ಸೂಕ್ಮಾಣುಜೀವಿಗಳ ಬಗ್ಗೆ ಮಾಹಿತಿ Information about microorganisms Sukshmajivigala bagge Mahithi in Kannada
ಸೂಕ್ಮಾಣುಜೀವಿಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಸೂಕ್ಮಾಣುಜೀವಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಸೂಕ್ಮಾಣುಜೀವಿಗಳು :
- ಬರಿಗಣ್ಣಿಗೆ ಕಾಣಲಾರದ ಜೀವಿಗಳನ್ನು ಸೂಕ್ಷ್ಮಾಣು ಜೀವಿಗಳು ಎನ್ನುವರು.
- ಸೂಕ್ಷ್ಮಾಣುಗಳ ಕುರಿತು ಅಧ್ಯಯನ ಮಾಡುವ ಶಾಸ್ತ್ರವನ್ನು ಮೈಕ್ರೋಬಯೋಲಜಿ ಎನ್ನುವರು.
- ಸೂಕ್ಷ್ಮಾಣು ಜೀವಿಗಳ ಪಿತಾಮಹಾ – ಲೆವನ್ ಹುಕ್
- ಸೂಕ್ಷ್ಮಾಣುಜೀವಿಗಳ ಗಾತ್ರವನ್ನು ಅಳೆಯುವ ಮಾನ – ಮೈಕ್ರಾನ್
- ಒಂದು ಮೈಕ್ರಾನ್ ಎಂದರೆ – 1/1000 mm
- ಸೂಕ್ಷ್ಮಾಣುಜೀವಿಗಳನ್ನು ಗಾತ್ರ ಮತ್ತು ಆಕಾರಗಳ ಆಧಾರದ ಮೇಲೆ 5 ಗುಂಪುಗಳಾಗಿ ವಿಂಗಡಿಸಲಾಗಿದೆ.
- ವೈರಸ್
- ಬ್ಯಾಕ್ಟೀರಿಯಾ
- ಶಿಲೀಂಧ್ರ
- ಶೈವಲ
- ಆದಿ ಜೀವಿಗಳು
ವೈರಸ್ :
- ವೈರಸ್ ಪದವನ್ನು ಕೊಟ್ಟವರು – ಲೂಯಿಪಾಶ್ಚರ್
- ವೈರಸ್ ನ್ನು ಕಂಡುಹಿಡಿದವರು – ಡಿಮಿಟ್ರಿ ಐವಾನೊವಾಸ್ಕಿ
- ವೈರಾ ಎಂದರೆ – ವಿಷ
- ವೈರಸ್ ಗಳ ಕುರಿತು ಅಧ್ಯಯನ – ವೈರಾಲಜಿ
- ವೈರಸ್ ಗಳ ಗಾತ್ರ 0.015 ರಿಂದ 0.2 ಮೈಕ್ರಾನ್
- ಇವು ಸೂಕ್ಷ್ಮಾಣು ಜೀವಿಗಳಲ್ಲಿ ಚಿಕ್ಕದಾದ ಸೂಕ್ಷ್ಮಾಣು ಜೀವಿಗಳಾಗಿವೆ.
- ವೈರಸ್ ಗಳು ನ್ಯೂಕ್ಲಿಕ್ ಆಸಿಡ್ ಮತ್ತು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದೆ.
- ವೈರಸ್ ಗಳು ಜೀವಕೋಶವನ್ನು ಹೊಂದಿರುವುದಿಲ್ಲ.
- ಇವುಗಳಲ್ಲಿ ಅನುವಂಶೀಯ ವಸ್ತು DNA ಅಥವಾ RNA ಕಂಡುಬರುತ್ತದೆ.
- ಇವು ನಿರ್ಜೀವಿಯ ಕೊಂಡಿಯಾಗಿರುವುದರಿಂದ ಯಾವುದೇ ಸಾಮ್ರಾಜ್ಯಕ್ಕೆ ಸೇರಿಸಿಲ್ಲ.
- ಇವುಗಳನ್ನು ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಬಹುದು.
