ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ | Information about Natural Disasters in India In Kannada

Join Telegram Group Join Now
WhatsApp Group Join Now

ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ Information about Natural Disasters in India Bharathada Naisargika Vipattugala bagge Mahithi in Kannada

ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ

Information about Natural Disasters in India In Kannada
Information about Natural Disasters in India In Kannada

ಈ ಲೇಖನಿಯಲ್ಲಿ ಭಾರತದ ನೈಸರ್ಗಿಕ ವಿಪತ್ತುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಭಾರತದ ನೈಸರ್ಗಿಕ ವಿಪತ್ತುಗಳು :

ನೈಸರ್ಗಿಕ ಅನಾಹುತಗಳಿಂದಾಗುವ ವ್ಯಾಪಕ ವಿನಾಶದ ಫಲವೇ ನೈಸರ್ಗಿಕ ವಿಪತ್ತುಗಳು. ವಿಪತ್ತುಗಳಲ್ಲಿ ನೈಸರ್ಗಿಕ ಅಥವಾ ಮಾನವ ನಿರ್ಮಿತವೆಂದು ಎರಡು ವಿಧ. ಭೂಕಂಪ, ಜ್ವಾಲಾಮುಖಿ, ಸುನಾಮಿ, ಭೂಕುಸಿತ ಮತ್ತು ಹಿಮಪಾತಗಳು ಭೂ ಆಂತರಿಕ ಕ್ರಿಯೆಗಳಿಂದ ಸಂಭವಿಸುವ ನೈಸರ್ಗಿಕ ವಿಪತ್ತುಗಳು. ಹಾಗೆಯೇ ಆವರ್ತಮಾರುತ, ಬರಗಾಲ, ಪ್ರವಾಹ ಮತ್ತು ಸಾಂಕ್ರಾಮಿಕ ಪಿಡುಗುಗಳು ವಾಯುಗೋಳಕ್ಕೆ ಸಂಬಂಧಿಸಿದ ನೈಸರ್ಗಿಕ ವಿಪತ್ತುಗಳಾಗಿವೆ. ನೈಸರ್ಗಿಕ ವಿಪತ್ತುಗಳಲ್ಲಿ ಬಹಳಷ್ಟು ಅಪರೂಪಕ್ಕೆ ಹಾಗೂ ಅನಿರೀಕ್ಷಿತವಾಗಿ ಸಂಭವಿಸುವುವು.

ಆವರ್ತ ಮಾರುತಗಳು :

ಕಡಿಮೆ ಒತ್ತಡವುಳ್ಳ ಕೇಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ ಚಲಿಸುವುದೇ ಆವರ್ತಮಾರುತ. ಈ ನೈಸರ್ಗಿಕ ವಿಪತ್ತು ವಾಯುಗೋಳಕ್ಕೆ ಸಂಬಂಧಿಸಿದೆ. ಆವರ್ತಮಾರುತಗಳಲ್ಲಿ ಉಷ್ಣವಲಯದ ಮತ್ತು ಸಮಶೀತೋಷ್ಣವಲಯದ ಆವರ್ತಮಾರುತಗಳೆಂದು ಎರಡು ವಿಧ. ಭಾರತದಲ್ಲಿ ಹೆಚ್ಚಾಗಿ ಉಷ್ಣವಲಯದ ಆವರ್ತಮಾರುತಗಳು ಸಂಭವಿಸುವುವು.

ಕಾರಣಗಳು :

