ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಮಾಹಿತಿ Information about human digestive system Manavana Jeernanga Vyavaste bagge Mahithi in Kannada
ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಮಾನವನ ಜೀರ್ಣಾಂಗ ವ್ಯವಸ್ಥೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಮಾನವನ ಜೀರ್ಣಾಂಗ ವ್ಯವಸ್ಥೆ :
ಮಾನವನು ಸಸ್ಯ ಮತ್ತು ಮಾಂಸಹಾರಿ ಆಹಾರಗಳೆರಡನ್ನು ಸೇವಿಸುವುದರಿಂದ ಅವನನ್ನು ಮಿಶ್ರಹಾರಿ ಎಂದು ಕರೆಯುತ್ತಾರೆ. ಉನ್ನತ ಪ್ರಾಣಿಗಳ ವರ್ಗಕ್ಕೆ ಸೇರಿದ ಮಾನವನಲ್ಲಿ ಪೋಷಣೆಯು 5 ಹಂತಗಳಲನ್ನು ಒಳಗೊಂಡಿರುತ್ತದೆ. ಸೇವಿಸಿದ ಆಹಾರವು ಉತ್ತಮವಾಗಿ ವಿಕಾಸಗೊಂಡಿರುವ ಜೀರ್ಣನಾಳದ ಮೂಲಕ ಸಾಗಿಸಲ್ಪಟ್ಟು ಜೀರ್ಣವಾಗುತ್ತದೆ. ಮಾನವರಲ್ಲಿ ಜೀರ್ಣಜಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ.
ಯಾಂತ್ರಿಕ ಜೀರ್ಣಕ್ರಿಯೆ :
- ಕಿಣ್ವಗಳು ಮತ್ತು ರಾಸಾಯನಿಕಗಳ ಸಹಾಯವಿಲ್ಲದೆ ನಡೆಯುವ ಜೀರ್ಣಕ್ರಿಯೆಯನ್ನು ಯಾಂತ್ರಿಕ ಜೀರ್ಣಕ್ರಿಯೆ ಎನ್ನುತ್ತೇವೆ.
- ಕಿಣ್ವಗಳು ಮತ್ತು ರಾಸಾಯನಿಕಗಳ ಸಹಾಯದಿಂದ ನಡೆಯುವ ಜೀರ್ಣಕ್ರಿಯೆಯನ್ನು ರಾಸಾಯನಿಕ ಜೀರ್ಣಕ್ರಿಯೆ ಎನ್ನುತ್ತೇವೆ.
- ಮಾನವನ ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಗಂಟಲು, ಅನ್ನನಾಳ, ಜಠರ, ಸಣ್ಣಕರುಳು ಮತ್ತು ದೊಡ್ಡಕರುಳು, ಗುದದ್ವಾರವನ್ನು ಒಳಗೊಂಡಿದೆ.
ಬಾಯಿ :
- ಬಾಯಿಯನ್ನು ಜೀರ್ಣಾಂಗ ವ್ಯವಸ್ಥೆಯ ಪ್ರಾಥಮಿಕ ಅಂಗವೆಂದು ಕರೆಯುತ್ತೇವೆ.
- ಇದರಲ್ಲಿ ನಾಲಿಗೆ, ಹಲ್ಲು ಮತ್ತು ಲಾಲಾರಸವು ಆಹಾರವನ್ನು ಜೀರ್ಣಿಸಲು ಸಹಕಾರಿಯಾಗಿದೆ.
- ಹಲ್ಲಿನಲ್ಲಿರುವ ಗಟ್ಟಿಯಾದ ವಸ್ತು – ಎನಾಮಲ್
- ಹಲ್ಲಿನ pH – 5.5ಕ್ಕಿಂತ ಕಡಿಮೆಯಾದರೆ ಹಲ್ಲು ಸವೆತಕ್ಕೊಳಗಾಗುತ್ತದೆ.
- ಲಾಲಾರಸದಲ್ಲಿ ಅಮೈಲೇಸ್ ಕಿಣ್ವಗಳನ್ನು ಪಿಷ್ಠದ ಆಹಾರವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ.
- ಬಾಯಿಯಲ್ಲಿ ಜೀರ್ಣಕ್ರಿಯೆಗೆ ಒಳಪಟ್ಟಿರುವ ಆಹಾರವನ್ನು ಬೋಲಸ್ ಎಂದು ಕರೆಯುತ್ತೇವೆ.
ಗಂಟಲು :
- ಗಂಟಲಿನಲ್ಲಿ ಎಪಿಗ್ಲಾಟಿಸ್ ಎಂಬ ಅಂಗವು ಆಹಾರವನ್ನು ಆಹಾರನಾಳಕ್ಕೆ ಮತ್ತು ಗಾಳಿಯನ್ನು ಶಾಶ್ವನಾಳಕ್ಕೆ ತಲುಪಿಸುವ ನಾಳ ಅನ್ನನಾಳ.
- ಅನ್ನನಾಳದ ಉದ್ದ 25cm
- ಅನ್ನನಾಳವು ಚಪ್ಪಟೆ ಅನುಲೇಪಕ ಅಂಗಾಂಶವು ಹೊರಪದರವು ರಚನೆಯಾಗಿದೆ.
