ಭೂಮಿಯ ಚಲನೆಗಳ ಬಗ್ಗೆ ಮಾಹಿತಿ Information about the Earth’s movements Bhoomiya Chalanegala bagge Mahithi in Kannada
ಭೂಮಿಯ ಚಲನೆಗಳ ಬಗ್ಗೆ ಮಾಹಿತಿ :
ಈ ಲೇಖನಿಯಲ್ಲಿ ಭೂಮಿಯ ಚಲನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಭೂಮಿಯ ಚಲನೆಗಳು :
ಭೂಮಿಯು ತನ್ನ ಮೈಸುತ್ತ ಸುತ್ತುತ್ತಾ ಸೂರ್ಯನನ್ನು ಸುತ್ತು ಹಾಕುವುದಕ್ಕೆ ಭೂಮಿಯ ಚಲನೆ ಎಂದು ಕರೆಯುವರು. ಭೂಮಿಯ ಚಲನೆಯಲ್ಲಿ 2 ವಿಧ.
- ದೈನಂದಿನ ಚಲನೆ
- ವಾರ್ಷಿಕ ಚಲನೆ
ದೈನಂದಿನ ಚಲನೆ :
- ಭೂಮಿಯ ತನ್ನ ಮೈಸುತ್ತ ಸುತ್ತುವದಕ್ಕೆ ದೈನಂದಿನ ಚಲನೆ ಅಥವಾ ಅಕ್ಷಭ್ರಮಣ ಅಥವಾ ಭ್ರಮಣ ಎಂದು ಕರೆಯುವರು.
- ಇದರ ಅವಧಿ 23 ಗಂಟೆ, 56 ನಿಮಿಷ, 4.09 ಸೆಕೆಂಡುಗಳು.
- ಒಂದು ಮಧ್ಯಾಹ್ನದಿಂದ ಇನ್ನೊಂದು ಮಧ್ಯಾಹ್ನದವರೆಗಿನ ಅವಧಿ ನಾಕ್ಷತ್ರಿಕ ದಿನ ಅಥವಾ ಸಿಡರಲ್ ಡೇ ಎಂದು ಕರೆಯುವರು.
- ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದ ಅವಧಿಗೆ ಸೌರ ದಿನ ಅಥವಾ ಸೋಲಾರ್ ಡೇ ಎಂದು ಕರೆಯುವರು. ಇದರ ಅವಧಿ 24 ಗಂಟೆ.
- ಸೋಲಾರ ದಿನಕ್ಕೂ ಮತ್ತು ಸಿಡರಲ್ ದಿನಕ್ಕೂ ಇರುವ ಸಮಯದ ಅಂತರ 4 ಅಥವಾ 3 ನಿಮಿಷ 56 ಸೆಕೆಂಡು.
ದೈನಂದಿನ ಚಲನೆಯ ಪರಿಣಾಮಗಳು :
- ಹಗಲು-ರಾತ್ರಿಗಳು ಉಂಟಾಗುತ್ತವೆ.
- ಉಷ್ಣಾಂಶದಲ್ಲಿ ವ್ಯತ್ಯಾಸ ಉಂಟಾಗುವುದು.
- ಸಮಯದ ಸ್ಪಷ್ಟ ಕಲ್ಪನೆ ಉಂಟಾಗುವುದು.
- ದಿಕ್ಕುಗಳ ಸ್ಪಷ್ಟ ಕಲ್ಪನೆ ಉಂಟಾಗುವುದು.
- ಮಾರುತಗಳ ಮತ್ತು ಸಾಗರ ಪ್ರವಾಹಗಳ ದಿಕ್ಕು ಬದಲಾವಣೆ ಉಂಟಾಗುತ್ತದೆ.
- ಭೂಮಿಯು ಆಯಸ್ಕಾಂತದಂತೆ ವರ್ತಿಸುತ್ತದೆ.