ಉಷ್ಣವಲಯದ ಆವರ್ತಮಾರುತಗಳ ಉಗಮ ಮತ್ತು ಬೆಳವಣಿಗೆಗೆ ಕಾರಣವಾದ ಪರಿಸ್ಥಿತಿಗಳೆಂದರೆ, ಅಧಿಕ ಉಷ್ಣಾಂಶ, ಪ್ರಶಾಂತ ವಾಯು ಮತ್ತು ಹೆಚ್ಚು ತೇವಾಂಶ ಭರಿತ ವಾಯು. ಈ ಪರಿಸ್ಥಿತಿಗಳು ಕಡಿಮೆ ಒತ್ತಡದ ಕೋಶವನ್ನು ನಿರ್ಮಿಸುತ್ತವೆ. ಕಡಿಮೆ ಒತ್ತಡಕೋಶದ ಸುತ್ತಲೂ ಸಾಪೇಕ್ಷವಾದ ಅಧಿಕ ಒತ್ತಡವಿರುತ್ತದೆ. ಹೀಗಾಗಿ ಸುತ್ತಲಿನ ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡದ ಕೇಂದ್ರದ ಕಡೆಗೆ ಚಕ್ರಾಕಾರದಲ್ಲಿ ಮಾರುತಗಳು ಬೀಸುವುದರಿಂದ ಆವರ್ತಮಾರುತ ಅಥವಾ ಸೈಕ್ಲೋನ್ಗಳು ಸಂಭವಿಸುತ್ತವೆ. ಇಂತಹ ಪರಿಸ್ಥಿತಿಗಳು ಸಾಮಾನ್ಯವಾಗಿ ಉಷ್ಣವಲಯದ ಸಮುದ್ರ ಭಾಗಗಳಲ್ಲಿ ಕಂಡುಬರುತ್ತವೆ.

Join WhatsApp Join Telegram

ಪರಿಣಾಮಗಳು :

ಉಷ್ಣವಲಯದ ಆವರ್ತಮಾರುತಗಳು ಬಹಳ ವಿನಾಶಕಾರಿಯಾದವು. ಅವು ಸಾವು ಮತ್ತು ಆಸ್ತಿಗಳಿಗೆ ಹಾನಿಯನ್ನುಂಟುಮಾಡುತ್ತವೆ, ಕಟ್ಟಡಗಳಿಗೆ ಧಕ್ಕೆ, ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳನ್ನು ಅಸ್ತವ್ಯಸ್ತಗೊಳಿಸುತ್ತವೆ. ವಿದ್ಯುತ್‌ ಸರಬರಾಜಿಗೆ ಅಡಚಣೆ, ಬೆಳೆಗಳು, ಸ್ವಾಭಾವಿಕ ಸಸ್ಯವರ್ಗ, ಪ್ರಾಣಿ ಸಂಕುಲಕ್ಕೆ ಹಾನಿ ಉಂಟುಮಾಡುತ್ತದೆ.

ಮುನ್ನೆಚರಿಕಾ ಕ್ರಮಗಳು :

ಆವರ್ತಮಾರುತಗಳು ನೈಸರ್ಗಿಕ ವಿಪತ್ತುಗಳಾಗಿದ್ದು, ಅವುಗಳನ್ನು ನಾವು ತಡೆಗಟ್ಟಲಾಗುವುದಿಲ್ಲ. ಆದರೆ ಜನರು ಮುನ್ನೆಚರಿಕೆಯ ಕಡೆಗೆ ಲಕ್ಷ್ಯಕೊಡಬಹುದು. ಅವರು ಆಕಾಶವಾಣಿ, ದೂರದರ್ಶನ ಮತ್ತು ಇತರೆ ಸಂಪರ್ಕಮಾಧ್ಯಗಳು ಬಿತ್ತರಿಸುವ ಎಚ್ಚರಿಕೆಗಳನ್ನು ಗಮನಿಸಬೇಕು. ಆವರ್ತಮಾರುತಗಳು ಸಂಭವಿಸಿದ ಸಂದರ್ಭಗಳಲ್ಲಿ ಜನರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಬೇಕು.

ಪ್ರವಾಹಗಳು :

ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳದ್ಳುತ್ತವೆ. ಇದನ್ನು ನದಿ ಪ್ರವಾಹ ಎನ್ನುವರು. ಇದು ಭಾರತದಲ್ಲಿ ಆಗಿಂದಾಗ್ಗೆ ಸಂಭವಿಸುವ ನೈಸರ್ಗಿಕ ವಿಪತ್ತು. ಪ್ರತಿ ವರ್ಷವೂ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಇಂತಹ ಪ್ರವಾಹಗಳು ಸಂಭವಿಸುವುವು.

