ಮಾನವ ಹಕ್ಕುಗಳ ಬಗ್ಗೆ ಮಾಹಿತಿ | Information about human rights in Kannada

Join Telegram Group Join Now
WhatsApp Group Join Now

ಮಾನವ ಹಕ್ಕುಗಳ ಬಗ್ಗೆ ಮಾಹಿತಿ Information about human rights Manava Hakkugala bagge Mahithi in Kannada

ಮಾನವ ಹಕ್ಕುಗಳ ಬಗ್ಗೆ ಮಾಹಿತಿ

ಮಾನವ ಹಕ್ಕುಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಮಾನವ ಹಕ್ಕುಗಳ ಬಗ್ಗೆ ಮಾಹಿತಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಮಾನವ ಹಕ್ಕುಗಳ ಅರ್ಥ ಮತ್ತು ಪ್ರಾಮುಖ್ಯತೆ :

ಮಾನವ ಗೌರವಯುತ ಜೀವನ ನಡೆಸಲು ಹಾಗೂ ತನ್ನ ವ್ಯಕ್ತಿತ್ವ ವಿಕಾಸಗೊಳಿಸಿಕೊಳ್ಳಲು ಸಹಾಯಕವಾಗುವಂತಹ ಅವಕಾಶಗಳೇ ಮಾನವ ಹಕ್ಕುಗಳು. ಎಲ್ಲ ಮಾನವರು ಸ್ವತಂತ್ರವಾಗಿ ಬದುಕುವ, ಸಮಾನತೆಯ ಜೀವನ ನಡೆಸುವ, ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಾಗೂ ಗೌರವದಿಂದ ಬದುಕಲು ಅನುಕೂಲವಾಗುವಂತಹ ಅವಕಾಶಗಳೇ ಮಾನವ ಹಕ್ಕುಗಳು.

ಜಗತ್ತಿನಲ್ಲಿ ಪ್ರಜಾಪ್ರಭುತ್ವ ಸರ್ಕಾರಗಳು ಜಾರಿಗೆ ಬಂದ ಮೇಲೆ ಮಾನವ ಹಕ್ಕುಗಳಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯಿತು. ಹಲವು ರಾಷ್ಟ್ರಗಳು ತಮ್ಮ ಸಂವಿಧಾನಗಳಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸಲು ಮೂಲಭೂತ ಹಕ್ಕುಗಳನ್ನು ಅಳವಡಿಸಿಕೊಂಡವು. ಈ ಬೆಳವಣಿಗೆಯಿಂದ ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ಅನುಭವಿಸುವ ಅವಕಾಶ ದೊರೆಯಿತು. ನಂತರದಲ್ಲಿ ನಡೆದ ಎರಡು ಮಾಹಾಯುದ್ದಗಳು ಹಾಗೂ ಸಾಮಾಜಿಕ ರಾಜಕೀಯ ಹಾಗೂ ಅರ್ಥಿಕ ಕಾರಣಗಳಿಂದಾಗಿ ಮಾನವರ ಶೋಷಣೆ ಹೆಚ್ಚಾಯಿತು. ಹಾಗಾಗಿ ಪ್ರಜೆಗಳನ್ನು ಗೌರವಯುತವಾಗಿ ನಡೆಸುಕೊಳ್ಳಲು ಸರಿಯಾದ ಮಾನದಂಡ ರೂಪಿಸಲು ರಾಷ್ಟ್ರಗಳು ಬಯಸಿದವು. ಇದರ ಫಲವಾಗಿ ಅಂತರಾಷ್ಟ್ರೀಯ ತಜ್ಞರುಗಳಿಂದ ರಚಿಸಲ್ಪಟ್ಟ ಮಾನವ ಹಕ್ಕುಗಳನ್ನು ಡಿಸೆಂಬರ್ 10, 1948 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿತು. ಹಾಗಾಗಿ ಪ್ರತಿ ವರ್ಷ ಡಿಸೆಂಬರ್‌ 10 ರಂದು “ವಿಶ್ವ ಮಾನವ ಹಕ್ಕುಗಳ ದಿನ” ವೆಂದು ಆಚರಿಸಲಾಗುತ್ತದೆ.

ಮಾನವ ಹಕ್ಕುಗಳ ವಿಧಗಳು :

ಉದೋಗ್ಯದ ಹಕ್ಕು :

ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವುದು, ದುಡಿಮೆಯ ಅವಧಿ, ಸಂಬಳ ಹಾಗೂ ಸಂಬಳ ಸಹಿತ ರಜೆ, ಹಾಗೂ ವಿಶ್ರಾಂತಿ ಪಡೆಯುವ ಹಕ್ಕನ್ನು ಪ್ರತಿಯೊಬ್ಬರೂ ಪಡೆದಿರುತ್ತಾರೆ. ಆಹಾರ, ಬಟ್ಟೆ, ವಸತಿ, ಆರೋಗ್ಯ, ರಕ್ಷಣೆ ಮತ್ತು ಅಗತ್ಯ ಸಾಮಾಜಿಕ ಸೇವೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಅಲ್ಲದೇ ಪ್ರತಿಯೊಬ್ಬರಿಗೂ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕಿದೆ.

