ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ Information on Natural Resources Naisargika Sampanmulagala bagge Mahithi in Kannada
ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ನೈಸರ್ಗಿಕ ಸಂಪನ್ಮೂಲಗಳ ಅರ್ಥ :
ನೈಸರ್ಗಿಕವಾಗಿ ಲಭ್ಯವಿದ್ದು, ತಾವಿದ್ದ ಸ್ವರೂಪದಲ್ಲಿಯೇ ಮೌಲ್ಯಯುತ ಎಂದು ಪರಿಗಣಿತವಾಗಿರುವ ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳೆಂದು ಕರೆಯುಬಹುದು. ಆಹಾರ ಬೆಳೆಯಲು ಉಪಯುಕ್ತವಿರುವ ಮಣ್ಣು, ನಮ್ಮ ಹಲವು ಚಟುವಟಿಕೆಗಳಿಗೆ ಮೂಲಾಧಾರವಾಗಿರುವ ನೀರು, ಹಲವು ಸೇವೆಗಳನ್ನು ಒದಗಿಸುವ ಮರಗಿಡಗಳು, ಜೀವಿಗಳು ಉಸಿರಾಡುವ ವಾಯು, ನಮ್ಮ ಹಲವಾರು ಉತ್ಪನ್ನಗಳಿಗೆ ಕಚ್ಛಾ ವಸ್ತುಗಳಾದ ಅದಿರುಗಳು, ಇತ್ಯಾದಿಗಳೆಲ್ಲವನ್ನೂ ನಾವು ಸಂಪನ್ಮೂಲಗಳು ಎಂದು ಕರೆಯುತ್ತೇವೆ.
ನೈಸರ್ಗಿಕ ಸಂಪನ್ಮೂಲಗಳನ್ನು ಸಾಮಾನ್ಯವಾಗಿ ಪುನರುತ್ಪತ್ತಿ ಹೊಂದುವ ಅಥವಾ ನವೀಕರಣಗೊಳ್ಳುವ ಹಾಗೂ ಮುಗಿದು ಹೋಗುವ ಎಂಬ ಎರಡು ವಿಧಗಳಲ್ಲಿ ವರ್ಗೀಕರಿಸಲಾಗಿದೆ.
ನವೀಕರಣಗೊಳ್ಳುವ ಅಥವಾ ಪುನರುತ್ಪತ್ತಿ ಹೊಂದುವ ಸಂಪನ್ಮೂಲಗಳು :
ಕೆಲವು ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಬಳಸಿಕೊಳ್ಳುತ್ತಾ ಹೋದಂತೆ ಅವು ಪುನಃ ತಮ್ಮ ಮೂಲ ಸ್ವರೂಪವನ್ನು ಪಡೆದುಕೊಂಡು ನಿರಂತರವಾಗಿ ನಮ್ಮ ಬಳಕೆಗೆ ದೊರಕುತ್ತವೆ. ಇಂತಹ ಸಂಪನ್ಮೂಲಗಳನ್ನು ನವೀಕರಣಗೊಳ್ಳುವ ಅಥವಾ ಪುನರುತ್ಪತ್ತಿ ಹೊಂದುವ ಅಥವಾ ಬರಿದಾಗದ ಸಂಪನ್ಮೂಳಗಳು ಎಂದು ಕರೆಯುತ್ತೇವೆ. ಇವುಗಳನ್ನು ನಾವು ಬಳಸಿದಂತೆ ಪ್ರಕೃತಿಯು ತನ್ನ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಅವುಗಳನ್ನು ಮತ್ತೆ ಮತ್ತೆ ತುಂಬಿ ಕೊಡುತ್ತದೆ. ನೀರು, ಭೂಮಿ, ಅರಣ್ಯ, ಗಾಳಿ, ಸೂರ್ಯನ ಶಾಖ ಮೀನುಗಳು, ಮುಂತಾದವು ಮುಗಿಯದ ಸಂಪನ್ಮೂಲಗಳಾಗಿವೆ.
