ಮೆದುಳಿನ ಬಗ್ಗೆ ಮಾಹಿತಿ Information about the brain Medhulina bagge Mahithi in Kannada
ಮೆದುಳಿನ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಮೆದುಳಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಮೆದುಳು :
- ಮೆದುಳು ದೇಹದ ಪ್ರಮುಖ ಸಹಭಾಗಿತ್ವ ಮತ್ತು ನಿಯಂತ್ರಣ ಭಾಗ ಮಾನವನ ಮೆದುಳಿನ ಹೊರ ನೋಟದಲ್ಲಿ ಮೂರು ನಿರ್ಧಿಷ್ಟ ಭಾಗಗಳನ್ನು ಕಾಣಬಹುದು. ಅವುಗಳೆಂದರೆ
- ಮುಮ್ಮೆದುಳು
- ಮಧ್ಯ ಮೆದುಳು
- ಹಿಮ್ಮೆದುಳು
ಮುಮ್ಮೆದುಳು :
ಇದು ಮೆದುಳಿನ ಅತಿ ಸಂಕೀರ್ಣ ಭಾಗ. ಇದರಲ್ಲಿ ಮಹಾಮಸ್ತಿಷ್ಕ ಮತ್ತು ಡೈಎನ್ಸಫೆಲಾನ್ ಎಂಬ ಎರಡು ಪ್ರಮುಖ ಭಾಗಗಳಿವೆ.
ಮಹಾಮಸ್ತಿಷ್ಕ :
- ಮೆದುಳಿನ ಅತ್ಯಂತ ದೊಡ್ಡ ಭಾಗ. ಇದು ಹೆಚ್ಚು ಅಭಿವೃದ್ದಿ ಹೊಂದಿದೆ.
- ಮೆದುಳಿನ ಒಟ್ಟು ತೂಕದ ಸುಮಾರು ಶೇ 80 ರಷ್ಟು ತೂಕ ಇದರದು.
- ಇದರ ಮೇಲ್ಮೈಯು ವಕರವಾಗಿ ಅನೇಕ ಮಡಿಕ್ಕಗಳಿಂದ ಕೂಡಿದೆ.
- ಎರಡು ಗೋಳಾರ್ಧಗಳು ಒಂದು ಎಳೆಯಿಂದ ಬೇರ್ಪಟ್ಟಿದ್ದರೂ, ಒಳಗೆ ಒಂದಕ್ಕೊಂದು ಕಾರ್ಪಸ್ ಕಲೋಸಮ್ ಎಂಬ ನಗರಗಳ ಎಳೆಯಿಂದ ಸೇರ್ಪಡೆಯಾಗಿದೆ.
- ದೇಹದ ಎಡಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡ ಗೋಳಾರ್ಧಕ್ಕೆ ಸಂಪರ್ಕಗೊಂಡಿವೆ.
- ದೇಹದ ಬಲಭಾಗದಿಂದ ಬರುವ ನರಗಳು ಕತ್ತಿನ ಭಾಗದಲ್ಲಿ ಅಡ್ಡಹಾಯ್ದು ಮಹಾಮಸ್ತಿಷ್ಕದ ಎಡ ಗೋಳಾರ್ಧಕ್ಕೆ ಸಂಪರ್ಕಗೊಂಡಿವೆ.
- ಮಹಾಮಸ್ತಿಷ್ಕದ ಹೊರಗಿನ ಕಾರ್ಟೆಕ್ಸ್ ನರಕೋಶಗಳಿಂದ ಕೂಡಿದ ಬೂದು ಬಣ್ಣದ ವಸ್ತುವಿನಿಂದಾಗಿದೆ.
- ಮಹಾಮಸ್ತಿಷ್ಕದ ಒಳಗಿನ ಮೆಡುಲ್ಲಾ ಭಾಗವು ಆಕ್ಸಾನ್ ಮತ್ತು ಡೆಂಡ್ರೈಟ್ ಗಳು ಸೇರಿದ ಬಿಳಿಯ ವಸ್ತುವಿನಿಂದಾಗಿದೆ.
- ಮಾನವನ ಉನ್ನತವಾದ ಬುದ್ದಿವಂತಿಕೆಗೆ, ಹೆಚ್ಚಿನ ಮೇಲ್ಮೈ ವಿಸ್ತೀರ್ಣವನ್ನು ಹೊಂದಿರುವ ಕಾರ್ಟೆಕ್ಸ್ ನ ವಿಸ್ತೃತ ಬೆಳವಣಿಗೆಯೇ ಕಾರಣ.
ಡೈಎನ್ಸೆಫಲಾನ್ :
- ಡೈಎನ್ಸೆಫಲಾನ್ ಮಹಾಮಸ್ತಿಷ್ಕದಿಂದ ಆವೃತವಾಗಿರುವ ಒಂದು ಭಾಗ.
- ಇಲ್ಲಿ ಥಲಾಮಸ್ ಮತ್ತು ಹೈಪೋಥಲಾಮಸ್ ಎಂಬ ಎರಡು ಭಾಗಗಳಿವೆ.
- ಥಲಾಮಸ್ ಜ್ಞಾನೇಂದ್ರಿಯಗಳಿಂದ ಸ್ವೀಕರಿಸಿದ ನರಾವೇಗಗಳನ್ನು ಮಿದುಳಿನ ಕಾರ್ಟೆಕ್ಸ್ ಗೆ ಕಳುಹಿಸುತ್ತದೆ.