- ಇವು ಭಯಾನಕ ಮತ್ತು ಆಕ್ರಮಣಕಾರಿ ಜೀವಿಗಳಾಗಿದ್ದು ಮಾನವನಿಗೆ ಮತ್ತು ಅನೇಕ ಜೀವಿಗಳಿಗೆ ಹಾನಿಕಾರಕ ರೋಗಗಳನ್ನು ಉಂಟುಮಾಡುತ್ತವೆ.
ವೈರಸ್ ಗಳಲ್ಲಿ 3 ಪ್ರಕಾರಗಳು :
- ಸಸ್ಯ ವೈರಸ್
- ಬ್ಯಾಕ್ಟೀರಿಯೋಫೇಜ್
- ಪ್ರಾಣಿ ವೈರಸ್
ಸಸ್ಯ ವೈರಸ್ :
- ಸಸ್ಯಗಳಿಗೆ ರೋಗವನ್ನು ಉಂಟು ಮಾಡುವ ವೈರಸ್ಗಳಾಗಿವೆ. ಉದಾಹರಣೆಗೆ ಟೊಬ್ಯಾಕೋ ಮೊಸ್ಯಾಕೋ ವೈರಸ್, ಕಾಲಿಫ್ಲವರ್ ಮೊಸ್ಯಾಕೋ ವೈರಸ್.
- ಟೊಬ್ಯಾಕೋ ಮೊಸ್ಯಾಕೋ ವೈರಸ್ ಹೊಗೆಸೊಪ್ಪಿಗೆ ಬರುತ್ತದೆ.
ಬ್ಯಾಕ್ಟೀರಿಯಾಫೇಜ್ :
ಬ್ಯಾಕ್ಟೀರಿಯಾಗಳಿಗೆ ಸೋಂಕು ಉಂಡುಮಾಡುವ ವೈರಸ್ ಗಳಿಗೆ ಬ್ಯಾಕ್ಟೀರಿಯಾಫೇಜ್ ಎನ್ನುವರು.
ಪ್ರಾಣಿ ವೈರಸ್ :
ಪ್ರಾಣಿಗಳಿಗೆ ರೋಗ ಉಂಟುಮಾಡುವ ವೈರಸ್ ಗಳಾಗಿವೆ
ಬ್ಯಾಕ್ಟೀರಿಯಾ :
- ಇವು ಕೋಶ ಕೇಂದ್ರವನ್ನು ಹೊಂದಿರುತ್ತವೆ.
- ಇವುಗಳ ಗಾತ್ರ 0.2 ರಿಂದ 1.0 ಮೈಕ್ರಾನ್
- ಇವು ಕಶಾಂಗದ ಮೂಲಕ ಚಲಿಸುತ್ತವೆ.
- ವಿದಳನದ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.
- ಇವುಗಳ ಬೆಳವಣಿಗೆಗೆ 30 ರಿಂದ 35 ಡಿಗ್ರಿ ಉಷ್ಣಾಂಶ ಬೇಕು.
- ಬ್ಯಾಕ್ಟೀರಿಯಾ ಕಂಡುಹಿಡಿದವರು – ಲೆವನ್ ಹುಕ್
- ಬ್ಯಾಕ್ಟೀರಿಯಾ ಅಧ್ಯಯನ – ಬ್ಯಾಕ್ಟೀರಿಯಾಲಾಜಿ
- ಬ್ಯಾಕ್ಟೀರಿಯಾಗಳು ಮೊನೆರಾ ಸಾಮ್ರಾಜ್ಯಕ್ಕೆ ಸೇರಿವೆ.
- ಬ್ಯಾಕ್ಟೀರಿಯಾಗಳ ಪಿತಾಮಹಾ – ರಾಬರ್ಟ್ ಕೋಚ್
- ಇದರ ದೇಹವು ಕೋಶಭಿತ್ತಿ ಮತ್ತು ಕೋಶಪೊರೆ ಎಂಬ ಹೊದಿಕೆಯಿಂದ ಕೂಡಿದೆ.