ಮುಗಿದು ಹೋಗುವ ಸಂಪನ್ಮೂಲಗಳು :
ಕೆಲವಿ ನೈಸರ್ಗಿಕ ಸಂಪನ್ಮೂಲಗಳು ನಾವು ಬಳಸಿದಂತೆ ಕ್ರಮೇಣ ಕಡಿಮೆಯಾಗಿ ಅಂತಿಮವಾಗಿ ಖಾಲಿಯಾಗುವ ಅಥವಾ ಬರಿದಾಗುವ ಲಕ್ಷಣ ಹೊಂದಿವೆ. ಅವುಗಳ ಸೃಷ್ಟಿ ಮತ್ತೆ ಸಾಧ್ಯವಿಲ್ಲ. ಇಂತಹ ಸಂಪನ್ಮೂಲಗಳನ್ನು ಮುಗಿದುಹೋಗುವ ಸಂಪನ್ಮೂಲಗಳೆಂದು ಕರೆಯುತ್ತೇವೆ. ಕಬ್ಬಿಣದ ಅದಿರು ತಾಮ್ರ, ಚಿನ್ನ, ಮ್ಯಾಂಗನೀಸ್, ಬಾಕ್ಸೈಟ್ ಮುಂತಾದ ಖನಿಜಗಳು. ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಯುರೇನಿಯಂ, ಥೋರಿಯಂ ಮುಂತಾದ ಇಂಧನಮೂಲಗಳು ಬಳಸಿದಂತೆ ಮುಗಿದುಹೋಗುತ್ತದೆ. ಇವುಗಳನ್ನು ನಿಸರ್ಗವು ತನ್ನ ಪ್ರಕ್ರಿಯೆಯ ಮೂಲಕ ಮತ್ತೆ ತುಂಬಿಕೊಡಲು ಸಾಧ್ಯವಿಲ್ಲದಿರುವುದರಿಂದ ಇವುಗಳಿಗೆ ನವೀಕಾರಿಸಲಾಗದ ಸಂಪನ್ಮೂಲಗಳು ಎನ್ನುತ್ತೇವೆ.
ಸಂಪನ್ಮೂಲಗಳ ಕೊರತೆಗೆ ಕಾರಣಗಳು :
ಮಿತಿಮೀರಿದ ಜನಸಂಖ್ಯೆ :
ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಮತ್ತು ವಸತಿ ಸೌಕರ್ಯ ಒದಗಿಸಲು ಹೆಚ್ಚುವರಿ ಜಮೀನು ಬೇಕಾಗುತ್ತದೆ. ಇದಕ್ಕೆ ಅರಣ್ಯಗಳನ್ನು ಕೃಷಿ ಭೂಮಿಯಾಗಿ, ಕೃಷಿ ಭೂಮಿಯನ್ನು ವಸತಿ, ವಾಣಿಜ್ಯಿಕ ಮತ್ತು ಔದ್ಯಮಿಕ ಭೂಮಿಯಾಗಿ ಮಾರ್ಪಡಿಸಿ ಪೂರೈಸಿಕೊಳ್ಳಲಾಗುತ್ತಿದೆ.
ಹೆಚ್ಚುತ್ತಿರುವ ಔದ್ಯೋಗಿಕರಣ :
ಉದ್ಯಮಗಳ ಸಂಖ್ಯೆ ಹೆಚ್ಚಿದಂತೆ, ಅದಿರು, ಕಚ್ಚಾ ತೈಲ ಮತ್ತು ನೀರಿನ ಹೊರತೆಗೆಯುವಿಕೆ ಅಧಿಕವಾಗಿದ್ದು ಹಲವಾರು ಗಣಿಗಳು, ತೈಲ ಬಾವಿಗಳು ಮತ್ತು ಜುಮೂಲಗಳು ಬರಿದಾಗಿವೆ.
