ಪ್ರಪಂಚದ ಪ್ರಮುಖ ಖಂಡಗಳ ಬಗ್ಗೆ ಮಾಹಿತಿ Information about major continents of the world Prapanchada Pramuka Kandagala bagge Mahithi in Kannada
ಪ್ರಪಂಚದ ಪ್ರಮುಖ ಖಂಡಗಳ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಪ್ರಪಂಚದ ಪ್ರಮುಖ ಖಂಡಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಏಷ್ಯಾ ಖಂಡ :
- ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.
- ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ.
- ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ
- ಪ್ರಪಂಚದ ಆಳವಾದ ಸರೋವರವಾದ ಬೈಕಲ್ ಸರೋವರವಿದೆ.
- ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ
- ಗೋಬಿ ಮರುಬೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ.
- ಏಷ್ಯಾ ಅತಿ ದೊಡ್ಡ ನದಿ – ಯಾಂಗ್ ಟ್ಜೆ
- ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು
- ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.
- ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್ ಆಣೆಕಟ್ಟು
- ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರ
- ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ.
- ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್ ಎವರೆಸ್ಟ್
- ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ
- ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು.
- ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ್
ಆಫ್ರಿಕಾ ಖಂಡ :
- ಪ್ರಪಂಚದ ಎರಡನೇ ಅತಿ ದೊಡ್ಡ ಖಂಡವಾಗಿದೆ.
- ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 2ನೇ ಖಂಡ – ಆಫ್ರಿಕಾ
- ಆಫ್ರಿಕಾ ಖಂಡವನ್ನು ಕೇಂದ್ರೀಯ ಖಂಡವೆಂದು ಕರೆಯುತ್ತಾರೆ.
- ಇಲ್ಲಿ ಅಟ್ಲಾಸ್ ಪರ್ವತಗಳು ಕಂಡುಬರುತ್ತವೆ.
- ಇದನ್ನು ಕಗ್ಗತ್ತಲ ಖಂಡ ಎಂದು ಕರೆಯುತ್ತೇವೆ.
- ಪ್ರಪಂಚದ ಅತಿ ಉದ್ದವಾದ ನೈಲ್ ನದಿ ಈ ಖಂಡದಲ್ಲಿದೆ.
- ನೈಲ್ ನದಿಗೆ ಈಜಿಪ್ಟ್ ನಲ್ಲಿ Aswan Dam ಅನ್ನು ಕಟ್ಟಲಾಗಿದೆ.
- ಇಲ್ಲಿ ಪ್ರಪಂಚದ ಅತಿ ದೊಡ್ಡ ಸಹರಾ ಮರುಭೂಮಿ ಈ ಖಂಡದಲ್ಲಿದೆ.
- ಪ್ರಪಂಚದಲ್ಲಿ ಅತಿ ಹೆಚ್ಚು ಏಡ್ಸ್ ರೋಗಿಗಳು ಇರುವ ದೇಶ ಇದಾಗಿದೆ.
- ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಆಫ್ರಿಕಾದ ಆನೆ
- ಇಲ್ಲಿನ ವಿಕ್ಟೋರಿಯಾ ಜಲಪಾತವು 1989 ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿದೆ.
- ದಕ್ಷಿಣಾ ಆಫ್ರಿಕಾದ ಜೋಹಾನ್ಸ್ ಬರ್ಗ್ ಎಂಬ ಪ್ರದೇಶವು ಚಿನ್ನಕ್ಕೆ ಹೆಸರುವಾಸಿಯಾಗಿದೆ.
- ಪ್ರಪಂಚದ 2ನೇ ಆಳವಾದ ಸರೋವರ – ಟಾಂಗನಿಕ ಸರೋವರ.
- ಕನ್ನಡಿಯ ಪ್ರತಿಬಿಂಬದಂತೆ ಕಾಣುವ ಖಂಡ – ಆಫ್ರಿಕಾ
ಉತ್ತರ ಅಮೇರಿಕಾ ಖಂಡ :
- ಈ ಖಂಡದಲ್ಲಿ ಒಟ್ಟು 23 ದೇಶಗಳಿವೆ.
