ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಮಾಹಿತಿ | Information about peasant revolts against the British in Kannada

Join Telegram Group Join Now
WhatsApp Group Join Now

ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಮಾಹಿತಿ Information about peasant revolts against the British Britishara Virudda Raitara Dangegala bagge Mahithi in Kannada

ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಮಾಹಿತಿ

Information about peasant revolts against the British in Kannada
ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಇಂಡಿಗೋ ಚಳುವಳಿ – 1859-1860 :

  • ಬಂಗಾಳದ ನೀಲಿ ಬೆಳೆಗಾರರ ಮುಷ್ಕರವು ʼಆಧುನಿಕ ಭಾರತದ ಅತಿದೊಡ್ಡ ಯಶಸ್ವಿ ರೈತ ಚಳುವಳಿಯಾಗಿದೆʼ.
  • ಕಾರಣ – ಬಂಗಾಳದ ರೈತರನ್ನು ನೀಲಿ ಬೆಳೆಯುವಂತೆ ಯುರೋಪಿನ ಪ್ಲಾಂಟರುಗಳು ಒತ್ತಡ ಹೇರುತ್ತಿದ್ದರು ಮತ್ತು ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಿತ್ತು.
  • ಚಳುವಳಿಯ ನಾಯಕರು – ದಿಗಂಬರ್‌ ಮತ್ತು ವಿಷ್ಣು ಬಿಶ್ವಾಸ್‌
  • ದಂಗೆ ನಡೆದ ಸ್ಥಳಗಳು – ಗೋವಿಂದಪುರ, ಖೂಲ್ನಾ, ಢಾಕಾ, ಮಾಲ್ಡಾ ಮತ್ತು ದೀನಜಪುರ.
  • ದೀನಬಂಧು ಮಿತ್ರರವರು ಇಂಡಿಗೋ ಚಳುವಳಿಯಾಧಾರಿತ ʼನೀಲದರ್ಪಣ್‌ʼ ಎಂಬ ನಾಟಕವನ್ನು ಬರೆದರು.
  • 1860ರ ʼನೀಲಿ ಆಯೋಗʼದ ಸಲಹೆಯಂತೆ ರೈತರು ನೀಲಿ ಬೆಳೆಯನ್ನು ಕಡ್ಡಾಯವಾಗಿ ಬೆಳೆಯಬೇಕೆಂಬ ಆದೇಶದಿಂದ ಮುಕ್ತರಾದರು.

ಪುಣೆಯ ರೈತರ ದಂಗೆ – 1875 :

  • ಪುಣೆ, ಸತಾರ, ಅಹ್ಮದನಗರ ಮತ್ತು ಕೊಲ್ಲಾಪುರದಲ್ಲಿ ದಂಗೆ ನಡೆಯಿತು.
  • ಕಾರಣ – ಬ್ರಿಟೀಷರು ರೈತರ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದರಿಂದ ತೆರಿಗೆ ಕಟ್ಟಲು ಭೂಮಿಯನ್ನು ಅಡವಿಟ್ಟರು.
  • ರೈತರ ಚಳುವಳಿಯ ನಾಯಕರು – ರಾನಡೆ ಮತ್ತು ವಾಸುದೇವ ಬಲವಂತ ಫಡಕೆ
  • 1879ರಲ್ಲಿ ʼದಖನ್‌ ಕೃಷಿ ಪರಿಹಾರ ಕಾಯ್ದೆʼ ಅನ್ವಯ ರೈತರು ಭೂಮಿಯನ್ನು ಅಡವಿಡಬಾರದು.

ಪಾಬ್ನಾ ರೈತರ ದಂಗೆ – 1873-1876 :

  • ಬಂಗಾಳದ ಜಮೀನ್ದಾರರ ವಿರುದ್ದ ನಡೆದ ದಂಗೆ.
  • ದಂಗೆಯ ನಾಯಕ – ಈಶಾನ್‌ ಚಂದ್ರ ರಾಯ್‌
  • ಈ ದಂಗೆಯನ್ನು ಆರ್.ಸಿ. ದತ್ತ, ಸುರೇಂದ್ರನಾಥ್‌ ಬ್ಯಾನರ್ಜಿ, ಬಂಕಿಮಚಂದ್ರ ಚಟರ್ಜಿ ಬೆಂಬಲಿಸಿದರು.
  • ಇದು ಶಾಂತಿಯುತವಾಗಿ ನಡೆದ ದಂಗೆ.

