ಪ್ಲಾಸಿ ಕದನದ ಬಗ್ಗೆ ಮಾಹಿತಿ | Information about the Battle of Plassey in Kannada

Join Telegram Group Join Now
WhatsApp Group Join Now

ಪ್ಲಾಸಿ ಕದನದ ಬಗ್ಗೆ ಮಾಹಿತಿ Information about the Battle of Plassey Plassey Kadanada bagge Mahithi in Kannada

ಪ್ಲಾಸಿ ಕದನದ ಬಗ್ಗೆ ಮಾಹಿತಿ

Information about the Battle of Plassey in Kannada
ಪ್ಲಾಸಿ ಕದನದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಪ್ಲಾಸಿ ಕದನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪ್ಲಾಸಿ ಕದನಕ್ಕೆ ಕಾರಣಗಳು :

ರಾಜಕೀಯ ಕಾರಣಗಳು :

  • ಉತ್ಸಾಹಿ, ಸ್ವಾತಂತ್ರ್ಯ ಪ್ರೇಮಿಯಾದ ಸಿರಾಜ್‌ ಉದ್‌ ದೌಲ್ ನಿಗೆ ದೊಡ್ಡಮ್ಮನಾದ ಢಾಕಾದ ಗಸ್ತಿಬೇಗಂ ಇನ್ನೋರ್ವ ದೊಡ್ಡಮ್ಮನ ಮಗ ಪೂರ್ನಿಯಾದ ಸುಬೇದಾರ್‌ ಶೌಕತ್ ಜಂಗ್‌ ವಿರೋಧಿಗಳಾಗಿದ್ದರು. ಅಲ್ಲದೆ ಅವರಿಗೆ ಉಚ್ಛಾಟಿತ ದಿವಾನ್‌ ರಾಜವಲ್ಲಭನ ಬೆಂಬಲವೂ ಇತ್ತು.
  • ಸಿರಾಜ್‌ ಉದ್‌ ದೌಲ್‌ ನ ವೈರಿಯಾದ ಶೌಕತ್ ಜಂಗ್‌‌ನನ್ನು ಅಧಿಕಾರಕ್ಕೆ ತರಲು ಬ್ರಿಟೀಷರು ಹವಣಿಸುತ್ತಿದ್ದರು. ಅಲ್ಲದೇ ರಾಜದ್ರೋಹಗಳಾದ ಇವರೆಲ್ಲರಿಗೂ ಬ್ರಿಟೀಷರು ಆಶ್ರಯ ನೀಡಿದ್ದರು.

ನವಾಬನ ಅಧಿಕಾರ ಒಪ್ಪದೆ ಇರುವುದು :

  • ಕ್ರಿ.ಶ. 1756 ರಲ್ಲಿ ಸಿರಾಜ್‌ ಉದ್‌ ದೌಲ್‌ ಬಂಗಾಳದ ನವಾಬನಾಗಿ ಅಧಿಕಾರವಹಿಸಿಕೊಂಡಾಗ ಬ್ರಿಟೀಷರು ಬೆಲೆ ಬಾಳುವ ಉಡುಗೊರೆಯನ್ನು ನೀಡಲಿಲ್ಲ. ಇದು ನವಾಬನ ಕೋಪಕ್ಕೆ ಕಾರಣವಾಯಿತು.

ಆರ್ಥಿಕ ಕಾರಣ :

  • ಕ್ರಿ.ಶ. 1717 ರಲ್ಲಿ ಮೊಗಲ್‌ ದೊರೆ ಫರುಕ್ಸಿಯಾರ್ನು ಬ್ರಿಟೀಷರಿಗೆ ಬಂಗಾಳದಲ್ಲಿ ಸುಂಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದ್ದನು. ಇದರಿಂದಾಗಿ ಬ್ರಿಟೀಷರಿಗೆ ದಸ್ತಕಗಳು ದೊರೆತ್ತಿದ್ದವು. ಈ ದಸ್ತಕಗಳ ದುರುಪಯೋಗವಾಗಿ ಬಂಗಾಳಕ್ಕೆ ಅಪಾರ ನಷ್ಟವಾಗುತ್ತಿತ್ತು. ಅವ್ಯವಹಾರದಲ್ಲಿ ತೊಡಗಿದವರಿಗೆ ನವಾಬ್‌ ಶಿಕ್ಷಿಸಲು ಮುಂದಾದಾಗ ಅವರಿಗೆ ಬ್ರಿಟೀಷರು ಆಶ್ರಯ ನೀಡಿದರು ನವಾಬ ಕೋಪಗೊಳ್ಳುವಂತಾಯಿತು.