ವಿಸ್ತರಣೆಯಾಗುತ್ತಿರುವ ನಗರ ಪ್ರದೇಶಗಳು :
ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ವಾಸವಾಗಿರುವುದನ್ನು ನಾವು ನಗರ ಪ್ರದೇಶ ಎನ್ನುತ್ತೇವೆ. ಅಂಥ ಪ್ರದೇಶಗಳಲ್ಲಿ ಸಹಜವಾಗಿ ಸಂಪನ್ಮೂಲಗಳ ಬಳಕೆ ಮತ್ತು ತ್ಯಾಜ್ಯ ಉತ್ಪಾದನಾ ಪ್ರಮಾಣವು ಅತ್ಯಧಿಕವಾಗಿರುತ್ತದೆ. ಇದು ಸಂಪನ್ಮೂಲಗಳ ಪ್ರಮಾಣ ಹಾಗೂ ಗುಣಮಟ್ಟಗಳೆರಡನ್ನೂ ಕಡಿಮೆ ಮಾಡುತ್ತದೆ. ನೂರಾರು ಕಿಲೋಮೀಟರುಗಳ ದೂರದಿಂದ ನೀರು ಪಡೆದು, ಆ ಶುದ್ದ ನೀರನ್ನು ಕುಟುಂಬಗಳು ಮತ್ತು ಉದ್ಯಮಗಳು ಅದನ್ನು ಕೊಳಚೆ ನೀರಾಗಿ ಪರಿವರ್ತಿಸುವ ಸಂಕಷ್ಟವನ್ನು ಊಹಿಸಿಕೊಂಡರೆ ನಗರೀಕರಣದ ಪರಿಣಾಮವನ್ನು ಅರ್ಥೈಸಿಕೊಳ್ಳಬಹುದಾಗಿದೆ.
ವಾಯು ಮಾಲಿನ್ಯ :
ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ಡೀಸೆಲ್ ಮತ್ತು ಪೆಟ್ರೋಲ್ ಇವುಗಳ ದಹಿಸುವಿಕೆಯಿಂದಾಗಿ, ಹಾನಿಕಾರಕ ಅಂಶಗಳಾದ ಇಂಗಾಲದ ಡೈ ಆಕ್ಸೈಡ್, ಹೈಡ್ರೋಜನ್ ಸಲ್ಫೈಡ್, ಮಸಿ, ಧೂಳು ಮುಂತಾದವುಗಳು ವಾಯು ಮಂಡಲವನ್ನು ಪ್ರವೇಶಿಸಿ ಅದನ್ನು ಮಲಿನಗೊಳಿಸುತ್ತದೆ. ಇದರಿಂದಾಗಿ ಶುದ್ದ ವಾಯುವಿನ ಲಭ್ಯತೆ ಕಡಿಮೆಯಾಗುತ್ತದೆ.
ಜಲಮಾಲಿನ್ಯ ಮತ್ತು ಭೂ ಸವಕಳಿ :
ಮಾನವರ, ಆಸ್ಪತ್ರೆಗಳ, ಉದ್ಯಮಿಗಳ ಹಾಗೂ ಇತರ ತ್ಯಾಜ್ಯಗಳನ್ನು ಬಯಲಿನಲ್ಲಿ ಸುರಿಯುವುದರಿಂದ ಅಲ್ಲಿನ ಭೂಮಿ ಮತ್ತಿ ನೀರಿನ ಉಪಯುಕ್ತತೆ ಕಡಿಮೆಯಾಗುತ್ತದೆ. ಕೃಷಿ ಹಾಗೂ ಕುಟುಂಬಗಳ ಚಟುವಟಿಕೆ ದೆಸೆಯಿಂದಾಗಿ ಸಹ ಜಲ ಮಾಲಿನ್ಯ ಉಂಟಾಗುತ್ತದೆ. ಇವುಗಳ ಕಾರಣದಿಂದಾಗಿ ಭೂಮಿಯ ಫಲವತ್ತತೆ ನಶಿಸಿ ಉತ್ಪಾದನೆಯ ನಷ್ಟವಾಗುತ್ತದೆ.
ಸಂಪನ್ಮೂಲಗಳ ಸಂರಕ್ಷಣೆ :
- ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದು.
- ಸಂಪನ್ಮೂಲಗಳ ಮರುಬಳಕೆ ಮಾಡುವುದು.
- ಸಂಪನ್ಮೂಲಗಳ ಪುನಃಭರ್ತಿ ಮಾಡುವುದು.
