ಯುವಕರು ಮತ್ತು ರಾಷ್ಟ್ರ ನಿರ್ಮಾಣ ಪ್ರಬಂಧ | Youth and Nation Building Essay in Kannada

Join Telegram Group Join Now
WhatsApp Group Join Now

ಯುವಕರು ಮತ್ತು ರಾಷ್ಟ್ರ ನಿರ್ಮಾಣ ಪ್ರಬಂಧ Youth and Nation Building Essay Yuvakaru mattu Rastra Nirmana Prabandha in Kannada

ಯುವಕರು ಮತ್ತು ರಾಷ್ಟ್ರ ನಿರ್ಮಾಣ ಪ್ರಬಂಧ

Youth and Nation Building Essay in Kannada
ಯುವಕರು ಮತ್ತು ರಾಷ್ಟ್ರ ನಿರ್ಮಾಣ ಪ್ರಬಂಧ

ಈ ಲೇಖನಿಯಲ್ಲಿ ಯುವಕರು ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪೀಠಿಕೆ :

“ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ, ಯುವಕರು ಹೇಡಿಗಳಾಗಬಾರದು, ನೀವು ಪರವಾಲಂಬಿಗಳಲ್ಲ ನಿಮ್ಮ ಬದುಕಿನ ಶಿಲ್ಪಿಗಳು ನೀವೇ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಯುವ ಜನಾಂಗದ ಬಗ್ಗೆ ಇದ್ದ ನಂಬಿಕೆ ಹಾಗೂ ಯುವ ಜನಾಂಗ ದಿಕ್ಕು ತಪ್ಪುವಲ್ಲಿ ಇದ್ದ ಕಳವಳ ಎರಡೂ ವ್ಯಕ್ತವಾಗುತ್ತದೆ. ಒಂದು ದೇಶದ ನಿಜವಾದ ಶಕ್ತಿ ಮತ್ತು ಆಸ್ತಿ ಯುವ ಜನಾಂಗ. ಗಟ್ಟಿ ಮುಟ್ಟಾದ ದೇಹದೊಂದಿಗೆ ಕ್ರಿಯಾತ್ಮಕ ಆಲೋಚನೆಗಳನ್ನು ಹೊಂದಿರುವ ಯುವಕರನ್ನು ಸರಿದಾರಿಗೆ ತರಬೇಕಾದ್ದು ತುಂಬಾ ಮುಖ್ಯವಾದ ಕೆಲಸ.

ವಿಷಯ ವಿವರಣೆ :

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ :

ರಾಷ್ಟ್ರ ಸಧೃಢವಾಗಬೇಕಾದರೆ ಅಭಿವೃದ್ದಿಯೊಂದಿಗೆ ನಿರಂತರತೆಯನ್ನು ಕಾಪಾಡಬೇಕಾದರೆ ಯುವಕರ ಪಾತ್ರ ಮುಖ್ಯವಾಗಿರುತ್ತದೆ.

  • ಬದಲಾವಣೆ ಮತ್ತು ಪ್ರಗತಿಯ ಹರಿಕಾರರು :

ಯುವ ಜನಾಂಗ ಗೊಡ್ಡು ಸಂಪ್ರದಾಯ ಆಚರಣೆಗಳಿಂದ ಹೊರಬರಲು ಸದಾ ಸನ್ನದ್ದರಾಗಿ ವಾಸ್ತವದಲ್ಲಿ ಬದುಕುತ್ತಾರೆ. ದೇಶದ ಪ್ರಗತಿಯ ದೃಷ್ಟಿಯಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾರೆ.

  • ದೇಶಾಭಿಮಾನ ಹೆಚ್ಚು :

ಇಂದಿನ ಯುವಕರು ಪ್ರಾದೇಶಿಕ ಗೊಂದಲಗಳಿಗಿಂತ ರಾಷ್ಟ್ರದ ಐಕ್ಯತೆ ಮತ್ತು ಸಮಗ್ರತೆಗೆ ಚಿಂತಿಸುತ್ತಾರೆ. ನಾನು ಎನ್ನುವುದನ್ನು ಬಿಟ್ಟು ʼದೇಶ ಮೊದಲು ನಾನು ಆಮೇಲೆʼ ಎನ್ನುತ್ತಿದ್ದಾರೆ. ವಿವೇಕಾನಂದರ ಚಿಂತನೆಗಳಿಂದ ಪ್ರೇರಿತರಾಗುತ್ತಿದ್ದಾರೆ. ಬಲಿಷ್ಟ ಭಾರತ ನಿರ್ಮಾಣದ ಕನಸು ಕಾಣುತ್ತಿದ್ದಾರೆ.