ಕಲ್ಕತ್ತಾ ಸುತ್ತ ಕೋಟೆಯನ್ನು ಭದ್ರಪಡಿಸಿದ್ದು :

Join WhatsApp Join Telegram
  • ಕ್ರಿ.ಶ. 1756 ರಲ್ಲಿ ಯುರೋಪಿನಲ್ಲಿ ಆರಂಭವಾದ ಸಪ್ತ ವಾರ್ಷಿಕ ಯುದ್ದದಿಂದ ಫ್ರೆಂಚರ ಭೀತಿಯಿಂದ ಬ್ರಿಟೀಷರು ಕಲ್ಕತ್ತಾ ಕೋಟೆಯ ಸುತ್ತ ಕಂದಕವನ್ನು ತೋಡಿ ಮೇಲೆ ಫಿರಂಗಿಯನ್ನು ಇಟ್ಟು ಕೋಟೆಯನ್ನು ಭದ್ರಪಡಿಸಿದರು. ಇದರಿಂದ ನವಾಬ ಕೆರಳಿದನು.

ಪ್ರೆಂಚರಿಗೆ ಆಶ್ರಯ :

  • ಕ್ರಿ.ಶ. 1757 ರಲ್ಲಿ ಬ್ರಿಟೀಷರು ಫ್ರೆಂಚರ ನೆಲೆಯಾದ ಚಂದ್ರನಾಗೋರನ್ನು ಆಕ್ರಮಿಸಿ ವಶಪಡಿಸಿಕೊಂಡರು. ಆಗ ನಿರಾಶ್ರಿತರಾದ ಫ್ರೆಂಚರಿಗೆ ಸಿರಾಜ್‌ ಉದ್‌ ದೌಲ್‌ ಆಶ್ರಯ ನೀಡಿದನು. ಇದು ಬ್ರಿಟೀಷರ ಕೋಪಕ್ಕೆ ಕಾರಣವಾಯಿತು.

ಕಪ್ಪು ಕೋಣೆಯ ದುರಂತ :

  • ಕಲ್ಕತ್ತಾದಲ್ಲಿ ನವಾಬನ ವೈರಿಯಾದ ರಾಜವಲ್ಲಭನ ಪರಿವಾರಕ್ಕೆ ಬ್ರಿಟೀಷರು ಆಶ್ರಯ ನೀಡಿದ್ದರು. ನೀಡಿದಾಗ ಬ್ರಿಟೀಷರು ತಿರಸ್ಕರಿಸಿದರು.
  • ಇದರಿಂದ ಕೋಪಗೊಂಡ ಸಿರಾಜ್‌ ಉದ್‌ ದೌಲ್‌ 1756 ಜೂನ್‌ 16 ರಂದು ಕಾಸಿಬಜಾರನ್ನು ಆಕ್ರಮಿಸಿ ವಶಪಡಿಸಿಕೊಂಡನು.
  • ಈ ಆಕ್ರಮಣದಲ್ಲಿ ಸೆರೆ ಸಿಕ್ಕ 146 ಜನ ಸೈನಿಕರನ್ನು ಜೂನ್‌ 20 ರಂದು 18*14.10 ಅಡಿ ಉದ್ದಗಲದ ಕೋಣೆಯಲ್ಲಿ ಬಂಧಿಸಿಟ್ಟಾಗ 123 ಜನ ಉಸಿರುಗಟ್ಟಿ ಸತ್ತು ಕೇವಲ 23 ಜನ ಮಾತ್ರ ಬದುಕುಳಿದರು.ಇದೇ ಕಪ್ಪು ಕೋಣೆಯ ದುರಂತ. ಇವರಿಂದ ಧೃತಿಗೆಟ್ಟ ಬ್ರಿಟೀಷರು ಅಡ್ಮಿರಲ್‌ ವ್ಯಾಟ್ಸನ್‌ ಮತ್ತು ರಾಬರ್ಟ್‌ ಕ್ಲೈವ್ ನ ನೇತೃತ್ವದ ಸೇನೆ ಕಳುಹಿಸಿ ಮರಳಿ ಕಾಸಿಬಂಜಾರ್‌ ವಶಪಡಿಸಿಕೊಂಡರು. ಆಗ ನವಾಬ ಮತ್ತು ಬ್ರಿಟೀಷರ ಮಧ್ಯ ಒಪ್ಪಂದವಾಯಿತು. ಅದೇ ಅಲಿನಗರ ಒಪ್ಪಂದ ಅಥವಾ ಕಾಸಿಂಬಜಾರ ಒಪ್ಪಂದ.

