ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಮಾಹಿತಿ Information about peasant revolts against the British Britishara Virudda Raitara Dangegala bagge Mahithi in Kannada
ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಬ್ರಿಟೀಷರ ವಿರುದ್ದ ರೈತರ ದಂಗೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಇಂಡಿಗೋ ಚಳುವಳಿ – 1859-1860 :
- ಬಂಗಾಳದ ನೀಲಿ ಬೆಳೆಗಾರರ ಮುಷ್ಕರವು ʼಆಧುನಿಕ ಭಾರತದ ಅತಿದೊಡ್ಡ ಯಶಸ್ವಿ ರೈತ ಚಳುವಳಿಯಾಗಿದೆʼ.
- ಕಾರಣ – ಬಂಗಾಳದ ರೈತರನ್ನು ನೀಲಿ ಬೆಳೆಯುವಂತೆ ಯುರೋಪಿನ ಪ್ಲಾಂಟರುಗಳು ಒತ್ತಡ ಹೇರುತ್ತಿದ್ದರು ಮತ್ತು ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಿತ್ತು.
- ಚಳುವಳಿಯ ನಾಯಕರು – ದಿಗಂಬರ್ ಮತ್ತು ವಿಷ್ಣು ಬಿಶ್ವಾಸ್
- ದಂಗೆ ನಡೆದ ಸ್ಥಳಗಳು – ಗೋವಿಂದಪುರ, ಖೂಲ್ನಾ, ಢಾಕಾ, ಮಾಲ್ಡಾ ಮತ್ತು ದೀನಜಪುರ.
- ದೀನಬಂಧು ಮಿತ್ರರವರು ಇಂಡಿಗೋ ಚಳುವಳಿಯಾಧಾರಿತ ʼನೀಲದರ್ಪಣ್ʼ ಎಂಬ ನಾಟಕವನ್ನು ಬರೆದರು.
- 1860ರ ʼನೀಲಿ ಆಯೋಗʼದ ಸಲಹೆಯಂತೆ ರೈತರು ನೀಲಿ ಬೆಳೆಯನ್ನು ಕಡ್ಡಾಯವಾಗಿ ಬೆಳೆಯಬೇಕೆಂಬ ಆದೇಶದಿಂದ ಮುಕ್ತರಾದರು.
ಪುಣೆಯ ರೈತರ ದಂಗೆ – 1875 :
- ಪುಣೆ, ಸತಾರ, ಅಹ್ಮದನಗರ ಮತ್ತು ಕೊಲ್ಲಾಪುರದಲ್ಲಿ ದಂಗೆ ನಡೆಯಿತು.
- ಕಾರಣ – ಬ್ರಿಟೀಷರು ರೈತರ ಮೇಲೆ ಹೆಚ್ಚು ತೆರಿಗೆ ವಿಧಿಸಿದ್ದರಿಂದ ತೆರಿಗೆ ಕಟ್ಟಲು ಭೂಮಿಯನ್ನು ಅಡವಿಟ್ಟರು.
- ರೈತರ ಚಳುವಳಿಯ ನಾಯಕರು – ರಾನಡೆ ಮತ್ತು ವಾಸುದೇವ ಬಲವಂತ ಫಡಕೆ
- 1879ರಲ್ಲಿ ʼದಖನ್ ಕೃಷಿ ಪರಿಹಾರ ಕಾಯ್ದೆʼ ಅನ್ವಯ ರೈತರು ಭೂಮಿಯನ್ನು ಅಡವಿಡಬಾರದು.
ಪಾಬ್ನಾ ರೈತರ ದಂಗೆ – 1873-1876 :
- ಬಂಗಾಳದ ಜಮೀನ್ದಾರರ ವಿರುದ್ದ ನಡೆದ ದಂಗೆ.
- ದಂಗೆಯ ನಾಯಕ – ಈಶಾನ್ ಚಂದ್ರ ರಾಯ್
- ಈ ದಂಗೆಯನ್ನು ಆರ್.ಸಿ. ದತ್ತ, ಸುರೇಂದ್ರನಾಥ್ ಬ್ಯಾನರ್ಜಿ, ಬಂಕಿಮಚಂದ್ರ ಚಟರ್ಜಿ ಬೆಂಬಲಿಸಿದರು.
- ಇದು ಶಾಂತಿಯುತವಾಗಿ ನಡೆದ ದಂಗೆ.
