ವಾಯು ಮಂಡಲದ ಬಗ್ಗೆ ಮಾಹಿತಿ | Information About The Atmosphere in Kannada

Join Telegram Group Join Now
WhatsApp Group Join Now

ವಾಯು ಮಂಡಲದ ಬಗ್ಗೆ ಮಾಹಿತಿ Information about the atmosphere Vayumandalada bagge Mahithi in Kannada

ವಾಯು ಮಂಡಲದ ಬಗ್ಗೆ ಮಾಹಿತಿ

Information about the atmosphere in Kannada
ವಾಯು ಮಂಡಲದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಾಯು ಮಂಡಲದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ವಾಯು ಮಂಡಲ :

ಭೂ ಮೇಲ್ಮೈಯಲ್ಲಿ ಆವರಿಸಿರುವ ಅನಿಲದ ಹೊದಿಕೆಗೆ ವಾಯು ಮಂಡಲ ಎನ್ನುವರು. ವಾಯು ಮಂಡಲದ ಅಲ್ಪಾವಧಿಯ ಪರಿಸ್ಥಿತಿಗೆ ಹವಾಮಾನ ಎನ್ನುವರು. ಹವಾಮಾನದ ಕುರಿತು ಅಧ್ಯಯನ ಮಾಡುವ ಶಾಸ್ತ್ರಕ್ಕೆ ಮೆಟಿರಾಲಜಿ ಅಥವಾ ಹವಾಮಾನ ಶಾಸ್ತ್ರ ಎನ್ನಲಾಗುತ್ತದೆ. ಮೆಟಿರಾಲಜಿ ಎಂಬ ಪದವನ್ನು ಮೊಟ್ಟ ಮೊದಲು ಅರಿಸ್ಟಾಟಲ್‌ ಅವರು ಬಳಸಿದ್ದಾರೆ. ವಾಯು ಮಂಡಲದ ದೀರ್ಘಾವಧಿಯ ಪರಿಸ್ಥಿತಿ ಅಂದರೆ 30 ರಿಂದ 35 ವರ್ಷಗಳ ಹವಾಮಾನದ ಸರಾಸರಿಗೆ ವಾಯುಗುಣ ಎನ್ನುವರು. ಕ್ಲೈಮೆಟಾಲಜಿ ಎಂಬ ಪದವನ್ನು ಮೊಟ್ಟ ಮೊದಲು ಬಳಸುವರು.

ವಾಯುಗುಣದ ಮೇಲೆ ಪ್ರಬಾವ ಬೀರುವ ಅಂಶಗಳು :

  • ಪರ್ವತಗಳು ಹಬ್ಬಿರುವ ರೀತಿ
  • ಅರಣ್ಯಗಳು
  • ಮಣ್ಣು
  • ಅಕ್ಷಾಂಶ
  • ಜ್ವಾಲಾಮುಖಿ ಪ್ರದೇಶಗಳು
  • ಸಾಗರ ಪ್ರವಾಹಗಳ
  • ಮಾರುತಗಳು ಬೀಸುವ ದಿಕ್ಕು
  • ಸಮುದ್ರದಿಂದ ಇರುವ ದೂರ
  • ಸಮುದ್ರಮಟ್ಟದಿಂದಿರುವ ಎತ್ತರ

ವಾಯು ಮಂಡಲದ ಪದರುಗಳು :

ಪರಿವರ್ತನಾ ಮಂಡಲ(ಟ್ರೋಪೋಸ್ಪಿಯರ್)‌ :