ಒಪ್ಪಂದದ ಕರಾರುಗಳು :

  • ಬ್ರಿಟೀಷರಿಗೆ ಹಿಂದೆ ಇದ್ದ ವ್ಯಾಪಾರಿ ಸವಲತ್ತುಗಳನ್ನು ನೀಡುವುದು.
  • ಕೋಟೆ ಕಟ್ಟುವುದಕ್ಕೆ ಅನುಮತಿ ನೀಡುವುದು.
  • ಯುದ್ದ ವೆಚ್ಚವನ್ನು ನವಾಬನೇ ತುಂಬಿಕೊಡುವುದು.

ಪ್ಲಾಸಿ ಕದನ(ಕ್ರಿ.ಶ.1757 ಜೂನ್‌ 23) :

  • ಆಲಿನಗರ ಒಪ್ಪಂದದ ಕರಾರುಗಳನ್ನು ಪಾಲಿಸುತ್ತಿಲ್ಲ ಎಂಬ ನೆಪ ಹೇಳಿದ ಬ್ರಿಟೀಷರು ಬಂಗಾಳದ ನವಾಬನ ಮೇಲೆ ಯುದ್ದ ಸಾರಿದನು.
  • ಕ್ರಿ.ಶ. 1757 ಜೂನ್‌ 23ರಂದು ಪಶ್ಚಿಮ ಬಂಗಾಲದ ರಾಜ್ಯದ ಪ್ಲಾಸಿ ಎಂಬಲ್ಲಿ ಸಿರಾಜ್‌ ಉದ್‌ ದೌಲ್‌ ಮತ್ತು ರಾಬರ್ಟ್‌ ಕ್ಲೈವ್‌ ಮಧ್ಯ ಯುದ್ದ ನಡೆಯಿತು. ಇದೇ ಪ್ಲಾಸಿ ಕದನ.
  • ಈ ಕದನದಲ್ಲಿ ಮೀರ್‌ ಜಾಫರ್‌ ಮತ್ತು ರಾಯದುರ್ಲಾಭ ತಟಸ್ಥರಾಗಿದ್ದರು. ಆದರೂ ಮೀರ್‌ಮದನ್ ಮತ್ತು ಮೋಹನ್ ಲಾಲ್‌ ನೇತೃತ್ವದ ಸೈನ್ಯ ಹೋರಾಟ ಮಾಡಿದಾಗ ಗಾಬರಿಗೊಂಡ ರಾಬರ್ಟ್‌ ಕ್ಲೈವ್‌ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಂಡು ರಾತ್ರಿ ಮೋಸದಿಂದ ಯುದ್ದ ಮಾಡಿದನು. ಆಗ ಮೀರ್ಮದನ್‌ ಗುಂಡೇಟಿಗೆ ಬಲಿಯಾದಾಗ ನವಾಬನ ಸೇನೆ ಚೆಲ್ಲಾಪಿಲ್ಲಿಯಾಗಿ ಸಇರಾಜ್‌ ಉದ್‌ ದೌಲ್‌ ನ ಕೊಲೆ ಮಾಡಿದರು

ಪ್ಲಾಸಿ ಕದನದ ಪರಿಣಾಮಗಳು :