ಚಂಪಾರಣ್ಯ ರೈತ ಸತ್ಯಾಗ್ರಹ – 1917 :
- ಚಂಪಾರಣ್ಯ ಎಂದ ಸ್ಥಳವು ಬಿಹಾರದಲ್ಲಿದೆ.
- ಕಾರಣ – ನೀಲಿ ಬೆಳೆಯನ್ನು ಕಡ್ಡಾಯವಾಗಿ ಬೆಳೆಯಬೇಕೆಂಬುದು ಈ ಸತ್ಯಾಗ್ರಹಕ್ಕೆ ಕಾರಣ.
- ಗಾಂಧೀಜಿ ಭಾರತದಲ್ಲಿ ಕೈಗೊಂಡ ಮೊಟ್ಟ ಮೊದಲ ಸತ್ಯಾಗ್ರಹವಾಗಿದೆ.
- ಗಾಂಧೀಜಿಯವರೊಂದಿಗೆ ಡಾ|| ಬಾಬು ರಾಜೇಂದ್ರ ಪ್ರಸಾದ್, ಜೆ.ಬಿ.ಕೃಪಲಾನಿ ಮತ್ತು ಮಹದೇವ ದೇಸಾಯಿಯವರು ಭಾಗವಹಿಸಿದ್ದರು.
- ಚಂಪಾರಣ್ಯ ಸತ್ಯಾಗ್ರಹ ಕುರಿತು ವಿಚಾರಣೆಗೆ ನೇಮಕವಾದ ಎಫ್.ಜೆ.ಪ್ಲೈನ್ ಆಯೋಗ.
- ಬಿಹಾರದ ರಜ್ ಕುಮಾರ್ ಶುಕ್ಲಾ ಬಡ ರೈತರ ಸಮಸ್ಯೆಗಳನ್ನು ಗಾಂಧೀಜಿಗೆ ತಿಳಿಸಿದರು. ಗಾಂಧೀಜಿಯವರ ಪ್ರಯತ್ನದಿಂಧ ನೀಲಿ ಕೃಷಿ ಕೊನೆಗೊಂಡಿತು. ಗೇಣಿ ದರಗಳೂ ಇಳಿದವು.
- ಇದು ಗಾಂಧೀಜಿಯವರ ಮೊದಲ ಕಾನೂಣು ಭಂಗ ಚಳುವಳಿ.
- ಈ ಚಳುವಳಿಯಿಂದ ಉದಯವಾದ ನಾಯಕ ಬಾಬು ರಾಜೇಂದ್ರ ಪ್ರಸಾದ್.
ಖೇಡಾ ರೈತ ಸತ್ಯಾಗ್ರಹ – 1918 :
- ಕ್ಷಾಮದ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರವು ಅಧಿಕ ಕಂದಾಯವನ್ನು ವಿಧಿಸಿದ್ದು ಖೇಡಾ ರೈತ ಸತ್ಯಾಗ್ರಹಕ್ಕೆ ಕಾರಣವಾಯಿತು.
- ಗಾಂಧೀಜಿಯವರು ಕೈಗೊಂಡ ಮೊದಲ ಅಸಹಕಾರ ಚಳುವಳಿಯಾಗಿದೆ.
- ಖೇಡಾ ರೈತ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು – ಸರ್ದಾರ್ ಪಟೇಲರು, ಶಂಕರ್ ಲಾಲ್ ಬ್ಯಾಂಕರ್, ಅನಸೂಯ ಬೆಹನ್, ಹಿಂದೂಲಾಲ್ ಯಾಗ್ನಿಕ್ ಮತ್ತು ಮಹದೇವ ದೇಸಾಯಿ ಮೊದಲಾದವರು.
- ಖೇಡಾ ರೈತ ಸತ್ಯಾಗ್ರಹದಲ್ಲಿ ನಾಯಕನಾಗಿ ಹೊರಬಂದರು – ಸರ್ದಾರ್ ವಲ್ಲಭ ಬಾಯಿ ಪಟೇಲ್
- ಖೇಡಾ ಸತ್ಯಾಗ್ರಹದ ಕೇಂದ್ರ ಸ್ಥಾನ – ನಾದಿಯದ್ ಆಶ್ರಮ
ಮೋಪ್ಲಾ ದಂಗೆ – 1921 :
- 1836 ರಿಂದ 1854 ರವರೆಗೆ ಹೆಚ್ಚಿನ ಗೇಣಿ ಬೇಡಿಕೆ, ಹಿಂದೂ ಜಮೀನ್ದಾರರು ಮತ್ತು ಅಧಿಕಾರಿಗಳ ದಮನದ ವಿರುದ್ದವಾಗಿ ಮಲಬಾರಿನ ಮೋಪ್ಲಾ ಅಥವಾ ಮಾಪಿಳ್ಳೆಗಳು 22 ಬಾರಿ ದಂಗೆ ಎದ್ದರೂ ಪ್ರಯೋಜನವಾಗಲಿಲ್ಲ.