ಕಾರಣಗಳು :

ಪ್ರವಾಹಗಳು ನೈಸರ್ಗಿಕ ಪರಿಸ್ಥಿತಿಗಳಿಂದ ಮಾತ್ರವಲ್ಲ ಮಾನವ ಕೃತ್ಯಗಳಿಂದಲೂ ಸಂಭವಿಸುತ್ತವೆ. ನೈಸರ್ಗಿಕ ಪರಿಸ್ಥಿತಿಗಳಲ್ಲಿ ಅತ್ಯಧಿಕ ಮಳೆ, ಹಿಮಕರಗುವಿಕೆ, ಆವರ್ತಮಾರುತ, ಮೇಘಸ್ಪೋಟ, ನದಿಸರಾಗವಾಗಿ ಹರಿಯಲಾರದಷ್ಟು ಅಡಚಣೆ, ನದಿ ಪಾತ್ರದಲ್ಲಿ ಹೂಳುತುಂಬುವಿಕೆ ಇತ್ಯಾದಿಗಳು ಸೇರುತ್ತವೆ. ಮಾನವ ಕೃತ್ಯಗಳಲ್ಲಿ ಅರಣ್ಯನಾಶ, ಅವೈಜ್ಞಾನಿಕ ನೀರಾವರಿ ವ್ಯವಸ್ಥೆ ಮತ್ತು ಕೃಷಿ ಪದ್ದತಿ, ಒಡ್ಡು ಮತ್ತು ಆಣೆಕಟ್ಟುಗಳು ಒಡೆದು ಹೋಗುವುದರಿಂದ ಮತ್ತು ಶೀಘ್ರಗತಿಯ ನಗರೀಕರಣ ಮುಖ್ಯವಾದವು.

ಪರಿಣಾಮಗಳು :

ಪ್ರವಾಹಗಳಿಂದಾಗುವ ಪ್ರಮುಖ ಪರಿಣಾಮಗಳೆಂದರೆ ಜೀವಹಾನಿ, ಆಸ್ತಿಗೆ ಧಕ್ಕೆ, ಬೆಳೆ ಮತ್ತು ಸಸ್ಯವರ್ಗಗಳಿಗೆ ಹಾನಿ, ಸಾರಿಗೆ ಸಂಪರ್ಕ ಅವ್ಯವಸ್ಥೆ, ಮಣ್ಣಿನ ಸವೆತ, ಮೂಲ ಸೌಲಭ್ಯಗಳ ವ್ಯತ್ಯಯ ಇತ್ಯಾದಿ.

ಪ್ರವಾಹ ನಿಯಂತ್ರಣ ಕ್ರಮಗಳು :

ಜಲಾನಯನ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು ಮತ್ತು ವೇಗವಾದ ನೀರಿನ ಹರಿವು ನಿಯಂತ್ರಣ. ಅಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ನದಿ ನೀರಿನ ಪ್ರಮಾಣವನ್ನು ಕಡಿಮೆಮಾಡುವುದು. ಸಂಗ್ರಹಿಸಿದ ನೀರನ್ನು ನೀರಾವರಿ ಮೊದಲಾದ ಉದ್ದೇಶಗಳಿಗಾಗಿ ಬಳಕೆ. ಜನವಸತಿಗಳ ಪ್ರದೇಶ ಮತ್ತು ಕೃಷಿ ಭೂಮಿಗಳನ್ನು ಪ್ರವಾಹದಿಂದ ರಕ್ಷಿಸಲು ಒಡ್ಡುಗಳ ನಿರ್ಮಾಣ. ಪ್ರವಾಹಗಳ ಬಗ್ಗೆ ಮುನ್ಸೂಚನೆ ಮತ್ತು ಸಕಾಲಿಕ ಮುನ್ನೆಚ್ಚರಿಕೆ ನೀಡುವುದು. ಇದು ಜನ, ಜಾನುವಾರುಗಳ ಸಾವು-ನೋವು ಮತ್ತು ಆಸ್ತಿಗಳಿಗಾಗುವ ನಷ್ಟವನ್ನು ತಡೆಯಲು ಅಗತ್ಯವಾದ ಸಕಾಲಿಕ ಕ್ರಮ.

