಹೈಡ್ರೇಟಗಳು ಮತ್ತು ಲಿಪಿಡ್ಸ್
ಖನಿಜಗಳು :
- ಖನಿಜಗಳು ಮೂಳೆ ಮತ್ತು ಹಲ್ಲುಗಳ ಘಟಕವಾಗಿದೆ.
- ದೇಹದಲ್ಲಿ ರಾಸಾಯನಿಕಗಳ ಸಮತೋಲನವನ್ನು ಕಾಪಾಡುತ್ತದೆ.
- ನಮ್ಮ ಶರೀರದಲ್ಲಿ 24 ಖನಿಜಾಂಶಗಳಿವೆ.
ಕ್ಯಾಲ್ಸಿಯಂ :
- ನಮ್ಮ ಶರೀರದ ಅಸ್ಥಿಮಾಂಡಲದಲ್ಲಿರುತ್ತದೆ.
- ಇದು ಹುಲ್ಲು ಮತ್ತು ಮೂಳೆಗಳ ಘಟಕವಾಗಿದೆ.
- ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
- ಹೃದಯದ ಸ್ನಾಯುಗಳ ಕ್ರಿಯಾಶೀಲವಾಗಿರಲು ಕ್ಯಾಲ್ಸಿಯಂ ಅಗತ್ಯವಾಗಿರಬೇಕು.
- ಶಿಶುಗಳು ಮತ್ತು ಮಕ್ಕಳ ಬೆಳವಣಿಗೆಗೆ ಅವಶ್ಯಕವಾಗಿದೆ.
- ನಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ.
- ಕ್ಯಾಲ್ಸಿಯಂ ನ್ಯೂನ್ಯತೆಯಿಂದ ಮಕ್ಕಳಲ್ಲಿ ರಿಕೆಟ್ಸ್ ಕಾಯಿಲೆ ಬರುತ್ತದೆ.
- ಮೂಳೆಗಳಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ ಆಸ್ಟಿಯೋಮೆಲಾಸಿಸ್ ರೋಗ ಕಂಡುಬರುತ್ತದೆ.
- ನಮ್ಮ ದೇಹದಲ್ಲಿ ಬಹುಪಾಲು ಕಬ್ಬಿಣ ಅಂಶ ಶೇಖರಣೆಯಾಗುವುದು – ಹಿಮೋಗ್ಲೋಬಿನ ನಲ್ಲಿ
- ಇದು ಹಾಲು ಹಾಲಿನ ಉತ್ಪನ್ನಗಳು ಎಳ್ಳು, ಹಸಿರು ಎಲೆ, ತರಕಾರಿಗಳು ರಾಗಿ ಮತ್ತು ಮೀನಿನಲ್ಲಿ ಅಧೀಕವಾಗಿರುತ್ತದೆ.
- ಹಿಮೋಗ್ಲೋಬಿನ್ ಆಮ್ಲಜನಕ ಸಾಗಾಣಿಕೆ ಮಾಡುತ್ತದೆ.
- ಅವರೆ, ಸೂರ್ಯಕಾಂತಿ ಬೀಜ, ಬಟಾಣಿಗಳಲ್ಲಿ ಕ್ಯಾಲ್ಸಿಯಂ ದೊರೆಯುತ್ತದೆ.
ಕಬ್ಬಿಣ :
- ಶರೀರದಲ್ಲಿರುವ ಒಟ್ಟು ಕಬ್ಬಿಣಾಂಶದಲ್ಲಿ ಅರ್ಧದಷ್ಟು ಪಿತ್ತಜನಕಾಂಗ ಮತ್ತು ಮೂಳೆಗಳಲ್ಲಿ ಉಳಿದ ಅರ್ಧಭಾಗ ರಕ್ತದಲ್ಲಿನ ಹಿಮೋಗ್ಲೋಬಿನಲ್ಲಿರುತ್ತದೆ.
- ಹಿಮೋಗ್ಲೋಬಿನ್ ರಕ್ತದ ಮೂಲ ಘಟಕ.
- ಮಾನವನ ದೇಹದಲ್ಲಿ ಬಹುಪಾಲು ಕಬ್ಬಿಣದ ಅಂಶ ಹಿಮೋಗ್ಲೋಬಿನಲ್ಲಿ ಸಂಗ್ರಹವಾಗಿರುತ್ತದೆ.