- ಉತ್ತರ ಅಮೇರಿಕಾ ಖಂಡದ ಅತೀ ಎತ್ತರದ ಶಿಖರ – ಮೌಂಟ್ ಮ್ಯಾಕ್ ಕಿನ್ಲೆ.
- ಈ ಖಂಡದ ಅತಿ ಉದ್ದವಾದ ಪರ್ವತ – ರಾಖಿ ಪರ್ವತ
- ಉತ್ತರ ಅಮೇರಿಕಾ ಖಂಡದ ಅತ್ಯಂತ ದೊಡ್ಡ ನದಿ – ಮೀಸಿಸಿಪ್ಪಿ
- ಬೇರಿಂಗ್ ಜಲಸಂಧಿಯು ಉತ್ತರ ಅಮೇರಿಕಾ ಮತ್ತು ಏಷ್ಯಾ ಖಂಡವನ್ನು ಪ್ರತ್ಯೇಕಿಸುತ್ತದೆ.
- ಬೇರಿಂಗ್ ಜಲಸಂಧಿಯ ಮೇಲೆ ಅಂತರಾಷ್ಟ್ರೀಯ ದಿನ ರೇಖೆ ಹಾದುಹೋಗುತ್ತದೆ.
- ಪ್ರಪಂಚದ ಅತಿ ದೊಡ್ಡ ದ್ವೀಪ ಗ್ರೀನ್ ಲ್ಯಾಂಡ್ ಈ ಖಂಡದಲ್ಲಿದೆ.
- ಪ್ರಪಂಚದ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ – ಯಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನ
- ನಯಾಗಾರ್ ಜಲಪಾತವು ಅಮೇರಿಕಾ ಮತ್ತು ಕೆನಡಾ ದೇಶದಲ್ಲಿದೆ.
- ಉತ್ತರ ಅಮೇರಿಕಾವನ್ನು ಪೈರಿಸ್ ಗಳ ನಾಡು ಎಂದು ಕರೆಯುತ್ತಾರೆ.
- ಉತ್ತರ ಅಮೇರಿಕಾದಲ್ಲಿ ರೆಡ್ ಇಂಡಿಯನ್ನರು ಕಾಣಿಸುತ್ತಾರೆ.
ದಕ್ಷಿಣ ಅಮೇರಿಕಾ ಖಂಡ :
- ದಕ್ಷಿಣ ಖಂಡದಲ್ಲಿ ಒಟ್ಟು 12 ದೇಶಗಳಿವೆ.
- ಪ್ರಪಂಚದ ಅತಿ ಎತ್ತರವಾದ ಜಲಪಾತ – ಏಂಜಲ್ ಜಲಪಾತ
- ಏಂಜಲ್ ಜಲಪಾತವು ವೆನಿಜುವೆಲಾ ದೇಶದಲ್ಲಿದೆ.
- ಏಂಜಲ್ ಜಲಪಾತವು ಒರಿನಿಕೋ ನದಿಯ ಉಪನದಿ – ಚೂರಾನ್ ನದಿಗೆ ಸೃಷ್ಟಿಸಲಾಗಿದೆ.
- ಇಲ್ಲಿ ಪ್ರಪಂಚದ ಅತಿ ಎತ್ತರದ ಸರೋವರ ಟಿಟಿಕಾಕಾ ಸರೋವರ ಇದೆ.
- ಪ್ರಪಂಚದ ಅತಿ ಉದ್ದವಾದ ಪರ್ವತಗಳು ಯಾಂಡೀಸ್ ಪರ್ವತಗಳು ಇವೆ.
- ಪ್ರಪಂಚದ ಅತಿ ದೊಡ್ಡ ನದಿ ಅಮೇಜಾನ್ ನದಿ ಇದೆ.
- ಪನಾಮ ಕಾಲುವೆಯು ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾ ದೇಶಗಳನ್ನು ಪ್ರತ್ಯೇಕಿಸುತ್ತದೆ.
- ಇದನ್ನು ಪಕ್ಷಿಗಳ ಖಂಡ ಎನ್ನಲಾಗುತ್ತದೆ.