- ಇವು ರೈಬೋಸೋಮಗಳನ್ನು ಹೊಂದಿರುತ್ತವೆ.
- ಇದರ ಕೋಶದ ಅನುವಂಶೀಯ ವಸ್ತು – ಡಿ.ಎನ್.ಎ
- ಬ್ಯಾಕ್ಟೀರಿಯಾಗಳು ಹಾಲು ಮೊಸರಾಗಲು ಟೀ ಎಲೆಯನ್ನು ಹದಗೊಳಿಸಲು, ವಿನೆಗರ್ ಉತ್ಪಾದಿಸಲು, ಚರ್ಮ ಹದಗೊಳಿಸಲು, ಜೀವಸತ್ವಗಳನ್ನು ಉತ್ಪಾದಿಸಲು ಬೇಕಾಗುತ್ತವೆ.
- ಉಪಯುಕ್ತ ಬ್ಯಾಕ್ಟೀರಿಯಾಗಳನ್ನು – ಲ್ಯಾಕ್ಟೋಬ್ಯಾಸಿಲಸ್, ಎಶ್ಚರಿಯಾ ಕೊಲೈ, ರೈಜೋಬಿಯಮ್.
- ಇವು ಕೊಳೆಯುತ್ತಿರುವ ವಸ್ತುಗಳನ್ನು ಬೇರ್ಪಡಿಸುತ್ತವೆ.
- ಇವು ಸತ್ತ ಮತ್ತು ಕೊಳೆಯುತ್ತಿರುವ ವಸ್ತುಗಳಿಂದ ಆಹಾರವನ್ನು ಪಡೆಯುತ್ತವೆ, ಆದ್ದರಿಂದ ಇವುಗಳನ್ನು ಕೊಳೆತಿನಿಗಳು ಎನ್ನುವರು.
ವಿವಿಧ ಆಕಾರದ ಬ್ಯಾಕ್ಟೀರಿಯಾಗಳು :
- ಬ್ಯಾಸಿಲಸ್ – ದಂಡಾಕಾರದಲ್ಲಿದೆ
- ವಿಬ್ರಿಯೋ – ಅರ್ಧಚಂದ್ರಾಕೃತಿಯಲ್ಲಿದೆ.
- ಸ್ಪಿರುಲೈ – ಸುರುಳಿಯಾಕಾರದಲ್ಲಿದೆ
- ಕಾಕೈ – ದುಂಡಾಕಾರದಲ್ಲಿದೆ
ಶಿಲೀಂದ್ರಗಳು :
- ಇವು ಮೈಕೋಟಾ ಸಾಮ್ರಾಜ್ಯಕ್ಕೆ ಸೇರುತ್ತವೆ.
- ಇವು ಯೂಕ್ಯಾರಿಯೋಟ್ಸ್ ಜೀವಕೋಶವನ್ನು ಹೊಂದಿವೆ.
- ಶಿಲೀಂಧ್ರ ರೋಗಗಳಿಗೆ ಮೈಕ್ರೋಸಿಸ್ ಎನ್ನುವರು.
- ಶಿಲೀಂಧ್ರಗಳ ಗಾತ್ರ 2 ರಿಂದ 10 ಮೈಕ್ರಾನ್
- ಶಿಲೀಂಧ್ರಗಳಲ್ಲಿ ಪತ್ರಹರಿತ್ತು ಇರುವುದಿಲ್ಲ.
- ಶಿಲೀಂಧ್ರಗಳಲ್ಲಿ 3 ಪ್ರಕಾರ ಅವು ಯೀಸ್ಟ್, ಬೂಸ್ಟ್, ಅಣಬೆ
- ಯೀಸ್ಟ್ ಒಂದು ಏಕಕೋಶೀಯ ಜೀವಿಯಾಗಿದೆ.
- ಯೀಸ್ಟ್ ಆಮ್ಲಜನಕ ಸಹಿತ ಮತ್ತು ಆಮ್ಲಜನಿಕ ರಹಿತ ಉಸಿರಾಟ ಮಾಡುತ್ತದೆ.
