ಸಂವಿಧಾನದ ಲಕ್ಷಣಗಳ ಬಗ್ಗೆ ಮಾಹಿತಿ Information about features of constitution Samvidhanada Lakshanagala bagge Mahithi in Kannada
ಸಂವಿಧಾನದ ಲಕ್ಷಣಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಸಂವಿಧಾನದ ಲಕ್ಷಣಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಸಂವಿಧಾನದ ಲಕ್ಷಣಗಳು :
- ಬೃಹತ್ ಸಂವಿಧಾನವಾಗಿದೆ :
ಭಾರತದ ಸಂವುಧಾನವು ಬೃಹತ್ ಸಂವಿಧಾನವಾಗಿದೆ. ಇದು 1935ರ ಕಾಯ್ದೆಯಿಂದ 70% ರಷ್ಟು ಅಂಶವನ್ನು ಮತ್ತು ಇನ್ನುಳಿದ ಅಂಶಗಳನ್ನು ವಿವಿಧ ದೇಶಗಳಿಂದ ಎರವಲಾಗಿ ಪಡೆಯಲಾಗಿದೆ. ಭಾರತ ಸಂವಿಧಾನದಲ್ಲಿ ದಿನದಿಂದ ದಿನಕ್ಕೆ ತಿದ್ದುಪಡಿ ಮಾಡಿ ಅನೇಕ ವಿಷಯಗಳನ್ನು ಸೇರಿಸಲಾಗುತ್ತವೆ.
- ವಯಸ್ಕರ ಮತದಾನ ಪದ್ದತಿ :
ಪ್ರಾರಂಭದಲ್ಲಿ ಮತದಾನದ ವಯಸ್ಸು 21 ಆಗಿತ್ತು. 1988 ರಲ್ಲಿ 61ನೇ ತಿದ್ದುಪಡಿ ಮಾಡುವುದರ ಮೂಲಕ ಮತದಾನದ ವಯಸ್ಸು 18ಕ್ಕೆ ಇಳಿಸಲಾಯಿತು. ಇದು ಜಾರಿಗೆ ಬಂದಿದ್ದು 1989 ರಲ್ಲಿ ಮತದಾನದ ಹಕ್ಕಿನ ಕುರಿತು ಸಂವಿದಾನದ 15ನೇ ಭಾಗದ 326ನೇ ವಿಧಿಯಲ್ಲಿ ತಿಳಿಸುತ್ತದೆ.
- ಏಕಪೌರತ್ವ :
ಈ ಪದ್ದತಿಯನ್ನು ಬ್ರಿಟನ್ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಏಕಪೌರತ್ವ ಪದ್ದತಿಯನ್ನು ಅಳವಡಿಸಲು ಕಾರಣ ನಮ್ಮಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಸುವುದಾಗಿದೆ. ಪೌರತ್ವ ವಿಷತದ ಕುರಿತು ಸಂವಿಧಾನದ 2ನೇ ಭಾಗದಲ್ಲಿ 5ನೇ ವಿಧಿಯಿಂದ 11ನೇ ವಿಧಿಯವರೆಗೆ ವಿವರಿಸಲಾಗಿದೆ.
- ತುರ್ತು ಪರಿಸ್ಥಿತಿಯ ಅಧಿಕಾರಗಳು :
ಇದನ್ನು ಜರ್ಮನಿ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಸಂವಿಧಾನದಲ್ಲಿ 18ನೇ ಭಾಗದಲ್ಲಿ 352ನೇ ವಿಧಿಯಿಂದ 360ನೇ ವಿಧಿಯವರೆಗೂ 3 ಪ್ರಕಾರದ ತುರ್ತು ಪರಿಸ್ಥಿತಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ 352ನೇ ವಿಧಿ, ರಾಜ್ಯ ತುರ್ತು ಪರಿಸ್ಥಿತಿ 356ನೇ ವಿಧಿ, ಹಣಕಾಸು ತುರ್ತ ಪರಿಸ್ಥಿತಿ 360ನೇ ವಿಧಿ.