- ಉಬ್ಬರವಿಳಿತಗಳು ಉಂಟಾಗುತ್ತವೆ.
- ಮೇಲಕ್ಕೆ ಎಸೆದಂತಹ ವಸ್ತು ನೇರವಾಗಿ ಬೀಳದೆ ಓರೆಯಾಗಿ ಬೀಳುತ್ತದೆ.
- ಪ್ರತಿಯೊಂದು ರೇಖಾಂಶವು ಪ್ರತಿದಿನ ಸೂರ್ಯನಿಗೆ ಎದುರಾಗುತ್ತವೆ.
ವಾರ್ಷಿಕ ಚಲನೆ :
- ಭೂಮಿಯು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿಗೆ ವಾರ್ಷಿಕ ಚಲನೆ ಅಥವಾ ಭೂಮಿಯ ಪರಿಭ್ರಮಣ ಅಥವಾ ಕಕ್ಷ ಭ್ರಮಣ ಎಂದು ಕರೆಯುವರು.
- ಇದರ ಅವಧಿ 365 ದಿನ, 5 ಗಂಟೆ 48 ನಿಮಿಷ ಅಥವಾ 365 ದಿನ, 6 ಗಂಟೆ
- ಇದಕ್ಕೆ ಸಿಡರಲ್ ಇಯರ್ ಎಂತಲೂ ಅಥವಾ ನಾಕ್ಷತ್ರಿಕ ವರ್ಷ ಎಂತಲೂ ಕರೆಯುವರು.
- ಲಿಪಿಯರ್ ಎಂದರೆ ಅಧಿಕ ವರ್ಷ ಆ ವರ್ಷ 365 ದಿನಗಳ ಬದಲಾಗಿ 366 ದಿನ ಬರುತ್ತವೆ.
- ಆ ವರ್ಷ ಫೆಬ್ರವರಿ ದಿನ 28 ದಿನಗಳ ಬದಲಾಗಿ 29 ದಿನ
- ಆ ವರ್ಷವನ್ನು 4 ರಿಂದ ಭಾಗಿಸಿದಾಗ ಸಂಪೂರ್ಣವಾಗಿ ಭಾಗ ಹೋಗುತ್ತವೆ.
- ಆ ದಿನ ಮೊರಾರ್ಜಿ ದೆಸಾಯಿ ಅವರ ಹುಟ್ಟಿದ ದಿನ
- ಭೂಮಿಯ ಸೂರ್ಯನನ್ನು ಸುತ್ತು ಹಾಕುವ ಮಾರ್ಗಕ್ಕೆ ಭೂಪಥ ಎಂದು ಕರೆಯುವರು.
- ಭೂಮಿಯು ಸೂರ್ಯನಿಗೆ 147 ದಶಲಕ್ಷ ಕಿ.ಮೀ. ಸಮೀಪ ಬರುವುದು ಅದಕ್ಕೆ ನೀಚಸ್ಥಾನ ಅಥವಾ ಪೆರೆಲಿಯನ್ ಎಂದು ಕರೆಯುವರು.
- ಭೂಮಿಗೆ ಚಂದ್ರನು ಸಮೀಪ ಇರುವುದಕ್ಕೆ ಪೆರೆಜಿ ಎಂದು ಮತ್ತು ದೂರ ಇರುವುದಕ್ಕೆ ಅಪೋಲಾಜಿ ಎಂದು ಕರೆಯುವರು.
ವಾರ್ಷಿಕ ಚಲನೆಯ ಪರಿಣಾಮಗಳು :
- ಅಕ್ಷಾಂಶ ವೃತ್ತ ನಿರ್ಮಾಣವಾಗುತ್ತವೆ.
- ಉಷ್ಣವಲಯ ಟೋರಿಡ್ ಜೋನ್ :
- ಇದು ಕರ್ಕಾಟಕ ಮತ್ತು ಮಕರ ಸಂಕ್ರಾತಿಗಳ ಮಧ್ಯದಲ್ಲಿ ಕಂಡು ಬರುತ್ತದೆ.