- ರಕ್ತದಲ್ಲಿ ಕಬ್ಬಿಣ ಆಕ್ಸಿಜನ್ ಅವಶ್ಯಕ ಘಟಕವಾಗಿಯೂ ಕಾರ್ಯನಿರ್ವಹಿಸುತ್ತದೆ.
ಅಯೋಡಿನ್ :
- ಥೈರಾಯಿಡ್ ಗ್ರಂಥಿಯ ಕ್ರಿಯಾಶೀಲತೆಗೆ ಸಹಾಯಕ.
- ಥೈರಾಕ್ಸಿನ್ ಕ್ರಮಬದ್ದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ
- ಥೈರಾಕ್ಸಿನ್ ಹಾರ್ಮೋನ್ ಸ್ರವಿಕೆಗೆ ಉತ್ಪಾದನೆ ಮತ್ತು ಚಯಾಪಚಯ ಕ್ರಿಯೆಗಳ ವೇಗ ಹೆಚ್ಚಿಸಲು
- ಇದು ಗಾಯಿಟರ್ ಅಥವಾ ಗಳಗಂಡ ಕಾಯಿಲೆಯಿಂದ ದೂರ ಇಡುತ್ತದೆ.
- ಕೊಬ್ಬಿನ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಸೋಡಿಯಂ :
- ಆಮ್ಲ ಮತ್ತು ಪ್ರತಾಮ್ಲಗಳ ಸಮತೋಲನ ಕಾಪಾಡುತ್ತದೆ.
- ಹೃದಯದ ಸ್ನಾಯುಗಳ ಕ್ರಿಯಾಶೀಲತೆಗೆ ಸಹಕಾರಿಯಾಗಿದೆ.
- ಸೋಡಿಯಂ ಹೆಚ್ಚಾಗಿ ಅಡುಗೆ ಉಪ್ಪು, ಹಾಲು, ಹಾಲಿನ ಉತ್ಪನ್ನಗಳು ಮೊಟ್ಟೆ ಮಾಂಸ ಮತ್ತು ಮೀನುಗಳು ಹೊಂದಿವೆ.
ಪೊಟ್ಯಾಸಿಯಂ :
- ಇದು ಬಹುಭಾಗ ಜೀವಕೋಶಗಳು ಮತ್ತು ಕೆಂಪು ರಕ್ತ ಕಣದಲ್ಲಿ ಇರುತ್ತದೆ.
- ಸೋಡಿಯಂನಂತೆ ಇದು ಶರೀರದಲ್ಲಿ ಆಮ್ಲ ಪ್ರತ್ಯಾಮ್ಲೀಯಗಳ ಸಮತೋಲನವನ್ನು ಕಾಪಾಡುತ್ತದೆ.
- ಸ್ನಾಯು ಚಟುವಟಿಕೆಯನ್ನು ನಿಯಂತ್ರಿಸುತ್ತದೆ.
- ಪ್ರಾಣಿ ಜೀವಕೋಶದಲ್ಲಿ ಕೋಶದ ಕಾರ್ಯಕ್ಕೆ ಸಹಾಯ ಮಾಡುತ್ತದೆ.
ರಂಜಕ :
- ಹಲ್ಲುಗಳಲ್ಲಿಯೂ, ಮೂಳೆಗಳಲ್ಲಿಯೂ ಇರುತ್ತದೆ.
- ಕ್ಯಾಲ್ಸಿಯಂ, ರಂಜಕ ಮತ್ತು ಆಮ್ಲಜನಕಗಳನ್ನೊಳಗೊಂಡ ಸಂಯುಕ್ತ ವಸ್ತುವಾದ ಕ್ಯಾಲ್ಸಿಯಂ ಘಟಕವಾಗಿರುತ್ತದೆ.
- ದೇಹದ ಅನೇಕ ಚಯಾಪಚಯ ಕ್ರಿಯೆಗಳಲ್ಲಿ ಅಯಾನು ರೂಪದಲ್ಲಿ ಪಾಲಗೊಳ್ಳುತ್ತದೆ.