ಚಂಪಾರಣ್ಯ ರೈತ ಸತ್ಯಾಗ್ರಹ – 1917 :

  • ಚಂಪಾರಣ್ಯ ಎಂದ ಸ್ಥಳವು ಬಿಹಾರದಲ್ಲಿದೆ.
  • ಕಾರಣ – ನೀಲಿ ಬೆಳೆಯನ್ನು ಕಡ್ಡಾಯವಾಗಿ ಬೆಳೆಯಬೇಕೆಂಬುದು ಈ ಸತ್ಯಾಗ್ರಹಕ್ಕೆ ಕಾರಣ.
  • ಗಾಂಧೀಜಿ ಭಾರತದಲ್ಲಿ ಕೈಗೊಂಡ ಮೊಟ್ಟ ಮೊದಲ ಸತ್ಯಾಗ್ರಹವಾಗಿದೆ.
  • ಗಾಂಧೀಜಿಯವರೊಂದಿಗೆ ಡಾ|| ಬಾಬು ರಾಜೇಂದ್ರ ಪ್ರಸಾದ್‌, ಜೆ.ಬಿ.ಕೃಪಲಾನಿ ಮತ್ತು ಮಹದೇವ ದೇಸಾಯಿಯವರು ಭಾಗವಹಿಸಿದ್ದರು.
  • ಚಂಪಾರಣ್ಯ ಸತ್ಯಾಗ್ರಹ ಕುರಿತು ವಿಚಾರಣೆಗೆ ನೇಮಕವಾದ ಎಫ್.ಜೆ.ಪ್ಲೈನ್‌ ಆಯೋಗ.
  • ಬಿಹಾರದ ರಜ್‌ ಕುಮಾರ್‌ ಶುಕ್ಲಾ ಬಡ ರೈತರ ಸಮಸ್ಯೆಗಳನ್ನು ಗಾಂಧೀಜಿಗೆ ತಿಳಿಸಿದರು. ಗಾಂಧೀಜಿಯವರ ಪ್ರಯತ್ನದಿಂಧ ನೀಲಿ ಕೃಷಿ ಕೊನೆಗೊಂಡಿತು. ಗೇಣಿ ದರಗಳೂ ಇಳಿದವು.
  • ಇದು ಗಾಂಧೀಜಿಯವರ ಮೊದಲ ಕಾನೂಣು ಭಂಗ ಚಳುವಳಿ.
  • ಈ ಚಳುವಳಿಯಿಂದ ಉದಯವಾದ ನಾಯಕ ಬಾಬು ರಾಜೇಂದ್ರ ಪ್ರಸಾದ್‌.

ಖೇಡಾ ರೈತ ಸತ್ಯಾಗ್ರಹ – 1918 :

  • ಕ್ಷಾಮದ ಸಂದರ್ಭದಲ್ಲಿ ಬ್ರಿಟೀಷ್‌ ಸರ್ಕಾರವು ಅಧಿಕ ಕಂದಾಯವನ್ನು ವಿಧಿಸಿದ್ದು ಖೇಡಾ ರೈತ ಸತ್ಯಾಗ್ರಹಕ್ಕೆ ಕಾರಣವಾಯಿತು.
  • ಗಾಂಧೀಜಿಯವರು ಕೈಗೊಂಡ ಮೊದಲ ಅಸಹಕಾರ ಚಳುವಳಿಯಾಗಿದೆ.
  • ಖೇಡಾ ರೈತ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು – ಸರ್ದಾರ್‌ ಪಟೇಲರು, ಶಂಕರ್‌ ಲಾಲ್‌ ಬ್ಯಾಂಕರ್‌, ಅನಸೂಯ ಬೆಹನ್‌, ಹಿಂದೂಲಾಲ್‌ ಯಾಗ್ನಿಕ್‌ ಮತ್ತು ಮಹದೇವ ದೇಸಾಯಿ ಮೊದಲಾದವರು.
  • ಖೇಡಾ ರೈತ ಸತ್ಯಾಗ್ರಹದಲ್ಲಿ ನಾಯಕನಾಗಿ ಹೊರಬಂದರು – ಸರ್ದಾರ್‌ ವಲ್ಲಭ ಬಾಯಿ ಪಟೇಲ್‌
  • ಖೇಡಾ ಸತ್ಯಾಗ್ರಹದ ಕೇಂದ್ರ ಸ್ಥಾನ – ನಾದಿಯದ್‌ ಆಶ್ರಮ

ಮೋಪ್ಲಾ ದಂಗೆ – 1921 :

