ರಾಕೆಟ್‌ ಮತ್ತು ಕೃತಕ ಉಪಗ್ರಹಗಳ ಬಗ್ಗೆ ಮಾಹಿತಿ | Information about rockets and artificial satellites in Kannada

Join Telegram Group Join Now
WhatsApp Group Join Now

ರಾಕೆಟ್‌ ಮತ್ತು ಕೃತಕ ಉಪಗ್ರಹಗಳ ಬಗ್ಗೆ ಮಾಹಿತಿ Information about rockets and artificial satellites Rocket mattu Kruthaka Upagrahagala bagge Mahithi in Kannada

ರಾಕೆಟ್‌ ಮತ್ತು ಕೃತಕ ಉಪಗ್ರಹಗಳ ಬಗ್ಗೆ ಮಾಹಿತಿ

Information about rockets and artificial satellites in Kannada
ರಾಕೆಟ್‌ ಮತ್ತು ಕೃತಕ ಉಪಗ್ರಹಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ರಾಕೆಟ್‌ ಮತ್ತು ಕೃತಕ ಉಪಗ್ರಹಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ರಾಕೆಟ್‌ :

  • ಕೃತಕ ಉಪಗ್ರಹಗಳನ್ನು ವ್ಯೋಮನೌಕೆಯ ಸಾಧನಗಳನ್ನು ಇಟ್ಟು ಕಳುಹಿಸಲು ಉಪಯೋಗಿಸುವ ವಾಹಕ ಸಾಧನಕ್ಕೆ ರಾಕೆಟ್‌ ಎನ್ನುವರು.
  • ಜೂಲ್ಸ್‌ ವೆನರ್ಥರಂತಹ ಕಲ್ಪನಾ ಬರಹಗಾರರಿಂದ ಪ್ರಾರಂಭವಾದ ವಿಜ್ಞಾನವೇ ರಾಕೆಟ್‌ ವಿಜ್ಞಾನ.

ರಾಕೆಟಿನ ಕರ್ತೃಗಳು :

  • ರಷ್ಯಾದ ಕಾನಸ್ಟಾಂಟಿನ್‌ ತ್ಸಿಯೂಲ್‌ ಕುವಸ್ಕಿ, ಅಮೇರಿಕಾದ ರಾಬರ್ಟ್‌ ಗೊಡ್ಡಾರ್ಡ್, ಜರ್ಮನ್ದೇಶದ ಹೆರ್ಮನ್‌ ಒಬೆರ್ಥ್‌ ಮತ್ತು ವರ್ನರ ಬ್ರಾನ
  • ರಾಕೆಟಿನ ಪಿತಾಮಹಾ ರಾಕೆಟಿನ ಮೊದಲ ವಿಜ್ಞಾನಿ ಎಂದು ಅಮೇರಿಕಾ ದೇಶದ ರಾಬರ್ಟ ಗೊಡ್ಡಾರ್ಡರ ವರನ್ನು ಕರೆಯುತ್ತಾರೆ.

ರಾಕೆಟಿನ ತತ್ವಗಳು :