- ಇಲ್ಲಿ ಅಮೇಜಾನ್ ಕಾಡು ಕಂಡುಬರುತ್ತದೆ.
- ಗಾಲಪಾಗೋಸ್ ರಾಷ್ಟ್ರೀಯ ಉದ್ಯಾನವನವು ಇಕ್ವೇಡಾರ್ ದೇಶದಲ್ಲಿದೆ.
ಅಂಟಾರ್ಟಿಕಾ ಖಂಡ :
- ಅಂಟಾರ್ಟಿಕಾ ಖಂಡವನ್ನು ವಿಜ್ಞಾನಿಗಳ ಖಂಡ, ಸಂಶೋಧನಾ ಖಂಡ, ಬಿಳಿ ಖಂಡ, ಶ್ವೇತ ಖಂಡ ಎಂದು ಕರೆಯುತ್ತಾರೆ.
- ಅಂಟಾರ್ಟಿಕಾ ಖಂಡವು ಜನವಸತಿಯನ್ನು ಹೊಂದಿಲ್ಲ.
- ಈ ಖಂಡದಲ್ಲಿರುವ ಅತಿ ಎತ್ತರವಾದ ಪರ್ವತ ಏನ್ಸನ್ ಮ್ಯಾಸಿಫ್.
- ಈ ಖಂಡವನ್ನು ಜೇಮ್ಸ್ ಕುಕ್ ಎಂಬ ವ್ಯಕ್ತಿ ಸಂಶೋಧಿಸಿದನು.
- ಅಂಟಾರ್ಟಿಕಾ ಖಂಡದಲ್ಲಿರುವ ಪ್ರಿಯದರ್ಶಿನಿ ಸರೋವರ ಭಾರತಕ್ಕೆ ಸಂಬಂಧಿಸಿದೆ.
- ಈ ಖಂಡವು ಶೇ. 98 ರಷ್ಟು ಭಾಗ ಹಿಮಾಮೃತವಾಗಿದೆ.
- ಅಂಟಾರ್ಟಿಕಾ ಖಂಡದಲ್ಲಿರುವ ಜ್ವಾಲಾಮುಖಿ ಪರ್ವತ – ಮೌಂಟ್ ಎರೆಬಸ್
- ಮೌಂಟ್ ಎರೆಬಸ್ ಜ್ವಾಲಾಮುಖಿ ಪರ್ವತವು ಇರುವ ದ್ವೀಪ – ರಾಸ್ ದ್ವೀಪ
- ದಕ್ಷಿಣ ಧ್ರುವ ತಲುಪಿದ ಮೊದಲ ವ್ಯಕ್ತಿ – ಅಮುಂಡ್ ಸೇನ್
- ವೋಸ್ಟಾಕ್ ಪ್ರದೇಶವು ಅಂಟಾರ್ಟಿಕಾ ಖಂಡದಲ್ಲಿದೆ.
ಯುರೋಪ್ ಖಂಡ :
- ಯುರೋಪ್ ಖಂಡದಲ್ಲಿ ಒಟ್ಟು 50 ದೇಶಗಳಿವೆ.
- ಈ ಖಂಡದ ಅತಿ ದೊಡ್ಡ ನದಿ ವೋಲ್ಗಾ
- ಯುರೋಪ್ ಖಂಡದ ಅತಿ ದೊಡ್ಡ ಸಿಹಿ ನೀರಿನ ಸರೋವರ – ಲದೋಗ ಸರೋವರ
- ಸಹಸ್ರ ಸರೋವರಗಳ ನಾಡು – ಫಿನ್ ಲ್ಯಾಂಡ್
- ವಾಟರ್ಲೂ ಎಂಬ ಯುದ್ದಭೂಮಿ ನೆದರ್ ಲ್ಯಾಂಡ್ ದೇಶದಲ್ಲಿದೆ.
- ದಕ್ಷಿಣ ಜರ್ಮನಿ ದೇಶದಲ್ಲಿ ಬ್ಲಾಕ್ ಫಾರೆಸ್ಟ್ ಎಂಬ ಪರ್ವತ ಇದೆ.