  • ಇದು ಸಮಭಾಜಕ ವೃತ್ತದಲ್ಲಿ 16 ರಿಂದ 18 ಕಿ.ಮೀ. ಮತ್ತು ಧ್ರುವ ಪ್ರದೇಶದಲ್ಲಿ 8 ರಿಂದ 10 ಕಿ.ಮೀ. ವ್ಯಾಪಿಸಿದೆ.
  • ಈ ವಲಯದಲ್ಲಿ ಇಂಗಾಲ ಡೈ ಆಕ್ಸೈಡ್‌, ಸಾರಜನಕ, ಆಮ್ಲಜನಕಗಳು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಪರಿವರ್ತನೆ ಹೊಂದುತ್ತದೆ. ಆದ್ದರಿಂದ ಇದಕ್ಕೆ ಪರಿವರ್ತನಾ ವಲಯ ಎನ್ನುವರು.
  • ಈ ವಲಯದಲ್ಲಿ ಮಾತ್ರ ಎತ್ತರಕ್ಕೆ ಹೋದಂತೆ ಉಷ್ಣಾಂಶ ಕಡಿಮೆಯಾಗುತ್ತದೆ. ಅಂದರೆ 1 ಕಿ.ಮೀ. ಎತ್ತರಕ್ಕೆ ಹೋದಂತೆ 6.5 ಡಿಗ್ರಿ ಸೆಲ್ಸಿಯಸ್‌ ದಷ್ಟು ಉಷ್ಣಾಂಶ ಕಡಿಮೆಯಾಗುವುದು.
  • ಈ ವಲಯದಲ್ಲಿ ಮಾತ್ರ ಗುಡುಗು, ಸಿಡಿಲು, ಮಿಂಚು, ಮೋಡ, ಮಳೆ ನೀರಾವಿ, ಪ್ರಚಲನ ಪ್ರವಾಹ ಮುಂತಾದವುಗಳು ಕಂಡು ಬರುತ್ತವೆ.

ಸಮೋಷ್ಣ ಮಂಡಲ(ಸ್ಟ್ರಾಟೋಸ್ಪಿಯರ್)‌ :

  • ಇದು ಸುಮಾರು 50 ಕಿ.ಮೀ. ವರೆಗೆ ವ್ಯಾಪಿಸಿದೆ.
  • ಈ ವಲಯದಲ್ಲಿ ಭೂಮಿಯ ರಕ್ಷಕ ಭೂಮಿಯ ಕೊಡೆ ಎಂದು ಕರೆಸಿಕೊಳ್ಳುವ ಓಝೋನ್‌ ಪದರು (O3) ಕಂಡು ಬರುತ್ತದೆ.
  • ಇದು ಸೂರ್ಯನಿಂದ ಬರುವ ನೇರಳಾತೀತ ಅಥವಾ ಅಲ್ಟ್ರಾವೈಲೆಟ್‌ ಕಿರಣಗಳಿಂದ ರಕ್ಷಿಸುತ್ತದೆ.
  • ಈ ಪದರು ನಶಿಸಿ ಹೋಗಲು CFC ಕಾರಣವಾಗಿದೆ.
  • ವಿಮಾನಗಳ ಹಾರಾಟಕ್ಕೆ ಈ ವಲಯ ಯೋಗ್ಯವಾಗಿರುವುದರಿಂದ ಇದನ್ನು ಜೆಟ್‌ ವಿಮಾನಗಳ ಅಥವಾ ವಿಮಾನಗಳ ಹಾರಾಟದ ವಲಯ ಎಂದು ಕರೆಯುವರು.

ಮಧ್ಯಾಂತರ ವಲಯ(ಮೀಸೋಸ್ಪಿಯರ್)‌ :

Join WhatsApp Join Telegram
  • ಇದು ಸುಮಾರು 80ಕಿ.ಮೀ. ವರೆಗೆ ವ್ಯಾಪಿಸಿದೆ.
  • ಈ ವಲಯ ಅತ್ಯಂತ ತಂಪಾದ ವಲಯವಾಗಿದೆ. ಇಲ್ಲಿ ಉಲ್ಕೆಗಳು ಭಸ್ಮವಾಗುತ್ತವೆ.
  • 80 ರಿಂದ 90 ಕಿ.ಮೀ. ಅಂತರದಲ್ಲಿ ಮಧ್ಯಾಂತರ ವಿರಾಮ ವಲಯ ಕಂಡು ಬರುತ್ತದೆ.