- ಬೂಸ್ಟ್ ಮತ್ತು ಅಣಬೆ ಬಹುಕೋಶೀಯ ಶಿಲೀಂಧ್ರಗಳಾಗಿವೆ.
- ಪೆನ್ಸಿಲಿನ್ ನೊಟೇಟಂ ಶಿಲೀಂಂಧ್ರದಿಂದ ಔಷಧವನ್ನು ತಯಾರಿಸುತ್ತಾರೆ.
ಶಿಲೀಂಧ್ರಗಳಿಂದ ಮಾನವನಿಗೆ ಬರುವ ರೋಗಗಳು :
- ಅಥ್ಲೆಟಿಕ್
- ರಿಂಗ್ ವರ್ಮ್
- ಡೋಬಿಈಚ್
ಶೈವಲಗಳು :
- ಇವು ಪತ್ರಹರಿತ್ತನ್ನು ಒಳಗೊಂಡು ಹಸಿರಾಗಿರುತ್ತವೆ.
- ಇವುಗಳ ಗಾತ್ರ 1.0 ಮೈಕ್ರಾನ್ ನಿಂದ ಹಲವು ಮೀಟರ್ ಉದ್ದ ಹೊಂದಿರುತ್ತದೆ.
- ಕಂದು ಶೈವಲಗಳಲ್ಲಿ ಕ್ಸಾಂಥೋಲಿನ್ ವರ್ಣಕವಿರುತ್ತದೆ.
- ಹಸಿರು ಶೈವಲಗಳಲ್ಲಿ ಕ್ಲೋರೋಫಿಲ್ ವರ್ಣಕವಿರುತ್ತದೆ.
- ಅಜೋಲಾ ಎಂಬ ಶೈವಲವನ್ನು ದನಕರುಗಳ ಆಹಾರದಲ್ಲಿ ಬಳಸುತ್ತಾರೆ.
- ಶೈವಲಗಳನ್ನು ವಾಣಿಜ್ಯೋತ್ಪನ್ನಗಳಲ್ಲಿ ಉಪಯೋಗಿಸುತ್ತಾರೆ.
- ನೀಲಿ ಹಸಿರು ಶೈವಲಗಳನ್ನು ಸಾರಜನಕ ಸ್ಥಿರೀಕರಣದಲ್ಲಿ ಬಳಸುತ್ತಾರೆ.
- ಇವು ಜಲಚರ ಪ್ರಾಣಿಗಳಿಗೆ ಆಹಾರವನ್ನು ಒದಗಿಸುತ್ತವೆ.
ಆದಿ ಜೀವಿಗಳು/ ಏಕಕೋಶೀಯ ಜೀವಿಗಳು :
- ಇವುಗಳ ದೇಹದಲ್ಲಿರುವ ಒಂದೇ ಕೋಶವು ಎಲ್ಲಾ ಜೈವಿಕ ಚಟುವಟಿಕೆಗಳನ್ನು ನಡೆಸುತ್ತದೆ.
- ಏಕಕೋಶ ಜೀವಿಗಳು, ಮಿಥ್ಯಪಾದ, ಲೋಮಾಂಗ ಕಶಾಂಗಗಳಿಂದ ಚಲಿಸುತ್ತವೆ.
FAQ :
ಸೂಕ್ಮಾಣುಜೀವಿಗಳು ಎಂದರೇನು?
ಬರಿಗಣ್ಣಿಗೆ ಕಾಣಲಾರದ ಜೀವಿಗಳನ್ನು ಸೂಕ್ಷ್ಮಾಣು ಜೀವಿಗಳು ಎನ್ನುವರು.
ಶಿಲೀಂಧ್ರಗಳಿಂದ ಮಾನವನಿಗೆ ಬರುವ ರೋಗಗಳನ್ನು ತಿಳಿಸಿ?
ಅಥ್ಲೆಟಿಕ್
ರಿಂಗ್ ವರ್ಮ್
ಡೋಬಿಈಚ್
ಇತರೆ ವಿಷಯಗಳು :
ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