- ಕಡಿಮೆ ಸರಕನ್ನು ಖರೀದಿಸುವುದು.
- ಅನಾವಶ್ಯಕ ಪ್ಯಾಕಿಂಗನ್ನು ವರ್ಜಿಸಿ(ಬಾಟಲಿ ನೀರು ಖರೀದಿಸುವ ಬದಲು ನಳದಿಂದ ನೀರು ಕುಡಿಯಿರಿ)
- ಮೆಟಲ್ ಡಬ್ಬಿಗಳು. ಹಳೆಯ ಸೆಲ್ ಫೋನ್ ಗಳು ಮತ್ತು ಪ್ಲಾಸ್ಟಿಕ್ ಬಾಟಲುಗಳನ್ನು ಮರುಬಳಕೆ ಮಾಡಿರಿ.
- ಪುನರುತ್ಪಾದಿಸಿದ ಸರಕಿನಿಂದ ಮಾಡಿದ ವಸ್ತುಗಳನ್ನು ಹೆಚ್ಚು ಖರೀದಿಸಿ.
- ವಾತಾವರಣವನ್ನು ಮಲಿನಗೊಳಿಸದೇ ನೀರು ಮತ್ತು ಗಾಳಿಯನ್ನು ಶುದ್ದವಾಗಿಡಿ.
- ಮಣ್ಣಿನ ಸವಕಳಿಯನ್ನು ತಡೆಗಟ್ಟಿರಿ
- ಒಂದು ಮರವನ್ನು ಅನಿವಾರ್ಯವಾಗಿ ಕತ್ತರಿಸಿದಾಗ ಅದರ ಬದಲಾಗಿ ಇನ್ನೊಂದು ಸಸಿಯನ್ನು ನೆಡಿರಿ.
- ಸ್ವಂತ ವಾಹನವನ್ನು ಕಡಿಮೆ ಚಲಾಯಿಸಿ, ಸಾರ್ವಜನಿಕ ಸಾರಿಗೆಯನ್ನು ಬಳಸಿ, ಸೈಕಲ್ ಉಪಯೋಗಿಸಿ ಅಥವಾ ನಡೆದಾಡಿರಿ.
- ಮನೆಯಲ್ಲಿ ಇಂಧನವನ್ನು ಉಳಿಸಿ.
FAQ :
ಸಂಪನ್ಮೂಲಗಳ ಕೊರತೆಗೆ ಒಂದು ಕಾರಣ ತಿಳಿಸಿ?
ಮಿತಿಮೀರಿದ ಜನಸಂಖ್ಯೆ : ಅಗಾಧ ಪ್ರಮಾಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಮತ್ತು ವಸತಿ ಸೌಕರ್ಯ ಒದಗಿಸಲು ಹೆಚ್ಚುವರಿ ಜಮೀನು ಬೇಕಾಗುತ್ತದೆ. ಇದಕ್ಕೆ ಅರಣ್ಯಗಳನ್ನು ಕೃಷಿ ಭೂಮಿಯಾಗಿ, ಕೃಷಿ ಭೂಮಿಯನ್ನು ವಸತಿ, ವಾಣಿಜ್ಯಿಕ ಮತ್ತು ಔದ್ಯಮಿಕ ಭೂಮಿಯಾಗಿ ಮಾರ್ಪಡಿಸಿ ಪೂರೈಸಿಕೊಳ್ಳಲಾಗುತ್ತಿದೆ.
ಸಂಪನ್ಮೂಲಗಳ ಸಂರಕ್ಷಣೆಯ ಒಂದು ವಿಧಾನ ತಿಳಿಸಿ?
ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದು.
ಸಂಪನ್ಮೂಲಗಳ ಮರುಬಳಕೆ ಮಾಡುವುದು.
ಇತರೆ ವಿಷಯಗಳು :
ಕರ್ನಾಟಕದ ಚಳುವಳಿಗಳ ಬಗ್ಗೆ ಮಾಹಿತಿ
ಕರ್ನಾಟಕದ ಜನಸಂಖ್ಯೆ ಬಗ್ಗೆ ಮಾಹಿತಿ