ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ Information about Biotechnology Jaivika Tantrajnada bagge Mahithi in Kannada
ಜೈವಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ಜೈವಿಕ ತಂತ್ರಜ್ಞಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ಜೈವಿಕ ತಂತ್ರಜ್ಞಾನ :
- ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ಪಡೆಯುವ ತಂತ್ರಜ್ಞಾನವನ್ನು ಜೈವಿಕ ತಂತ್ರಜ್ಞಾನ ಎನ್ನುವರು.
- ಜೈವಿಕ ತಂತ್ರಜ್ಞಾನದ ಉಪ ಶಾಖೆಗಳು :
- ತಳಿ ತಂತ್ರಜ್ಞಾನ
- ಸೂಕ್ಷಾಣು ಜೀವಿಶಾಸ್ತ್ರ
- ಕೋಶೀಯ ವಿಜ್ಞಾ
- ಜೈವಿಕ ತಂತ್ರಜ್ಞಾನ ಎಂಬ ಪದವನ್ನು ಮೊಟ್ಟ ಮೊದಲ ಬಾರಿಗೆ 1920 ರಲ್ಲಿ ಬ್ರಿಟನ್ ದೇಶದ ಲೀಡ್ಸ್ ನಗರದಲ್ಲಿ ಬಳಸಲಾಯಿತು.
- ಕ್ರಿ.ಪೂ. 600ಕ್ಕೆ ಹಿಂದೆಯೇ ಸುಮೇರಿಯನ್ನರು ವೈನ್ ಪಾನೀಯವನ್ನು ಭಟ್ಟಿ ಇಳಿಸುವುದನ್ನು ಕರಗತ ಮಾಡಿಕೊಂಡಿದ್ದರು.
- ಕ್ರಿ.ಶ. 3 ನೇ ಶತಮಾನದಲ್ಲಿ ಬೆಬಿಲೋನ್ ಮತ್ತು ಇಜಿಪ್ತನಲ್ಲಿ ಭಟ್ಟಿ ಇಳಿಸುವ ಕೇಂದ್ರಗಳಿದ್ದವು.
- ಕ್ರಿ.ಶ. 1150 ರಲ್ಲಿ ಇಳಿಸುವಿಕೆಯಿಂದ ಈಥೈಲ್ ಆಲ್ಕೋಹಾಲ್‌ನ್ನು ಬಾರಿ ಪ್ರಮಾಣದಲ್ಲಿ ತಯಾರಿಸಿರುವ ಬಗ್ಗೆ ದಾಖಲೆಗಳಿವೆ.
- ಬ್ರೆಡ್ ತಯಾರಿಸಲು ಹಿಟ್ಟಿಗೆ ಹುಳಿ ಬೆರೆಸುವ ವಿಧಾನ ಸಾವಿರಾರು ವರ್ಷಗಳ ಹಿಂದೆ ಮನುಷ್ಯನಿಗೆ ತಿಳಿದಿತ್ತು.
- ಕ್ರಿ.ಶ. 1650 ರಲ್ಲಿ ಫ್ರಾನ್ಸ್ ನಲ್ಲಿ ಅಣಬೆಯನ್ನು ಕೃತಕವಾಗಿ ಬೆಳೆಯುವ ಮೂಲಕ ಇದು ಬಳಕೆಗೆ ಬಂತು.
- ಕ್ರಿ.ಶ. 1500 ರಲ್ಲಿ ಭಟ್ಟಿ ಇಳಿಸುವಿಕೆಯಿಂದ ಈಥೈಲ್ ಆಲ್ಕೋಹಾಲ್ ತಯಾರಿಸುವ ವಿಧಾನ ಬಳಕೆಗೆ ಬಂತು.
- ಕ್ರಿ.ಶ. 1857 ರಲ್ಲಿ ಲೂಯಿಪಾಶ್ಚರ್ ಲ್ಯಾಕ್ಟಿಕ್ ಆಮ್ಲದ ಹುದುಗುವಿಕೆಯನ್ನು ವಿವರಿಸಿದನು.
- ಕ್ರಿ.ಶ. 1897 ರಲ್ಲಿ ಎಡ್ವರ್ಡ್ ಬುಬ್ನರ್ ಈಸ್ಟ್ ಕೋಶಗಳಲ್ಲಿದೆ. ಆಲ್ಕೋಹಾಲ್ ಹುದುಗುವಿಕೆಯನ್ನು ಕಂಡುಹಿಡಿದರು.