  • ಈ ಯುದ್ದದ ನಂತರ ಮೀರ್‌ ಜಾಫರ್‌ ಬಂಗಾಳದ ನವಾಬನಾದನು.
  • ಇದಕ್ಕೆ ಪ್ರತಿಯಾಗಿ ಮೀರ್‌ ಜಾಫರ್‌ 24 ಪರಗಣಗಳ ಜಮೀನ್ದಾರಿಕೆಯ ಹಕ್ಕನ್ನು ಬ್ರಿಟೀಷರಿಗೆ ಕೊಟ್ಟನು.
  • ಈ ಯುದ್ದದಿಂದ ದೊರೆತ ಸಂಪತ್ತನ್ನು ಬಳಸಿಕೊಂಡ ಬ್ರಿಟೀಷರು 3ನೇ ಕರ್ನಾಟಿಕ್‌ ಯುದ್ದದಲ್ಲಿ ಫ್ರೆಂಚರನ್ನು ಸದೆಬಡಿದರು.
  • ಈ ಯುದ್ದದಿಂದ ಭಾರತದ ಸೈನಿಕರ ದೌರ್ಬಲ್ಯ ಜಗಜ್ಜಾಹಿರವಾಯಿತು.

FAQ :

ಪ್ಲಾಸಿ ಕದನದ ಪರಿಣಾಮಗಳನ್ನು ತಿಳಿಸಿ?

ಈ ಯುದ್ದದ ನಂತರ ಮೀರ್‌ ಜಾಫರ್‌ ಬಂಗಾಳದ ನವಾಬನಾದನು.
ಇದಕ್ಕೆ ಪ್ರತಿಯಾಗಿ ಮೀರ್‌ ಜಾಫರ್‌ 24 ಪರಗಣಗಳ ಜಮೀನ್ದಾರಿಕೆಯ ಹಕ್ಕನ್ನು ಬ್ರಿಟೀಷರಿಗೆ ಕೊಟ್ಟನು.
ಈ ಯುದ್ದದಿಂದ ದೊರೆತ ಸಂಪತ್ತನ್ನು ಬಳಸಿಕೊಂಡ ಬ್ರಿಟೀಷರು 3ನೇ ಕರ್ನಾಟಿಕ್‌ ಯುದ್ದದಲ್ಲಿ ಫ್ರೆಂಚರನ್ನು ಸದೆಬಡಿದರು.
ಈ ಯುದ್ದದಿಂದ ಭಾರತದ ಸೈನಿಕರ ದೌರ್ಬಲ್ಯ ಜಗಜ್ಜಾಹಿರವಾಯಿತು

ಪ್ಲಾಸಿ ಕದನಕ್ಕೆ ಆರ್ಥಿಕ ಕಾರಣಗಳನ್ನು ತಿಳಿಸಿ?

ಕ್ರಿ.ಶ. 1717 ರಲ್ಲಿ ಮೊಗಲ್‌ ದೊರೆ ಫರುಕ್ಸಿಯಾರ್ನು ಬ್ರಿಟೀಷರಿಗೆ ಬಂಗಾಳದಲ್ಲಿ ಸುಂಕ ರಹಿತ ವ್ಯಾಪಾರ ಮಾಡಲು ಅನುಮತಿ ನೀಡಿದ್ದನು. ಇದರಿಂದಾಗಿ ಬ್ರಿಟೀಷರಿಗೆ ದಸ್ತಕಗಳು ದೊರೆತ್ತಿದ್ದವು. ಈ ದಸ್ತಕಗಳ ದುರುಪಯೋಗವಾಗಿ ಬಂಗಾಳಕ್ಕೆ ಅಪಾರ ನಷ್ಟವಾಗುತ್ತಿತ್ತು. ಅವ್ಯವಹಾರದಲ್ಲಿ ತೊಡಗಿದವರಿಗೆ ನವಾಬ್‌ ಶಿಕ್ಷಿಸಲು ಮುಂದಾದಾಗ ಅವರಿಗೆ ಬ್ರಿಟೀಷರು ಆಶ್ರಯ ನೀಡಿದರು ನವಾಬ ಕೋಪಗೊಳ್ಳುವಂತಾಯಿತು.

ಇತರೆ ವಿಷಯಗಳು :

ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ

ವಿಶ್ವದ ವಸ್ತು ವಿಶೇಷತೆಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.