  • ಸಂಯೋಗ ಸಂರಕ್ಷಣಾ ತತ್ವ – ಒಂದು ವ್ಯವಸ್ಥೆಯ ಮೇಲೆ ಬಾಹ್ಯಬಲ ಸೊನ್ನೆ ಆಗಿದ್ದಾಗ ಆವ್ಯವಸ್ಥೆಯಲ್ಲಿನ ಒಟ್ಟು ಸಂಯೋಗ ಸಂರಕ್ಷಿತವಾಗುತ್ತದೆ. ಇದನ್ನು ಸಂಯೋಗ ಸಂರಕ್ಷಣಾ ತತ್ವ ಎನ್ನುವರು.
  • ಪೆಲೋಡ್‌ – ರಾಕೆಟಿನ ಮುಂಭಾಗದಲ್ಲಿ ಇಟ್ಟು ಕಳುಹಿಸುವ ವೈಜ್ಞಾನಿಕ ಸಾಧನವನ್ನು ಪೆಲೋಡ್‌ ಎನ್ನುವರು.
  • ನೋದನಕಾರಿಗಳು – ರಾಕೆಟಿನಲ್ಲಿರುವ ಇಂಧನ ಟ್ಯಾಂಕ್‌ ಮತ್ತು ಆಕ್ಸಿಡಕ ಟ್ಯಾಂಕ್‌ ಗಳನ್ನು ಒಟ್ಟಾಗಿ ನೋದನಕಾರಿಗಳು ಎನ್ನುವರು.
  • ರಾಕೆಟಿನಲ್ಲಿ ಸಂಶ್ಲೇಷಿತ ಸೀಮೆ ಎಣ್ಣೆ, ದ್ರವ ಜಲಜನಕ, ದ್ರವ ಆಮ್ಲಜನಕಗಳನ್ನು ನೋದನಕಾರಿಗಳನ್ನಾಗಿ ಉಪಯೋಗಿಸುತ್ತಾರೆ.
  • ನಿಷ್ಕಾಸ – ರಾಕೆಟಿನಲ್ಲಿರುವ ಇಂಧನ ದಹನವಾದಂತೆ ಬಿಡುಗಡೆಯಾಗುವ ತ್ಯಾಜ್ಯ ಅನಿಲಗಳಿಗೆ ನಿಷ್ಕಾಸ ಎನ್ನುವರು.
  • ರಾಕೆಟುಗಳು ನಿರ್ವಾತ ಪ್ರದೇಶದಲ್ಲಿಯೂ ಕೂಡಾ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಹೇಗೆಂದರೆ ತಮ್ಮೊಂದಿಗೆ ಇಂಧನ ಮತ್ತು ಆಕ್ಸಿಡಕ ಟ್ಯಾಂಕನ್ನು ಒಯ್ಯವುದರಿಂದ
  • ಕೃತಕ ಉಪಗ್ರಹಗಳ ಶಕ್ತಿಯ ಮೂಲ ಆಕರ, ಸೌರಶಕ್ತಿ
  • ರಾಕೆಟುಗಳ ತುದಿಯನ್ನು ಚೂಪಾಗಿ ಮಾಡಲು ಕಾರಣ ರಾಕೆಟಿನ ಮೇಲೆ ಉಂಟಾಗುವ ಘರ್ಷಣೆಯನ್ನು ಕಡಿಮೆಮಾಡಬಹುದು.
  • ಬಹುಹಂತ ರಾಕೆಟುಗಳು – ರಾಕೆಟ್‌ ಮೇಲೇರಲು ಅಗತ್ಯ ಸಾಮರ್ಥ್ಯವನ್ನು ಒದಗಿಸಲು ಒಂದರ ಮೇಲೆ ಒಂದರಂತೆ ಜೋಡಿಸಿರುವ ಹಲವು ರಾಕೆಟಗಳ ವ್ಯವಸ್ಥೆಗೆ ಬಹು ಹಂತ ರಾಕೆಟಗಳು ಎನ್ನುವರು.
  • ಈ ರಾಕೆಟುಗಳನ್ನು ಉಪಯೋಗಿಸಿಕೊಂಡು ಭೂಮಿಯ ಯಾವುದೇ ಕಕ್ಷೆಯಲ್ಲಿ ಯಾವುದೇ ಉಪಗ್ರಹವನ್ನು ಉಡಾವಣೆ ಮಾಡಬಹುದಾಗಿದೆ.
  • ಭೂಸ್ಥಿರ ಉಪಗ್ರಹಗಳನ್ನು ಉಡಾವಣೆ ಮಾಡಲು ಈ ರಾಕೆಟುಗಳನ್ನು ಉಪಯೋಗಿಸುವರು.