- ಕ್ರಿ.ಶ. 1902 ರಲ್ಲಿ ಕೊಲಂಬಿಯಾದ ಕೋಶಶಾಸ್ತ್ರಜ್ಞಡಬ್ಲೂ. ಎಸ್. ಸೆಟ್ಟನ್ ಮತ್ತು ಜರ್ಮನಿಯ ಥಿಯೋಡರ್ ಬೋವೆ ವರ್ಣತಂತುಗಳು ವಂಶವಾಹಿನಿಯನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲು ಸಹಾಯಕ ಎಂದು ತೋರಿಸಿದನು.
- ಕ್ರಿ.ಶ. 1909 ರಲ್ಲಿ ಡಚ್ ಸಸ್ಯ ಶಾಸ್ತ್ರಜ್ಞ ವಿಲ್ ಹೆಲ್ ಲುಡ್ವಿಕ್ ಜೋಹಾನ್ಸನ್ ಎಂಬುವವನು ವಂಶವಾಹಿಗೆ ಜೀನ್ ಎಂಬ ಹೆಸರಿಟ್ಟನು.
- ಕ್ರಿ.ಶ. 1915 ರಲ್ಲಿ ಬೇಕರಿಗೆ ಬೇಕಾದ ಈಸ್ಟನ್ನು ಭಾರಿ ಪ್ರಮಾಣದಲ್ಲಿ ತಯಾರಿಸುವ ಹೊಸ ವಿಧಾನವನ್ನು ಜರ್ಮನಿಯಲ್ಲಿ ಅಳವಡಿಸಲಾಯಿತು.
ತಳಿ ತಂತ್ರಜ್ಞಾನ :
ಅಗತ್ಯತೆಗೆ ಅನುಗುಣವಾಗಿ ವಂಶವಾಹಿನಿಗಳನ್ನು ಬಳಸಿಕೊಳ್ಳುವ ತಂತ್ರಜ್ಞಾನಕ್ಕೆ ತಳಿ ತಂತ್ರಜ್ಞಾನ ಎನ್ನುವರು.
DNA ಬೆರಳಚ್ಚು ತಂತ್ರಜ್ಞಾನ :
- ಎರಡು ಜೀವಿಗಳ ನಡುವಿನ ಸಾದೃಶ್ಯತೆಗಳನ್ನು ಹೋಲಿಕೆ ಮಾಡುವ ತಂತ್ರಕ್ಕೆ DNA ಬೆರಳಚ್ಚು ತಂತ್ರಜ್ಞಾನ ಎನ್ನುವರು.
- ಭಾರತದಲ್ಲಿ DNA ಪರೀಕ್ಷಾ ಕೇಂದ್ರ ಹೈದರಾಬಾದ್‌ನಲ್ಲಿದೆ.
- DNA ಮಾದರಿ ಸಂಗ್ರಹಿಸುವ ಘಟಕ ಬೆಂಗಳೂರಿನ ಮಡಿವಾಳದಲ್ಲಿದೆ.
- ಈ ತಂತ್ರಜ್ಞಾವನ್ನು ಅಪರಾಧ ವಿಜ್ಞಾನದಲ್ಲಿ ಸಹಕಾರಿಯಾಗಿದೆ.
ಅಂಗಾಂಶ ಕೃಷಿ :
ಸಸ್ಯದ ಭಾಗಗಳನ್ನು ಬಳಸಿ ಕಡಿಮೆ ಸಮಯ ಮತ್ತು ಸ್ಥಳದಲ್ಲಿ ಹೆಚ್ಚು ಸಸ್ಯಗಳನ್ನು ಉತ್ಪಾದಿಸುವ ತಂತ್ರಕ್ಕೆ ಅಂಗಾಂಶ ಕೃಷಿ ಎನ್ನುವರು.
ಉಪಯೋಗಗಳು :
- ಬೆಳವಣಿಗೆ ಹೆಚ್ಚಾಗುತ್ತದೆ.
- ಇಳುವರಿ ಹೆಚ್ಚಾಗುತ್ತದೆ.
- ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದು.
- ರೋಗ ರಹಿತ ಸಸ್ಯಗಳನ್ನು ಪಡೆಯಬಹುದು.
ತದ್ರೂಪಿ ಸೃಷ್ಟಿ :
- ಅಲೈಗಿಂಕ ರೀತಿಯಲ್ಲಿ ಒಂದೇ ರೀತಿಯ ಹೊಸ ಜೀವಿಯನ್ನು ಸೃಷ್ಟಿಸುವ ತಂತ್ರಜ್ಞಾನಕ್ಕೆ ತದ್ರೂಪಿ ಎನ್ನುವರು.