- ಅಸ್ಥಿಮಜ್ಜೆಯಲ್ಲಿ ಕೆಂಪುರಕ್ತಗಳ ಉತ್ಪಾದನೆಗೆ ನೆರವಾಗುತ್ತದೆ.
- DNA, RNA ಮತ್ತು ATP ಗಳಲ್ಲಿ ಇರುತ್ತದೆ.
- ಮೂಳೆ ಮತ್ತು ಹಲ್ಲುಗಳ ಪ್ರಧಾನ ಘಟಕವಾಗಿದೆ.
ಕ್ಲೋರಿನ್ :
ಇದು ಜಠರದಲ್ಲಿ HCl ನ ಉತ್ಪಾದನೆಗೆ ಸಹಾಯಕಾರಿಯಾಗಿದೆ.
ಸತು :
- ಇದು ಕೊಲೆಸ್ಟ್ರಾಲ್ ಸಂಗ್ರಹವನ್ನು ಕಡಿಮೆ ಮಾಡುತ್ತದೆ.
- ಇನ್ಸುಲಿನ್ ಹಾಗೂ ಕಿಣ್ವಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
- ಕಾರ್ಬೋ ಹೈಡ್ರೇಟಗಳ ಚಯಾಪಚಯ ಕ್ರಿಯೆಯನ್ನು ಬಲಪಡಿಸುತ್ತದೆ.
ಪ್ರೋಟಿನಗಳು :
- ಇದರಲ್ಲಿ ನೈಟ್ರೋಜನ್ ಇರುತ್ತದೆ.
- ಇವು ಪ್ರಾಣಿಜನ್ಯ ಪದಾರ್ಥಗಳಲ್ಲಿರುತ್ತದೆ.
- ಪ್ರತಿಯೊಂದು ಸಜೀವ ಜೀವಕೋಶದ ಜೀವನಾರಂಭ ರಸದ ಮೂಲ ವಸ್ತುವಾಗಿದೆ.
- ಇವು ಶರೀರದ ಬೆಳವಣಿಗೆಗೆ ಸಹಾಯಕವಾಗಿದೆ.
- ಇವು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ.
- ಇವುಗಳು ಜೀವಕೋಶದ ಬೃಹತ್ ಅಣುಗಳಾಗಿವೆ.
- ದೇಹದ ಜೀವಕೋಶಗಳನ್ನು ಕಟ್ಟುವ ಕಾರ್ಯ ಮಾಡುತ್ತದೆ.
- ಪ್ರೋಟಿನಗಳು ಕಿಣ್ವಗಳನ್ನು ಉತ್ಪಾದಿಸುತ್ತದೆ.
- ಇವು ದೇಹದಲ್ಲಿ ರಕ್ಷಣೆ ನೀಡುವ ರೋಗ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ.
- ಪ್ರೋಟಿನಗಳ ಸಂಯೋಜನೆಗೆ RNA ಸಹಕಾರಿಯಾಗಿದೆ.
- ಇವು ಇಂಗಾಲ, ಜಲಜನಕ,ಆಮ್ಲಜನಕ, ಸಾರಜನಕ, ಗಂಧಕ ಮತ್ತು ರಂಜಕಗಳಿಂದ ಮಾಡಲ್ಪಟ್ಟಿದೆ.
- ಇವು ಚಿಕ್ಕಮಕ್ಕಳಿಗೆ ದಿನನಿತ್ಯ ಆಹಾರವನ್ನು ಒದಗಿಸುತ್ತದೆ.
FAQ :
ಜಠರದಲ್ಲಿ HCl ನ ಉತ್ಪಾದನೆಗೆ ಯಾವುದು ಸಹಾಯಕಾರಿಯಾಗಿದೆ?
ಕ್ಲೋರಿನ್
ಪ್ರತಿದಿನ ದೇಹಕ್ಕೆ ಶಕ್ತಿಯನ್ನು ಒದಗಿಸುವ ಆಹಾರದ ಘಟಕ ಯಾವುದು?
ಕಾರ್ಬೋಹೈಡ್ರೇಟ್
ಇತರೆ ವಿಷಯಗಳು :
ಗ್ರಂಥಿಗಳು ಮತ್ತು ಹಾರ್ಮೋನುಗಳ ಬಗ್ಗೆ ಮಾಹಿತಿ