ಭೂಕುಸಿತಗಳು :

ಬೆಟ್ಟ ಅಥವಾ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿಗಳಿಗೆ ಭೂಕುಸಿತ ಎನ್ನುವರು. ಇದು ಭೂ ಗುರುತ್ವಶಕ್ತಿಯಿಂದ ಮಣ್ಣು, ಕಲ್ಲು ಮತ್ತು ಭಗ್ನಾವಶೇಷಗಳು ಕೆಳಗೆ ಬೀಳುವ ಅಥವಾ ಜರುಗುವ ಕ್ರಿಯೆಯನ್ನೊಳಗೊಂಡಿದೆ.

ಕಾರಣಗಳು :

ನೈಸರ್ಗಿಕ ಮತ್ತು ಮಾನವಶಕ್ತಿಗಳೆರಡೂ ಭೂಕುಸಿತಕ್ಕೆ ಕಾರಣವಾಗುತ್ತವೆ. ಕಡಲ ಕಡಿದಾದ ಬಂಡೆಯ ತಳವನ್ನು ಸಮುದ್ರ ಅಲೆಗಳು ಸವೆಸುವಂತಹ ಇಳಿಜಾರಿನ ಅಡಿಭಾಗದ ಸವೆತ, ಅತ್ಯಧಿಕ ಮಳೆ ಮತ್ತು ಭೂಕಂಪಗಳು, ಅರಣ್ಯನಾಶ, ರೈಲು, ರಸ್ತೆಗಳು, ಅಣೆಕಟ್ಟು, ಜಲಾಶಯ ಮತ್ತು ಜಲವಿದ್ಯುತ್ ಯೋಜನೆಗಳ ನಿರ್ಮಾಣ, ತೀವ್ರಗತಿಯ ಗಣಿಗಾರಿಕೆ, ಕಲ್ಲುಗಣಿಗಾರಿಕೆ.

ಪರಿಣಾಮಗಳು :

ಭೂಕುಸಿತಗಳೂ ಸಹ ನೈಸರ್ಗಿಕ ವಿನಾಶಕಾರಿ ವಿಪತ್ತುಗಳಾಗಿವೆ. ರೈಲುಮಾರ್ಗ, ರಸ್ತೆಗಳಿಗೆ ಅಡಚಣೆ, ಜನವಸತಿ ಮತ್ತು ಸಸ್ಯವರ್ಗಗಳು ಭೂಗತವಾಗುವುದು. ಸಾವು ನೋವು ಮತ್ತು ಆಸ್ತಿಗಳಿಗೆ ಹಾನಿ. ಇವುಗಳಲ್ಲಿ ಆಗಾಗ್ಗೆ ರಸ್ತೆಗಳಿಗೆ ಅಡಚಣೆ ಸರ್ವೇಸಾಮಾನ್ಯ.

ನಿಯಂತ್ರಣ ಕ್ರಮಗಳು :

ಇಳಿಜಾರನ್ನು ತಗ್ಗಿಸುವುದು, ಹೆದ್ದಾರಿಗಳ ಬದಿ ಮತ್ತಿತರ ಇಳಿಜಾರುಗಳಲ್ಲಿ ಬಂಡೆಗಳು ಬೀಳದಂತೆ ತಡೆಯುವುದು, ಕಡಿದಾದ ಇಳಿಜಾರುಳ್ಳ ಭಾಗ ಮತ್ತು ಜನವಸತಿಗಳ ಭಾಗಗಳಲ್ಲಿ ಗಣಿಗಾರಿಕೆ ಮತ್ತು ಕಲ್ಲಿಗಣಿ ಚಟುವಟಿಕೆಗಳ ನಿಯಂತ್ರಣ, ಅರಣ್ಯೀಕರಣ ಮೊದಲಾದ ಕ್ರಮಗಳು ಭೂಕುಸಿತಗಳ ನಿಯಂತ್ರಣಕ್ಕೆ ಅವಶ್ಯ.