- ತಿದ್ದುಪಡಿಯ ವಿಧಾನ :
ಇದನ್ನು ದಕ್ಷಿಣ ಆಫ್ರಿಕಾ ದೇಶದ ಸಂವಿಧಾನದಿಂದ ಪಡೆಯಲಾಗಿದೆ. ಸಂವಿಧಾನದ 368ನೇ ತಿದ್ದುಪಡಿಯ ಮೂಲಕ ಎರಡು ರೀತಿಯಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ಸರಳ ತಿದ್ದುಪಡಿ ಮತ್ತು ಕಠಿಣ ತಿದ್ದುಪಡಿ ವಿಧಾನ.
- ಮೂಲಭೂತ ಹಕ್ಕುಗಳು :
ಈ ವಿಷಯವನ್ನು ಅಮೇರಿಕಾ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ಸಂವಿಧಾನದ 3ನೇ ಭಾಗದಲ್ಲಿ 12ನೇ ವಿಧಿಯಿಂದ 35ನೇ ವಿಧಿಯವರೆಗೆ ಮೂಲಭೂತ ಹಕ್ಕುಗಳ ಕುರಿತು ವಿವರಿಸಲಾಗಿದೆ. ಇವುಗಳನ್ನು ಭಾರತದ ಮ್ಯಾಗ್ನಾಕಾರ್ಟ್ ಎಂದು ಕರೆಯಲಾಗುತ್ತದೆ.
- ಸಂಯುಕ್ತ ಪದ್ದತಿ :
ಇದು ದೇಶದಲ್ಲಿ ಏಕಾತ್ಮಕ ಪದ್ದತಿ ಇದ್ದರೂ ಕೂಡಾ ನಮ್ಮ ದೇಶದಲ್ಲಿ 1ನೇ ಭಾಗದಲ್ಲಿ ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗಿದೆ.
- ದ್ವಿಸದನ ಪದ್ದತಿ :
ಈ ಪದ್ದತಿಯನ್ನು ಬ್ರಿಟನ್ ದೇಶದ ಸಂವಿಧಾನದಿಂದ ಎರವಲಾಗಿ ಪಡೆಯಲಾಗಿದೆ. ನಮ್ಮ ಸಂಸತ್ತು ದ್ವಿಸದನ ಹೊಂದಿದೆ.
- ಲೋಕಸಭೆ : ಈ ಸದನವನ್ನು ಕೆಳಮನೆ, ಕಿರಿಯರ ಸದನ, ಜನತಾ ಸದನ ಎಂದು ಕರೆಯುವರು.
ರಾಜ್ಯ ಸಭೆ : ಈ ಸದನವನ್ನು ಮೇಲ್ಮನೆ, ಬುದ್ದಿವಂತರ ಸದನ, ಹಿರಿಯರ ಸದನ, ಶಾಶ್ವತ ಸದನ, ಎಂದು ಕರೆಯುವರು.
- ಸ್ವತಂತ್ರ ಸಂಸ್ಥೆಗಳು :
ಭಾರತದ ಸಂವಿಧಾನವು ಭಾರತದಲ್ಲಿ ಸ್ವತಂತ್ರವಾಗಿ ಮತ್ತು ನಿರ್ಬಯವಾಗಿ ಕಾರ್ಯನಿರ್ವಹಿಸಲು ಕೆಲವು ಸಂವಿಧಾನಾತ್ಮಕ ಹುದ್ದೆಗಳಿಗೆ ಮತ್ತು ಸಂವಿಧಾನಾತ್ಮಕ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
- ಎರವಲು ಸಂವಿಧಾನ :
ಭಾರತದ ಸಂವಿಧಾನ ಈ ಕೆಳಗಿನ ವಿಷಯಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ಪಡೆದುಕೊಂಡಿದೆ.