  • 1836 ರಿಂದ 1854 ರವರೆಗೆ ಹೆಚ್ಚಿನ ಗೇಣಿ ಬೇಡಿಕೆ, ಹಿಂದೂ ಜಮೀನ್ದಾರರು ಮತ್ತು ಅಧಿಕಾರಿಗಳ ದಮನದ ವಿರುದ್ದವಾಗಿ ಮಲಬಾರಿನ ಮೋಪ್ಲಾ ಅಥವಾ ಮಾಪಿಳ್ಳೆಗಳು 22 ಬಾರಿ ದಂಗೆ ಎದ್ದರೂ ಪ್ರಯೋಜನವಾಗಲಿಲ್ಲ.
  • ಮಾಪಿಳ್ಳೆ/ಮೋಪ್ಲಾ ಎಂದರೆ – ಮಲಬಾರಿನ ಮುಸ್ಲಿಂ ರೈತರು.
  • 1921ರಲ್ಲಿ ಮಾಪಿಳ್ಳೆಗಳು ಹಿಂದೂ ಜಮೀನ್ದಾರರ ಮೇಲೆ ಆಕ್ರಮಣ ಮಾಡಿದರು.
  • ಬ್ರಿಟೀಷರು ಈ ದಂಗೆಯನ್ನು ದಮನ ಮಾಡಿದರು.
  • ಈ ದಂಗೆಯ ನಾಯಕರು – ಖುಂಜು ಅಹಮ್ಮದ್‌ ಅಜಿ, ಅಲಿ ಮುಸಾಲಿಯರ್‌, ಸೇತಿ ಕೊಯಾ ಕಂಗಲ್‌

ಬಾರ್ಡೋಲಿ ರೈತ ಸತ್ಯಾಗ್ರಹ -1928 :

  • ಸ್ಥಳ – ಗುಜರಾತಿನ ಬಾರ್ಡೋಲಿ
  • ನಾಯಕ – ಸರ್ದಾರ್‌ ವಲ್ಲಭಬಾಯಿ ಪಟೇಲ್‌
  • ಕಾರಣ – ಸರ್ಕಾರವು ರೈತರಿಗೆ ಭೂಕಂದಾಯ ನೀಡಲು ಕೇಳಿಕೊಂಡಾಗ ರೈತರು ನಿರಾಕರಿಸಿದರು. ರೈತರ ಪರವಾಗಿ ವಲ್ಲಭ ಬಾಯಿ ಪಟೇಲರು ಬ್ರಿಟೀಷ್‌ ಸರಕಾರದ ವಿರುದ್ದ ವಾದಿಸಿದರು. ಆಗ ಸರ್ಕಾರಕ್ಕೆ ʼನಮ್ಮ ಜಮೀನನ್ನು ತಾಕತ್ತಿದ್ದರೆ ಇಂಗ್ಲೆಂಡಿಗೆ ತೆಗೆದುಕೊಂಡು ಹೋಗಿಬಿಡಿʼ ಎಂದು ಸವಾಲು ಹಾಕಿದರು.
  • ವಿದ್ಯಾರ್ಥಿಗಳ ತಂಡವೊಂದು ಬಾರ್ಡೋಲಿ ಸತ್ಯಾಗ್ರಹ ಎಂಬ ಪತ್ರಿಕೆಯನ್ನು ಮುದ್ರಿಸಿ ಹಂಚಿದರು.
  • ಸರ್ಕಾರವು ಅರ್ಧದಷ್ಟು ತೆರಿಗೆಯನ್ನು ಕಡಿಮೆ ಮಾಡಿತು.
  • ಈ ಸತ್ಯಾಗ್ರಹದಲ್ಲಿ ಪಟೀಲರ ಮಗಳಾದ ಮಣಿಬೇನ್‌ ಭಾಗವಹಿಸಿದ್ದರು.
  • ಈ ಸಂದರ್ಭದಲ್ಲಿ ಗಾಂಧೀಜಿಯವರು ಪಟೇಲರಿಗೆ ಸರ್ದಾರ್‌ ಎಂಬ ಬಿರುದು ನೀಡಿದರು.

FAQ :

ಚಂಪಾರಣ್ಯ ರೈತ ಸತ್ಯಾಗ್ರಹ ಯಾವಾಗ ನಡೆಯಿತು?

1917

1879ರಲ್ಲಿ ಯಾವ ಕಾಯ್ದೆ ಜಾರಿಗೆ ಬಂತು ?

ದಖನ್‌ ಕೃಷಿ ಪರಿಹಾರ ಕಾಯ್ದೆ

ಇತರೆ ವಿಷಯಗಳು :

ರಾಕೆಟ್‌ ಮತ್ತು ಕೃತಕ ಉಪಗ್ರಹಗಳ ಬಗ್ಗೆ ಮಾಹಿತಿ

Join WhatsApp Join Telegram

ಗುರುತ್ವಾಕರ್ಷಣ ಬಲದ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.