- ಮಾಪಿಳ್ಳೆ/ಮೋಪ್ಲಾ ಎಂದರೆ – ಮಲಬಾರಿನ ಮುಸ್ಲಿಂ ರೈತರು.
- 1921ರಲ್ಲಿ ಮಾಪಿಳ್ಳೆಗಳು ಹಿಂದೂ ಜಮೀನ್ದಾರರ ಮೇಲೆ ಆಕ್ರಮಣ ಮಾಡಿದರು.
- ಬ್ರಿಟೀಷರು ಈ ದಂಗೆಯನ್ನು ದಮನ ಮಾಡಿದರು.
- ಈ ದಂಗೆಯ ನಾಯಕರು – ಖುಂಜು ಅಹಮ್ಮದ್ ಅಜಿ, ಅಲಿ ಮುಸಾಲಿಯರ್, ಸೇತಿ ಕೊಯಾ ಕಂಗಲ್
ಬಾರ್ಡೋಲಿ ರೈತ ಸತ್ಯಾಗ್ರಹ -1928 :
- ಸ್ಥಳ – ಗುಜರಾತಿನ ಬಾರ್ಡೋಲಿ
- ನಾಯಕ – ಸರ್ದಾರ್ ವಲ್ಲಭಬಾಯಿ ಪಟೇಲ್
- ಕಾರಣ – ಸರ್ಕಾರವು ರೈತರಿಗೆ ಭೂಕಂದಾಯ ನೀಡಲು ಕೇಳಿಕೊಂಡಾಗ ರೈತರು ನಿರಾಕರಿಸಿದರು. ರೈತರ ಪರವಾಗಿ ವಲ್ಲಭ ಬಾಯಿ ಪಟೇಲರು ಬ್ರಿಟೀಷ್ ಸರಕಾರದ ವಿರುದ್ದ ವಾದಿಸಿದರು. ಆಗ ಸರ್ಕಾರಕ್ಕೆ ʼನಮ್ಮ ಜಮೀನನ್ನು ತಾಕತ್ತಿದ್ದರೆ ಇಂಗ್ಲೆಂಡಿಗೆ ತೆಗೆದುಕೊಂಡು ಹೋಗಿಬಿಡಿʼ ಎಂದು ಸವಾಲು ಹಾಕಿದರು.
- ವಿದ್ಯಾರ್ಥಿಗಳ ತಂಡವೊಂದು ಬಾರ್ಡೋಲಿ ಸತ್ಯಾಗ್ರಹ ಎಂಬ ಪತ್ರಿಕೆಯನ್ನು ಮುದ್ರಿಸಿ ಹಂಚಿದರು.
- ಸರ್ಕಾರವು ಅರ್ಧದಷ್ಟು ತೆರಿಗೆಯನ್ನು ಕಡಿಮೆ ಮಾಡಿತು.
- ಈ ಸತ್ಯಾಗ್ರಹದಲ್ಲಿ ಪಟೀಲರ ಮಗಳಾದ ಮಣಿಬೇನ್ ಭಾಗವಹಿಸಿದ್ದರು.
- ಈ ಸಂದರ್ಭದಲ್ಲಿ ಗಾಂಧೀಜಿಯವರು ಪಟೇಲರಿಗೆ ಸರ್ದಾರ್ ಎಂಬ ಬಿರುದು ನೀಡಿದರು.
FAQ :
ಚಂಪಾರಣ್ಯ ರೈತ ಸತ್ಯಾಗ್ರಹ ಯಾವಾಗ ನಡೆಯಿತು?
1917
1879ರಲ್ಲಿ ಯಾವ ಕಾಯ್ದೆ ಜಾರಿಗೆ ಬಂತು ?
ದಖನ್ ಕೃಷಿ ಪರಿಹಾರ ಕಾಯ್ದೆ
ಇತರೆ ವಿಷಯಗಳು :
ರಾಕೆಟ್ ಮತ್ತು ಕೃತಕ ಉಪಗ್ರಹಗಳ ಬಗ್ಗೆ ಮಾಹಿತಿ
ಗುರುತ್ವಾಕರ್ಷಣ ಬಲದ ಬಗ್ಗೆ ಮಾಹಿತಿ