Join WhatsApp Join Telegram
  • ಆರ್ಥಿಕ ಶಕ್ತಿ :

ಯುವಕರು ಪ್ರತಿ ಕುಟುಂಬದ ದುಡಿಮೆಯ ಆಧಾರ ಸ್ಥಂಭವಾಗಿರುವುದರ ಜೊತೆಗೆ ದೇಶದ ಆರ್ಥಿಕತೆಗೆ ಸಹಕಾರಿಯಾಗಿ ನಿಲ್ಲುತ್ತಿದ್ದಾರೆ. ಇದರಿಂದ ಕುಟುಂಬ ಮತ್ತು ದೇಶ ಸದೃಡವಾಗಲು ಸಾಧ್ಯವಾಗಿದೆ.

  • ರಾಜಕೀಯ ನೇತಾರರು :

ಯುವಶಕ್ತಿ ರಾಜಕಾರಣದಲ್ಲಿ ಆಸಕ್ತಿ ತೋರುತ್ತಿದ್ದು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಪ್ರಜೆಗಳೊಂದಿಗೆ ನೇರವಾಗಿ ಸಂಪರ್ಕಕ್ಕೆ ಬರುವುದರ ಜೊತೆಗೆ ವಾಸ್ತವದ ಅರಿವು ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆಡಳಿತ ಯಂತ್ರ ಸುಗಮವಾಗುತ್ತಿದೆ. ಯುವಕರು ಅರ್ಹ ವ್ಯಕ್ತಿಗೆ ಮತ ಚಲಾಯಿಸಲು ಸಿದ್ದರಾಗಿ ಆಮಿಷಗಳಿಂದ ದೂರವಾಗುತ್ತಿದ್ದಾರೆ.

  • ಸಾಮಾಜಿಕ ಪಿಡುಗುಗಳ ವಿರುದ್ದ ಹೋರಾಟ :

ಭ್ರಷ್ಟಾಚಾರ, ವರದಕ್ಷಿಣೆ, ಕಿರುಕುಳ, ಬಡತನ, ನಿರುದ್ಯೋಗ, ಜನಸಂಖ್ಯಾಸ್ಪೋಟ ಮತ್ತು ಮೂಡನಂಬಿಕೆಗಳ ವಿರುದ್ದ ನಿರಂತರ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದು ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಇವು ಪ್ರಮುಖ ಸಂಗತಿಗಳಾಗಿ ನಿಲ್ಲುತ್ತಿವೆ.

  • ವಿಜ್ಞಾನ ಮತ್ತು ತಂತ್ರಜ್ಞಾನ :

ಯುವ ಜನಾಂಗ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ, ಹೊಸ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ.

  • ರಾಷ್ಟ್ರ ರಕ್ಷಕ :

ದೇಶದ ಮಿಲಿಟರಿಯಲ್ಲಿ ಕೆಲಸ ಮಾಡುವವರು ಯುವಕರಾಗಿದ್ದು ಶತೃ ರಾಷ್ಟ್ರಗಳನ್ನು ಸದೆಬಡಿಯಲು ಸದಾ ಸಿದ್ದರಾಗಿರುತ್ತಾರೆ. ನೆರೆ ರಾಷ್ಡ್ರಗಳ ಹಾವಳಿಯನ್ನು ನಿರಂತರವಾಗಿ ತಡೆಯುತ್ತಿದ್ದಾರೆ, ರಾಷ್ಟ್ರದೊಳಗಿನ ದುಷ್ಟಶಕ್ತಿಗಳ ನಿಗ್ರಹವೂ ಕೂಡ ನಿರಂತರವಾಗಿ ಸಾಗುತ್ತಿದೆ.

ಜಾತೀಯತೆಯಿಂದ ದೂರ ಬರುತ್ತಿದ್ದಾರೆ.

  • ಮಹಿಳಾ ದೌರ್ಜನ್ಯದ ವಿರುದ್ದ ಹೋರಾಟ
  • ಧೈರ್ಯ ಮತ್ತು ಕ್ರಿಯಾತ್ಮಕತೆ
  • ಮಾನವೀಯ ಮೌಲ್ಯಗಳ ಪ್ರೋತ್ಸಾಹಕರು
  • ದೇಶ ನಿರ್ಮಾಣದಲ್ಲಿ ಸಕ್ತಿಯ ಭಾಗವಹಿಸುವಿಕೆ

ಯುವಕರನ್ನು ಸರಿದಾರಿಗೆ ತರುವುದು ಹೇಗೆ :

  • ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ತಂದು ಉದ್ಯೋಗಾಧಾರಿತ ಶಿಕ್ಷಣವನ್ನು ಜಾರಿಗೊಳಿಸಿ ಯುವಕರಲ್ಲಿ ಕೌಶಲ್ಯಗಳನ್ನು ವೃದ್ದಿಸಬೇಕಾಗಿದೆ.
  • ಯುವಕರಲ್ಲಿ ಧಾರ್ಮಿಕ ಐಕ್ಯತೆಯನ್ನು ಬೆಳೆಸಬೇಕು. ಜಾತೀಯತೆಯನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸುವ ಕೆಲಸಗಳಾಗಬೇಕು.
  • ಯುವಕರು ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ರಾಜಕೀಯ ತತ್ವ ಸಿದ್ದಾಂತ ಸಾಮಾಜಿಕ ಕಳಕಳಿಯ ತರಬೇತಿಯಾಗಬೇಕು.
  • ಯುವಕರು ವಿದ್ಯೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ಚಿಂತಿಸುವ ಬದಲು ವಿದ್ಯೆ ಜ್ಞಾನಾರ್ಜನೆಗೆ ಎನ್ನುವುದನ್ನು ಅರಿತು ಸ್ವಂತ ಉದ್ಯೋಗಕ್ಕೆ ಪ್ರೋತ್ಸಾಹಿಸುವ ನಿರಂತರ ಕೆಲಸಗಳಾಗಬೇಕು.
  • ಬಹಳ ವಿದ್ಯಾವಂತ ಯುವಕರು ಸ್ವಾರ್ಥಿಗಳಾಗಿ ತಾನು ಮತ್ತು ತನ್ನ ಸಂಸಾರ ಎನ್ನುತ್ತಿದ್ದಾರೆ, ಅದರಿಂದ ಹೊರಬಂದು ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಬೇಕು.
  • ರಾಷ್ಟ್ರ ನಿರ್ಮಾಣ, ಐಕ್ಯತೆ ಮತ್ತು ಸಮಾನತೆಗೆ ಎಲ್ಲ ಯುವಕರು ಸಜ್ಜಾಗಬೇಕು.
  • ಯುವಕರನ್ನು ದುಶ್ಚಟಗಳಿಂದ ದೂರ ತರುವ ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಯಾಗಬೇಕು.

ಉಪಸಂಹಾರ :

ಯುವಶಕ್ತಿಯಲ್ಲಿ ಸಕಾರಾತ್ಮಕ ಮತ್ತು ನಕರಾತ್ಮಕ ಅಂಶಗಳಿರುವುದು ಸಹಜವಾಗಿ ಕಂಡುಬರುವ ಅಂಶ. ಸಕಾರಾತ್ಮಕ ಅಂಶಗಳನ್ನು ಪ್ರೋತ್ಸಾಹಿಸಿ ನಕಾರಾತ್ಮಕ ಆಲೋಚನೆಗಳನ್ನು ನಾಶಮಾಡಿದಾಗ ದೇಶ ಸಧೃಢವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಶಿಕ್ಷಿತ ಯುವಕರು ಗ್ರಾಮ ಮತ್ತು ಕೊಳಗೇರಿಗಳಲ್ಲಿರುವ ಜನರನ್ನು ಶಿಕ್ಷಿತರಾಗಿ ಮಾಡುವ ಮೂಲಕ ಸಾಮಾಜಿಕ ಉನ್ನತಿಗೆ ಶ್ರಮಿಸಬೇಕು.

FAQ :

ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ತಿಳಿಸಿ?

ಜಾತೀಯತೆಯಿಂದ ದೂರ ಬರುತ್ತಿದ್ದಾರೆ.
ಮಹಿಳಾ ದೌರ್ಜನ್ಯದ ವಿರುದ್ದ ಹೋರಾಟ
ಧೈರ್ಯ ಮತ್ತು ಕ್ರಿಯಾತ್ಮಕತೆ
ಮಾನವೀಯ ಮೌಲ್ಯಗಳ ಪ್ರೋತ್ಸಾಹಕರು
ದೇಶ ನಿರ್ಮಾಣದಲ್ಲಿ ಸಕ್ತಿಯ ಭಾಗವಹಿಸುವಿಕೆ

ಯುವಕರನ್ನು ಸರಿದಾರಿಗೆ ತರುವುದರ ಒಂದು ಬಗೆ ತಿಳಿಸಿ?

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ತಂದು ಉದ್ಯೋಗಾಧಾರಿತ ಶಿಕ್ಷಣವನ್ನು ಜಾರಿಗೊಳಿಸಿ ಯುವಕರಲ್ಲಿ ಕೌಶಲ್ಯಗಳನ್ನು ವೃದ್ದಿಸಬೇಕಾಗಿದೆ.
ಯುವಕರಲ್ಲಿ ಧಾರ್ಮಿಕ ಐಕ್ಯತೆಯನ್ನು ಬೆಳೆಸಬೇಕು. ಜಾತೀಯತೆಯನ್ನು ಸಮಾಜದಿಂದ ಸಂಪೂರ್ಣವಾಗಿ ತೊಲಗಿಸುವ ಕೆಲಸಗಳಾಗಬೇಕು

ಇತರೆ ವಿಷಯಗಳು :

ವಿಶ್ವ ಭೂ ದಿನದ ಬಗ್ಗೆ ಪ್ರಬಂಧ

ಅಂತರಾಜ್ಯ ಜಲವಿವಾದಗಳ ಬಗ್ಗೆ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.