- ಯುರೋಪಿನ ಯುದ್ದ ಭೂಮಿ – ಬೆಲ್ಜಿಯಂ
- ಪ್ರಥಮ ಮಹಾಯುದ್ದದ ನಂತರ ಯುರೋಪ್ ಖಂಡವು ರಾಷ್ಟ್ರೀಯತೆ ಎಂಬ ಆಕ್ರಮಣಕಾರಿ ನೀತಿಯನ್ನು ಬಳಸಿತು.
- ಈ ಖಂಡದಲ್ಲಿ ವ್ಯಾಟಿಕನ್ ಸಿಟಿ
- ಪ್ರಪಂಚದ 2ನೇ ಅತಿ ಚಿಕ್ಕ ಖಂಡ – ಯುರೋಪ್ ಖಂಡ
ಆಸ್ಟ್ರೇಲಿಯಾ ಖಂಡ :
- ಪ್ರಪಂಚದ ಅತಿ ಚಿಕ್ಕ ಖಂಡ – ಆಸ್ಟ್ರೇಲಿಯಾ ಖಂಡ
- ಆಸ್ಟ್ರೇಲಿಯಾ ಖಂಡವನ್ನು ಕಂಡು ಹಿಡಿದವರು – ಜೇಮ್ಸ್ ಕುಕ್
- ಆಸ್ಟ್ರೇಲಿಯಾ ರಾಷ್ಟ್ರೀಯ ಪ್ರಾಣಿ – ಕಾಂಗರೂ
- ಈ ಖಂಡವನ್ನು ಮರುಭೂಮಿಗಳ ಖಂಡ ಎನ್ನುವರು.
- ಈ ಖಂಡವನ್ನು ಸಮತಟ್ಟಾದ ಖಂಡ ಎನ್ನುವರು.
- ಈ ದೇಶದಲ್ಲಿ ಆರ್ಟಿಸಿಯನ್ ಬಾವಿಗಳು ಕಂಡುಬರುತ್ತದೆ.
- ಪ್ರಪಂಚದಲ್ಲಿ ಅತಿ ಹೆಚ್ಚು ಕುರಿಗಳನ್ನು ಹೊಂದಿದೆ.
- ಪ್ರಪಂಚದಲ್ಲಿ ಅತಿ ಹೆಚ್ಚು ಉಣ್ಣೆ ಉತ್ಪಾದಿಸುವ ದೇಶ ಇದಾಗಿದೆ.
- ಇಲ್ಲಿ ಆಯಾರ್ಸ್ ಶಿಲೆಗಳು ಕಂಡು ಬರುತ್ತವೆ.
- ಈ ದೇಶವನ್ನು ಪಶುಪಾಲನ ದೇಶ ಎಂದು ಕರೆಯುತ್ತಾರೆ.
- ಈ ದೇಶವನ್ನು ಅಪರೂಪದ ಪ್ರಾಣಿ ಪಕ್ಷಿಗಳ ನಾಡು ಎಂದು ಕರೆಯುತ್ತಾರೆ.
- ಈ ದೇಶವಿ ಅತಿ ಹೆಚ್ಚು ಯುರೇನಿಯಂ ನಿಕ್ಷೇಪಗಳನ್ನು ಹೊಂದಿದೆ.
FAQ :
ಪ್ರಪಂಚದಲ್ಲಿ ಅತಿ ದೊಡ್ಡ ಖಂಡ ಯಾವುದು?
ಏಷ್ಯಾ
ಪ್ರಪಂಚದಲ್ಲಿ ಅತಿ ಚಿಕ್ಕ ಖಂಡ ಯಾವುದು?
ಆಸ್ಟ್ರೇಲಿಯಾ
ಇತರೆ ವಿಷಯಗಳು :
ಕರ್ನಾಟಕದ ಕೈಗಾರಿಕೆಗಳ ಬಗ್ಗೆ ಮಾಹಿತಿ
ರಾಷ್ಟ್ರೀಯ ಚಿಹ್ನೆಗಳ ಬಗ್ಗೆ ಮಾಹಿತಿ