- ಕ್ರಿ.ಶ.1997 ರಲ್ಲಿ ಡಾ|| ಐಯನ್ ವಿಲ್ಮಟ್ ಎಂಬ ಇಂಗ್ಲೆಂಡಿನ ವಿಜ್ಞಾನಿ ಮೊಟ್ಟಮೊದಲ ಬಾರಿಗೆ ತದ್ರೂಪಿ ಸೃಷ್ಠಿಸಿದರು.
- ಮಾನವ ತದ್ರೂಪಿ ಸೃಷ್ಟಿಗೆ ಅವಕಾಶ ನೀಡಿದ ದೇಶ – ಆಸ್ಟ್ರೇಲಿಯಾ
- ಮೊಟ್ಟ ಮೊದಲ ತದ್ರೂಪಿ ಸೃಷ್ಟಿಸಿದ ಪ್ರಾಣಿ – ಕುರಿ(ಡಾಲಿ)
- ಮೊಟ್ಟ ಮೊದಲ ಪ್ರನಾಳ ಶಿಶು – ಲೂಯಿಸ್ ಬ್ರೌನ್
- ಇತ್ತೀಚಿಗೆ ತದ್ರೂಪಿ ಸೃಷ್ಟಿಸಿದ ಪ್ರಾಣಿ – ಒಂಟೆ
- ಭಾರತದಲ್ಲಿ ವಿರೋಧಿಸಿದ ಎರಡು B.T ತಳಿಗಳು – ಹತ್ತಿ ಮತ್ತು ಬದನೆ
- B.T ಎಂದರೆ ಬ್ಯಾಸಿಲಸ್ ಥೋರ್ಯಂಜಿಸಿಸ್
- ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಬಯೋಟೆಕ್ನಾಲಜಿ ಪಾರ್ಕ್ ನಿರ್ಮಿಸಲಾಗಿದೆ.
ತದ್ರೂಪಿ ಸೃಷ್ಟಿಸಿದ ಪ್ರಾಣಿಗಳು ಮತ್ತು ಹೆಸರು :
ಪ್ರಾಣಿ | ಹೆಸರು | ವರ್ಷ |
ಬೆಕ್ಕು | ಕಾಲಿಕ್ಯಾಟ್ | 2001 |
ಬೆಕ್ಕು | ಲಿಟ್ಲಲ್ ನಿಕ್ಕಿ | 2004 |
ನಾಯಿ | ಸ್ನೂಪಿ | 2005 |
ನಾಯಿ | ಅಫ್ಘಾನ್ ಹವಂಡ್ | 2005 |
ಇಲಿ | ರಾಲ್ಫ್ | 2003 |
ಹಸು | ಅಲ್ಫಾಬೀಟಾ | 2005 |
ಕುದುರೆ | ಪ್ರೊಮೆಟಿಯ | 2003 |
ಒಂಟೆ | ಇನ್ ಜಾಜ್ | 2009 |
ಜೈವಿಕ ತಂತ್ರಜ್ಞಾನ ವಿಧಗಳು :
ಕೆಂಪು ಜೈವಿಕ ತಂತ್ರಜ್ಞಾನ : ಔಷಧಿ ಮತ್ತು ವೈದ್ಯಕೀಯ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಅಧಯನ.
ನೀಲಿ ಜೈವಿಕ ತಂತ್ರಜ್ಞಾನ : ಸಮುದ್ರದ ಕುರಿತಾದ ಅಧ್ಯಯನ.
ಹಸಿರು ಜೈವಿಕ ತಂತ್ರಜ್ಞಾನ : ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಧ್ಯಯನ.
ಬಿಳಿ ಜೈವಿಕ ತಂತ್ರಜ್ಞಾನ : ಕೈಗಾರಿಕೆಗಳಲ್ಲಿ ಜೀವಿಗಳ ಬಳಕೆಯ ಕುರಿತಾದ ಅಧ್ಯಯನ.
FAQ :
ಜೈವಿಕ ತಂತ್ರಜ್ಞಾನ ಎಂದರೇನು?
ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ಪಡೆಯುವ ತಂತ್ರಜ್ಞಾನವನ್ನು ಜೈವಿಕ ತಂತ್ರಜ್ಞಾನ ಎನ್ನುವರು.
ಜೈವಿಕ ತಂತ್ರಜ್ಞಾನ ವಿಧಗಳನ್ನು ತಿಳಿಸಿ?
1.ಕೆಂಪು ಜೈವಿಕ ತಂತ್ರಜ್ಞಾನ
2.ನೀಲಿ ಜೈವಿಕ ತಂತ್ರಜ್ಞಾನ
3.ಹಸಿರು ಜೈವಿಕ ತಂತ್ರಜ್ಞಾನ
4.ಬಿಳಿ ಜೈವಿಕ ತಂತ್ರಜ್ಞಾನ
ಇತರೆ ವಿಷಯಗಳು :