- ಇದಕ್ಕೆ ಚಳಿಗಾಲ ರಹಿತ ವಲಯ ಎಂದು ಕರೆಯುವರು.
- ಪ್ರಪಂಚದಲ್ಲಿ ಅತಿ ಹೆಚ್ಚು ಉಷ್ಣಾಂಶ ವಿರುವ ಸ್ಥಳ ಆಫ್ರಿಕಾದ ಲಿಬಿಯಾ ದೇಶದ ಅಲ್ ಅಜಿಜಿಯಾ
ಸಮಶೀತೋಷ್ಣ ವಲಯ :
- ಇದಕ್ಕೆ ಟೆಂಪರೇಟರೇಟ್ ಜೋನ್ ಎಂದು ಕರೆಯುವರು.
- ಇದಕ್ಕೆ ಬೇಸಿಗೆ ಮತ್ತು ಚಳಿಗಾಲ ಸಹಿತ ವಲಯ ಎಂದು ಕರೆಯುವರು.
- ಇದು ಕರ್ಕಾಟಕ ಸಂಕ್ರಾಂತಿ ವೃತ್ತದಿಂದ ಆರ್ಕಟಿಕ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದಿಂದ ಅಂಟಾರ್ಟಿಕ್ ವೃತ್ತಗಳಲ್ಲಿ ಕಂಡು ಬರುವ ವಲಯವಾಗಿದೆ.
ಶೀತ ವಲಯ :
- ಇದಕ್ಕೆ ಫ್ರಿಡ್ಜ್ ಜೋನ್ ಎಂದು ಕರೆಯುವರು.
- ಇದು ಅಂಟಾರ್ಟಿಕ್ ವೃತ್ತದಿಂದ ಉತ್ತರ ಧ್ರುವ ಮತ್ತು ಅಂಟಾರ್ಟಿಕ್ ವೃತ್ತದಿಂದ ದಕ್ಷಿಣ ಧ್ರುವಗಳ ಮಧ್ಯದಲ್ಲಿರುವ ಉಷ್ಣಾಂಶದ ವಲಯವಾಗಿದೆ.
- ಇದಕ್ಕೆ ಬೇಸಿಗೆ ರಹಿತ ವಲಯ ಎಂತಲೂ ಕರೆಯುವರು.
- ಪ್ರಪಂಚದಲ್ಲಿ ಅತ್ಯಂತ ಶೀತವಾದ ವಲಯ ಅಂಟಾರ್ಟಿಕ್ ದ ಒಸ್ಟಾಕ್, ಸೈಬಿರಿಯಾದ ವರ್ಕೊಯಾನಸ್ಕಿ ಅತ್ಯಂತ ಶೀತವಾದ ಧ್ರುವ, ದಕ್ಷಿಣ ಧ್ರುವ.
ಹಗಲು ಮತ್ತು ರಾತ್ರಿಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ :
- ಮಾರ್ಚ್ 21 ಸೂರ್ಯನ ನೇರವಾದ ಕಿರಣಗಳು ಸಮಭಾಜಕ ವೃತ್ತದಿಂದ ಮೇಲೆ ಬೀಳುತ್ತದೆ. ಇದಕ್ಕೆ ಮೇಷ ಸಂಕ್ರಾಂತಿ ಎಂದು ಕರೆಯುವರು. ಸೆಪ್ಟಂಬರ್ 23 ರಂದು ಸೂರ್ಯನ ನೇರವಾದ ಕಿರಣಗಳು ಸಮಭಾಜಕ ವೃತ್ತದ ಮೇಲೆ ಬೀಳುತ್ತದೆ. ಇದಕ್ಕೆ ತುಲಾ ಸಂಕ್ರಾಂತಿ ಎಂದು ಕರೆಯುವರು.
