ಭಾರತದ ಸಂವಿಧಾನ ರಚನೆ ಬಗ್ಗೆ ಮಾಹಿತಿ Information about Constitution of India Bharathada Samvidhana Rachane bagge Mahithi in Kannada
ಭಾರತದ ಸಂವಿಧಾನ ರಚನೆ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಭಾರತದ ಸಂವಿಧಾನ ರಚನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಭಾರತದ ಸಂವಿಧಾನ ರಚನೆ :
ನಮ್ಮ ದೇಶವು ಸ್ವಾತಂತ್ರ್ಯ ನಂತರ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಈ ಸಮಯದಲ್ಲಿ ಪಾಕಿಸ್ತಾನದಿಂದ ವಲಸೆ ಬಂದ ನಿರಾಶ್ರಿತರಿಗೆ ಪುನರ್ ವಸತಿ ಕಲ್ಪಿಸುವುದು, ಸಂಸ್ಥಾನಗಳ ವಿಲೀನಕರಣ, ಕಾನೂನು ಸುವ್ಯವಸ್ಥೆಗೊಳಿಸುವುದು ಮುಂತಾದ ಸವಾಲುದಳಿದ್ದವು. ಸಂಸ್ಥಾನಗಳ ವಿಲೀನಿಕರಣವನ್ನು ಸರ್ದಾರ್ ವಲ್ಲಭಬಾಯಿ ಪಟೇಲರು ಯಶಸ್ವಿಯಾಗಿ ಸಾಧಿಸಿದರು. ದೇಶದ ವ್ಯವಸ್ಥಿತ ಆಡಳಿತ ನಿರ್ವಹಣೆಗಾಗಿ ಕಾನೂನಿನ ಅವಶ್ಯಕತೆ ಮತ್ತು ಸಂವಿಧಾನದ ರಚನೆಯಂತಹ ಸವಾಲನ್ನು ಕೂಡ ಸಮರ್ಪಕವಾಗಿ ನಿರ್ವಹಿಸಲಾಯಿತು.
ಭಾರತ ಸಂವಿಧಾನದ ರಚನಾ ಸಭೆ :
ಒಂದು ರಾಷ್ಟ್ರದ ಮೂಲಭೂತ ಕಾನೂನನ್ನು ಸಂವಿಧಾನವೆಂದು ಕರೆಯಲಾಗುತ್ತದೆ. ಸಂವಿಧಾನವು ಆಡಳಿತ ವ್ಯವಸ್ಥೆಗೆ ಚೌಕಟ್ಟನ್ನು ಒದಗಿಸುತ್ತದೆ. ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಮೋತಿಲಾಲ್ ನೆಹರೂ ಸಮಿತಿಯ ಶಿಫಾರಸ್ಸು ಮತ್ತು 1931 ರ ರಾಷ್ಟ್ರೀಯ ಕಾಂಗ್ರೇಸ್ ನ ಕರಾಚಿ ಅಧಿವೇಶನದ ನಿರ್ಣಯಗಳು ಪ್ರೇರಕವಾದವು. ಸಂವಿಧಾನ ರಚನೆ ಮಾಡಲು ಕ್ಯಾಬಿನೆಟ್ ಆಯೋಗದ ಶಿಫಾರಸ್ಸಿನ ಅನ್ವಯ 1946 ರಲ್ಲಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಲಾಯಿತು. ಈ ಸಭೆಯು 389 ಸದಸ್ಯರನ್ನು ಒಳಗೊಂಡಿತ್ತು. ಭಾರತವು ಇಬ್ಭಾಗವಾಗಿ ಸ್ವಾತಂತ್ರ್ಯಗೊಂಡ ನಂತರ 299 ಸದಸ್ಯರನ್ನು ಒಳಗೊಂಡಿತ್ತು. ಮೈಸೂರು ಸಂಸ್ಥಾನದಿಂದ 7 ಜನ ಸದಸ್ಯರು ನಾಮಕರಣಗೊಂಡಿದ್ದರು.
ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ ಡಿಸೆಬಂರ್ 9, 1946 ರಂದು ನಡೆಯಿತು. ಅದೊಂದು ಐತಿಹಾಸಿಕ ಘಟನೆ. ಸಚ್ಚಿದಾನಂದ ಸಿನ್ಹಾ ಹಂಗಾಮಿ ಅಧ್ಯಕ್ಷರಾಗಿದ್ದರು. ಡಿಸೆಂಬರ್ 11, 1949 ರಂದು ಡಾ. ರಾಜೇಂದ್ರಪ್ರಸಾದ್ ರವರನ್ನು ಖಾಯಂ ಅಧ್ಯಕ್ಷರನ್ನಾಗಿಯೂ ಮತ್ತು ಟಿ.ಟಿ. ಕೃಷ್ಣಮಾಚಾರಿಯವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಂವಿದಾನ ರಚನೆಯಲ್ಲಿ ಅನೇಕರು ಕಾರ್ಯವನ್ನು ನಿರ್ವಹಿಸಿದರು. ಅವರಲ್ಲಿ ಜವಹಾರ್ ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ.ಬಿ.ಆರ್. ಅಂಬೇಡ್ಕರ್, ಮೌಲಾನ್ ಅಬ್ದುಲ್ ಕಲಂ ಅಜಾದ್, ಸಿ. ರಾಜಗೋಪಾಲಚಾರಿ, ಕೆ.ಎಂ. ಮುನ್ಷಿ, ಶ್ರೀಮತಿ ಸರೋಜಿನಿ ನಾಯ್ಡು, ಶ್ರೀಮತಿ ಸುಚೇತ ಕೃಪಲಾನಿ, ಕರ್ನಾಟಕದ ಎಸ್. ನಿಜಲಿಂಗಪ್ಪ, ಕೆ.ಸಿ.ರೆಡ್ಡಿ, ಕೆಂಹಲ್ ಹನುಮಂತಯ್ಯ ಮೊದಲಾದವರು ಪ್ರಮುಖರಾಗಿದ್ದರು.
ಕರಡು ಸಮಿತಿ ರಚನೆ :
ಸಂವಿಧಾನ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಲನ್ನಯ ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು, 5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರಡು ಸಮಿತಿ. ಡಾ.ಬಿ.ಆರ್. ಅಂಬೇಡ್ಕರ್ ರವರು ಇದರ ಅಧ್ಯಕ್ಷರಾಗಿದ್ದರು. ಇವರು ಸಂವಿದಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು “ಸಂವಿದಾನ ಶಿಲ್ಪಿ” ಎಂದು ಕರೆಯಲಾಗುತ್ತದೆ. ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್.ಮುನ್ಷಿ, ಟಿ.ಟಿ.ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ. ಮಾಧವರಾವ್ ಅವರು ಸದಸ್ಯರಾಗಿದ್ದರು.
ಸಂವಿಧಾನ ರಚನೆ :
ಸಂವಿಧಾನ ರಚನಾ ಸಭೆಯು ರಚನಾ ಕಾರ್ಯವನ್ನು ಮುಗಿಸಲು 2 ವರ್ಷ, 11 ತಿಂಗಳು, 18 ದಿನಗಳನ್ನು ತೆಗೆದುಕೊಂಡಿತು. ರಚನಾ ಸಭೆಯಲ್ಲಿ ಇದ್ದ ಸಮಿತಿಗಳು ನಿರಂತರವಾಗಿ ಕೆಲಸ ನಿರ್ವಹಿಸಿ ಅನೇಕ ಸದಸ್ಯರುಗಳು ಮಂಡಿಸಿದ ತಿದ್ದುಪಡಿಗಳ ಮೇಲೆ ಚರ್ಚೆ ನಡೆಸಲಾಯಿತು. ನಂತರ ಕರಡು ಸಂವಿಧಾನವನ್ನು ರಚಿಸಲಾಯಿತು. ಬ್ರಿಟೀಷ್ ಸರ್ಕಾರ ಹೊರಡಿಸಿದ 1909,1919 ಮತ್ತು 1935ರ ಕಾಯಿದೆ, ಬ್ರಿಟನ್ನಿನ ಸಂಸದೀಯ ವ್ಯವಸ್ಥೆ, ಅಮೇರಿಕಾದ ಬಿಲ್ ಆಫ್ ರೈಟ್ಸ್, ಐರ್ಲೆಂಡಿನ ಸಾಮಾಜಿಕ ನಿರ್ದೇಶಕ ತತ್ವಗಳು ಮುಂತಾದವುಗಳನ್ನು ಅಲವಡಿಸಿಕೊಳ್ಳಲು ನಿರ್ಣಯಿಸಲಾಯಿತು. ಅಂತಿಮವಾಗಿ ನವೆಂಬರ್ 26, 1949 ರಂದುಅಂಗೀಕರಿಸಲ್ಪಟ್ಟು ಜನವರಿ 26, 1950 ರಂದು ಜಾರಿಗೆ ಬಂದಿತು. ಈ ದಿನವನ್ನೇ ಗಣರಾಜ್ಯ ದಿನವಾಗಿ ಆಚರಿಸುತ್ತೇವೆ.
FAQ :
ಭಾರತದ ಸಂವಿಧಾನ ಯಾವಾಗ ಅಂಗೀಕಾರವಾಯಿತು?
ನವೆಂಬರ್ 26, 1949
ಭಾರತದ ಸಂವಿಧಾನ ಯಾವಾಗ ಜಾರಿಗೆ ಬಂತು?
ಜನವರಿ 26, 1950
ಇತರೆ ವಿಷಯಗಳು :
ಸ್ಕೌಟ್ಸ್ – ಗೈಡ್ಸ್ ಚಳುವಳಿ ಬಗ್ಗೆ ಮಾಹಿತಿ