ಜಠರ :
- ಜಠರದಲ್ಲಿ ಫಂಡಸ್, ಬಾಡಿ, ಫೆಲ್ಯೂರಸ್, ಕಾರ್ಡಿಯಾ ಎಂಬ ನಾಲ್ಕು ಭಾಗಗಳಿವೆ.
- ಜಠರದಲ್ಲಿ ಆಹಾರವು 3 ರಿಂದ 4 ಗಂಟೆಗಳ ಕಾಲ ಜೀರ್ಣಸಲ್ಪಡುತ್ತವೆ.
- ಜಠರದಲ್ಲಿ ಅಹಾರದ ಜೀರ್ಣಕ್ರಿಯೆ ಸಹಕಾರಿಯಾಗಿರುವ ಕಿಣ್ವಗಳು ಪೆಪ್ಸಿನ್ ಮತ್ತು ರೆನಿನ್
- ಪೆಪ್ಸಿನೋಜನ್ ನನ್ನು ಪೆಪ್ಸಿನ್ ಆಗಿ ಪರಿವರ್ತಿಸುವ ಆಮ್ಲ HCL
- ಹಾಲಿಯಂತಹ ಉತ್ಪನ್ನಗಳನ್ನು ಜೀರ್ಣಿಸಲು ಸಹಕಾರಿಯಾಗಿರುವ ಕಿಣ್ವ ರೆನಿನ್
- ಜಠರದಲ್ಲಿ ಆಮ್ಲೀಯಗೊಂಡಿರುವ ಆಹಾರವನ್ನು ಪಿತ್ತರಸ, ಮೇದೋಜಿರಕರಸ ಮತ್ತು ಕರುಳಿನ ರಸವು ತಟಸ್ಥಿಕರಣಗೊಳಿಸುತ್ತದೆ.
ಸಣ್ಣಕರುಳು :
- ಸಣ್ಣಕರುಳಿನಲ್ಲಿ ಡಿಯೋಡಿನಂ, ಜೆಜುನಂ ಮತ್ತು ಈಲಿಯಂ ಎಂಬ 3 ಭಾಗಗಳಿವೆ.
- ಸಣ್ಣಕರುಳಿನಲ್ಲಿ ಆಹಾರವು 1 -2 ಗಂಟೆಗಳಲ್ಲಿ ಜೀರ್ಣಿಸಲ್ಪಡುತ್ತದೆ.
- ಸಣ್ಣಕರುಳಿನಲ್ಲಿ ಉದ್ದ 7.4cm
- ಸಣ್ಣಕರುಳಿನಲ್ಲಿ ಬೆರಳಿನಾಕಾರದ ರಚನೆ ವಿಲೈಗಳೆಂದು ಕರೆಯುತ್ತೇವೆ. ಇವುಗಳು ಗ್ಲೂಕೋಸ್ ರೂಪದಲ್ಲಿರುವ ಆಹಾರವನ್ನು ರಕ್ತನಾಳಗಳಲ್ಲಿ ಮಿಶ್ರಗೊಳಿಸುತ್ತವೆ.
ದೊಡ್ಡಕರುಳು :
- ದೊಡ್ಡಕರುಳಿನಲ್ಲಿ ಸೀಕಂ, ಕೊಲನ್, ರೆಕ್ಟಮ್ ಎಂಬ 3 ಭಾಗಗಳಿವೆ.
- ದೊಡ್ಡಕರುಳಿನಲ್ಲಿರುವ E-coli ಎಂಬ ಬ್ಯಾಕ್ಟೀರಿಯಾವು ತ್ಯಾಜ್ಯ ವಸ್ತುವಿನಲ್ಲಿ ದ್ರವರೂಪದ ವಸ್ತುವನ್ನು ಮರುಹೀರಲ್ಪಡುತ್ತದೆ.
- ದೊಡ್ಡಕರುಳಿನ ಉದ್ದ – 2m
- ಓಪೆಯ ಸಂಕೋಚನ ಮತ್ತು ವಿಕಸನ ಕ್ರಿಯೆಯಿಂದ ಮಲವು ಗುದದ್ವಾರದ ಮೂಲಕ ಹೊದಹಾಕಲ್ಪಡುತ್ತದೆ.
- ಮಾನವನ ದೇಹದ ಅನುಪಯುಕ್ತ ಅಂಗ ಅಪೆಂಡಿಕ್ಸ್
- ಕತ್ತರಿಸಿದರೆ ಪುನಃ ಬೆಳೆಯುವ ಅಂಗ ಅಪೆಂಡಿಕ್ಸ್ ಮತ್ತು ಲಿವರ್.
FAQ :
ಯಾಂತ್ರಿಕ ಜೀರ್ಣಕ್ರಿಯೆ ಎಂದರೇನು?
ಕಿಣ್ವಗಳು ಮತ್ತು ರಾಸಾಯನಿಕಗಳ ಸಹಾಯವಿಲ್ಲದೆ ನಡೆಯುವ ಜೀರ್ಣಕ್ರಿಯೆಯನ್ನು ಯಾಂತ್ರಿಕ ಜೀರ್ಣಕ್ರಿಯೆ ಎನ್ನುತ್ತೇವೆ.
ಮಾನವನ ದೇಹದ ಅನುಪಯುಕ್ತ ಅಂಗ ಯಾವುದು?
ಅಪೆಂಡಿಕ್ಸ್
ಇತರೆ ವಿಷಯಗಳು :