ಅಯಾನುಗಳು ವಲಯ(ಐನೋ ಸ್ಪಿಯರ್)‌ :

  • ಇದು ಸುಮಾರು 400 ಅಥವಾ 500 ಕಿ.ಮೀ. ವರೆಗೆ ವಿಸ್ತರಿಸಿದೆ.
  • ಈ ವಲಯಕ್ಕೆ ರೇಡಿಯೋ ಇಂಜಿನಿಯರಿಂಗ್‌ ವಲಯ ಅಥವಾ ಬಾಹ್ಯಾಕಾಶ ವಲಯ ಎಂದು ಕರೆಯುವರು.
  • ಈ ವಲಯದಲ್ಲಿ ದ್ರುವ ಜ್ಯೋತಿಗಳು ಅಥವಾ ಅರೋರಾ ನಿಶಾಜ್ಯೋತಿಗಳು ಕಂಡು ಬರುತ್ತವೆ.
  • ಇವುಗಳನ್ನು ಉತ್ತರ ಗೋಳಾರ್ಧದಲ್ಲಿ ಅರೋರಾ ಬೋರಾಲಿಸ್‌ ಮತ್ತು ದಕ್ಷಿಣ ಗೋಳಾರ್ಧದಲ್ಲಿ ಅರೋರಾ ಅಸ್ಟ್ರಾಲಿಸ್‌ ಎಂದು ಕರೆಯುವರು.
  • ಇದನ್ನು 1902 ರಲ್ಲಿ ಕೆನ್ನೆಲಿ ಮತ್ತು ಹಿಂವೀಸೈಡ್‌ ಎಂಬುವವರು ಕಂಡು ಹಿಡಿದಿದ್ದಾರೆ.
  • ಇದು ಅತ್ಯಂತ ಉಷ್ಣವಾದ ವಾಯು ಮಂಡಲದ ಪದರು.

ಬಾಹ್ಯ ವಲಯ(ಎಕ್ಸೋಸ್ಪಿಯರ್) :

ಇದು ಸುಮಾರು 1100 ರಿಂದ 1600 ಕಿ.ಮೀ. ವರೆಗೆ ವ್ಯಾಪಿಸಿದೆ.

ಇದನ್ನು 1958 ರಲ್ಲಿ ವಾನ್‌ ಅಲೇನ್‌ ಎಂಬುವವರು ಕಂಡುಹಿಡಿದಿದ್ದರಿಂದ ಇದಕ್ಕೆ ವಾನ್‌ ಅಲೇನ್‌ ಭೂಸ್ತರ ಎಂದು ಕರೆಯುವರು.

FAQ :

ವಾಯುಗುಣದ ಮೇಲೆ ಪ್ರಬಾವ ಬೀರುವ ಅಂಶಗಳಾವುವು?

ಪರ್ವತಗಳು ಹಬ್ಬಿರುವ ರೀತಿ
ಅರಣ್ಯಗಳು
ಮಣ್ಣು
ಅಕ್ಷಾಂಶ
ಜ್ವಾಲಾಮುಖಿ ಪ್ರದೇಶಗಳು
ಸಾಗರ ಪ್ರವಾಹಗಳ
ಮಾರುತಗಳು ಬೀಸುವ ದಿಕ್ಕು
ಸಮುದ್ರದಿಂದ ಇರುವ ದೂರ
ಸಮುದ್ರಮಟ್ಟದಿಂದಿರುವ ಎತ್ತರ

ವಿಮಾನಗಳ ಹಾರಾಟಕ್ಕೆ ಯಾವ ವಲಯ ಯೋಗ್ಯವಾಗಿದೆ?

ಸಮೋಷ್ಣ ಮಂಡಲ

ಇತರೆ ವಿಷಯಗಳು :

ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ

ಭಾರತದ ನದಿಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.