ಭೂಕಂಪಗಳು :

ಭೂಚಪ್ಪಿನಲ್ಲಾಗುವ ರಭಸವಾದ ಕಂಪನವನ್ನು ಭೂಕಂಪನವೆನ್ನುವರು.

ಕಾರಣಗಳು :

ಭೂಕಂಪನಗಳು ಭೂಫಲಕಗಳ ಚಲನೆ, ಜ್ವಾಲಾಮುಖಿ, ಶಿಲಾಸ್ತರಗಳ ಭಂಗ ಮತ್ತು ಮಡಿಕೆ, ಭೂಕುಸಿತ, ಅಂತರ್ಗುಹೆ ಮೇಲ್ಛಾವಣಿಯ ಕುಸಿತ, ಮಾನವ ನಿರ್ಮಿತ ಜಲಾಶಯಗಳ ನೀರಿನ ಭಾರ ಮೊದಲಾದ ಕಾರಣಗಳಿಂದ ಸಂಭವಿಸುತ್ತವೆ. ಭಾರತದಲ್ಲಿ ಈವರೆಗೆ ಸಂಭವಿಸಿರುವ ಭೂಕಂಪನಗಳಲ್ಲಿ ಬಹಳಷ್ಟು ಭೂಫಲಕಗಳ ಚಲನೆಯಿಂದ ಸಂಭವಿಸಿದವು.

ಪರಿಣಾಮಗಳು :

ಭೂಕಂಪಗಳ ಅನಾಹುತಗಳಿಂದಾಗುವ ಪ್ರಮುಖ ಪರಿಣಾಮಗಳೆಂದರೆ, ನೆಲದ ಮೇಲಿನ ಬಿರುಕು, ಕಟ್ಟಡ, ರೈಲು ಮಾರ್ಗ, ವದ್ಯುತ್‌ ಸಂಚಾರ, ಸಂಪರ್ಕ ಮಾಧ್ಯಮ, ಸೇತುವೆ, ಆಣೆಕಟ್ಟುಗಳ ಒಡೆತ, ಕಾರ್ಖಾನೆಗಳಿಗೆ ಹಾನಿ, ಮಾನವ ಮತ್ತು ಜಾನುವಾರುಗಳ ಸಾವು ಮತ್ತು ಆಸ್ತಿಗಳಿಗೆ ಹಾನಿ. ಜೊತೆಗೆ ಬೆಂಕಿ ಅನಾಹುತ, ಭೂ ಕುಸಿತ, ಅಂತರ್ಜಲ ಮಟ್ಟದಲ್ಲಿ ವ್ಯತ್ಯಾಸ, ನದಿ ವ್ಯವಸ್ಥೆಯ ವಿಚಲನೆ ಅಥವಾ ಅಡಚಣೆ ಇತ್ಯಾದಿ.

ಮುನ್ನೆಚರಿಕಾ ಕ್ರಮಗಳು :

  • ಭೂಕಂಪನಾವಲಯಗಳಲ್ಲಿ ಜನವಸತಿಗಳ ನಿರ್ಮಾಣ ನಿಷೇಧ.
  • ಭೂಕಂಪನ ನಿರೋಧಕ ಕಟ್ಟಡ ನಿರ್ಮಾಣವನ್ನು ಅನುಸರಿಸುವುದು.
  • ಉತ್ತಮ ದರ್ಜೆಯ ಕಟ್ಟಡ ನಿರ್ಮಾಣದ ವಸ್ತುಗಳ ಬಳಕೆ ಮತ್ತು ಬಹುಮಹಡಿ ಕಟ್ಟಡ ನಿರ್ಮಾಣವನ್ನು ಕೈಬಿಡುವುದು.
  • ಅಂತರ್ಜಲಕ್ಕಾಗಿ ಬಾವಿಗಳ ಆಳಕೊರೆತವನ್ನು ನಿಷೇಧಿಸುವುದು.
  • ಭೂಕಂಪನ ತೀವ್ರತೆಯುಳ್ಳ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನಗರ ಬೆಳವಣಿಗೆಗೆ ನಿರ್ಬಂಧ.
  • ಬಹುದೊಡ್ಡ ಅಣೆಕಟ್ಟು ಮತ್ತು ಜಲಾಶಯಗಳ ನಿರ್ಮಾಣಕ್ಕೆ ನಿಷೇಧ.
  • ಅರಣ್ಯನಾಶ ಮತ್ತು ತೀವ್ರ ಸ್ವರೂಪದ ಗಣಿಗಾರಿಕಾ ಚಟುವಟಿಕೆಗಳನ್ನು ತಡೆಗಟ್ಟುವುದು.
  • ಭೂಕಂಪನಗಳು ಸಂಭವಿಸಿದ ನಂತರ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳೂ ಅಷ್ಟೇ ಮುಖ್ಯ.

