ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ Information about the transport system of Karnataka Karnatakada Sarige Vyavaste bagge Mahithi in Kannada
ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಕರ್ನಾಟಕದ ಸಾರಿಗೆ ವ್ಯವಸ್ಥೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಕರ್ನಾಟಕದ ಸಾರಿಗೆ :
- ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಕುಗಳ ಹಾಗೂ ಪ್ರಯಾಣಿಕರನ್ನು ಸಾಗಿಸುವ ಮಾಧ್ಯಮವೇ ಸಾರಿಗೆ.
- ಕೃಷಿ, ಕೈಗಾರಿಕೆ ಮತ್ತು ವ್ಯಾಪಾರದ ಪ್ರಗತಿಯಲ್ಲಿ ಸಾರಿಗೆ ಸಂಪರ್ಕಗಳು ಜೀವನಾಡಿಯಿದ್ದಂತೆ.
- ಕರ್ನಾಟಕವು ರಸ್ತೆ ಸಾರಿಗೆ, ರೈಲು ಸಾರಿಗೆ, ಜಲಸಾರಿಗೆ ಮತ್ತು ವಾಯು ಸಾರಿಗೆಯನ್ನು ಹೊಂದಿದೆ.
ರಸ್ತೆ ಸಾರಿಗೆ :
- ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದಲೂ ರಸ್ತೆ ಸಾರಿಗೆಯು ರೂಢಿಯಲ್ಲಿದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿದ್ದವು. ಅವು ಸುವ್ಯವಸ್ಥಿತವಾಗಿರಲಿಲ್ಲ.
- ಸ್ವಾತಂತ್ರ್ಯ ನಂತರ ವಿಶಾಲ ಮೈಸೂರು ರಾಜ್ಯ ನಿರ್ಮಾಣವಾದ ಮೇಲೆ 1961 ರ ನಂತರ ಒಟ್ಟು 43,182 ಕಿ.ಮೀ. ಉದ್ದ ರಸ್ತೆಗಳಿದ್ದವು.
- ಪ್ರಸ್ತುತ ಒಟ್ಟು ರಸ್ತೆಗಳ ಉದ್ದ 2,53,601 ಕಿ.ಮೀ. ಇವುಗಳಲ್ಲಿ ಶೇ.35.70 ಭಾಗದಷ್ಟು ಪಕ್ಕಾ ರಸ್ತೆಗಳು ಮತ್ತು ಶೇ.64.30 ಭಾಗದಷ್ಟು ಕಚ್ಚಾ ರಸ್ತೆಗಳಿದ್ದವು.
ಕರ್ನಾಟಕದ ರಸ್ತೆಗಳನ್ನು 4 ವಿಧಗಳಾಗಿ ವಿಂಗಡಿಸಲಾಗಿದೆ.
- ರಾಷ್ಟ್ರೀಯ ಹೆದ್ದಾರಿಗಳು
- ರಾಜ್ಯ ಹೆದ್ದಾರಿಗಳು
- ಜಿಲ್ಲಾ ಹೆದ್ದಾರಿಗಳು
- ಗ್ರಾಮೀಣ ಹೆದ್ದಾರಿಗಳು
ರಾಷ್ಟ್ರೀಯ ಹೆದ್ದಾರಿಗಳು :
- ಪ್ರಮುಖ ನಗರಗಳು, ರಾಜ್ಯಗಳ ರಾಜದಾನಿಗಳು ಹಾಗೂ ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿಗಳು ಎನ್ನುವರು.
- ಇವು ಗುಣಮಟ್ಟದ ಮತ್ತು ಅಗಲವಾದ ರಸ್ತೆಗಳಾಗಿದ್ದು, ದ್ವಿಮುಖ, ನಾಲ್ಕು ಮುಖ ಮತ್ತು ಆರು ಪಥಗಳ ರಸ್ತೆಗಳನ್ನು ಹೊಂದಿರುತ್ತವೆ.
- ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ಅಧೀನಲ್ಲಿದ್ದು, ಇವುಗಳ ನಿರ್ವಹಣಾ ಕಾರ್ಯವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದೆ.