- ಹೈಪೋಥಲಾಮಸ್ ದೇಹದ ಉಷ್ಣತೆ, ದೇಹದಸಮತೋಲನ, ಹಸಿವು ಮತ್ತು ನಿದ್ರೆಗಳನ್ನು ನಿಯಂತ್ರಿಸುತ್ತದೆ. ಜೊತೆಗೆ ಸ್ವನಿಯಂತ್ರಕ ನರವ್ಯೂಹ ಮತ್ತು ಪಿಟ್ಯುಟರಿಗ್ರಂಥಿಯನ್ನು ನಿಯಂತ್ರಿಸುತ್ತದೆ.
ಮಧ್ಯಮೆದುಳು :
- ನರತಂತುಗಳಿಂದ ಕೂಡಿದ ಮೆದುಳಿನ ಒಂದು ಭಾಗ.
- ಮಧ್ಯಮೆದುಳು ಮುಮೆದುಳು ಮತ್ತು ಹಿಮೆದುಳಿಗೆ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಸಂದೇಶಗಳನ್ನು ಹಿಮೆದುಳಿನಿಂದ ಮುಮೆದುಳಿಗೆ ಸಾಗಿಸುತ್ತದೆ.
- ದೃಶ್ಯ ಮತ್ತು ಶ್ರವ್ಯಕ್ಕೆ ಸಂಬಂಧಿಸಿದ ಚೋದನೆಗಳಿಗನುಗುಣವಾಗಿ ತಲೆ ಮತ್ತು ಕತ್ತಿನ ಪರಾವರ್ತಿತದಲನೆಗಳಿಗೆ ಇದು ಕಾರಣ.
ಹಿಮೆದುಳು :
ಹಿಮೆದುಳಲ್ಲಿ ಅನುಮಸ್ತಿಷ್ಕ, ಪಾನ್ಸ್ ಮತ್ತು ಮೆಡುಲ್ಲಾ ಅಬ್ಲಾಂಗೇಟ್ ಎಂಬ ಮೂರು ಭಾಗಗಳಿವೆ.
ಅನುಮಸ್ತಿಷ್ಕ :
- ಅನುಮಸ್ತಿಷ್ಕ ಮೆದುಳಿನ ಎರಡನೇ ದೊಡ್ಡ ಭಾಗ.
- ಅನುಮಸ್ತಿಷ್ಕ ಮಹಾಮಸ್ತಿಷ್ಕದ ಕೆಳಗೆ ಮತ್ತು ಹಿಂಭಾಗದಲ್ಲಿದೆ. ದೇಹದ ಸಮತೋಲನವನ್ನು ಕಾಪಾಡುತ್ತದೆ.
ಪಾನ್ಸ್ :
- ಪಾನ್ಸ್ ಅನುಮಸ್ತಿಷ್ಕದ ಮುಂದೆ ಮಧ್ಯ ಮೆದುಳಿನ ಕೆಳಗೆ ಮತ್ತು ಮೆಡುಲ್ಲಾ ಅಬ್ಲಂಗೇಟಾದ ಮೇಲೆ ಇದೆ.
- ಪಾನ್ಸ್ ಆಹಾರ ಅಗಿಯುವುದು, ಮುಖದ ಭಾವ ಮತ್ತು ಉಸಿರಾಟದ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.
ಮೆಡುಲ್ಲಾ ಅಂಬ್ಲಾಗೇಟ್ :
- ಮೆಡುಲ್ಲಾ ಅಬ್ಲಂಗೇಟ್ ಮೆದುಳಿನ ಅತಿ ಹಿಂದಿನ ಭಾಗವಾಗಿದ್ದು, ಮುಂಡದ ಭಾಗದಲ್ಲಿ ಮೆದುಳು ಬಳ್ಳಿಯಾಗಿ ಮುಂದುವರೆಯುತ್ತದೆ.
- ದೇಹದ ಅನೈಚ್ಛಿಕ ಕ್ರಿಯೆಗಳಾದ ಉಸಿರಾಟ, ಹೃದಯ ಬಡಿತ, ಜೀರ್ಣನಾಳದದಲನೆಗಳನ್ನುನಿಯಂತ್ರಿಸುತ್ತದೆ. ಜೊತೆಗೆ ಸ್ರವಿಕೆ ಮತ್ತು ರಕ್ತದ ಒತ್ತಡದ ನಿಯಂತ್ರಣ ಮುಂತಾದ ಕ್ರಿಯೆಗಳನ್ನು ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
- ವಯಸ್ಕ ಮಾನವನ ಮಿದುಳಿನ ಸರಾಸರಿ ತೂಕ ಸುಮಾರು 1200 ರಿಂದ1400ಗ್ರಾಂಗಳು.
- ಮಾನವನ ಮಿದುಳು ಆತನ ದೇಹದ ತೂಕದ ಶೇ 1.9 ರಷ್ಟು ಇರುತ್ತದೆ.
- ದೇಹಕ್ಕೆ ಬೇಕಾದ ಒಟ್ಟು ರಕ್ತದ ಸರಬರಾಜಿನಲ್ಲಿ ಶೇ 20 ರಷ್ಟು ಮೆದುಳಿಗೆ ಬೇಕಾಗುತ್ತದೆ.
FAQ :
ಮೆದುಳಿನ ಭಾಗಗಳನ್ನು ತಿಳಿಸಿ?
ಮುಮ್ಮೆದುಳು
ಮಧ್ಯ ಮೆದುಳು
ಹಿಮ್ಮೆದುಳು
ಮೆದುಳಿನ ಅತ್ಯಂತ ದೊಡ್ಡ ಭಾಗ ಯಾವುದು?
ಮಹಾಮಸ್ತಿಷ್ಕ
ಇತರೆ ವಿಷಯಗಳು :
ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