Join WhatsApp Join Telegram

ಮಕ್ಕಳ ಹಕ್ಕು :

ಮಾನವ ಹಕ್ಕುಗಳಲ್ಲಿ ಮಕ್ಕಳ ಹಕ್ಕುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ಮಗುವೂ ನೈಸರ್ಗಿಕವಾಗಿ ಕೆಲವು ಸೌಕರ್ಯಗಳನ್ನು ಪಡೆದಿರುತ್ತದೆ. ಪ್ರತಿಯೊಬ್ಬ ಮಗುವೂ ತನ್ನ ಬಾಲ್ಯ ಜೀವನವನ್ನು ತಂದೆ ತಾಯಿಯೊಂದಿಗೆ ನಡೆಸುವ, ದೈಹಿಕ ರಕ್ಷಣೆ, ಆಹಾರ, ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ಪಡೆದಿರುತ್ತದೆ. ಅಲ್ಲದೇ, ಜನಾಂಗ, ಲಿಂಗ, ಬಣ್ಣ, ಧರ್ಮ ಹಾಗೂ ವಿಕಲಚೇತನದ ಆಧಾರದ ಮೇಲೆ ತಾರತಮ್ಯವಿಲ್ಲದ ನಾಗರೀಕ ಹಕ್ಕುಗಳನ್ನು ಮಕ್ಕಳು ಹೊಂದಿರುತ್ತಾರೆ. ಭಾರತ ಸಂವಿಧಾನದಲ್ಲಿ 14 ವರ್ಷದಿಳಗಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದೆ. ಮಕ್ಕಳು ಶಿಕ್ಷಣ ಕಲಿಕೆಯಿಂದ ಹೊರಗುಳಿದು, ದುಡಿಮೆಯಲ್ಲಿ ತೊಡಗುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ದುಡಿಮೆಯ ಕೂಲಿಯ ಅಥವಾ ಕೂಲಿಯೇತರ ಉದೋಗವಾಗಲಿ ಅದು ಬಾಲಕಾರ್ಮಿಕ ಪದ್ದತಿ ಎನಿಸಿಕೊಳ್ಳುತ್ತದೆ.

ಮಾನವ ಹಕ್ಕುಗಳ ರಕ್ಷಣೆ :

ಹೀಗೆ ಮಾನವ ಹಕ್ಕುಗಳು, ಮಕ್ಕಳ ಹಕ್ಕುಗಳು ಹಾಗೂ ಮಹಿಳಾ ಹಕ್ಕುಗಳು ಮಾನವರ ಜೀವನಕ್ಕೆ ಅತ್ಯಗತ್ಯವಾಗಿದೆ. ಆದರೆ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿರುವುದರಿಂದ ಅವುಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ವಿಶ್ವ ಮಟ್ಟದಲ್ಲಿ ವಿಶ್ವ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗಗಳು ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ.

ಇದಕ್ಕೆ ಪೂರಕವಾಗಿ ಎಲ್ಲಾ ಜೀವಿಗಳು ಉತ್ತಮವಾದ ಜೀವನವನ್ನು ನಡೆಸಲು ಉತ್ತಮ ಹಾಗೂ ಸುಸ್ಥಿರವಾದ ಪರಿಸರದ ಅಗತ್ಯತೆ ಇದ್ದು ಉತ್ತಮವಾದ ಆರೋಗ್ಯ, ವಸತಿ, ಆಹಾರ, ನೀರು ಹಾಗೂ ನೈರ್ಮಲ್ಯಗಳ ಭದ್ರತೆಯ ಜೊತೆಗೆ ಸಮಗ್ರವಾದ ಉತ್ತಮ ಪರಿಸರವನ್ನು ಸಂರಕ್ಷಿಸುವುದು ಕೂಡ ಮಾನವ ಹಕ್ಕುಗಳ ಸಂರಕ್ಷಣೆಯಾಗಿರುತ್ತದೆ ಎಂದು ವಿಶ್ವಸಂಸ್ಥೆ 2012 ರ ನಂತರದಲ್ಲಿ ಘೋಷಿಸಿದ್ದು ಅದನ್ನು ಜಾರಿಗೊಳಿಸುವುದು ಕೂಡ ಜಗತ್ತಿನ ರಾಷ್ಟ್ರಗಳ ಪ್ರಮುಖ ಜವಬ್ದಾರಿ ಮತ್ತು ಹೊಣೆಗಾರಿಕೆಯಾಗಿದೆ.

FAQ :

ವಿಶ್ವ ಮಾನವ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಡಿಸೆಂಬರ್‌ 10

ಮಾನವ ಹಕ್ಕುಗಳ ವಿಧಗಳನ್ನು ತಿಳಿಸಿ?

ಮಕ್ಕಳ ಹಕ್ಕು
ಉದೋಗ್ಯದ ಹಕ್ಕು

ಇತಯರೆ ವಿಷಯಗಳು :

ವಿಶ್ವ ಸಾಗರ ದಿನದ ಬಗ್ಗೆ ಮಾಹಿತಿ

ವಿಶ್ವ ಕ್ಷಯರೋಗ ದಿನದ ಪ್ರಬಂಧ

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.