- ರಾಷ್ಟ್ರೀಯ ಹೆದ್ದಾರಿಗಳಿಲ್ಲದ ಜಿಲ್ಲೆಗಳು. ರಾಯಚೂರು ಮತ್ತು ಕೊಡಗು.
ರಾಜ್ಯ ಹೆದ್ದಾರಿಗಳು :
- ರಾಜಧಾನಿ ಬೆಂಗಳೂರಿನಿಂದ ಜಿಲ್ಲಾ ಕೇಂದ್ರ ಪ್ರಮುಖ ಪಟ್ಟಣಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳೊಡನೆ ಸಂಪರ್ಕಿಸುವ ರಸ್ತೆಗಳಿಗೆ ರಾಜ್ಯ ಹೆದ್ದಾರಿ ಎನ್ನುವರು.
- ಇವುಗಳ ನಿರ್ವಹಣೆಯು ರಾಜ್ಯ ಸರ್ಕಾರದ್ದಾಗಿರುತ್ತದೆ.
- ಕರ್ನಾಟಕದಲ್ಲಿ 19,578 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳಿವೆ.
- ಬೆಳಗಾವಿ ಜಿಲ್ಲೆ ಅತಿ ಉದ್ದದ ರಾಜ್ಯ ಹೆದ್ದಾರಿ ಹೊಂದಿರುವ ಜಿಲ್ಲೆಯಾಗಿದೆ.
- ಬೆಂಗಳೂರು ಅತಿ ಕಡಿಮೆ ಉದ್ದದ ರಾಜ್ಯ ಹೆದ್ದಾರಿಯುಳ್ಳ ಜಿಲ್ಲೆಯಾಗಿದೆ.
ಜಿಲ್ಲಾ ರಸ್ತೆಗಳು :
- ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲ್ಲೂಕ್ ಕೇಂದ್ರಗಳಿಗೆ, ಪ್ರಮುಖ ಪಟ್ಟಣ , ಗ್ರಾಮಗಳು, ರೈಲು ಮಾರ್ಗ ಹಾಗೂ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಜಿಲ್ಲಾ ರಸ್ತೆ ಎಂದು ಕರೆಯುವರು.
- ಇವುಗಳ ನಿರ್ಮಾಣ, ಅಭಿವೃದ್ದಿ, ಮೇಲ್ವಿಚಾರಣೆಯು ಜಿಲ್ಲಾ ಪಂಚಾಯತದ್ದಾಗಿರುತ್ತದೆ.
- ರಾಜ್ಯದಲ್ಲಿ ಒಟ್ಟು 49,909 ಕಿ.ಮೀ. ಉದ್ದ ಜಿಲ್ಲಾ ರಸ್ತೆಗಳಿವೆ.
- ತುಮಕೂರು ಜಿಲ್ಲೆ ಹೆಚ್ಚು ಜಿಲ್ಲಾ ರಸ್ತೆಗಳನ್ನು ಒಳಗೊಂಡಿದೆ.
ಗ್ರಾಮೀಣ ರಸ್ತೆಗಳು :
- ತಾಲ್ಲುಕು ಕೇಂದ್ರದಿಂದ ಪ್ರತಿಯೊಂದು ಗ್ರಾಮಗಳಿಗೂ, ಎಲ್ಲಾ ಜಿಲ್ಲಾ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೇ ಗ್ರಾಮೀನ ರಸ್ತೆಗಳು ಎನ್ನುವರು.
- ಇವುಗಳ ನಿರ್ಮಾಣ ನಿರ್ವಹಣೆ-ತಾಲ್ಲುಕು ಪಂಚಾಯತಿ ಮತ್ತು ಗ್ರಾಮ ಪಂಚಾಯಿತಿಗರ ಸೇರಿದ್ದು.
- ಕಲರ್ನಾಟಕದಲ್ಲಿ ಒಟ್ಟು 1,77,542 ಕಿ.ಮೀ ಉದ್ದ ರಸ್ತೆಗಳಿವೆ.