- ಸಮ, ಹಗಲು ಮತ್ತು ಸಮ ರಾತ್ರಿಗಳು ಅಥವಾ ವಿಷ್ ವತ್ಸ್ ಸಂಕ್ರಾಂತಿಗಳು ಇದುವ ದಿನ ಸೆಪ್ಟೆಂಬರ್ 23 ಮತ್ತು ಮಾರ್ಚ್ 21
- ಜೂನ್ 21 ರಂದು ಸೂರ್ಯನ ನೇರವಾದ ಕಿರಣಗಳು ಕರ್ಕಾಟಕ ಸಂಕ್ರಾಂತಿ ವೃತ್ತದ ಮೇಲೆ ಬೀಳುತ್ತವೆ. ಇದಕ್ಕೆ ಕರ್ಕಾಯನ ಎಂದು ಕರೆಯುವರು. ದೀರ್ಘಾವಾದ ಹಗಲು ಇದುವ ದಿನ ಜೂನ್ 21
- ಜೂನ್ 21 ನನು ಯೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಡಿಸೆಂಬರ್ 22 ರಂದು ಸೂರ್ಯನ ನೇರವಾದ ಕಿರಣಗಳು ಮಕರ ಸಂಕ್ರಾಂತಿ ವೃತ್ತದ ಮೇಲೆ ಬೀಳುತ್ತದೆ. ಇದಕ್ಕೆ ಮಕರಾಯನ ಎಂದು ಕರೆಯುವರು.
ಋತುಮಾನಗಳು ಸಂಭವಿಸುತ್ತವೆ :
- ಜೂನ್ 21 ರಿಂದ ಸೆಪ್ಟೆಂಬರ್ 23 ಮಧ್ಯಾಹ್ನದ ವರೆಗಿನ ಅವಧಿಗೆ ಬೇಸಿಗೆ ಕಾಲ.
- ಸೆಪ್ಟೆಂಬರ್ 23 ಮಧ್ಯಾಹ್ನದಿಂದ ಡಿಸೆಂಬರ್ 21ರವರೆಗಿನ ಅವಧಿಗೆ ಶರತಕಾಲ ಎಂದು ಕರೆಯುವರು.
- ಡಿಸೆಂಬರ್ 22 ರಿಂದ ಮಾರ್ಚ್ 21 ಮಧ್ಯಾಹ್ನದ ವರೆಗಿನ ಅವಧಿಗೆ ಚಳಿಗಾಲ
- ಮಾರ್ಚ್ 22 ಮಧ್ಯಾಹ್ನದ ಜೂನ್ 20ರ ವರೆಗಿನ ಅವಧಿಗೆ ವಸಂತಕಾಲ ಎಂದು ಕರೆಯುವರು.
- ವಸ್ತುವಿನ ವೇಗವು ಸಮಭಾಜಕ ವೃತ್ತದಲ್ಲಿ ಪ್ರತಿ ಗಂಟೆಗೆ 16698 ಕಿ.ಮೀ.
FAQ :
ದೈನಂದಿನ ಚಲನೆ ಎಂದರೇನು?
ಭೂಮಿಯ ತನ್ನ ಮೈಸುತ್ತ ಸುತ್ತುವದಕ್ಕೆ ದೈನಂದಿನ ಚಲನೆ ಅಥವಾ ಅಕ್ಷಭ್ರಮಣ ಅಥವಾ ಭ್ರಮಣ ಎಂದು ಕರೆಯುವರು.
ವಾರ್ಷಿಕ ಚಲನೆ ಎಂದರೇನು?
ಭೂಮಿಯು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿಗೆ ವಾರ್ಷಿಕ ಚಲನೆ ಅಥವಾ ಭೂಮಿಯ ಪರಿಭ್ರಮಣ ಅಥವಾ ಕಕ್ಷ ಭ್ರಮಣ ಎಂದು ಕರೆಯುವರು.
ಇತರೆ ವಿಷಯಗಳು :
ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