- 1935 ರ ಕಾಯ್ದೆ : ಒಕ್ಕೂಟ ವ್ಯವಸ್ಥೆ, ರಾಜ್ಯಪಾಲರ ಹುದ್ದೆ, ಸಾರ್ವಜನಿಕ ಸೇವೆಗಳು, ನ್ಯಾಯಾಂಗ ಪದ್ದತಿ.
- ಬ್ರಿಟನ್ : ಸಂಸದೀಯ ಪದ್ದತಿ, ಏಕಪೌರತ್ವ, ರಿಟ್ಗಳು, ದ್ವಿಸದನ, ಕ್ಯಾಬಿನೆಟ್ ಪದ್ದತಿ.
- ಅಮೇರಿಕಾ : ಪೂರ್ವ ಪೀಠಿಕೆ, ಮೂಲಭೂತ ಹಕ್ಕುಗಳು, ನ್ಯಾಯಿಕ ವಿಮರ್ಶೆ, ರಾಷ್ಟ್ರಾಧ್ಯಕ್ಷರ ಮಹಾಭಿಯೋಗ, ನ್ಯಾಯಾಧೀಶರ ಹುದ್ದೆ, ಉಪರಾಷ್ಟ್ರಪತಿ ಹುದ್ದೆ.
- ಐರ್ಲೆಂಡ್ : ರಾಜ್ಯ ನಿರ್ದೇಶಕ ತತ್ವಗಳು, ರಾಜ್ಯ ಸಭೆಗೆ ಸದಸ್ಯರ ನಾಮಕರಣ, ರಾಷ್ಟ್ರಪತಿಯವರ ಚುನಾವಣಾ ವಿಧಾನ.
- ಕೆನಡಾ : ಕೇಂದ್ರದಿಂದ ರಾಜ್ಯಪಾಲರ ನೇಮಕ, ಕೇಂದ್ರ ಸರ್ಕಾರದಿಂದ ಕೂಡಿದ ಒಕ್ಕೂಟ ವ್ಯವಸ್ಥೆ.
- ಆಸ್ಟ್ರೇಲಿಯಾ : ಸಮವರ್ತಿ ಪಟ್ಟಿ, ಜಂಟಿ ಅಧಿವೇಶನ.
- ಜರ್ಮನಿ : ತುರ್ತು ಪರಿಸ್ಥಿತಿ.
- ರಷ್ಯಾ : ಮೂಲಭೂತ ಕರ್ತವ್ಯಗಳು, ಪೂರ್ವ ಪೀಟಿಕೆಯಲ್ಲಿರುವ ಸಾಮಾಜಿಕ , ಆರ್ಥಿಕ ರಾಜಕೀಯ ನ್ಯಾಯ ಎಂಬ ಪದಗಳು.
- ಫ್ರೆಂಚ್ : ಪೂರ್ವ ಪೀಠಿಕೆಯಲ್ಲಿರುವ ಸಮಾನತೆ, ಸ್ವಾತಂತ್ರ್ಯ,ಭಾತೃತ್ವ ಎಂಬ ಪದಗಳು.
- ದಕ್ಷಿಣ ಆಫ್ರಿಕಾ : ತಿದ್ದುಪಡಿ ವಿಧಾನ.
FAQ :
ತುರ್ತುಪರಿಸ್ಥಿತಿ ಬಗ್ಗೆ ಭಾರತ ಸಂವಿಧಾನದ ಎಷ್ಟನೇ ಭಾಗ ಹೇಳುತ್ತದೆ?
18 ನೇ
ಮೂಲಭೂತ ಹಕ್ಕುಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಅಮೇರಿಕಾ
ಇತರೆ ವಿಷಯಗಳು :
ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ
ಭಾರತದ ಚುನಾವಣಾ ಆಯೋಗದ ಬಗ್ಗೆ ಮಾಹಿತಿ