ರೈಲು ಸಾರಿಗೆ :
- 1859 ರಲ್ಲಿ ಕರ್ನಾಟಕದಲ್ಲಿ ಮೊದಲು ರೈಲು ಸಂಚಾರವು ಬೆಂಗಳೂರು ಮತ್ತು ಜೋಲಾರ್ ಪೇಠೆ ನಗರಗಳ ಮಧ್ಯೆ ಸಂಚರಿಸಿತು. ಆರಂಭಿಸಿದವರು ಮಾರ್ಕ್ ಕಬ್ಬನ್.
- 1956 ರ ವೇಳೆಗೆ ಒಟ್ಟು 2595 ಕಿ.ಮೀ. ಗಳಿದ್ದು ಅದು ದಕ್ಷಿಣ ರೇಲ್ವೆ ವಲಯಕ್ಕೆ ಸೇರಿತ್ತು. ಈಗ ನೈರುತ್ಯ ರೈಲುವಲಯವು ಅಸ್ತತ್ವಕ್ಕೆ ಬಂದಿತು.
- ಕರ್ನಾಟಕದಲ್ಲಿ ಪ್ರಸ್ತುತ ಒಟ್ಟು 3244ಕಿ.ಮೀ. ಉದ್ದದ ರೈಲು ಮಾರ್ಗಗಳಿವೆ.
- ಕರ್ನಾಟಕದ ಜಿಲ್ಲೆಗಳಲ್ಲಿ ಸರಾಸರಿ ಉದ್ದ 150-200 ಕಿ.ಮೀ. ಹೊಂದಿದ ಜಿಲ್ಲೆಗಳೆಂದರೆ ಬೆಂಗಳೂರು, ಬಳ್ಳಾರಿ. ಹಾಸನ, ಬೆಳಗಾವಿ.
ಕೊಂಕಣ ರೇಲ್ಚೆ :
- ಇದು ಪಶ್ಚಿಮ ಕರಾವಳಿಯು ಮಹತ್ವ ಪೂರ್ಣವಾದ ರೈಲು ಮಾರ್ಗವಾಗಿದೆ.
- ಇದು ಮಂಗಳೂರು ಮತ್ತು ಮುಂಬೈನ ನಡುವಿನ ಪ್ರಯಾಣದ ಅವಧಿ 41 ಗಂಟೆಗಳಿಂದ 18 ಗಂಟೆಗಳಿಗೆ ಕಡಿಮೆ ಮಾಡಿದೆ.
- ಕೊಂಕಣ ರೇಲ್ವೆ ಮಾರ್ಗವು ಅತ್ಯಂತ ಸುಂದರವಾದ ಪ್ರಾಕೃತಿಕ ದೃಶ್ಯಾವಳಿಯಿಂದ ಕೂಡಿದೆ.
ಮೆಟ್ರೊ ರೈಲು :
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನಮ್ಮ ಮೆಟ್ರೋ ನಗರ ರೈಲು ಯೋಜನೆಯನ್ನು ಅಕ್ಟೋಬರ್ 20, 2011ರಲ್ಲಿ ಜಾರಿಗೆ ತಂದು ಮೊದಲ ಬಾರಿಗೆ ಬೆಂಗಳೂರು ನಗರದ ಬೈಯಪ್ಪನ ಹಳ್ಳಿಯಿಂದ ಎಂ.ಜಿ.ರಸ್ತೆಯವರೆಗೆ ಕಾರ್ಯಾರಂಭವಾಯಿತು.
ವಾಯು ಸಾರಿಗೆ :
- ವಾಯು ಸಾರಿಗೆ ಅತೀ ವೇಗ ಚಾಲಿತ ಸಾರಿಗೆ ಮಾಧ್ಯಮವಾಗಿದ್ದು ಅತ್ಯಂತ ದುಬಾರಿಯಾದ ಸಾರಿಗೆಯಾಗಿದ್ದು, ಎಲ್ಲಾ ವರ್ಗದ ಜನರಿಗೆ ಲಭ್ಯವಾಗದು.