FAQ :

ಪ್ರವಾಹ ನಿಯಂತ್ರಣ ಕ್ರಮಗಳಾವುವು?

ಜಲಾನಯನ ಪ್ರದೇಶದಲ್ಲಿ ಅರಣ್ಯ ಬೆಳೆಸುವುದು ಮತ್ತು ವೇಗವಾದ ನೀರಿನ ಹರಿವು ನಿಯಂತ್ರಣ. ಅಣೆಕಟ್ಟುಗಳನ್ನು ನಿರ್ಮಿಸಿ ಜಲಾಶಯಗಳಲ್ಲಿ ನೀರು ಸಂಗ್ರಹಿಸಿ ನದಿ ನೀರಿನ ಪ್ರಮಾಣವನ್ನು ಕಡಿಮೆಮಾಡುವುದು. ಸಂಗ್ರಹಿಸಿದ ನೀರನ್ನು ನೀರಾವರಿ ಮೊದಲಾದ ಉದ್ದೇಶಗಳಿಗಾಗಿ ಬಳಕೆ. ಜನವಸತಿಗಳ ಪ್ರದೇಶ ಮತ್ತು ಕೃಷಿ ಭೂಮಿಗಳನ್ನು ಪ್ರವಾಹದಿಂದ ರಕ್ಷಿಸಲು ಒಡ್ಡುಗಳ ನಿರ್ಮಾಣ. ಪ್ರವಾಹಗಳ ಬಗ್ಗೆ ಮುನ್ಸೂಚನೆ ಮತ್ತು ಸಕಾಲಿಕ ಮುನ್ನೆಚ್ಚರಿಕೆ ನೀಡುವುದು. ಇದು ಜನ, ಜಾನುವಾರುಗಳ ಸಾವು-ನೋವು ಮತ್ತು ಆಸ್ತಿಗಳಿಗಾಗುವ ನಷ್ಟವನ್ನು ತಡೆಯಲು ಅಗತ್ಯವಾದ ಸಕಾಲಿಕ ಕ್ರಮ.

ಭೂಕಂಪನದ ಮುನ್ನೆಚರಿಕಾ ಕ್ರಮಗಳಾವುವು?

ಭೂಕಂಪನಾವಲಯಗಳಲ್ಲಿ ಜನವಸತಿಗಳ ನಿರ್ಮಾಣ ನಿಷೇಧ.
ಭೂಕಂಪನ ನಿರೋಧಕ ಕಟ್ಟಡ ನಿರ್ಮಾಣವನ್ನು ಅನುಸರಿಸುವುದು.
ಉತ್ತಮ ದರ್ಜೆಯ ಕಟ್ಟಡ ನಿರ್ಮಾಣದ ವಸ್ತುಗಳ ಬಳಕೆ ಮತ್ತು ಬಹುಮಹಡಿ ಕಟ್ಟಡ ನಿರ್ಮಾಣವನ್ನು ಕೈಬಿಡುವುದು.
ಅಂತರ್ಜಲಕ್ಕಾಗಿ ಬಾವಿಗಳ ಆಳಕೊರೆತವನ್ನು ನಿಷೇಧಿಸುವುದು.
ಭೂಕಂಪನ ತೀವ್ರತೆಯುಳ್ಳ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನಗರ ಬೆಳವಣಿಗೆಗೆ ನಿರ್ಬಂಧ

ಇತರೆ ವಿಷಯಗಳು :

ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ಮಾಹಿತಿ

ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.