ವಿಮೋಚನಾ ವೇಗ :

ಯಾವುದೇ ಒಂದು ಕಾಯವು ಭೂಮಿಯ ಒಂದು ಗುರುತ್ವ ಬಲದಿಂದ ತಪ್ಪಿಸಿಕೊಂಡು ಹೋಗುವಂತಾಗಲು ಅದಕ್ಕೆ ನೀಡಬೇಕಾದ ಕನಿಷ್ಠ ಆರಂಭಿಕ ವೇಗಕ್ಕೆ ವಿಮೋಚನಾವೇಗ ಎನ್ನುವರು. ಭೂಮಿಯ ವಿಮೋಚನಾವೇಗ 11.2km/sec̤

ಭೂಸ್ಥಿರ ಉಪಗ್ರಹ :

  • ಭೂಸ್ಥಿರ ಉಪಗ್ರಹಗಳು ಭೂಮಿಯ ಸಮಭಾಜಕ ಪ್ರದೇಶದ ಮೇಲೆ ನಿರ್ದಿಷ್ಟ ಎತ್ತರದಲ್ಲಿ ಭೂಮಿಗೆ ಸಾಪೇಕ್ಷವಾಗಿ ಸ್ಥಿರ ಸ್ಥಾನದಲ್ಲಿ ಉಳಿಯಬಲ್ಲ ಹಲವು ಉಪಗ್ರಹಗಳನ್ನು ಉಡಾಯಿಸಿದ್ದಾರೆ. ಈ ಉಪಗ್ರಹಗಳು ಸ್ಥಿರವಾಗಿರುವಂತೆ ಕಂಡು ಬರುತ್ತವೆ. ಆದ್ದರಿಂದ ಈ ಉಪಗ್ರಹಗಳಿಗೆ ಭೂಸ್ಥಿರ ಉಪಗ್ರಹಗಳು ಎಂದು ಕರೆಯುವರು.
  • ಭೂ ಸ್ಥಿರ ಉಪಗ್ರಹಗಳನ್ನು ಸಂಪರ್ಕ ಉಪಗ್ರಹಗಳು ಎಂದು ಕರೆಯುವರು.
  • ಈ ಉಪಗ್ರಹಗಳನ್ನು ಭೂಮಿಯಿಂದ ಸುಮಾರು 36,000 ಕಿ.ಮೀ. ಅಂತರದ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ.
  • ಪ್ರಪಂಚದ ಯಾವುದೇ ಭಾಗದಲ್ಲಿ ಸಂಭವಿಸುವ ಘಟನೆಗಳನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಸಾಧ್ಯವಾಗಿದೆ. ಯಾವುದೇ ಸ್ಥಳದಿಂದ ಇನ್ನಾವುದೇ ಸ್ಥಳಕ್ಕೆ ಸಂಪರ್ಕ ಕಲ್ಪಿಸಲು ಕನಿಷ್ಠ ಮೂರು ಉಪಗ್ರಹಗಳ ಅವಶ್ಯಕತೆ ಇದೆ.

FAQ :

ರಾಕೆಟಿನ ಪಿತಾಮಹಾ ರಾಕೆಟಿನ ಮೊದಲ ವಿಜ್ಞಾನಿ ಎಂದು ಯಾರನ್ನು ಕರೆಯುತ್ತಾರೆ?

ಅಮೇರಿಕಾ ದೇಶದ ರಾಬರ್ಟ ಗೊಡ್ಡಾರ್ಡರ ವರನ್ನು ಕರೆಯುತ್ತಾರೆ.

ವಿಮೋಚನಾ ವೇಗ ಎಂದರೇನು?

ಯಾವುದೇ ಒಂದು ಕಾಯವು ಭೂಮಿಯ ಒಂದು ಗುರುತ್ವ ಬಲದಿಂದ ತಪ್ಪಿಸಿಕೊಂಡು ಹೋಗುವಂತಾಗಲು ಅದಕ್ಕೆ ನೀಡಬೇಕಾದ ಕನಿಷ್ಠ ಆರಂಭಿಕ ವೇಗಕ್ಕೆ ವಿಮೋಚನಾವೇಗ ಎನ್ನುವರು. ಭೂಮಿಯ ವಿಮೋಚನಾವೇಗ 11.2km/sec̤

ಇತರೆ ವಿಷಯಗಳು :

Join WhatsApp Join Telegram

ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ‌

ಆಹಾರದ ಘಟಕಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.