- ಕರ್ನಾಟಕದಲ್ಲಿ ಮೊದಲು ವಿಮಾನ ಯಾನವನ್ನು 1946 ರಲ್ಲಿ ಬೆಂಗಳೂರಿನಿಂದ ಹೈದರಾಬಾದ್ ನಡುವೆ ಡೆಕ್ಕನ್ ಏರ್ವೇಸ್ ಕಂಪನಿಯು ಪ್ರಾರಂಭಿಸಿತು.
- ಭಾರತೀಯ ವಿಮಾನ ಸಂಚಾರವು 1953 ರಲ್ಲಿ ರಾಷ್ಟ್ರೀಕರಣಗೊಂಡು ಇಂಡಿಯನ್ ಏರ್ ಲೈನ್ಸ್ ಸಂಸ್ಥೆ ಆರಂಭಗೊಂಡ ಮೇಲೆ ಬೆಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ಕೇಂದ್ರಗಳಿಗೆ ವಿಮಾನಯಾನದ ಸೌಲಭ್ಯವನ್ನು ಕಲ್ಪಿಸಲಾಯಿತು.
- ರಾಜ್ಯದ ರಾಜಧಾನಿಯಾದ ಬೆಂಗಳೂರು 1996 ರಲ್ಲಿ ಅಂತರಾಷ್ಟ್ರೀಯ ವಿಮಾನನಿಲ್ದಾಣವೆಂದು ಘೋಷಿಸಲ್ಪಟ್ಟಿತ್ತು.
- ಪ್ರಸ್ತುತ HAL ವಿಮಾನನಿಲ್ದಾಣವನ್ನು ಪೈಲಟ್ಗಳ ತರಬೇತಿಗೆ ಬಳಸಲಾಗುತ್ತಿದೆ.
- ಹೊಸದಾಗಿ ನಿರ್ಮಿಸಿದ ದೇವನಹಳ್ಳಿ ವಿಮಾನ ನಿಲ್ದಾಣವು ಭಾರತದ ಮೊದಲ ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದೆ. ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿದ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ. ಇದನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕರೆಯುವರು.
ಜಲಸಾರಿಗೆ :
- ಕರ್ನಾಟಕದಲ್ಲಿ ಒಳನಾಡಿನ ಮತ್ತು ಸಮುದ್ರ ಜಲ ಸಂಚಾರಗಳೆರಡೂ ರೂಢಿಯಲ್ಲಿವೆ. ಅವುಗಳ ಲಭ್ಯತೆ ಬಹು ಸೀಮಿತವಾಗಿವೆ.
- ಒಳನಾಡ ಜಲಸಾರಿಗೆಯು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಂಡು ಬರುತ್ತವೆ.
- ಕರಾವಳಿ ಜಿಲ್ಲೆಗಳಲ್ಲಿ ಹರಿಯುವ ಗಂಗಾವಳಿ, ಕಾಳಿ, ಶರಾವತಿ, ಹಾಲಾಡಿ ಚಕ್ರ, ಕೊಲ್ಲೂರು, ಉದ್ಯಾವರ, ನೇತ್ರಾವತಿ ನದಿಗಳು ಒಳನಾಡಿನ ಮುಖ್ಯ ಜಲಸಾರಿಗೆಯನ್ನು ಪೂರೈಸುತ್ತವೆ.
FAQ :
ಕರ್ನಾಟಕದ ರಸ್ತೆಗಳ ವಿಧಗಳನ್ನು ತಿಳಿಸಿ?
ರಾಷ್ಟ್ರೀಯ ಹೆದ್ದಾರಿಗಳು
ರಾಜ್ಯ ಹೆದ್ದಾರಿಗಳು
ಜಿಲ್ಲಾ ಹೆದ್ದಾರಿಗಳು
ಗ್ರಾಮೀಣ ಹೆದ್ದಾರಿಗಳು
ಕರ್ನಾಟಕದಲ್ಲಿ ಮೊದಲು ರೈಲು ಸಂಚಾರವು ಎಲಲಿ ಸಂಚರಿಸಿತು?
ಬೆಂಗಳೂರು ಮತ್ತು ಜೋಲಾರ್ ಪೇಠೆ ನಗರಗಳ ಮಧ್ಯೆ ಸಂಚರಿಸಿತು.
ಇತರೆ ವಿಷಯಗಳು :
ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ
ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